ವೀಡಿಯೊ…| ಕನ್ಯಾಕುಮಾರಿಯ ವಿವೇಕಾನಂದ ಬಂಡೆ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿರುವ ಪ್ರಧಾನಿ ಮೋದಿ-ವೀಕ್ಷಿಸಿ

ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ(Prime Minister Narendra Modi)ಯವರು ಕನ್ಯಾಕುಮಾರಿಯಲ್ಲಿ ದಾರ್ಶನಿಕ-ಸಂತ ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂದೆ ಧ್ಯಾನ ಮಾಡುತ್ತಿರುವ ಮೊದಲ ದೃಶ್ಯಾವಳಿಗಳು ಹೊರಹೊಮ್ಮಿವೆ. ಪ್ರಧಾನಿ ಮೋದಿ ಶನಿವಾರ (ಜೂನ್ 1) ಸಂಜೆಯವರೆಗೆ ವಿವೇಕಾನಂದ ಬಂಡೆ ಸ್ಮಾರಕ(Vivekananda Rock memorial)ದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ. ಇದು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ … Continued

ಹಿಂದೂ- ಮುಸ್ಲಿಂ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಮಾನ್ಯವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಭೋಪಾಲ್‌ : ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ನಡುವೆ ಮತಾಂತರವಾಗದೆ ವಿವಾಹವಾಗುವುದು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನುಬಾಹಿರ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ವಿಶೇಷ ವಿವಾಹ ಕಾಯಿದೆ- 1954ರ ಅಡಿ ಮದುವೆಯಾಗಲು ಮತ್ತು ವಿವಾಹ ನೋಂದಣಿ ಮಾಡಿಕೊಳ್ಳಲು ಪೊಲೀಸ್‌ ರಕ್ಷಣೆ ಬೇಕು ಎಂದು ಕೋರಿ ಅಂತರ್ಧರ್ಮೀಯ ಜೋಡಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಮಧ್ಯಪ್ರದೇಶ … Continued

ವೀಡಿಯೊಗಳು..| ಲೋಕಸಭಾ ಚುನಾವಣಾ ಪ್ರಚಾರ ಅಂತ್ಯ : ಕನ್ಯಾಕುಮಾರಿಯ ವಿವೇಕಾನಂದ ಬಂಡೆ ಸ್ಮಾರಕದಲ್ಲಿ 2 ದಿನಗಳ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆ ಸ್ಮಾರಕ ( Vivekananda Rock Memorial)ದಲ್ಲಿ ತಮ್ಮ ಎರಡು ದಿನಗಳ ಧ್ಯಾನವನ್ನು ಆರಂಭಿಸಿದರು. ಪ್ರಧಾನಿ ಮೋದಿಯವರು ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆ ವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ … Continued

ಬಿಸಿಗಾಳಿಗೆ ಬಿಹಾರ ತತ್ತರ..: 24 ತಾಸಿನಲ್ಲಿ 19 ಮಂದಿ ಸಾವು

ಪಾಟ್ನಾ : ಕಳೆದ 24 ಗಂಟೆಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಬಿಸಿಗಾಳಿಗೆ ಕನಿಷ್ಠ 19 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಕ್ಸಾರ್‌ನಲ್ಲಿ ಸಿಕ್ರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾದ ಯುವಕ ಸೇರಿದಂತೆ ಮೂವರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಳಂದಾದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಓರ್ವ ಶಿಕ್ಷಕ, ಓರ್ವ … Continued

ವೀಡಿಯೊ..| ವೇದಿಕೆ ಮೇಲೆಯೇ ಮಂಡಿಯೂರಿ ಮಹಿಳೆ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ ; ಈ ಮಹಿಳೆ ಯಾರು..?

ಪ್ರಧಾನಿ ನರೇಂದ್ರ ಮೋದಿ (Narendra Modi) ಒಡಿಶಾದಲ್ಲಿ ಲೋಕಸಭಾ ಚುನಾವಣಾ(Lok Sabha Election) ಪ್ರಚಾರದ ಸಂದರ್ಭದಲ್ಲಿ ವೇದಿಕೆ ಮೇಲೆ ಮಹಿಳೆಯೊಬ್ಬರಿಗೆ ಮಂಡಿಯೂರಿ ನಮಸ್ಕರಿಸಿದ ವೀಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ. ಒಡಿಶಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ 66 ವರ್ಷದ ಮಹಿಳಾ ಕುಶಲಕರ್ಮಿ ಕಮಲಾ ಮೊಹರಾನಾ ಅವರ ಪಾದಗಳನ್ನು ಮುಟ್ಟಿ ಮೋದಿ ನಮಸ್ಕರಿಸಿದ್ದಾರೆ. ಮೋದಿ ಮಂಡಿಯೂರಿ ನಮಸ್ಕರಿಸಿದ … Continued

ಲೋಕಸಭೆ ಚುನಾವಣೆ 2024 : ಸಟ್ಟಾ ಬಜಾರ್ ಬೆಟ್ಟಿಂಗ್‌ ಭವಿಷ್ಯ ; ಸೀಟು ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ಮುಂದೆ ; ಆದರೆ….

