ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ : ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರ ಗುತ್ತಿಗೆ ಬೆನ್ನಲ್ಲೇ ಈಗ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಗುರುವಾರ (ಜೂನ್‌ ೧೯) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಸಚಿವ … Continued

ಮದುವೆಯಾಗಲು ಗೋವಾಕ್ಕೆ ಹೋಗಿದ್ದ ಬೆಂಗಳೂರಿನ ಜೋಡಿ ; ಆದ್ರೆ ಕನಸಿನ ಪ್ರವಾಸ ಪ್ರೇಯಸಿ ಕೊಲೆಯಲ್ಲಿ ಅಂತ್ಯ

ಪಣಜಿ : ಮನಕಲಕುವ ಘಟನೆಯೊಂದರಲ್ಲಿ, ಮದುವೆಯಲ್ಲಿ ಕೊನೆಗೊಳ್ಳಬೇಕಿದ್ದ ಗೋವಾ ಪ್ರವಾಸವು ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಗೋವಾಕ್ಕೆ ಮದುವೆಯಾಗಬೇಕೆಂದು ಬಂದಿದ್ದ ಯುವತಿಯ ಬದುಕು ದುರಂತದಲ್ಲಿ ಕೊನೆಗೊಂಡಿತು. ಉತ್ತರ ಬೆಂಗಳೂರಿನ ನಿವಾಸಿ … Continued

ಬೆಳಗಾವಿ | ಬಸ್ಸಿನಲ್ಲಿ ಕಿಟಕಿ ಬದಿ ಸೀಟಿಗಾಗಿ ಗಲಾಟಿ ; ವಿದ್ಯಾರ್ಥಿಗೆ ಚಾಕು ಇರಿತ

ಬೆಳಗಾವಿ: ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರದಂದು ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಗುಂಪು ಮತ್ತು ವಿದ್ಯಾರ್ಥಿ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿ ತಾಲೂಕು ಪಂತಬಾಳೇಕುಂದ್ರಿ ಗ್ರಾಮದ 19 ವರ್ಷದ ವಿದ್ಯಾರ್ಥಿಗೆ ಚಾಕು ಇರಿಲಾಗಿದೆ. ಪಂತಬಾಳೆಕುಂದಿಯಿಂದ ಬರುವಾಗ ಬಸ್ಸಿನ ಕಿಟಕಿಯಬಳಿಯ ಸೀಟಿಗಾಗಿ ನಡೆದ ಈ ಗಲಾಟೆಯಲ್ಲಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗಿದ್ದು, … Continued

ವೀಡಿಯೊ | ಉಕ್ರೇನ್‌ ಯುದ್ಧದಲ್ಲಿ ಮೃತ ರಷ್ಯಾದ ಸೈನಿಕನ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಪದ್ಧತಿಯಂತೆ ಆನ್‌ಲೈನ್‌ಲ್ಲಿ ನೆರವೇರಿಸಿದ ಗೋಕರ್ಣ ಅರ್ಚಕರು…!

ಕಾರವಾರ : ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸರ್ಗೇಯ ಗಾಬ್ಲೇವ್ ಅವರ ಕೊನೆಯ ಆಸೆಯಂತೆ ಆನ್ಲೈನ್ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಿಂದೂ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ವರದಿಯಾಗಿದೆ. ದೂರದ ರಷ್ಯಾದ ಸರ್ಗೇಯ ಗಾಬ್ಲೇವ್ ಎಂಬವರು ಯುದ್ಧದಲ್ಲಿ ಮಡಿದ ನಂತರ ಅವರ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಗೋಕರ್ಣದಲ್ಲಿ … Continued

ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

ಮಂಗಳೂರು: ಅರ್ಧ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ. ಅಡ್ಯಾರ್‌ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶಕುಮಾರ ಎಂಬ ಮಗು ಬೀಡಿ ಮೋಟು ನುಂಗಿತ್ತು ಎಂದು ಹೇಳಲಾಗಿದೆ. ಶನಿವಾರ ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ಮಗು ನುಂಗಿ … Continued

ಕರ್ನಾಟಕದಲ್ಲಿ ಜೂನ್ 23ರವರೆಗೂ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು : ರಾಜ್ಯದಾದ್ಯಂತ ಜೂನ್ 23ರ ವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬೀ ಸಮುದ್ರದ ಕೊಂಕಣ ಕರಾವಳಿಯಲ್ಲಿ ಹರಿವು ಇರುವುದರಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್‌ 20 ರವರೆಗೂ ಭಾರೀ ಮಳೆಯಾಗಲಿದೆ. ಅಲ್ಲದೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೂ ರೆಡ್ ಅಲರ್ಟ್​ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ … Continued

ಭಾರಿ ಮಳೆ : ಜೂನ್ 17ರಂದು ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಅಂಗನವಾಡಿ, ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ. ಜೂನ್ 17ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ … Continued

ಬೆಂಗಳೂರು ಮಹಿಳೆಗೆ ಬ್ಲ್ಯಾಕ್‌ ಮೇಲ್, ಅತ್ಯಾಚಾರ ಯತ್ನ: ಕೇರಳ ಅರ್ಚಕನ ಬಂಧನ

ಬೆಂಗಳೂರು: ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಕೇರಳದ ಅರ್ಚಕರೊಬ್ಬರನ್ನು ಬಂಧಿಸಿದ್ದಾರೆ ಮತ್ತು ತಲೆಮರೆಸಿಕೊಂಡಿರುವ ಇನ್ನೊಬ್ಬ ಅರ್ಚಕನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿಯನ್ನು ಕೇರಳದಲ್ಲಿರುವ ಪೆರಿಂಗೊಟ್ಟುಕರ ದೇವಸ್ಥಾನದ ಅರುಣ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಪ್ರಧಾನ ಅರ್ಚಕ ಉನ್ನಿ ದಾಮೋದರನ್‌ … Continued

ವೀಡಿಯೊ..| ಬೆಂಗಳೂರು : ವೇಗವಾಗಿ ಚಾಲನೆ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ಮಹಿಳೆ ಕೆನ್ನೆಗೆ ಬಲವಾಗಿ ಹೊಡೆದ ರ‍್ಯಾಪಿಡೋ ಚಾಲಕ ; ಕೆಳಕ್ಕೆ ಬಿದ್ದ ಮಹಿಳೆ

ಬೆಂಗಳೂರು : ಮೂರು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಬೆಂಗಳೂರಿನ ಜಯನಗರ ಪ್ರದೇಶದ ಪಾದರಕ್ಷೆಗಳ ಶೋರೂಂ ಬಳಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಚಾಲಕ ಅತಿವೇಗದ ಚಾಲನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ ನಂತರ ವಾಗ್ವಾದ ಪ್ರಾರಂಭವಾಯಿತು ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, … Continued

ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಗುಡ್ಡ ಕುಸಿತ ಉಂಟಾಗಿದೆ. ಬಹುತೇಕ ರಾತ್ರಿ ವೇಳೆಯೇ ಗುಡ್ಡ ಕುಸಿತ ಆಗುವುದನ್ನು ಪರಿಗಣಿಸಿ ಈ ಮಾರ್ಗವಾಗಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಹಾಗೂ ಮತ್ತೆ ಕುಸಿಯುವ ಆತಂಕವಿರುವುದರಿಂದ … Continued