ತವರಿಗೆ ಮರಳಿದ ಜಯಲಲಿತಾ ಆಪ್ತೆ ಶಶಿಕಲಾ

ಕೃಷ್ಣಗಿರಿ: ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ನಾಲ್ಕು ವರ್ಷಗಳ ಕಾರಾಗೃಹವಾಸ ಪೂರ್ಣಗೊಳಿಸಿ ತವರು ರಾಜ್ಯ ತಮಿಳುನಾಡಿಗೆ ಮರಳಿದರು. ಕೃಷ್ಣಗಿರಿಗೆ ಬಂದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ನೂರಾರು ಬೆಂಬಲಿಗರು ಪುಷ್ಪವೃಷ್ಟಿ ಮೂಲಕ ಬರಮಾಡಿಕೊಂಡರು. ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ೪ ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ಶಶಿಕಲಾ ಹೊಸೂರು ಪಟ್ಟಣದ … Continued

ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ: ರೈತರಿಗೆ ಪ್ರಧಾನಿ ಅಭಯ

ಕೃಷಿ ಕಾನೂನುಗಳನ್ನು ಹಸಿರು ಕ್ರಾಂತಿಯೊಂದಿಗೆ ಹೋಲಿಸಿದ ಪ್ರಧಾನಿ   ನವ ದೆಹಲಿ; ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪುನಃ ಆಶ್ವಾಸನೆ ನೀಡಿದರು. ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನಾ ಚರ್ಚೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ಈ ಸಮಯವನ್ನು ಕಳೆದುಕೊಳ್ಳಬಾರದು, ಪ್ರಗತಿ ಹೊಂದಬೇಕು, … Continued

ಎಡ-ಕಾಂಗ್ರೆಸ್‌ ಜೊತೆ ತೃಣಮೂಲ ರಹಸ್ಯ ಒಪ್ಪಂದ; ಪ್ರಧಾನಿ ಮೋದಿ ವಾಗ್ದಾಳಿ

ಕೊಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷವು ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಮತದಾರರು ಈ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಜಾಗೃತರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾಳದಲ್ಲಿ ಬಾನುವಾರ ಸಂಜೆ ಹಲ್ಡಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಮತದಾರರಿಗೆ ಈ ರೀತಿ ಕರೆ ನೀಡಿದ್ದಾರೆ. ನೀವು … Continued

ರೈತರ ಪ್ರತಿಭಟನೆ: 1,178 ಖಾತೆ ತೆಗೆಯಲು ಟ್ವಿಟರ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವ ದೆಹಲಿ: ರೈತರ ಪ್ರತಿಭಟನೆಯ ಸುತ್ತಲಿನ ‘ಟೂಲ್‌ಕಿಟ್’ ವಿವಾದದ ಮಧ್ಯೆ, ರೈತರ ಆಂದೋಲನದ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯ ಹರಡುವ 1,178 “ಪಾಕಿಸ್ತಾನಿ-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ನಿರ್ದೇಶನ ನೀಡಿದೆ” ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಟ್ವಿಟರ್ ಇನ್ನೂ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ. ರೈತ ಸಂಘಗಳ … Continued

ಗುರ್ಗಾಂವ್‌ ಕೊಲೆ ಪ್ರಕರಣ: ಇನ್ನೂ ಆರಂಭವಾಗದ ವಿಚಾರಣೆ

ನವದೆಹಲಿ: ಗುರ್ಗಾಂವ್‌ನ ಖಾಸಗಿ ಶಾಲೆಯಲ್ಲಿ ಏಳು ವರ್ಷದ ಬಾಲಕನನ್ನು ಕೊಂದು ಪ್ರಕರಣಕ್ಕೆ ಮೂರು ವರ್ಷಗಳಾದರೂ ಇನ್ನೂ ವಿಚಾರಣೆ ಇನ್ನೂ ಆರಂಭವಾಗಿಲ್ಲ. 8 ಸೆಪ್ಟೆಂಬರ್ 2017 ರಂದು ೭ ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಅದೇ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಯನ್ನು ಸಿಬಿಐ ಬಂಧಿಸಿತ್ತು.. ಆದಾಗ್ಯೂ, ಸಂಬಂಧಿತ ಪ್ರಕರಣಗಳಲ್ಲಿ ಹಲವಾರು ಕಾನೂನು ತೊಡಕುಗಳಿರುವುದರಿಂದ … Continued

ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧ: ಗೋಯಲ್‌

ನವ ದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಆದರೆ ಪದೇ ಪದೇ ಪ್ರಸ್ತಾಪಗಳಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿನಾಮಕಾರಿ ಸಲಹೆ ನೀಡಿಲ್ಲ ಎಂದು ಪ್ರತಿಪಾದಿಸಿದರು. ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ … Continued

ಭಾರತ್ ಮಾತಾ ಕೀ ಜೈ ಎಂದು ಕೂಗಿದರೆ ಮಮತಾಗೆ ಕೋಪ:ಪ್ರಧಾನಿ ವಾಗ್ದಾಳಿ

ನವದೆಹಲಿ:ಯಾರಾದರೂ ಭಾರತ್ ಮಾತಾ ಕೀ ಜೈ ಎಂದು ಕೂಗಿದರೆ ಮಮತಾ ಬ್ಯಾನರ್ಜಿ ಅವರಿಗೆ ಕೋಪ ಬರುತ್ತದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದಾಗಲೂ ಸುಮ್ಮನಿರುತ್ತಾರೆ ಆದರೆ ಭಾರತ್ ಮಾತಾ ಕೀ ಜೈ ಅಂದರೆ ಅವರಿಗೆ ಕೋಪ ಬರುತ್ತದೆ ಎಂದು … Continued

ರೈತರ ಬೇಡಿಕೆ ಈಡೇರುವ ವರೆಗೂ ಮನೆಗೆ ಮರಳುವುದಿಲ್ಲ:ಟಿಕಾಯತ

ಫೆಬ್ರವರಿ: ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಯಾವುದೇ ಮನೆಗೆ ಮರಳುವ ಪ್ರಶ್ನಯೇ ಇಲ್ಲ ಎಂದು ರೈತ ಮುಖಂಡ ರಾಕೇಶ ಟಿಕಾಯತ್‌ ಹೇಳಿದ್ದಾರೆ. ಅವರು ಭಾನುವಾರ ಹರ್ಯಾಣದಲ್ಲಿ ಕಿಸಾನ್‌ ಪಂಚಾಯತ ಉದ್ದೇಶಿಸಿ ಮಾತನಾಡಿದರು. ಕೃಷಿ ಕಾನೂನುಗಳ ವಿರುದ್ಧದ ಅಭಿಯಾನವು ಪ್ರಬಲವಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರರು ಹೇಳಿದ್ದಾರೆ. ನಾನು ನನ್ನನ್ನು ಕೊಲ್ಲುತ್ತೇನೆಯೇ ಹೊರತು ಪ್ರತಿಭಟನೆ ಕೊನೆಗೊಳಿಸುವುದಿಲ್ಲ” … Continued

ಮುಂಬೈ ವಿಮಾನ ನಿಲ್ದಾಣದ ಶೇ.೨೩.೫ರಷ್ಟು ಶೇರು ಪಡೆದ ಅದಾನಿ ಕಂಪನಿ

ಮುಂಬೈ: ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆ ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ (ಎಎಎಚ್‌ಎಲ್‌) ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಮಿಯಾಲ್‌) ಶೇ 23.5ರಷ್ಟು ಪಾಲನ್ನು ಎಸಿಎಸ್‌ಎ ಗ್ಲೋಬಲ್‌ ಲಿಮಿಟೆಡ್‌ (ಎಸಿಎಸ್‌ಎ) ಮತ್ತು ಬಿಡ್‌ ಸರ್ವೀಸಸ್‌ ವಿಭಾಗ (ಮಾರಿಷಸ್‌) ಲಿಮಿಟೆಡ್‌ ನಿಂದ (ಬಿಡ್‌ವೆಸ್ಟ್‌) 1,685.25 ರೂ. ಕೋಟಿ ರೂ.ಗಳಿಗೆ ಪಡೆದುಕೊಂಡಿದೆ. ರೆಗ್ಯುಲೇಟರಿ ಫೈಲಿಂಗ್ ಪ್ರಕಾರ ಎಎಎಚ್‌ಎಲ್ … Continued

ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು … Continued