ಮಳೆಯ ಆರ್ಭಟ ; ಆಂಧ್ರ, ತೆಲಂಗಾಣದಲ್ಲಿ 27 ಜನರು ಸಾವು

ಹೈದರಾಬಾದ್‌ : ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸತತ ಎರಡನೇ ದಿನವಾದ ಭಾನುವಾರದ ಭಾರೀ ಮಳೆಗೆ ಕನಿಷ್ಠ 27 ಜನರು ಸಾವಿಗೀಡಾಗಿದ್ದಾರೆ, ಹಲವಾರು ಪ್ರದೇಶಗಳಲ್ಲಿ ಪ್ರವಾಹ ಬಂದಿದ್ದು, ಜಲಾವೃತವಾಗಿದೆ. ಮಳೆ ರಸ್ತೆ ಮತ್ತು ರೈಲು ಸಂಚಾರವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯಿಂದ ತೆಲಂಗಾಣದಲ್ಲಿ ಕನಿಷ್ಠ 15 ಜನರು ಮತ್ತು ಆಂಧ್ರಪ್ರದೇಶದಲ್ಲಿ 12 ಜನರು ಸಾವಿಗೀಡಾಗಿದ್ದಾರೆ, ಎರಡೂ ರಾಜ್ಯಗಳಲ್ಲಿ ನದಿಗಳು ಉಕ್ಕಿ … Continued

ಐಪಿಎಸ್ ಅಧಿಕಾರಿಯ ಮಗಳು ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಡಾ.ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ (ಸೆಪ್ಟೆಂಬರ್ 1) 19 ವರ್ಷದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ. ಅನಿಕಾ ರಸ್ತೋಗಿ ಎಂಬ ವಿದ್ಯಾರ್ಥಿನಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ವರದಿಗಳ ಪ್ರಕಾರ, ವಿದ್ಯಾರ್ಥಿನಿಯು ಹಾಸ್ಟೆಲ್‌ನ ತನ್ನ ಕೊಠಡಿಯ ಬಾಗಿಲು ತೆರೆಯದ ಕಾರಣ … Continued

ವೀಡಿಯೊ..| ದೇಶದ ಮೊದಲ ವಂದೇ ಭಾರತ ಸ್ಲೀಪರ್ ಕೋಚ್ ಹೇಗಿದೆ ನೋಡಿ…!

ಬೆಂಗಳೂರು : ಕೇಂದ್ರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಘಟಕದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ತಯಾರಿಸುವುದನ್ನು ಪರಿಶೀಲಿಸಿದರು. ಮುಂಬರುವ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಹೆಚ್ಚಿನ ಪರೀಕ್ಷೆಗಾಗಿ ರೈಲು ಹಳಿಗಳ … Continued

ಸೆಪ್ಟೆಂಬರ್‌ ತಿಂಗಳಲ್ಲೂ ‘ವಾಡಿಕೆಗಿಂತ ಹೆಚ್ಚು ಮಳೆ’ ; ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಆಗಸ್ಟ್‌ನಲ್ಲಿ ಭಾರೀ ಮಳೆಯ ನಂತರ ಸೆಪ್ಟೆಂಬರ್‌ನಲ್ಲಿ ಸಹ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು , ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮುನ್ಸೂಚನೆಯ ಪ್ರಕಾರ, ಒಟ್ಟು ಮಳೆಯು ತಿಂಗಳ ದೀರ್ಘಾವಧಿಯ ಸರಾಸರಿ (LPA) ಯ 109% ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ. ಸೆಪ್ಟೆಂಬರ್‌ ತಿಂಗಳ ವಾಡಿಕೆ ಮಳೆ 168 ಮಿಮೀ … Continued

ವೀಡಿಯೊ..| ಕುಸಿದುಬಿದ್ದ ಐತಿಹಾಸಿಕ ರಾಷ್ಟ್ರಕೂಟರ ಮಳಖೇಡ ಕೋಟೆ ಗೋಡೆ

ಕಲಬುರಗಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಕರ್ನಾಟಕದ ಐತಿಹಾಸಿಕ ಸ್ಮಾರಕವಾದ ಕಲಬುರಗಿ ಜಿಲ್ಲೆಯ ಮಳಖೇಡದ ರಾಷ್ಟ್ರಕೂಟರ ಕೋಟೆ ಗೋಡೆ ಕುಸಿದು ಬಿದ್ದಿದೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳಖೇಡ ರಾಷ್ಟ್ರಕೂಟರ ಕೋಟೆ ಗೋಡೆ ಕುಸಿದುಬಿದ್ದಿದೆ. ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು ನಿಂತಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಮಳೆಗೆ ಕೋಟೆ ಗೋಡೆಗಳು ತೇವಗೊಂಡಿದ್ದು, ಮಣ್ಣು … Continued

ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕದಲ್ಲಿ ಬದಲಾವಣೆ

ನವದೆಹಲಿ: ಭಾರತದ ಚುನಾವಣಾ ಆಯೋಗವು (ECI) ಹರಿಯಾಣ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ಚುನಾವಣೆಯನ್ನುಅಕ್ಟೋಬರ್ 1ರ ಬದಲಾಗಿ ಅಕ್ಟೋಬರ್ 5ರಂದು ನಡೆಸಲು ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ದಿನವನ್ನೂ ಅಕ್ಟೋಬರ್ 4ರ ಬದಲಾಗಿ ಅಕ್ಟೋಬರ್ 8 ಕ್ಕೆ ನಿಗದಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ. … Continued

ವೀಡಿಯೊ..| ಚಿರತೆಯನ್ನೇ ಬೇಟೆಯಾಡಿದ ನಾಯಿಗಳು…!

ಚಿರತೆ ನಾಯಿಯನ್ನು ಬೇಟೆ ಮಾಡುವುದನ್ನು ನೋಡಿರಬೇಕು. ಆದರೆ ನಾಯಿಗಳು ಚಿರತೆಯನ್ನು ಬೇಟೆಯಾಡುವುದನ್ನು ನೋಡುವುದು ಬಹಳ ಅಪರೂಪ. ಇದನ್ನು ನೋಡಿಲ್ಲದಿದ್ದರೆ ನಾಯಿಗಳ ಗುಂಪು ಚಿರತೆಯೊಂದನ್ನು ಬೇಟೆಯಾಡಿದ ವೀಡಿಯೊವೊಂದು ವೈರಲ್‌ ಆಗಿದೆ. ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ನಾಯಿಗಳ ಗುಂಪು ಚಿರತೆ ಮೇಲೆ ಎರಗಿ ಕಚ್ಚಿ ಎಳೆಯುತ್ತಿರುದನ್ನು ತೋರಿಸುತ್ತದೆ. ಚಿರತೆ ತನ್ನನ್ನು ತಾನು ಉಳಿಸಿಕೊಳ್ಳಲು ತನ್ನ ಶಕ್ತಿಮೀರಿ ಪ್ರಯತ್ನಿಸುತ್ತದೆ … Continued

ವೀಡಿಯೊ..| ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಏರ್‌ ಲಿಫ್ಟ್‌ ಮಾಡುತ್ತಿದ್ದಾಗ ನದಿಗೆ ಬಿದ್ದ ಹೆಲಿಕಾಪ್ಟರ್‌

ಈ ಹಿಂದೆ ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಲ್ಯಾಂಡಿಂಗ್ ವೇಳೆ ಹಾನಿಗೊಳಗಾಗಿದ್ದ ಹೆಲಿಕಾಪ್ಟರ್ ಶನಿವಾರ ಮಂದಾಕಿನಿ ನದಿಯ ಬಳಿ ಪತನಗೊಂಡಿತ್ತು. ರಿಪೇರಿಗಾಗಿ ಮತ್ತೊಂದು ಹೆಲಿಕಾಪ್ಟರ್ ಮೂಲಕ ಗೌಚಾರ್ ಏರ್‌ಸ್ಟ್ರಿಪ್‌ಗೆ ಏರ್‌ ಲಿಫ್ಟ್‌ ಮಾಡುವಾಗ ಹೆಲಿಕಾಪ್ಟರ್ ಥಾರು ಕ್ಯಾಂಪ್ ಬಳಿ ಬಿದ್ದಿದೆ. ಯಾರಿಗೂ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೇದಾರನಾಥ … Continued

ಪೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ಜೈಲಿಗೆ ಹೇಳಿಕೆ: ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ನಾಗೇಶ ಆಕ್ಷೇಪ

ಬೆಂಗಳೂರು : “ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ ಎಂದು ಆಡಳಿತಾರೂಢ ಕಾಂಗ್ರೆಸ್‌ನ ಸಚಿವರು, ಶಾಸಕರು ದಿನ ಬೆಳಗಾದರೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಅವರೇ ಬಂದು ವಾದಿಸಲಿ” ಎಂದು ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ನಲ್ಲಿ ಶುಕ್ರವಾರ ಮೌಖಿಕವಾಗಿ ಹೇಳಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ಜಾಮೀನು ಕೋರಿ ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ … Continued

ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್‌.ಡಿ.ರೇವಣ್ಣ ವಿರುದ್ಧ ಪ್ರಕ್ರಿಯೆ ದಾಖಲಿಸದಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು : ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಅವರು ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಂದಿನ ವಿಚಾರಣೆ ವರೆಗೆ ವಿಚಾರಣಾಧೀನ ನ್ಯಾಯಾಲಯವು ಯಾವುದೇ ವಿಚಾರಣಾ ಪ್ರಕ್ರಿಯೆ ದಾಖಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಎಚ್‌.ಡಿ. ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. … Continued