ವೀಡಿಯೊ….| ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಉಲ್ಬಣ : ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆಗಳು…!

ಕೋವಿಡ್ -19 ಸಾಂಕ್ರಾಮಿಕದ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಚೀನಾ, ಮತ್ತೊಂದು ಸಂಭವನೀಯ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ. ನಿಗೂಢ ನ್ಯುಮೋನಿಯಾ ಉಲ್ಬಣಗೊಂಡಿದ್ದು, ವಿಶೇಷವಾಗಿ ಶಾಲೆಗಳಲ್ಲಿ ವ್ಯಾಪಿಸಿದೆ ಮತ್ತು ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಈ ನಿಗೂಢ ನ್ಯುಮೋನಿಯಾ ಉಲ್ಬಣದ ಕೇಂದ್ರಬಿಂದುಗಳು ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳಾಗಿವೆ, … Continued

ಶಿಕ್ಷಕ ಸಿಟ್-ಅಪ್ ಮಾಡುವ ಶಿಕ್ಷೆ ನೀಡಿದ ನಂತರ ಸಾವಿಗೀಡಾದ 4ನೇ ತರಗತಿ ವಿದ್ಯಾರ್ಥಿ

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಸಿಟ್‌ಅಪ್‌ ಮಾಡುವಂತೆ ಶಿಕ್ಷಕರೊಬ್ಬರು ಶಿಕ್ಷೆ ನೀಡಿದ ನಂತರ ಅದನ್ನು ಮಾಡಲು ಹೋಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ರುದ್ರ ನಾರಾಯಣ ಸೇಠಿ ಎಂಬ ವಿದ್ಯಾರ್ಥಿ ಓರಳಿಯ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ. ಮಂಗಳವಾರ ಹತ್ತರ ಹರೆಯದ ಈ ವಿದ್ಯಾರ್ಥಿ … Continued

ಉದ್ಯಮಿ ಗೌತಮ ಸಿಂಘಾನಿಯಾ-ಪತ್ನಿ ನವಾಜ್‌ ದಾಂಪತ್ಯದಲ್ಲಿ ವಿರಸ: ರೇಮಂಡ್‌ ಕಂಪನಿಗೆ ₹ 1,500 ಕೋಟಿ ನಷ್ಟ…!

ಮುಂಬೈ: ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಶೇರ್‌ ಮುಂಬೈನಲ್ಲಿ ಏಳನೇ ದಿನಕ್ಕೆ ಕುಸಿಯಿತು, ಅದರ ಬಿಲಿಯನೇರ್ ಅಧ್ಯಕ್ಷ ಗೌತಮ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ಪರಸ್ಪರ ಬೇರೆ ಬೇರೆಯಾಗುವುದಾಗಿ ಘೋಷಿಸಿದಾಗಿನಿಂದ ಹೂಡಿಕೆದಾರರಲ್ಲಿ ಅನಿಶ್ಚಿತತೆಗೆ ಕಾರಣವಾಗಿ ಶೇರುಗಳ ಬೆಲೆ ಕುಸಿದಿದೆ. ನವೆಂಬರ್ 13 ರಂದು ಗೌತಮ ಸಿಂಘಾನಿಯಾ … Continued

ಕಾಶ್ಮೀರ : ಭಯೋತ್ಪಾದಕರ ವಿರುದ್ಧದ ಎನ್‌ ಕೌಂಟರಿನಲ್ಲಿ ಸೇನಾಧಿಕಾರಿ, ಸೈನಿಕ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯದಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶ್ರೇಣಿಯ ಒಬ್ಬ ಸೇನಾಧಿಕಾರಿ ಮತ್ತು ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಸೇನೆಯ ವಿಶೇಷ ಪಡೆಗಳು ಮತ್ತು ಪೊಲೀಸರು ಜಂಟಿ … Continued

ವೀಡಿಯೊ…| ಆಟೋ-ಟ್ರಕ್ ಡಿಕ್ಕಿ : ಗಾಳಿಯಲ್ಲಿ ಹಾರಿಬಿದ್ದ ಶಾಲಾ ಮಕ್ಕಳು

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೊರಿಕ್ಷಾ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಕ್ಕಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಮಕ್ಕಳು ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 35 ಸೆಕೆಂಡ್‌ಗಳ ಸಿಸಿಟಿವಿ ದೃಶ್ಯಾವಳಿಗಳು ಸಂಗಮ … Continued

ಸ್ಟಾಪ್ ಕ್ಲಾಕ್ ನಿಯಮ ಜಾರಿಗೆ ತಂದ ಐಸಿಸಿ : ಬೌಲಿಂಗ್ ತಡವಾದರೆ 5 ರನ್ ದಂಡ….!

