ವೀಡಿಯೊ : 7 ದರೋಡೆಕೋರರ ಗನ್‌ ಶಾಟ್‌ ಎದುರಿಸಿ ₹ 4 ಕೋಟಿ ಚಿನ್ನಾಭರಣ ದರೋಡೆ ವಿಫಲಗೊಳಿಸಿದ ಏಕೈಕ ಪೊಲೀಸ್‌ ಅಧಿಕಾರಿ-ವೀಕ್ಷಿಸಿ

ಕೋಲ್ಕತ್ತಾ : ಕಳೆದ ವಾರ ಪಶ್ಚಿಮ ಬಂಗಾಳದ ರಾಣಿಗಂಜ್‌ನ ಆಭರಣ ಮಳಿಗೆಯೊಂದರಲ್ಲಿ ಏಳು ಸದಸ್ಯರ ದರೋಡೆ ಗ್ಯಾಂಗ್ ನಡೆಸಿದ ₹ 4 ಕೋಟಿ ದರೋಡೆ ಯತ್ನವನ್ನು ಪೊಲೀಸ್ ಅಧಿಕಾರಿಯ ಧೈರ್ಯವು ವಿಫಲಗೊಳಿಸಿದೆ. ಅಂಗಡಿಯ ಹೊರಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳು ಸಬ್-ಇನ್ಸ್‌ಪೆಕ್ಟರ್ ಮೇಘನಾದ ಮೊಂಡಲ್ ಅವರು ಆಭರಣ ಅಂಗಡಿ ಸಮೀಪದ ವಿದ್ಯುತ್ ಕಂಬದ ಮರೆಯಲ್ಲಿ ನಿಂತು … Continued

ಮೋದಿ ಪ್ರಮಾಣ ವಚನ ಸಮಾರಂಭದ ವೇಳೆ ಕ್ಯಾಮರಾದಲ್ಲಿ ಸೆರೆಯಾದ “ನಿಗೂಢ ಪ್ರಾಣಿ”ಯ ಊಹಾಪೋಹಕ್ಕೆ ತೆರೆ ಎಳೆದ ದೆಹಲಿ ಪೊಲೀಸರು

ನವದೆಹಲಿ: ಭಾನುವಾರ ನಡೆದ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿಯೊಂದು ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ಪ್ರಾಣಿ ಬಗ್ಗೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ಸಂಸದ ದುರ್ಗಾ ದಾಸ ಉಯಿಕೆ ನಂತರದ ಸಂಪ್ರದಾಯ … Continued

ಮೋದಿ 3.0 ಸರ್ಕಾರ : ಹಲವು ಸಚಿವರ ಖಾತೆ ಬದಲು | ಬದಲಾಗಿದ್ದು ಯಾರ್ಯಾರ ಖಾತೆಗಳು? ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ 3.0 ಸರ್ಕಾರ ಕಾರ್ಯಾರಂಭ ಮಾಡಿದ್ದು, ಸೋಮವಾರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 71 ಸಚಿವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹೊಸ ಸಚಿವ ಸಂಪುಟವು ವಿವಿಧ ಹೊಸ ಮುಖಗಳನ್ನು ಒಳಗೊಂಡಿದ್ದು, ಅವರಿಗೆ ಖಾತೆಗಳನ್ನು … Continued

ಮೋದಿ ಸರ್ಕಾರ 3.0 : ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ -ಸಂಪೂರ್ಣ ಪಟ್ಟಿ ಇಲ್ಲಿದೆ..

ನವದೆಹಲಿ: ನವದೆಹಲಿ: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಆರಂಭಿಸಿದ ಬೆನ್ನಲ್ಲೇ ನೂತನ ಸಂಪುಟ ಸಹೋದ್ಯೋಗಿಗಳಿಗೆ ಇಂದು (ಸೋಮವಾರ) ಖಾತೆ ಹಂಚಿಕೆ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಸಚಿವರ ತಂಡದಲ್ಲಿ 30 ಕ್ಯಾಬಿನೆಟ್ ಸಚಿವರು, ಐದು ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರಿದ್ದಾರೆ. ಯಾರಿಗೆ ಯಾವ … Continued

ವೀಡಿಯೊ..| ‘ಚಿರತೆಯೋ ಅಥವಾ ಬೆಕ್ಕೋ ?’: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿಗೂಢ ಪ್ರಾಣಿಯನ್ನು ತೋರಿಸಿದ ವೀಡಿಯೊ ವೈರಲ್‌

ನವದೆಹಲಿ: ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರ ಗಣ್ಯರು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಗಣ್ಯರು ಸೇರಿದಂತೆ 8,000 ಅತಿಥಿಗಳು ಭಾಗವಹಿಸಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಹ್ವಾನಿತ ಅತಿಥಿಯೊಬ್ಬರು ಕ್ಯಾಮೆರಾದಲ್ಲಿ ಅಸಾಮಾನ್ಯ ವಿದ್ಯಮಾನವೊಂದು ಸೆರೆಯಾಗಿದೆ. ರಾಷ್ಟ್ರಪತಿಗಳಿಂದ … Continued

ಪ್ರಧಾನಿ ಮೋದಿ ಸಂಪುಟಕ್ಕೆ ಸುರೇಶ ಗೋಪಿ ರಾಜೀನಾಮೆ? ಕೇರಳ ಸಂಸದ ಹೇಳಿದ್ದೇನು..?

