ದೀದಿ ಭೀತಿಯಿಂದ ಯೋಗಿ ಜೀವನಚರಿತ್ರೆ ಪ್ರಕಾಶನಕ್ಕೆ ಮುಂದಾಗದ ಪಶ್ಚಿಮ ಬಂಗಾಳ ಪ್ರಕಾಶಕರು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೀವನಚರಿತ್ರೆ “ದಿ ಮಾಂಕ್‌ ಹೂ ಬಿಕಮ್‌ ಚೀಫ್‌ ಮಿನಿಸ್ಟರ್‌ʼ ಕೃತಿಯ ಬಂಗಾಳಿ ಆವೃತ್ತಿ ಪ್ರಕಟಿಸಲು ಪಶ್ಚಿಮ ಬಂಗಾಳದ ಪ್ರಕಾಶಕರು ಮುಂದಾಗದಿರಲು ಮಮತಾ ಬ್ಯಾನರ್ಜಿ ಅವರ ಭೀತಿಯೇ ಕಾರಣ ಎಂದು ಕೃತಿಯ ಲೇಖಕ ಶಾಂತನು ಗುಪ್ತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪ್ರಕಾಶನ ಸಂಸ್ಥೆಗಳು … Continued

ಅಬ್ಬಬ್ಬಾ…ಮಹಾರಾಷ್ಟ್ರದಲ್ಲಿ 40 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು..!!

ಮಹಾರಾಷ್ಟ್ರದಲ್ಲಿ ಭಾನುವಾರ (ಮಾರ್ಚ್ 28) 40,414 ಹೊಸ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಇದು ರಾಜ್ಯದ ಅತಿ ಹೆಚ್ಚು ಏಕದಿನ ಉಲ್ಬಣವಾಗಿದೆ. ಹಿಂದಿನ ಏಕೈಕ ಏಕದಿನ ಉಲ್ಬಣವು 36,902 ಪ್ರಕರಣಗಳು, ಇದು ಮಾರ್ಚ್ 26 ಶುಕ್ರವಾರ ದಾಖಲಾಗಿದೆ. ಅಲ್ಲದೆ, ದಿನದಲ್ಲಿ 108 ಕೊವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ … Continued

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಮಾ.೩೦ರಂದು ಬೈಪಾಸ್‌ ಸರ್ಜರಿ

ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಶನಿವಾರ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್‌)ಗೆ ದಾಖಲಿಸಲಾಗಿದ್ದು, ಬೈಪಾಸ್‌ ಸರ್ಜರಿಗೆ ಸಿದ್ಧತೆ ನಡೆಯುತ್ತಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಶನಿವಾರ ದೆಹಲಿಯ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ. ತನಿಖೆಯ ನಂತರ, ಮಾರ್ಚ್ 30, ಮಂಗಳವಾರ ಬೆಳಿಗ್ಗೆ ಯೋಜಿತ ಬೈಪಾಸ್ ಸರ್ಜರಿಗೆ … Continued

ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದರು, ಖಾಸಗಿ ಭಾಗಗಳಿಗೆ ಹೊಡೆದರು,ಹಣ ಕಿತ್ತುಕೊಂಡರು:ನಾಗ ಸಾಧು ಆರೋಪ

ಛತ್ತೀಸ್‌ಗಡದ ಬಿಲಾಸ್ಪುರದಲ್ಲಿ ತಲುಪಿದ ನಂತರ ನಾಗಾ ಸಾಧುವಿನ ಮೇಲೆ ಹಲ್ಲೆ ಪೊಲೀಸರು ಹಲ್ಲೆ ಮಾಡಿದ ಘಟನೆ (ಮಾರ್ಚ್ 22ರಂದು ) ತಡವಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ನಾಗ ಸಾಧುವನ್ನು ಜುನಾ ಅಖಾಡಾದ ಯೋಗಿ ಗಂಗಾಪುರಿ ಎಂದು ಗುರುತಿಸಲಾಗಿದೆ. ಈ ನಾಗ ಸಾಧು ಸೋಮವಾರ ಎಸಿ 2ನೇ ಕೋಚ್‌ ರೈಲಿನಲ್ಲಿ ತಿರುವನಂತಪುರದಿಂದ ಬಿಲಾಸ್ಪುರಕ್ಕೆ ಬಂದಿದ್ದರು. ಅವರು ಚಕರ್‌ಭಟ್ಟ … Continued

ಕರ್ನಾಟಕದಲ್ಲಿ 3 ಸಾವಿರ ದಾಟಿದ ಏಕದಿನದ ಕೊರೊನಾ ಸೋಂಕು..!ಇದು ಐದು ತಿಂಗಳಲ್ಲೇ ಗರಿಷ್ಠ ದೈನಂದಿನ ಪ್ರಕರಣ..!!

