ನಿಜ್ಜರ್‌ ಹತ್ಯೆಯಲ್ಲಿ ಭಾರತದ ವಿರುದ್ಧ ಬೊಬ್ಬೆ ಹೊಡೆದ ಕೆನಡಾ, ಟೊರೊಂಟೊದಲ್ಲಿ ಬಲೂಚ್ ಹೋರಾಟಗಾರ್ತಿ ಹತ್ಯೆ ಆರೋಪ ಪಾಕಿಸ್ತಾನದ ವಿರುದ್ಧ ಬಂದಾಗ ಪ್ರತಿಕ್ರಿಯಿಸಿದ್ದು ಹೀಗೆ..

ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯೆಯಾಗಿ ಕೆನಡಾ ಸರ್ಕಾರ ಭಾರತೀಯ ರಾಜತಾಂತ್ರಿಕ ಪವನಕುಮಾರ ರೈ ಅವರನ್ನು ದೇಶದಿಂದ ಹೊರಹಾಕಿದೆ. ಪ್ರಶ್ನೆಯಲ್ಲಿರುವ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಈ ವರ್ಷದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ … Continued

ಭಾರತ ಸಂಬಂಧ ಕೊನೆಗೊಳಿಸಿದರೆ ಕೆನಡಾಕ್ಕೇ ಆರ್ಥಿಕ ಹೊಡೆತ..? : ಕೆನಡಾದಲ್ಲಿ ಪಂಜಾಬ್ ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ಹೂಡಿಕೆಯೇ 68,000 ಕೋಟಿ ರೂ…!

ಚಂಡೀಗಢ (ಪಂಜಾಬ್) : ಭಾರತದ ವಿರುದ್ಧ ಪ್ರಧಾನಿ ಜಸ್ಟಿನ್ ಟ್ರುಡೊ ಅವರ “ಅಸಂಬದ್ಧ” ಆರೋಪದ ನಂತರ ಭಾರತ-ಕೆನಡಾ ಸಂಬಂಧಗಳು ಹಳಸಿದವು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದ್ದಾರೆ. ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯು ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ … Continued

ಮನ್ ಕಿ ಬಾತ್: ಜರ್ಮನ್‌ ಯುವತಿಯ ಭಾರತೀಯ ಸಂಗೀತ-ಸಂಸ್ಕೃತಿ ಪ್ರೀತಿಗೆ ಪ್ರಧಾನಿ ಮೋದಿ ಶ್ಲಾಘನೆ ; ಆಕೆ ಹಾಡಿದ ಕನ್ನಡ ಗೀತೆ-ಸಂಸ್ಕೃತ ಶ್ಲೋಕದ ಉಲ್ಲೇಖ | ವೀಕ್ಷಿಸಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಮನ್ ಕಿ ಬಾತ್‌’ನ 105ನೇ ಸಂಚಿಕೆಯಲ್ಲಿ ಭಾರತೀಯ ಸಂಗೀತ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಇರುವ ವಿಶಿಷ್ಟ ವಿದೇಶಿ ಪ್ರತಿಭೆ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಗೀತವು ಜಾಗತಿಕಗೊಂಡಿವೆ. ಹೆಚ್ಚು ಹೆಚ್ಚು ಜನರು ಅದರತ್ತ ಒಲವು ತೋರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೂ ಅದಕ್ಕೆ ಅವರು … Continued

ಚಂದ್ರಯಾನ-3 : ವಿಕ್ರಂ ಲ್ಯಾಂಡರ್-ಪ್ರಜ್ಞಾನ ರೋವರ್ ಪುನಶ್ಚೇತನದ ಬಗ್ಗೆ ಇಸ್ರೋ ಹೇಳುವುದೇನು..?

ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿರುವ ಚಂದ್ರಯಾನ-3 ಮಿಷನ್ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಪುನಶ್ಚೇತನ ನೀಡುವ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಕ್ಟೋಬರ್ 6ರ ವರೆಗೂ ಮುಂದುವರಿಸಲಿದೆ. ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್‌ ಇಳಿದು ನಂತರ 14 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಸದ್ಯ ಆಫ್‌ ಮೋಡ್‌ ನಲ್ಲಿರುವ … Continued

ಏಷ್ಯನ್ ಗೇಮ್ಸ್ 2023: ಮೊದಲ ದಿನವೇ 5 ಪದಕ ಗೆದ್ದ ಭಾರತ

ಹ್ಯಾಂಗ್ ಝೂ (ಚೀನಾ) : 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೊದಲ ದಿನವಾದ ಇಂದು, ಭಾನುವಾರ ಭಾರತ ಐದು ಪದಕಗಳನ್ನು ಗೆದ್ದಿದೆ. ಮಹಿಳೆಯರ 10 ಮೀ ಏರ್ ರೈಫಲ್ ತಂಡ ವಿಭಾಗ, ಪುರುಷರ ಲೈಟ್ ವೈಟ್ ಡಬಲ್ ಸ್ಕಲ್ಸ್ ವಿಭಾಗ ಮತ್ತು ಪುರುಷರ-8 ಜೋಡಿ ರೋವಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಜೋಡಿ ರೋವಿಂಗ್ … Continued

