ಉತ್ತರಾಖಂಡ ವಿಪತ್ತು ನಿಧಿಗೆ ಹರ್ಯಾಣದಿಂದ ೧೧ ಕೋಟಿ ನೆರವು

ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಉತ್ತರಾಖಂಡ ರಾಜ್ಯ ವಿಪತ್ತು ನಿಧಿಗೆ ೧೧ ಕೋಟಿ ರೂ. ದೇಣಿಗೆ ನೀಡಿದ್ದು, ವಿಪತ್ತು ಪೀಡಿತ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಹಿಮಬಂಡೆ ಕುಸಿದು ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಇದರಿಂದ ೨೮ ಜನರು ಜೀವ ಕಳೆದುಕೊಂಡಿದ್ದು, … Continued

ಕೊರೊನಾ ರೋಗಿಗಳ ಪತ್ತೆಗೆ ಚಿಪ್ಪಿಪಾರೈ ತಳಿ ನಾಯಿಗಳ ಬಳಕೆ

ನವ ದೆಹಲಿ: ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಭಾರತೀಯ ಸೇನೆ ತಮಿಳುನಾಡಿನ ಚಿಪ್ಪಿಪಾರೈ ತಳಿಯ ನಾಯಿಗಳಿಗೆ ತರಬೇತಿ ನೀಡುತ್ತಿದೆ. ಮಿಲಿಟರಿ ಶ್ವಾನ ಪಡೆಯಲ್ಲಿ ಜಯ ಹಾಗೂ ಮಣಿ ಎಂಬ ನಾಯಿಗಳು ಸೇರ್ಪಡೆಗೊಂಡಿವೆ. ವ್ಯಕ್ತಿಗಳ ಮೂತ್ರ ಹಾಗೂ ಬೆವರಿನ ವಾಸನೆ ಮೂಲಕ ಸೋಂಕಿತರನ್ನು ಪತ್ತೆ ಮಾಡಲು ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಚಿಪ್ಪಿಪಾರೈ ತಳಿ ನಾಯಿಗಳು ತೆಳ್ಳನೇಯ … Continued

ನಿರ್ಭಯಾ ನಿಧಿ ಸಮರ್ಪಕವಾಗಿ ಬಳಕೆಯಾಗಿಲ್ಲ: ಆಕ್ಸ್‌ಫ್ಯಾಮ್‌ ವರದಿ

ನವದೆಹಲಿ: ಕೇಂದ್ರ ಸರಕಾರ ೮ ವರ್ಷಗಳ ಹಿಂದೆ ಘೋಷಿಸಿದ ನಿರ್ಭಯಾ ನಿಧಿ ಮಹಿಳೆಯರಿಗೆ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ಸ್ವಯಂ ಸೇವಾ ಸಂಸ್ಥೆ ಎಕ್ಸ್‌ಫ್ಯಾಮ್‌ ವರದಿ ಮಾಡಿದೆ. ೨೦೧೨ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಘಟನೆ ನಂತರ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ೧೦೦೦ ಕೋಟಿ ರೂ. ಮೊತ್ತದ ನಿರ್ಭಯಾ … Continued

ಕೊವಿಡ್‌ ಲಸಿಕೆ: ಅಡ್ಡಪರಿಣಾಮಗಳಿಗೆ ಯೌವುದೇ ವಿಮೆ ಸೌಲಭ್ಯವಿಲ್ಲ

ನವ ದೆಹಲಿ: ಸಿಒವಿಐಡಿ -19 ಲಸಿಕೆ ಪಡೆದವರಿಗೆ ಯಾವುದೇ ಅಡ್ಡಪರಿಣಾಮಗಳು ಅಥವಾ ಚುಚ್ಚುಮದ್ದಿನಿಂದ ಉಂಟಾಗಬಹುದಾದ ವೈದ್ಯಕೀಯ ತೊಂದರೆಗಳ ವಿರುದ್ಧ ವಿಮೆ ಸೌಲಭ್ಯವಿಲ್ಲ ಎಂದು ರಾಜ್ಯಸಭೆಗೆ ಮಂಗಳವಾರ ತಿಳಿಸಲಾಗಿದೆ. ಕೊವಿಡ್‌-19 ಲಸಿಕೆ ಫಲಾನುಭವಿಗಳಿಗೆ ಲಸಿಕೆ ಪಡೆಯವುದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಲಸಿಕೆಗಳೊಂದಿಗೆ ನಿರ್ವಹಿಸುವ / ನಿರ್ವಹಿಸಬೇಕಾದವರಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಅಥವಾ ವೈದ್ಯಕೀಯ ತೊಡಕುಗಳ ವಿರುದ್ಧ ವಿಮೆ ಮಾಡಲಾಗಿದೆಯೇ … Continued

