ಎಸ್‌ಐಟಿ ಮುಂದೆ ಸಿಡಿ ಯುವತಿ ತಂದೆ-ತಾಯಿ ಹಾಜರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಲಕೊಳ್ಳುತ್ತಿದೆ. ಶನಿವಾರ ಬೆಳಿಗ್ಗೆ ಸಿಡಿಯಲ್ಲಿದ್ದ ಯುವತಿಯ ಹೇಳಿಕೆಯುಳ್ಳ ವಿಡಿಯೋ ಬಿಡಗಡೆಯಾಗಿ ಅದರಲ್ಲಿ ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿದ ಬೆನ್ನಲ್ಲೇ ಯುವತಿಯ ಪೋಷಕರು ವಿಶೇಷ ತನಿಖಾ ದಳದ ಮುಂದೆ ಶನಿವಾರ ಹಾಜರಾಗಿದ್ದು, ಪ್ರಕರಣ ಮತ್ತೊಂದು ಟ್ವಿಸ್ಟ್‌ ಪಡೆದಿದೆ. ಅಜ್ಞಾತ ಸ್ಥಳದಲ್ಲಿರುವ ಯುವತಿ ಶನಿವಾರ … Continued

ಭಾರತದಲ್ಲಿ ಒಂದೇ ದಿನಕ್ಕೆ 62 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲು..ಮಹಾರಾಷ್ಟ್ರದಲ್ಲೇ ಶೇ.60ಕ್ಕಿಂತ ಹೆಚ್ಚು..!!

ನವ ದೆಹಲಿ: ಕಳೆದ 24 ತಾಸಿನಲ್ಲಿ ಭಾರತದಲ್ಲಿ ಒಟ್ಟು 62,258 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, ಇದು ಕಳೆದ ಅಕ್ಟೋಬರ್‌ 16ರ ಈಚೆಗೆ ಕಂಡುಬಂದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಈ ಪೈಕಿ 36,902 ಪ್ರರಣಗಳು ಅಂದರೆ ಶೇ62ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ. ಒಟ್ಟು 291 ಸಾವುಗಳು ವರದಿಯಾಗಿದ್ದು, ದರಲ್ಲಿ ಮಹಾರಾಷ್ಟ್ರದಲ್ಲಿ 117 ಮತ್ತು ಪಂಜಾಬ್‌ನಲ್ಲಿ … Continued

ಸಚಿನ್‌ ತೆಂಡುಲ್ಕರ್‌ಗೆ ಕೊರೊನಾ ಸೋಂಕು

ಮುಂಬೈ: ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಸೋಂಕುಕಮಡುಬಂದಿದೆ. ಸೋಂಕಿನ ಲಘು ಲಕ್ಷಣಗಳು ಇರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಸಚಿನ್ ತೆಂಡೂಲ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಇಂದು ಕೊರೊನಾ ಲಘು ಲಕ್ಷಣಗಳು ಕಂಡುಬಂದಿದ್ದು, ಕುಟುಂಬದವರ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ನಾನು ನನ್ನ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ಒಂದು … Continued

ಅಂಬಾನಿ ಮನೆ ಬಳಿ ಬಾಂಬ್ ಬೆದರಿಕೆ ಪ್ರಕರಣ: ವಾಝೆ ಬೆದರಿಕೆ ಪತ್ರ ಇಡಲು ಎಸ್ಯುವಿ ಬಳಿ ಬಂದಿದ್ದು ಸಿಸಿಟಿವಿಯಲ್ಲಿ ಸೆರೆ ?

ಮುಂಬೈ: ಫೆಬ್ರವರಿ 25 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ನಿವಾಸವಾದ ಆಂಟಿಲಿಯಾ ಬಳಿ ಜೆಲೆಟಿನ್ ಸ್ಟಿಕ್ಸ್ ತುಂಬಿದ ಎಸ್‌ಯುವಿ ಪತ್ತೆಯಾದ ಕೆಲವು ದಿನಗಳ ನಂತರ, ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಪಾಲ್ಗೊಂಡಿರುವುದನ್ನು ಮತ್ತಷ್ಟು ದೃಢಪಡಿಸಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಕುರಿತು ವರದಿ ಮಾಡಿರುವ ಫ್ರೀ ಪ್ರೆಸ್‌ … Continued

ಡಾನ್ ಅನ್ಸಾರಿ ಉತ್ತರ ಪ್ರದೇಶ ಆಡಳಿತಕ್ಕೆ ಹಸ್ತಾಂತರಿಸಲು ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ನವ ದೆಹಲಿ: ಪಂಜಾಬ್‌ ರೂಪನಗರ ಜೈಲಿನಲ್ಲಿರುವ ಸುಲಿಗೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಕಸ್ಟಡಿಯನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್. ಎಸ್. ರೆಡ್ಡಿ ಅವರಿದ್ದ ನ್ಯಾಯಪೀಠವು ಮೌ ಕ್ಷೇತ್ರದ ಶಾಸಕರಾದ ಅನ್ಸಾರಿ ಕಸ್ಟಡಿಯನ್ನು ಎರಡು ವಾರಗಳಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೆ … Continued