ವೀಡಿಯೊ..: ಚಲಿಸುತ್ತಿದ್ದ ಬೈಕ್‌ ಸವಾರನಿಗೆ ಹಾವು ಕಡಿದು ಸ್ಥಳದಲ್ಲೇ ಸಾವು | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಂದೋರ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ದ್ವಿಚಕ್ರವಾಹನದಲ್ಲಿದ್ದ ವ್ಯಕ್ತಿಯೊಬ್ಬನಿಗೆ ನಾಗರ ಹಾವು ಕಚ್ಚಿ ಆತ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಹಾವು ಕಚ್ಚಿದ ಅವರು ಕೆಲವೇ ಕ್ಷಣಗಳಲ್ಲಿ ಅವರು ನಿಧನರಾಗಿದ್ದಾರೆ. ಇಂದೋರ್‌ನ ಮೊವ್ ಪೊಲೀಸ್ ಠಾಣೆ ವ್ಯಾಪ್ತಿಯ ತೇಲಿ ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನೀಶ ಎಂದು ಗುರುತಿಸಲಾಗಿದ್ದು, ಅವರು ಹಾವು ಹಿಡಿಯುವುದರಲ್ಲಿ … Continued

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಿದ್ದ, ಭಾರತದಲ್ಲಿ ದಾಳಿ ನಡೆಸುವುದನ್ನು ಸಂಘಟಿಸಿದ್ದ : ವರದಿಗಳು

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ಘರ್ಷಣೆಯ ಕೇಂದ್ರಬಿಂದುವಾಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಮತ್ತು ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ನೆರವು ನೀಡಿದ್ದ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ ದಸ್ತಾವೇಜು ಹೇಳುತ್ತದೆ ಎಂದು ವರದಿಗಳು ತಿಳಿಸಿವೆ. ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ … Continued

‘ಒಂದು ರಾಷ್ಟ್ರ, ಒಂದು ಚುನಾವಣೆ’ : ಉನ್ನತ ಮಟ್ಟದ ಸಮಿತಿ ಮೊದಲ ಸಭೆ ; ಪಕ್ಷಗಳ ಅಭಿಪ್ರಾಯ ಪಡೆಯಲು ನಿರ್ಧಾರ

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಶನಿವಾರ ದೇಶದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಉನ್ನತ ಮಟ್ಟದ ಸಮಿತಿಯ ಮೊದಲ ಸಭೆ ನಡೆಯಿತು. ಎಂಟು ಸದಸ್ಯರ ಸಮಿತಿಯು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪಡೆಯಲು ರಾಜಕೀಯ ಪಕ್ಷಗಳು ಮತ್ತು ಕಾನೂನು ಆಯೋಗದ ಸದಸ್ಯರನ್ನು ಆಹ್ವಾನಿಸಲು ನಿರ್ಧರಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ. … Continued

ಜೈಪುರದಲ್ಲಿ ಕಾಲೇಜು ವಿದ್ಯಾರ್ಥಿ ಸ್ಕೂಟರ್ ಮೇಲೆ ಸವಾರಿ ಮಾಡಿದ ರಾಹುಲ್ ಗಾಂಧಿ | ವೀಕ್ಷಿಸಿ

ಜೈಪುರ: ದಿನಪೂರ್ತಿ ಜೈಪುರ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಸ್ಕೂಟರ್ ಸವಾರಿ ಆನಂದಿಸುತ್ತಿರುವುದು ಕಂಡುಬಂದಿದೆ. ಕಾಲೇಜಿನ ಹೊರಗೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಸ್ಕೂಟರ್‌ನಲ್ಲಿ ಗಾಂಧಿ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 13 ಸೆಕೆಂಡುಗಳ ವೀಡಿಯೊ ಕ್ಲಿಪ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಕೂಟಿರಿನ ಹಿಂದೆ ಕುಳಿತು ಸವಾರಿ ಮಾಡುತ್ತಿದ್ದು, … Continued

ದೆಹಲಿ ವಿಶ್ವವಿದ್ಯಾಲಯ ಚುನಾವಣೆ: 4ರಲ್ಲಿ 3 ಸ್ಥಾನಗಳನ್ನು ಗೆದ್ದ ಎಬಿವಿಪಿ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಲ್ಕು ಸೆಂಟ್ರಲ್ ಪ್ಯಾನಲ್ ಹುದ್ದೆಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದೆ. ಎಬಿವಿಪಿಯ ತುಷಾರ್ ದೇಧಾ ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಅಭ್ಯರ್ಥಿ ಹಿತೇಶ ಗುಲಿಯಾ … Continued