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ತಾಸಿನಲ್ಲಿ (ಭಾನುವಾರ) 3,082 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ತಿಳಿಸಿದೆ. ಇದು ಐದು ತಿಂಗಳ ನಂತರ ದಾಖಲಾದ ದೈನಂದಿನ ಗರಿಷ್ಠ ಪ್ರಕರಣಗಳಾಗಿವೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 23,037ಕ್ಕೆ ತಲುಪಿದೆ. 12 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,87,012 … Continued

ಹಿರೆನ್‌ ಸಾವು: ಮಿಥಿ ನದಿ ಸೇತುವೆಗೆ ಸಚಿನ್ ವಾಝೆ ಕರೆತಂದ ಎನ್ಐಎ, ಕಂಪ್ಯೂಟರ್ ಸಿಪಿಯು, ವಾಹನ ಸಂಖ್ಯೆ ಪ್ಲೇಟ್ ಪತ್ತೆ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಮಿಥಿ ನದಿಯ ಸೇತುವೆಗೆ ಭಾನುವಾರ ಕರೆದೊಯ್ದರು. ಈ ಸಂದರ್ಭದಲ್ಲಿ ಈಜುಪಟುಗಳು ಕಂಪ್ಯೂಟರ್ ಸಿಪಿಯು, ವಾಹನದ ನಂಬರ್ ಪ್ಲೇಟ್ ಮತ್ತು ಇತರ ವಸ್ತುಗಳನ್ನು ನದಿಯಿಂದ ವಶಪಡಿಸಿಕೊಂಡಿದ್ದಾರೆ ಎಂದು … Continued

ಅದಾನಿ ನಿವಾಸದಲ್ಲಿ ಅಮಿತ್‌ ಶಾ-ಪವಾರ್‌ ಭೇಟಿ ವದಂತಿ:ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದ ಶಾ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ಮಧ್ಯೆ ಬಿಜೆಪಿಯ ಹಿರಿಯ ನಾಯಕತ್ವವು ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇದರ ಮಧ್ಯೆಯೇ ಶನಿವಾರ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅಹಮದಾಬಾದಿನಲ್ಲಿ ಗೌತಮ ಅದಾನಿ ಮನೆಯಲ್ಲಿ ಭೇಟಿಯಾದರು ಎಂದು ಹಲವು ಮಾಧ್ಯಮಗಳಲ್ಲಿ … Continued

ಅಹಮದಾಬಾದ್ ಐಐಎಂನಲ್ಲಿ 40 ಮಂದಿಗೆ ಕೊರೊನಾ ಸೋಂಕು

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂ) ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಹಮದಾಬಾದ್‌ ಮುನ್ಸಿಪಲ್ ಕಾರ್ಪೋರೇಷನ್ ಉಪ ಆರೋಗ್ಯ ಅಧಿಕಾರಿ ಮೆಹುಲ್ ಆಚಾರ್ಯ, ಕೊರೊನಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ 40 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರೆಲ್ಲರನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ … Continued

ಶಹಜಹಾನ್ಪುರ: ‘ಜೂತಾ ಮಾರ್ ಹೋಳಿ’ ಮೆರವಣಿಗೆಗೆ ಮುನ್ನ 43 ಮಸೀದಿಗಳಿಗೆ ಪ್ಲಾಸ್ಟಿಕ್ ಮುಸುಕು..

ಮಸೀದಗಳ ಮೇಲೆ ಯಾವುದೇ ಬಣ್ಣ ಎಸೆಯುವ ಘಟನೆಗಳನ್ನು ತಡೆಗಟ್ಟಲು ಉತ್ತರ ಪ್ರದೇಶದ ಶಹಜಹಾನ್ಪುರದ ಸುಮಾರು 43 ಮಸೀದಿಗಳನ್ನು ಪ್ಲಾಸ್ಟಿಕ್ ಹಾಳೆಗಳು ಹಾಗೂ ಟರ್ಪಾಲಿನ್‌ಗಳಿಂದ ಮುಚ್ಚಲಾಗಿದೆ. ಈ ಕುರಿತು ಓಪಿಂಡಿಯಾ ವರದಿ ಮಾಡಿದೆ.  ಹೋಳಿಯಲ್ಲಿ ಸಾಂಪ್ರದಾಯಿಕ ‘ಲಾತ್ ಸಾಹೇಬ್ ಕಾ ಜುಲೂಸ್’ (ಲಾತ್ ಸಾಹೇಬ್ ಮೆರವಣಿಗೆ) ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಜಹಾನ್ಪುರ್ ಪೊಲೀಸರು ಜಿಲ್ಲೆಯ ಸುಮಾರು … Continued

ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸದಿದ್ರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತ: ಟಿಕಾಯತ್‌ ಎಚ್ಚರಿಕೆ

ನವ ದೆಹಲಿ: ಪ್ರತಿಭಟನಾ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತಗೊಳಿಸುವುದಾಗಿ ಸಂಯುಕ್ತ ರೈತ ಒಕ್ಕೂಟದ ನಾಯಕ ರಾಕೇಶ ಟಿಕಾಯತ್‌ ಎಚ್ಚರಿಸಿದ್ದಾರೆ. ರಾಜಸ್ಥಾನದ ಭಾರತ್ಪುರದಲ್ಲಿ ಮಾಧ್ಯಮ ಸಂವಾದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು,ಕಾರ್ಪೋರೇಟ್‌ ಸಂಸ್ಥೆಗಳೇ ದೇಶವನ್ನು ಆಳುತ್ತಿವೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿಲ್ಲ. … Continued