ಅಸ್ಸಾಂನಲ್ಲಿ ʼಹಿಂಸಾಚಾರ, ಹಲ್ಲೆʼ ನಡೆಸಿದ ಆರೋಪ : ರಾಹುಲ್ ಗಾಂಧಿ, ಇತರ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್

ಗುವಾಹತಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಮತ್ತು ಪಕ್ಷದ ಇತರ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಭಾರತ ಜೋಡೋ ನ್ಯಾಯ ಯಾತ್ರೆಗೆ ಅದರ ಪ್ರಮುಖ ಮಾರ್ಗಗಳ ಮೂಲಕ ಗುವಾಹತಿ ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ … Continued

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರಗೆ ಮರಣೋತ್ತರ ʼಭಾರತ ರತ್ನʼ ಪ್ರಶಸ್ತಿ ಪ್ರಕಟ

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ಭಾರತ ರತ್ನ ಪುರಸ್ಕಾರ ಘೋಷಿಸಲಾಗಿದೆ. ಅವರ ಮರಣದ 35 ವರ್ಷಗಳ ನಂತರ ಅವರಿಗೆ ಭಾರತ ರತ್ನ ಪುರಸ್ಕಾರ ಘೋಷಿಸಲಾಗಿದೆ. ಕರ್ಪೂರಿ ಠಾಕೂರ್ ಅವರು ಫೆಬ್ರವರಿ 17, 1988ರಂದು ನಿಧನರಾದರು. ಜನ ನಾಯಕ ಎಂದು ಕರೆಯಲ್ಪಟ್ಟ ಕರ್ಪೂರಿ ಠಾಕೂರ್ ಅವರು ಅಲ್ಪಾವಧಿಗೆ … Continued

ಅಯೋಧ್ಯೆ ರಾಮಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ಕಿರೀಟ ದಾನ ಮಾಡಿದ ಗುಜರಾತ್ ವಜ್ರದ ವ್ಯಾಪಾರಿ

ಅಯೋಧ್ಯೆ : ಗುಜರಾತಿನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹಕ್ಕೆ 11 ಕೋಟಿ ಮೌಲ್ಯದ ಕಿರೀಟವನ್ನು ದಾನ ಮಾಡಿದ್ದಾರೆ. ಇದನ್ನು ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದ ಭಗವಾನ್‌ ರಾಮಲಲ್ಲಾನಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ : ವಿರಾಟ ಕೊಹ್ಲಿಯಂತೆ ಕಾಣುವ ತದ್ರೂಪಿ ಪ್ರತ್ಯಕ್ಷ, ಕಿಂಗ್‌ ಕೊಹ್ಲಿ ಎಂದೇ ಭಾವಿಸಿ ಸೆಲ್ಫಿಗೆ ಮುಗಿಬಿದ್ದ ಜನ..| ವೀಕ್ಷಿಸಿ

ಅಯೋಧ್ಯೆ : ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನೆರವೇರಿದ್ದು, ಮಂಗಳವಾರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಾಲಿವುಡ್‌ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೇವೇಳೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಬ್ಬರು ನೀಲಿ ಜರ್ಸಿಯಲ್ಲಿ  ಕಾಣಿಸಿಕೊಂಡಿದ್ದು, ಆತ … Continued

ವೀಡಿಯೊ….| ರಾಹುಲ್ ಗಾಂಧಿ ಯಾತ್ರೆಗೆ ನಗರದೊಳಕ್ಕೆ ಪ್ರವೇಶ ನಿರಾಕರಣೆ : ಗುವಾಹತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಪೊಲೀಸರ ಘರ್ಷಣೆ

ಗುವಾಹತಿ : ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ರಾಜಧಾನಿ ಗುವಾಹತಿ ಪ್ರಮುಖ ಮಾರ್ಗಗಳ ಮೂಲಕ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ನಂತರ ಮಂಗಳವಾರ ಗುವಾಹಟಿತಿಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರಿಂದ ಉದ್ವಿಗ್ನತೆ ಉಂಟಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಯಾತ್ರೆಯನ್ನು ನಗರದಿಂದ ದೂರವಿರಿಸಲು ಮತ್ತು … Continued

ವೀಡಿಯೊ…| ನಾವು ಅಯೋಧ್ಯೆಯಲ್ಲಿ ಏನು ನೋಡಿದ್ದೇವೆ…”: ರಾಮ ಮಂದಿರ ಕಾರ್ಯಕ್ರಮದ ಮಿಂಚು ನೋಟ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸೋಮವಾರ ಉದ್ಘಾಟನೆ ಮಾಡಿದ ಕುರಿತಾದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ ಮತ್ತು “ಮುಂದಿನ ವರ್ಷಗಳಲ್ಲಿ ಇದು ನಮ್ಮ ನೆನಪಿನಲ್ಲಿ ಉಳಿಯುತ್ತದೆ” ಎಂದು ಹೇಳಿದ್ದಾರೆ. ಮೂರು ನಿಮಿಷಗಳ ವೀಡಿಯೊದಲ್ಲಿ, ಮಡಚಿದ ಕೆಂಪು ದುಪಟ್ಟಾದಲ್ಲಿ ಬೆಳ್ಳಿಯ ಛತ್ರಿಯನ್ನು ಹಿಡಿದುಕೊಂಡು ಪ್ರಧಾನಿ ದೇವಾಲಯದ ಗರ್ಭಗುಡಿಗೆ ಕಾಲಿಡುತ್ತಿರುವುದನ್ನು ಕಾಣಬಹುದು. ನೂತನವಾಗಿ ನಿರ್ಮಿಸಲಾದ … Continued