ಮಹಾರಾಷ್ಟ್ರದಲ್ಲಿ ಶುಕ್ರವಾರ 36,902 ಕೊರೊನಾ ಪ್ರಕರಣಗಳು, ಈವರೆಗಿನ ಗರಿಷ್ಠ

ಮುಂಬೈ : ಮಹಾರಾಷ್ಟ್ರದಲ್ಲಿ ಶುಕ್ರವಾರ 36,902 ಕೊರೊನಾ ಪ್ರಕರಣಗಳು ದಾಖಲಾಗಿದೆ. 112 ಹೊಸ ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಸೋಂಕು ತಗುಲಿದವರ ಸಂಖ್ಯೆ 26,37,735ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 53,907ಕ್ಕೆ ಏರಿಕೆಯಾಗಿದೆ. 17,019 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,82,451 ಆಗಿದೆ. ಮಹಾರಾಷ್ಟ್ರದ ಕೋವಿಡ್-19 ಪ್ರಕರಣಗಳ ಚೇತರಿಕೆ ಪ್ರಮಾಣ ವು ಶೇ.87.2 ರಷ್ಟಿದ್ದರೆ, … Continued

ಮಹಾರಾಷ್ಟ್ರದಲ್ಲಿ ಮಾ.೨೮ರಿಂದ ರಾತ್ರಿ ಕರ್ಫ್ಯೂ

ಮುಂಬೈ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 28 ರಿಂದ ಇಡೀ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರದಿಂದ ರಾತ್ರಿ ಕರ್ಫ್ಯೂ ಆದೇಶಿಸಿದ್ದಾರೆ. ಜನರು ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್ ಅನ್ನು ಗಮನಿಸದಿದ್ದರೆ ಕಠಿಣ ನಿರ್ಬಂಧಗಳ ಬಗ್ಗೆ ಠಾಕ್ರೆ ಎಚ್ಚರಿಸಿದ್ದಾರೆ. ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು … Continued

ಸಿಡಿ ಪ್ರಕರಣ:ನಾಳೆ ಸಂಜೆ 4ರಿಂದ6 ಗಂಟೆಯೊಳಗೆ ಹೊಸ ಬಾಂಬ್‌ ಸ್ಫೋಟ ಮಾಡ್ತೇನೆ

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಸಿಡಿ ಸಂತ್ರಸ್ತ ಯುವತಿ ವಕೀಲರ ಮೂಲಕ ಶುಕ್ರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ ಅವರು, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಸ್ಫೋಟವಾಗಲಿದೆ. ನಾಳೆಯವರೆಗೆ ಕಾಯಿರಿ, ಇದು ಬರೀ ಟ್ರಯಲ್. ನಾಳೆ ಸಂಜೆ 4ರಿಂದ 6 ಗಂಟೆಯೊಳಗೆ ಬಾಂಬ್ ಸ್ಫೋಟವಾಗುತ್ತದೆ. ದೊಡ್ಡ … Continued

ಚಿನ್ನದ ಕಳ್ಳಸಾಗಣೆ, ಇತರ ಪ್ರಕರಣಗಳ ತನಿಖೆ: ಕೇಂದ್ರ ತನಿಖಾ ಸಂಸ್ಥೆಗಳ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ನಿರ್ಧಾರ…!

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಮಹತ್ವ‌ ಪಡೆಯುವ ಅಭೂತಪೂರ್ವ ಕ್ರಮದಲ್ಲಿ ಕೇರಳ ಸಚಿವ ಸಂಪುಟವು ಚಿನ್ನದ ಕಳ್ಳಸಾಗಣೆ ಮತ್ತು ಸಂಬಂಧಿತ ಪ್ರಕರಣಗಳ ತನಿಖೆ ನಡೆಸುತ್ತಿರುವ ಕೇಂದ್ರ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ವಿಚಾರಣೆ ನಡೆಸಲು ಶುಕ್ರವಾರ ನಿರ್ಧರಿಸಿದೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಕೆ. ವಿ. ಮೋಹನನ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲು ಸಭೆ ನಿರ್ಧರಿಸಿತು. … Continued

ಕೊರೊನಾ ಸೋಂಕಿತ ಪಾಕ್ ಪ್ರಧಾನಿ ಇಮ್ರಾನ್‌ ಸಭೆ ನಡೆಸಿದ್ದಕ್ಕೆ ವ್ಯಾಪಕ ಟೀಕೆ

ಇಸ್ಲಾಮಾಬಾದ್‌: ಕೊರೊನಾ ಸೋಂಕಿಗೊಳಗಾಗಿದ್ದರೂ ತಮ್ಮ ಮಾಧ್ಯಮ ತಂಡದೊಂದಿಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಭೆ ನಡೆಸಿದ್ದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಇಮ್ರಾನ್‌ಖಾನ್‌ ಗುರುವಾರ ಕೊರೊನಾ ಲಸಿಕೆ ತೆಗೆದುಕೊಂಡಿದ್ದರು. ಆದರೆ ಅವರಿಗೆ ಶುಕ್ರವಾರ ಸೋಂಕು ತಗುಲಿರುವುದು ದೃಢಪಟ್ಟಿತ್ತು. ದೇಶದ ಪ್ರಥಮ ಮಹಿಳೆ ಬುಶ್ರಾ ಬೀಬಿ ಅವರಿಗೂ ಸೋಂಕು ತಗುಲಿದೆ. ಇದರ ಮಧ್ಯೆ ಪ್ರಧಾನಿ ತಮ್ಮ “ಬನಿಗಾಲ್‌ʼ ನಿವಾಸದಲ್ಲಿ … Continued