ನವದೆಹಲಿ: ಕೇಂದ್ರ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ ಗೋಪಿ ಅವರು ತಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಧ್ಯಮ ವರದಿಯಾಗಿದ್ದನ್ನು ತಳ್ಳಿಹಾಕಿದ್ದಾರೆ ಹಾಗೂ ಅದು ತಪ್ಪು ಸುದ್ದಿ ಎಂದು ಹೇಳಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ತಳ್ಳಿಹಾಕಿರುವ ಸುರೇಶ ಗೋಪಿ, ಸೋಮವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, … Continued

ಬಿಜೆಪಿಯ ಅಚ್ಚರಿಯ ಆಯ್ಕೆ ; ಮೋದಿ 3.0 ಸರ್ಕಾರದಲ್ಲಿ ಮಂತ್ರಿಯಾದ ಬಿಜೆಪಿಯ ಅಲ್ಪಸಂಖ್ಯಾತ ಮುಖ ಈ ಜಾರ್ಜ್ ಕುರಿಯನ್ ಯಾರು..?

ವಕೀಲ ಮತ್ತು ಕೇರಳ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಧಾನ ಕಾರ್ಯದರ್ಶಿಯಾಗಿರುವ ಜಾರ್ಜ್ ಕುರಿಯನ್ ಅವರು, ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ತ್ರಿಶೂರ್ ಸಂಸದ ಸುರೇಶ ಗೋಪಿ ಅವರನ್ನು ಹೊರತುಪಡಿಸಿ ಕೇರಳದಿಂದ ಎರಡನೇ ಸಚಿವರಾಗಿ ಸಚಿವ ಸಂಪುಟ ಸೇರಿದ್ದಾರೆ. ಸಮಾಜವಾದಿಗಳ ಒಂದು ಬಣವು 1980 … Continued

T20 ವಿಶ್ವಕಪ್ 2024 : ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಭಾರತದ ಸಹಾಯ ಬೇಕೇ ಬೇಕು…ಅದು ಹೇಗೆ..?

2024 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮುಂದಿನ ದಾರಿ ದುರ್ಗಮವಾಗಿ ಕಾಣುತ್ತಿದೆ. ಕಾರನ ಬಾಬರ್ ಅಜಮ್ ನೇತೃತ್ವದ ಪಅಕಿಸ್ತಾನದ ತಂಡವು ತಮ್ಮ ಗ್ರೂಪ್ ಎ ಅಭಿಯಾನದಲ್ಲಿ ಸತತ ಎರಡು ಪಂದ್ಯಗಳನ್ನು ಸೋತ ನಂತರ ಮುಂದಿನ ಹಂತಕ್ಕೆ ಹೋಗುವುದು ಕಷ್ಟಸಾಧ್ಯವಾಗಿ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ಸಹ-ಆತಿಥೇಯ ತಂಡವಾದ ಅಮೆರಿಕದ ವಿರುದ್ಧ ಆಘಾತಕಾರಿ ಸೋಲಿನ ನಂತರ, ನ್ಯೂಯಾರ್ಕ್‌ನಲ್ಲಿ … Continued

ಮೋದಿ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ನಡ್ಡಾ ಪ್ರಮಾಣವಚನ ; ಮುಂದಿನ ಬಿಜೆಪಿ ಅಧ್ಯಕ್ಷ ಯಾರು? ಚರ್ಚೆಗೆ ಬಂದ 6 ಸಂಭವನೀಯ ಹೆಸರುಗಳು

ನವದೆಹಲಿ : ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನರೇಂದ್ರ ಮೋದಿ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಡ್ಡಾ ಅವರು ಜೂನ್ ಮುಕ್ತಾಯದ ವರೆಗೆ ಪಕ್ಷದ ಮುಖ್ಯಸ್ಥರಾಗಿರುತ್ತಾರೆ ಎಂಬ ತನ್ನ ಹಿಂದಿನ ಘೋಷಣೆಗೆ ಬಿಜೆಪಿ ಅಂಟಿಕೊಂಡಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಅವರ ಅಧಿಕಾರಾವಧಿಯು 2023 ರ ಜನವರಿಯಲ್ಲಿ ಕೊನೆಗೊಂಡಿತು ಆದರೆ ಲೋಕಸಭೆ ಚುನಾವಣೆಯ … Continued

ಅತ್ಯಂತ ಕಿರಿಯ ವಯಸ್ಸಿಗೆ ಕೇಂದ್ರ ಸಚಿವ : ದಾಖಲೆ ಬರೆದ ಟಿಡಿಪಿಯ ರಾಮಮೋಹನ ನಾಯ್ಡು…!

ಅಮರಾವತಿ : ನರೇಂದ್ರ ಮೋದಿ ನೇತೃತ್ವದ ಸಂಪುಟದ ಸದಸ್ಯರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ತೆಲುಗು ದೇಶಂ ಪಕ್ಷದ ಸಂಸದ ಕಿಂಜರಾಪು ರಾಮಮೋಹನ ನಾಯ್ಡು ಅವರು ಅತ್ಯಂತ ಕಿರಿಯ ವಯಸ್ಸಿನ ಕೇಂದ್ರದ ಕ್ಯಾಬಿನೆಟ್‌ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 36 ವರ್ಷದ ರಾಮಮೋಹನ ನಾಯ್ಡು ಅವರು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ … Continued