ವೀಡಿಯೊ….| ರಾಮಲೀಲಾ ನಾಟಕದಲ್ಲಿ ʼಹನುಮಂತʼನ ಪಾತ್ರಧಾರಿ ವೇದಿಕೆಯಲ್ಲೇ ಕುಸಿದುಬಿದ್ದು ಸಾವು

ಹರಿಯಾಣದ ಭಿವಾನಿಯಲ್ಲಿ ಸೋಮವಾರ ‘ರಾಮಲೀಲಾ’ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುದಿಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರೀಶ ಮೆಹ್ತಾ ಎಂದು ಗುರುತಿಸಲಾದ ಹುನುಮಂತನ ಪಾತ್ರಧಾರಿ ತನ್ನ ಪ್ರದರ್ಶನದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಿವಾನಿಯ ಜವಾಹರ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ “ರಾಜ ತಿಲಕ” ಎಂಬ ಕಾರ್ಯಕ್ರಮದಲ್ಲಿ ಈ ಘಟನೆ … Continued

ಮತ್ತೊಂದು ಸಾಧನೆ : ಹಾಂಗ್ ಕಾಂಗ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ

ನವದೆಹಲಿ : ಮತ್ತೊಂದು ಸಾಧನೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಇದೇ ಮೊದಲ ಬಾರಿಗೆ ಹಾಂಗ್ ಕಾಂಗ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಜಾಗತಿಕವಾಗಿ ಅಗ್ರ ಮೂರು ಷೇರು ಮಾರುಕಟ್ಟೆಗಳು ಅಮೆರಿಕ, ಚೀನಾ ಮತ್ತು ಜಪಾನ್ ಆಗಿದ್ದು, ಈಗ ಭಾರತದ ಷೇರು ಮಾರುಕಟ್ಟೆ ನಾಲ್ಕನೇ … Continued

ವೀಡಿಯೊ…| ‘ಪ್ರಾಣ ಪ್ರತಿಷ್ಠೆ’ಯ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಾರೀ ಸಂಖ್ಯೆಯ ಭಕ್ತರ ನೂಕುನುಗ್ಗಲು

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರ ಯಜಮಾನತ್ವದಲ್ಲಿ ಮತ್ತು ಸಾಧು-ಸಂತರು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿಧಿವತ್ತಾಗಿ ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಒಂದು ದಿನದ ನಂತರ ಅಯೋಧ್ಯೆಯ ರಾಮಮಂದಿರವನ್ನು ಇಂದು, ಮಂಗಳವಾರ ಬೆಳಿಗ್ಗೆ ಸಾರ್ವಜನಿಕರಿಗೆ ತೆರೆಯಲಾಗುತ್ತಿದೆ. ತೆರೆಯುವ ಮುನ್ನವೇ ದೇವಸ್ಥಾನದ ಮುಂಭಾಗದಲ್ಲಿ ಜನಸಾಗರವೇ ಕಂಡುಬಂತು. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ … Continued

1528ರಿಂದ 2024ರ ರಾಮಮಂದಿರ ಉದ್ಘಾಟನೆವರೆಗೆ : 500 ವರ್ಷಗಳ ಕಾಯುವಿಕೆ, ಶತಮಾನದ ಕಾನೂನು ಸಂಘರ್ಷಗಳು ; ರಾಮಜನ್ಮಭೂಮಿ ಹೋರಾಟ ಸಾಗಿಬಂದ ಹಾದಿ…

ನವದೆಹಲಿ : ಅಯೋಧ್ಯೆಯಲ್ಲಿ ಸುಮಾರು 400 ಕಂಬಗಳು, 44 ಬಾಗಿಲುಗಳುಳ್ಳ ನೂತನ ರಾಮಂದಿರದ ನೂತನ ರಾಮನ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾಣ ಪ್ರತಿಷ್ಠೆ ಮಾಡಿದರು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯಾ ನಗರದಲ್ಲಿ ನಡೆದ ಸಮಾರಂಭಕ್ಕೆ ದೇಶವು ಸಾಕ್ಷಿಯಾಯಿತು. ಅಯೋಧ್ಯೆಯಲ್ಲಿ ಈ ನೂತನ ರಾಮಮಂದಿರ ನಿರ್ಮಾಣ ಆಗುವ … Continued