ಮಹಾರಾಷ್ಟ್ರದಲ್ಲಿ ಒಂದೇ ದಿನ 30 ಸಾವಿರ ದಾಟಿದ ಕೊರೊನಾ ಪ್ರಕರಣ..ಇದು ಈವರೆಗಿನ ದಾಖಲೆ ಉಲ್ಬಣ..!!

ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್‌-19 ಪ್ರಕರಣಗಳಲ್ಲಿ ಮತ್ತೊಂದು ಅಗಾಧ ಹೆಚ್ಚಳ ಕಂಡಿದೆ. ಭಾನುವಾರ 30,535 ದೈನಂದಿನ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದೀಚೆಗೆ ಇದು ಅತ್ಯಧಿಕ ದೈನಂದಿನ ಪ್ರಕರಣಗಳಾಗಿವೆ.ಈವರೆಗಿನ ದೈನಂದಿನ ಪ್ರಕರಣಗಳಲ್ಲಿ ಅತಿ ಹೆಚ್ಚು 27,126 ಆಗಿತ್ತು. ಹಾಗೂ ಅದು ಶನಿವಾರ ದಾಖಲಾಗಿತ್ತು. ಭಾನುವಾರ ಅದಕ್ಕಿಂತಲೂ ಮೂರುವರೆ ಸಾವಿರ ಪ್ರಕರಣಗಳು ದಾಖಲಾಗಿವೆ. ದಿನದಲ್ಲಿ 99ಕೊವಿಡ್‌-19 ಸಾವುಗಳು … Continued

ಮನ್ಸುಖ್ ಹಿರೆನ್ ಸಾವಿನ ಪ್ರಕರಣ ಬಗೆಹರಿದಿದೆ: ಮಹಾರಾಷ್ಟ್ರ ಎಟಿಎಸ್ ಡಿಐಜಿ

ಮುಂಬೈ; ಮಹಾರಾಷ್ಟ್ರ ಎಟಿಎಸ್ ಡಿಐಜಿ ಶಿವದೀಪ್ ಲ್ಯಾಂಡೆ ಮನ್ಸುಖ್ ಹಿರೆನ್ ಸಾವಿನ ಪ್ರಕರಣ ಬಗೆಹರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಶಿವದೀಪ್ ಲ್ಯಾಂಡೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಈ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ಸೂಕ್ಷ್ಮವಾದ ಮನ್ಸುಖ್ ಹಿರೆನ್ ಕೊಲೆ ಪ್ರಕರಣ ಬಗೆಹರಿಸಲಾಗಿದೆ. ಕಳೆದ ಹಲವು ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಈ ಪ್ರಕರಣದಲ್ಲಿ ನ್ಯಾಯ … Continued

ಬೇಕಾದರೆ ನನ್ನ ತಲೆ ಮೇಲೆ ಕಾಲಿಟ್ಟು ಒದೆಯಿರಿ, ಆದರೆ ಬಂಗಾಳಿ ಜನರ ಕನಸನ್ನು ಒದೆಯಲು ಬಿಡುವುದಿಲ್ಲ: ಮಮತಾ ವಿರುದ್ಧ ಮೋದಿ ವಾಗ್ದಾಳಿ

ಕೊಲ್ಕತ್ತಾ :ಬೇಕಿದ್ದರೆ ನನ್ನ ತಲೆಯ ಮೇಲೆ ನಿಮ್ಮ ಕಾಲಿಟ್ಟು ನನ್ನನ್ನು ಒದೆಯಿರಿ, ಆದರೆ, ನೀವು ಬಂಗಾಳದ ಅಭಿವೃದ್ಧಿ ಮತ್ತು ಅದರ ಜನರ ಕನಸುಗಳನ್ನು ಕಾಲಿನಿಂದ ಒದೆಯುವುದಕ್ಕೆ ನಾನು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಂಕುರಾದಲ್ಲಿ ಭಾನುವಾರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ವಿರುದ್ಧ ಮೇಲೆ ವಾಗ್ದಾಳಿ ನಡೆಸಿದರು. ಬಂಗಾಳದ ಬೀದಿಗಳಲ್ಲಿ … Continued

ದೀದಿ ಹಾಡಿ ಹೊಗಳಿದ ಪಾಕಿಸ್ತಾನದ ಮಾಜಿ ರಾಯಭಾರಿ ಬಸಿತ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು “ಬಂಗಾಳದ ಹುಲಿʼ ಎಂದು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ರಾಯಭಾರಿ (ಹೈ ಕಮೀಶ್ನರ್‌) ಅಬ್ದುಲ್‌ ಬಸಿತ್‌, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೀದಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ೨೦೧೪ರ ಮಾರ್ಚ್‌ನಿಂದ ೨೦೧೭ ಆಗಸ್ಟ್‌ವರೆಗೆ ಭಾರತಕ್ಕೆ ಪಾಕಿಸ್ತಾನದ ಹೈಕಮೀಶ್ನರ್‌ ಆಗಿದ್ದ ಅಬ್ದುಲ್‌, ೨ ಬಾರಿ ಪಶ್ಚಿಮ ಮಮತಾ ಅವರನ್ನು ಭೇಟಿ ಮಾಡಿದ್ದಾರೆ. … Continued