ಕ್ರಿಪ್ಟೋ ಕರೆನ್ಸಿ: ಶೀಘ್ರವೇ ಕಾನೂನು ರಚನೆಗೆ ನಿರ್ಧಾರ

ನವ ದೆಹಲಿ: ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಸರ್ಕಾರವು ಶೀಘ್ರದಲ್ಲೇ ಮಸೂದೆ ತರಲಿದೆ, ಏಕೆಂದರೆ ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಅಸ್ತಿತ್ವದಲ್ಲಿರುವ ಕಾನೂನುಗಳು ಅಸಮರ್ಪಕವಾಗಿವೆ ಎಂದು ಕೇಂದ್ರದ ಹಣ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಠಾಕೂರ್, ಆರ್‌ಬಿಐ ಮತ್ತು ಸೆಬಿಯಂತಹ ನಿಯಂತ್ರಕ ಸಂಸ್ಥೆಗಳು ಕ್ರಿಪ್ಟೋ ಕರೆನ್ಸಿಗಳನ್ನು ನೇರವಾಗಿ ನಿಯಂತ್ರಿಸಲು … Continued

ಕಿಸಾನ್‌ ಮಹಾಪಂಚಾಯತ್‌ನಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಫೆ.೧೦ರಂದು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆಯುವ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಫೆ.೧೩ರಂದು ಪ್ರಿಯಾಂಕಾ ಬಿಜ್ನೋರ್ ಮತ್ತು ಮುಜಫರ್‌ನಗರ ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ. ದೆಹಲಿ ಗಡಿಯಲ್ಲಿ ವಿವಾದಾತ್ಮಕ ಕಾನೂನುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಪಂಜಾಬ್‌, ಹರಿಯಾಣ ಹಾಗೂ ಉತ್ತರ … Continued

ಸಂಪುಟದಿಂದ ವಿ.ಕೆ.ಸಿಂಗ್‌ ಕೈಬಿಡಲು ರಾಹುಲ್‌ ಒತ್ತಾಯ

ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಚೀನಾ ಗಡಿಯನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ, ಉಭಯ ದೇಶಗಳು ನೈಜ ಗಡಿ ಬಗೆಗಿನ ಗ್ರಹಿಕೆಯನ್ನು ಹಲವು ಬಾರಿ ಮೀರಿವೆ ಎಂದು ಸಿಂಗ್‌ ಹೇಳಿಕೆ ನೀಡುವ ಮೂಲಕ ಚೀನಾ ನಮ್ಮ ದೇಶದ ವಿರುದ್ಧ ಮೊಕದ್ದಮೆ … Continued

ಬಂಗಾಳಕ್ಕೆ ಕಿಸಾನ್‌ ಸಮ್ಮಾನ ಹಣ ನೀಡದ ಕೇಂದ್ರ: ಮಮತಾ ಆರೋಪ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ರೈತರಿಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರೋತ್ಸಾಹಧನವನ್ನು ನೀಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿ ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ರಾಜ್ಯದ ತೃಣಮೂಲ ಕಾಂಗ್ರೆಸ್‌ ಸರಕಾರ ರೈತರಿಗೆ ತಲಾ ೫೦೦೦ರೂ. ಪ್ರೋತ್ಸಾಹಧನದೊಂದಿಗೆ ಉಚಿತ ಬೆಳೆ ವಿಮೆಯನ್ನೂ … Continued

ಆನ್‌ಲೈನ್‌ನಲ್ಲಿ ಸೋಫಾ ಮಾರಲು ಹೋಗಿ ಮೋಸ ಹೋದ ಕೇಜ್ರಿ ಪುತ್ರಿ!

ನವ ದೆಹಲಿ: ಇ-ಕಾಮರ್ಸ್‌ನಲ್ಲಿ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ೩೪ ಸಾವಿರ ಕಳೆದುಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ವ್ಯಕ್ತಿಯೋರ್ವ ವೆಬ್ ಪೋರ್ಟಲ್‌ನಲ್ಲಿ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿ ದರ ನಿಗದಿಯಾದ ಬಳಿಕ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಬಳಿಕ ಅದನ್ನು ಖಾತರಿಪಡಿಸಲು … Continued

ಕೊರೋನಾ ಪ್ರಕರಣ: ಗಣನೀಯ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿ ೯,೧೧೦ ಮಂದಿಗೆ ಹೊಸ ಸೋಂಕು ಪ್ರಕರಣ ಧೃಢಪಟ್ಟಿವೆ ಹಾಗೂ ೭೮ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಹೊಸದಾಗಿ ದಾಖಲಾಗಿರುವ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟಾರೆ ೧,೦೮,೪೭,೩೦೪ಕ್ಕೆ ಏರಿಕೆಯಾಗಿದೆ. ಈ ಪೈಕಿ … Continued