ಸ್ಟಾಪ್ ಕ್ಲಾಕ್ ಎಂಬ ಹೊಸ ನಿಯಮವನ್ನು ಐಸಿಸಿ ಜಾರಿಗೆ ತಂದಿದೆ. ಅಹಮದಾಬಾದ್​ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿಯಮಗಳನ್ನು ತರಲಾಗುತ್ತದೆ ಮತ್ತು ಏಕದಿನ ಹಾಗೂ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಬಳಸಲಾಗುವುದು ಎಂದು ಮಾಹಿತಿ ನೀಡಿದೆ. ಪುರುಷರ ಅಂತಾರಾಷ್ಟ್ರೀಯ ಏಕದಿನ ಪಂದ್ಯ (ODI) ಮತ್ತು T20 ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ತಂಡಗಳು ಇನಿಂಗ್ಸ್‌ನಲ್ಲಿ ಮೂರನೇ ಸಲ ಮುಂದಿನ … Continued

ಸಮಾಜ ವಿಜ್ಞಾನ ಪಠ್ಯಪುಸ್ತಗಳಲ್ಲಿ ರಾಮಾಯಣ, ಮಹಾಭಾರತ ಅಳವಡಿಕೆಗೆ ಎನ್‌ಸಿಇಆರ್‌ಟಿ ಉನ್ನತ ಸಮಿತಿ ಸಮಿತಿ ಶಿಫಾರಸು

ನವದೆಹಲಿ : ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಮತ್ತು ಸಂವಿಧಾನದ ಪೀಠಿಕೆಯನ್ನು ತರಗತಿಯ ಗೋಡೆಗಳ ಮೇಲೆ ಬರೆಯಬೇಕು ಎಂದು ಉನ್ನತ ಮಟ್ಟದ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು ಮಾಡಿದೆ ಎಂದು ಅದರ ಅಧ್ಯಕ್ಷ ಸಿ.ಐ. ಇಸಾಕ್ ಹೇಳಿದ್ದಾರೆ. ಉನ್ನತಮಟ್ಟದ ಈ ಸಮಿತಿಯ ಈ ಶಿಫಾರಸುಗಳ ಬಗ್ಗೆ ಎನ್‌ಸಿಇಆರ್‌ಟಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. … Continued

ಜಾತಿ ಗಣತಿ ವರದಿಗೆ ಡಿಸಿಎಂ ಶಿವಕುಮಾರ ವಿರೋಧ; ವರದಿ ತಿರಸ್ಕರಿಸಬೇಕೆಂದು ಸಿಎಂಗೆ ಒತ್ತಾಯಿಸುವ ಮನವಿಗೆ ಸಹಿ : ಸ್ವೀಕರಿಸುವ ನಿರ್ಧಾರ ಅಚಲ ಎಂದ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕದ ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ತಮ್ಮ ಮೊದಲ ಅಧಿಕಾರಾವಧಿಯಲ್ಲಿ ನಡೆಸಿದ 2015 ರ ಜಾತಿ ಸಮೀಕ್ಷೆಯ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಒಕ್ಕಲಿಗ ನಾಯಕರು ಸಹಿ ಹಾಕಿರುವ ಪತ್ರದಲ್ಲಿ ಹೇಳಲಾಗಿದೆ. … Continued

ಪ್ರತಿ ಪ್ರಾಡಕ್ಟ್‌ ಮೇಲೆ 1 ಕೋಟಿ ರೂ. ದಂಡ ಹಾಕಬೇಕಾಗುತ್ತದೆ, ಒಂದು ವೇಳೆ…”: ಪತಂಜಲಿ ಆಯುರ್ವೇದಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್ ಕಂಪನಿಯು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ತಪ್ಪುದಾರಿಗೆಳೆಯುವ” ಭರವಸೆ ನೀಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ. “ಪತಂಜಲಿ ಆಯುರ್ವೇದದ ಇಂತಹ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ…” … Continued

ಕಾಂಗ್ರೆಸ್ ನಂಟು ಹೊಂದಿರುವ ಕಂಪನಿಗಳ 751.9 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇ.ಡಿ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಂಪರ್ಕ ಹೊಂದಿರುವ ಯಂಗ್ ಇಂಡಿಯನ್ ಕಂಪನಿಗೆ ಸೇರಿದ ₹ 90 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿ ಮಾಡಲಾದ ಆಸ್ತಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಹೆರಾಲ್ಡ್ ಮನೆಗಳು ಮತ್ತು ಲಕ್ನೋದ ನೆಹರು ಭವನ … Continued