ಅಯ್ಯೋ ದೇವ್ರೆ… | ಆಸ್ಟ್ರೇಲಿಯಾ ತಂಡದ ಮಿಚೆಲ್ ಮಾರ್ಷ್ ʼವಿಶ್ವಕಪ್ ಟ್ರೋಫಿʼ ಮೇಲೆ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆಯುತ್ತಿರುವ ಫೋಟೋ ವೈರಲ್

ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗಿದೆ. ಇದೀಗ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಫೋಟೋ ವೈರಲ್ ಆಗಿದ್ದು, ಇದು ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ತನ್ನ ಪಾದಗಳನ್ನಟ್ಟು ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸುತ್ತದೆ. … Continued

ಬಂದರಿನಲ್ಲಿ ಭಾರೀ ಬೆಂಕಿ ಅನಾಹುತ : 35 ಮೀನುಗಾರಿಕಾ ಬೋಟ್‌ ಗಳು ಸುಟ್ಟು ಕರಕಲು

ವಿಶಾಖಪಟ್ಟಣಂ : ಸೋಮವಾರ ಮುಂಜಾನೆ ವಿಶಾಖಪಟ್ಟಣಂನ ಜೆಟ್ಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 35 ಮೀನುಗಾರಿಕಾ ಬೋಟ್‌ ಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝೀರೋ ಜೆಟ್ಟಿ ಪ್ರದೇಶದಲ್ಲಿ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಬೇಗನೆ ವ್ಯಾಪಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಪ್ರಕಾರ, ಬೆಳ್ಳಂಬೆಳಗ್ಗೆ ಹೊತ್ತಿ ಉರಿದು ಬೆಳಗಿನ ಜಾವ 4 ಗಂಟೆ … Continued

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು…”: ಭಾರತದ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ರಾಹುಲ್ ದ್ರಾವಿಡ್

ಅಹಮದಾಬಾದ್: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ಕ್ರಿಕೆಟ್‌ ತಂಡದ ಸೋಲಿನ ನಡುವೆಯೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಭಾನುವಾರ ಕೊನೆಗೊಂಡಿದೆ. ಈ ನಡುವೆ ಅವರು ಮಾಧ್ಯಮದವರೊಂದಿಗೆ ,ಆತನಾಡಿದ್ದು, ರಾಷ್ಟ್ರೀಯ ತಂಡದ ಜೊತೆ ಮುಂದುವರಿಯುವ ಕುರಿತಂತೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ … Continued

ಕ್ರಿಕೆಟ್‌ ವಿಶ್ವಕಪ್ 2023 : ರನ್ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ನಂ.1, ಮೊಹಮ್ಮದ್‌ ಶಮಿಗೆ ಅತಿ ಹೆಚ್ಚು ವಿಕೆಟ್

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವ ಭಾರತ ತಂಡದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿ ರೋಹಿತ್ ಶರ್ಮಾ ಬಳಗವು ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್ ಅಂತರದಿಂದ ಗೆದ್ದು ಆರನೇ … Continued

ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್‌ ಪಂದ್ಯಕ್ಕೆ ನನಗೆ ಆಹ್ವಾನಿಸಿಲ್ಲ ಎಂದ ಕಪಿಲ್ ದೇವ್

ಆತಿಥೇಯರು ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್‌ಗೆ ನನ್ನನ್ನು ಆಹ್ವಾನಿಸಿಲ್ಲ ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಭಾನುವಾರ ಹೇಳಿದ್ದಾರೆ. 1983 ರಲ್ಲಿ ಭಾರತ ತನ್ನ ಚೊಚ್ಚಲ ಏಕದಿನದ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ತಂಡದ ನಾಯಕರಾಗಿದ್ದ ಕಪಿಲ್ ದೇವ್‌ ಅವರು ತಾವು ಆಗಿನ ತಂಡದ ಇತರ ಆಟಗಾರರ ಜೊತೆಗೆ ಈ ಪಂದ್ಯಕ್ಕೆ ಪ್ರಯಾಣಿಸಲು ಬಯಸಿದ್ದಾಗಿ … Continued

ಕ್ರಿಕೆಟ್ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತಕ್ಕೆ ಯಾವ ಅಂಶಗಳು ಮುಳುವಾಯಿತು..?