ನಾನು ಕತ್ತೆ, ಯಾಕೆಂದರೆ ನನಗೆ ಅಧಿಕಾರಿ ಕುಟುಂಬದ ನೈಜ ಮುಖ ಗುರುತಿಸಲು ಸಾಧ್ಯವಾಗಲಿಲ್ಲ : ಮಮತಾ

ಕೊಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಪುರ್ಬಾ ಮೇದಿನಿಪುರ ಜಿಲ್ಲೆಯ ಪ್ರಭಾವಿ ಅಧಿಕಾರಿ ಕುಟುಂಬದ ‘ನಿಜವಾದ ಮುಖ’ ವನ್ನು ಗುರುತಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ತನ್ನನ್ನೇ ತಾನು ದೂಷಿಸಿಕೊಂಡಿದ್ದಾರೆ. ಸುವೇಂಧು ಅಧಿಕಾರಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿ ಈಗ ವಿಧಾನಸಭೆ … Continued

ಮಮತಾ ಬ್ಯಾಬರ್ಜಿ ಗಾಯಗೊಂಡ ಘಟನೆ: ಸಿಐಡಿ ತನಿಖೆ

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಾರ್ಚ್‌ ೧೦ರಂದು ನಡೆದ ಸಿಎಂ ಮಮತಾ ಬ್ಯಾನರ್ಜಿ ಗಾಯಗೊಂಡ ಘಟನೆಯ ತನಿಖೆಯನ್ನು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (ಸಿಐಡಿ) ವಹಿಸಿಕೊಂಡಿದೆ. ಸಿಐಡಿಯ ಆರು ಸದಸ್ಯರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಅಜಯ್ ಠಾಕೂರ್ ನೇತೃತ್ವ ವಹಿಸಲಿದ್ದಾರೆ. ಬಿರುಲಿಯಾ ಬಜಾರ್‌ನಲ್ಲಿ ನಾಮಪತ್ರ ಸಲ್ಲಿಸಿದ ಕೆಲವೇ … Continued

ಕೇರಳದಲ್ಲಿ  ಬಿಜೆಪಿಗೆ ಹಿನ್ನಡೆ: ಮೂರು ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ರಾಜ್ಯದ ತಲಚೇರಿ, ಗುರುವಾಯುರ್ ಮತ್ತು ದೇವಿಕುಲಂ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರ ತಿರಸ್ಕರಿಸಲಾಗಿದೆ.ಏಪ್ರಿಲ್ 6ರಂದು ನಡೆಯಲಿರುವ ಕಣ್ಣೂರು ಜಿಲ್ಲೆಯ ತಲಚೇರಿ, ಗುರುವಾಯುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸದ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಗಿದೆ ಎಂದು … Continued

ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಕೊರೊನಾ ಸೋಂಕು ದೃಢ

ನವ ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಮಾರ್ಚ್ 20 ರಂದು ಏಮ್ಸ್ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಈಗ ಸ್ಥಿರವಾಗಿದೆ. ಕೆಲವು ದಿನಗಳ ಹಿಂದೆ ಓಂ ಬಿರ್ಲಾ ಅವರು ಸಂಸತ್ ಭವನದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್ಎಸ್) ಆರೋಗ್ಯ ಶಿಬಿರ ಉದ್ಘಾಟಿಸಿದ್ದರು. ಕಳೆದ 24 … Continued

ಗೃಹ ಸಚಿವ ದೇಶ್ಮುಖ್‌ ವಿರುದ್ಧ ಆರೋಪ ಗಂಭೀರ ಸ್ವರೂಪದ್ದು:ಶರದ್‌ ಪವಾರ್‌

ಮುಂಬೈ; ರಾಷ್ಟ್ರೀಯ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುತ್ತಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಕಳಂಕಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಗೃಹ ಸಚಿವ ಅನಿಲ ದೇಶ್ಮುಖ್ ‌ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ … Continued

ಹಿರೆನ್‌ ಸಾವಿನ ಪ್ರಕರಣ: ಎಟಿಎಸ್‌ನಿಂದ ಇಬ್ಬರ ಬಂಧನ

ಮುಂಬೈ; ಥಾಣೆ ಉದ್ಯಮಿ ಮನ್ಸುಖ್ ಹಿರೆನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಬ್ಬರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಫ್ರೀ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಬ್ಬ ಪೋಲೀಸ್ ಮತ್ತು ಬುಕ್ಕಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಥಾಣೆ ನ್ಯಾಯಾಲಯಕ್ಕೆ … Continued