ನವದೆಹಲಿ : ದೇಶದ ಏಳನೇ ಹಂತದ ಲೋಕಸಭಾ ಚುನಾವಣೆಗಿಂತ ಮೊದಲು ದೇಶದ ಅನಧಿಕೃತ ಎಕ್ಸಿಟ್‌ ಪೋಲ್‌ ಎನಿಸಿಕೊಂಡಿರುವ ಸಟ್ಟಾ ಬಜಾರದಲ್ಲಿ ಹೊಸ ಲೆಕ್ಕಾಚಾರಗಳು ಹೊರಬಿದ್ದಿದೆ. ದೇಶದಲ್ಲಿ 6 ಹಂತದ ಮತದಾನ ಮುಕ್ತಾಯವಾಗಿದ್ದು, ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. 6ನೇ ಹಂತದ ಚುನಾವಣೆ ಮುಗಿದ ಬಳಿಕ ಸಟ್ಟಾ ಬಜಾರ್‌ ಬಿಜೆಪಿ 290 ಸೀಟ್‌ ಗೆಲ್ಲಬಹುದು … Continued

ವೀಡಿಯೊಗಳು…| ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ ನಲ್ಲಿ `ಟ್ರಾಫಿಕ್ ಜಾಮ್’…!

ವಿಶ್ವದ ಅತಿ ಎತ್ತರದ ಪರ್ವತವಾದವ ‘ಮೌಂಟ್ ಎವರೆಸ್ಟ್’ (Mount Everest). ಇದು ಸಮುದ್ರ ಮಟ್ಟದಿಂದ ಸುಮಾರು ಸುಮಾರು 29,000 ಅಡಿ ಎತ್ತರವಿದೆ. ಈ ಪರ್ವತವು ಇದೀಗ ಪರ್ವತಾರೋಹಿಗಳ ದಟ್ಟಣೆಯಿಂದ ಸುದ್ದಿಯಲ್ಲಿದೆ. ಮೌಂಟ್‌ ಎವರೆಸ್ಟ್‌ ಪರ್ವತ ಪ್ರದೇಶದ ಅತ್ಯಂತ ಕಡಿದಾದದ ಜಾಗದಲ್ಲಿಯೂ ಕಾಲಿಡಲು ಆಗದಷ್ಟು ‘ಟ್ರಾಫಿಕ್ ಜಾಮ್’ ಆಗಿದೆ. ಈ ಕುರಿತು ವೀಡಿಯೊ ಭಾರೀ ವೈರಲ್ ಆಗಿದ್ದು, … Continued

ಮದುವೆಯಾದ ಎರಡೇ ದಿನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ…! ಇದರ ಹಿಂದಿತ್ತು ನೋವಿನ ಕಹಾನಿ..

ಗುಜರಿ (ಧಾರ್) : ಆಘಾತ ಹಾಗೂ ವಿಸ್ಮಯಕಾರಿ ಸಂಗತಿಯೊಂದರಲ್ಲಿ, ಮಧ್ಯಪ್ರದೇಶದ ಧಮ್ನೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣ ಹಳ್ಳಿಯೊಂದರ ನವವಿವಾಹಿತ ಯುವತಿಯೊಬ್ಬರು ಮದುವೆಯಾದ ಎರಡು ದಿನಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಬಗ್ಗೆ ಅತ್ತೆಯಂದಿರು ಪ್ರಶ್ನಿಸಿದಾಗ, ಮದುವೆಯ ನೆಪದಲ್ಲಿ ಒಬ್ಬ ಆರೋಪಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. … Continued

ವೀಡಿಯೊ..| ಜನವಸತಿ ಪ್ರದೇಶಕ್ಕೆ ಬಂದು ಕಬ್ಬಿಣದ ರೇಲಿಂಗ್‌ ಏರಲು ಯತ್ನಿಸಿದ 10 ಅಡಿ ಉದ್ದದ ಬೃಹತ್‌ ಮೊಸಳೆ : ಅದರ ಸಾಹಸಕ್ಕೆ ಜನರು ದಿಗ್ಭ್ರಾಂತ…!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಮನೆಯ ಮುಂದಿನ ಕಬ್ಬಿಣದ ಸರಳುಗಳಿಂದ ಕೂಡಿದ ಗೇಟ್‌ ಅನ್ನು ಏರಲು ಪ್ರಯತ್ನಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದು ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ವರದಿಗಳ ಪ್ರಕಾರ, ಮೊಸಳೆಯು ಕಾಲುವೆಯಿಂದ ತೆವಳುತ್ತಾ ಹತ್ತಿರದ ಜನ ವಸತಿ ಪ್ರದೇಶಕ್ಕೆ ಪ್ರವೇಶಿಸಿದೆ. ಕಾಲುವೆಯ ಪಾದಚಾರಿ ಮಾರ್ಗದಲ್ಲಿ ಹತ್ತು ಅಡಿ ಎತ್ತರದ ಮೊಸಳೆ … Continued

ಟಿ20 ವಿಶ್ವಕಪ್ 2024 : ಭಾರತ -ಪಾಕಿಸ್ತಾನ ಪಂದ್ಯದ ವೇಳೆ ‘ಒಂಟಿ ತೋಳ’ ದಾಳಿಯ ಬೆದರಿಕೆ ಹಾಕಿದ ಐಸಿಸ್‌-ಕೆ ಭಯೋತ್ಪಾದಕ ಸಂಘಟನೆ…!

ನ್ಯೂಯಾರ್ಕ್: ಮುಂದಿನ ತಿಂಗಳು ಅಮೆರಿಕದಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಐಸಿಸ್-ಕೆ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿಗೆ ಕರೆ ನೀಡಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ಎಚ್ಚರಿಕೆ ನೀಡಿದ್ದಾರೆ. ನಸ್ಸೌ ಕೌಂಟಿಯ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್‌ಮ್ಯಾನ್ ಮತ್ತು ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಅವರು, ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ … Continued