ವಿಶ್ವಕಪ್ ಗೆಲುವಿನ ಹಂಬಲದಲ್ಲಿದ್ದ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದಲ್ಲಿ ಎಡವಿತು. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ -2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್‌ಗಳ ಜಯ ಸಾಧಿಸುವ ಮೊದಲು ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡ 240 ರನ್‌ಗಳಿಗೆ ಆಲೌಟ್‌ ಆಯಿತು. ಫೈನಲ್‌ನಲ್ಲಿ ಭಾರತದ ಸೋಲಿಗೆ ಕೆಲವು ಸಂಗತಿಗಳು … Continued

ವಿಶ್ವಕಪ್‌ 2023 : ಭಾರತಕ್ಕೆ ನಿರಾಸೆ, ದಾಖೆಲಯ 6ನೇ ಬಾರಿಗೆ ವಿಶ್ವಕಪ್‌ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ಅಹಮದಾಬಾದ್‌ : ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ದಾಖಲೆಯ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (120 ಎಸೆತಗಳಲ್ಲಿ 137) ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು. ಅಂತಿಮ ಪಂದ್ಯದಲ್ಲಿ ಅರ್ಧ ಶತಕಗಳಿಸಿದ … Continued

ಉತ್ಪನ್ನಗಳಿಗೆ ಹಲಾಲ್ ಟ್ಯಾಗ್ ಎಂದರೇನು? ಉತ್ತರ ಪ್ರದೇಶ ಸರ್ಕಾರ ಇದನ್ನು ಏಕೆ ನಿಷೇಧಿಸಿದೆ…?

ನವದೆಹಲಿ: ಹಲಾಲ್ ಟ್ಯಾಗ್ ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ಕ್ರಮವು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಹೊರಡಿಸಿದ ಅಧಿಸೂಚನೆಯು ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಆದಾಗ್ಯೂ, ಈ ಆದೇಶವು ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳಿಗೆ ವಿನಾಯಿತಿ ನೀಡುತ್ತದೆ. ಹಲಾಲ್ ಎಂದರೇನು? ಹಲಾಲ್ … Continued

ಕ್ರಿಕೆಟ್ ವಿಶ್ವಕಪ್ 2023 : ಪಿಚ್‌ ಒಳಗೆ ಓಡಿ ಬಂದ ‘ಫ್ರೀ ಪ್ಯಾಲೆಸ್ತೈನ್’ ಟೀ ಶರ್ಟ್ ಧರಿಸಿದ ವ್ಯಕ್ತಿ ; ಕೊಹ್ಲಿ ತಬ್ಬಿಕೊಳ್ಳಲು ಯತ್ನ | ವೀಕ್ಷಿಸಿ

ಅಹಮದಾಬಾದ್‌: ಭಾನುವಾರ ಅಹಮದಾಬಾದಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ ಪಂದ್ಯ ನಡೆಯುತ್ತಿರುವಾಗ ‘ಫ್ರೀ ಪ್ಯಾಲೆಸ್ಟೈನ್’ ಟೀ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಪಿಚ್ ಒಳಗೆ ಓಡಿ ಬಂದಿದ್ದಾನೆ. ಆತ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಕೆಂಪು ಬಣ್ಣದ ಚಡ್ಡಿ ಧರಿಸಿದ್ದ ವ್ಯಕ್ತಿ, ಮುಂಭಾಗದಲ್ಲಿ ‘ಸ್ಟಾಪ್ ಬಾಂಬ್ ಪ್ಯಾಲೆಸ್ಟೈನ್’ ಮತ್ತು ಹಿಂಭಾಗದಲ್ಲಿ … Continued

ಕ್ರಿಕೆಟ್ ವಿಶ್ವಕಪ್ ಫೈನಲ್‌ಗೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಭುತ ವೈಮಾನಿಕ ಪ್ರದರ್ಶನ | ವೀಕ್ಷಿಸಿ

ಅಹಮದಾಬಾದ್‌ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಕಿಕ್‌ಸ್ಟಾರ್ ಮಾಡಲು ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯಕಿರಣ ಏರೋಬ್ಯಾಟಿಕ್ ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಮೇಲೆ ವೈಮಾನಿಕ ಪ್ರದರ್ಶನವನ್ನು ಪ್ರದರ್ಶಿಸಿತು. ಫೈನಲ್ ಪಂದ್ಯದ ಮುನ್ನಾ ದಿನವೂ ರಿಹರ್ಸಲ್ ಶೋನಲ್ಲಿ ಪಾಲ್ಗೊಂಡಿದ್ದ ಸೂರ್ಯಕಿರಣ ಏರೋಬ್ಯಾಟಿಕ್ ತಂಡದ ಸದಸ್ಯರು ರಿಹರ್ಸಲ್ ವೇಳೆ ರೋಚಕ ರಚನೆಗಳನ್ನು … Continued