ಮೊಹಮ್ಮದ್ ಡೀಫ್ : ಹಲವು ಬಾರಿ ಇಸ್ರೇಲ್‌ ದಾಳಿಯಿಂದ ತಪ್ಪಿಸಿಕೊಂಡ ಹಮಾಸ್‌ನ ಈ ಹೊಸ ‘ಒಸಾಮಾ ಬಿನ್ ಲಾಡೆನ್’ ಯಾರು..?

ಉಗ್ರಗಾಮಿ ಗುಂಪು ಹಮಾಸ್ ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡ ಅಭೂತಪೂರ್ವ ದಾಳಿ ನಡೆಸಿ ನೂರಾರು ಇಸ್ರೇಲಿ ನಾಗರಿಕರನ್ನು ಕೊಂದ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಿಂಸಾಚಾರವು ಉಲ್ಬಣಗೊಂಡಿದೆ. ಹಮಾಸ್‌ನ ಮಿಲಿಟರಿ ವಿಭಾಗದ ನಾಯಕ ಮೊಹಮ್ಮದ್ ಡೀಫ್ ಇಸ್ರೇಲ್ ವಿರುದ್ಧ ‘ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್’ ಎಂದು ಕರೆದ ಹಮಾಸ್‌ ದಾಳಿಯು ಶನಿವಾರ ಪ್ರಾರಂಭವಾಯಿತು. ಈವರೆಗೆ … Continued

ಕಾರಿನಲ್ಲಿದ್ದ ಹಮಾಸ್ ಕಾರ್ಯಕರ್ತರ ಜೊತೆ ಶೂಟೌಟ್‌ನಲ್ಲಿ ಚಲಿಸುವ ಬೈಕ್‌ನಿಂದ ಗುಂಡು ಹಾರಿಸುತ್ತ ಇಬ್ಬರನ್ನು ಹೊಡೆದುರುಳಿಸಿದ ಇಸ್ರೇಲಿ ಪೋಲೀಸ್ : ದೃಶ್ಯ ವೀಡಿಯೊದಲ್ಲಿ ಸೆರೆ

ಗನ್‌ ಹಿಡಿದ ಇಬ್ಬರು ಹಮಾಸ್‌ ಉಗ್ರರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ತನ್ನ ಬೈಕಿನಲ್ಲಿ ಹಿಂಬಾಲಿಸಿದ ಇಸ್ರೇಲಿ ಪೋಲೀಸ್ ತನ್ನ ಬಂದೂಕಿನಿಂದ ಅವರತ್ತ ಗುಂಡು ಹಾರಿಸುತ್ತಿರುವ ವೀಡಿಯೊವೊಂದು ಹೊರಹೊಮ್ಮಿದೆ. ಇಸ್ರೇಲಿ ಪೊಲೀಸರು ಹಂಚಿಕೊಂಡಿರುವ ವೀಡಿಯೊದಲ್ಲಿ ಪೊಲೀಸ್‌ ತನ್ನ ಬೈಕಿನಿಂದ ಕಾರಿನತ್ತ ಗುಂಡುಹಾರಿಸುತ್ತ ಬೈಕ್‌ ಓಡಿಸುವುದು ಕಂಡುಬರುತ್ತದೆ. ಆತನ ಸಹೋದ್ಯೋಗಿಗಳು ಆ ಕಾರನ್ನು ಹಿಂದಿಕ್ಕುತ್ತಿದ್ದಂತೆ ಆತ ಗುಂಡು ಹಾರುವುದನ್ನು ಹೆಚ್ಚಿಸುತ್ತಾನೆ. … Continued

ಗಾಜಾ ಪಟ್ಟಿಯ ಸುತ್ತಲೂ 1500 ಹಮಾಸ್ ಉಗ್ರರ ಶವಗಳು ಪತ್ತೆ: ಇಸ್ರೇಲ್ ಸೇನೆ ಹೇಳಿಕೆ

ಇಸ್ರೇಲ್‌ನಲ್ಲಿ ಗಾಜಾ ಪಟ್ಟಿಯ ಸುತ್ತಮುತ್ತ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ ಎಂದು ಇಸ್ರೇಲಿ ಸೇನೆ ಮಂಗಳವಾರ ತಿಳಿಸಿದೆ. ಹಾಗೂ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ವೈಮಾನಿಕ ದಾಳಿಯೊಂದಿಗೆ ಹೊಡೆದುರುಳಿಸಲಾಗಿದೆ ಎಂದು ಹೇಳಿದೆ. “ಗಾಜಾ ಪಟ್ಟಿಯ ಸುತ್ತ ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ” ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ … Continued

ನಾವು ಯುದ್ಧ ಆರಂಭಿಸಿಲ್ಲ ಆದರೆ…’: ಹಮಾಸ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಖಡಕ್‌ ಎಚ್ಚರಿಕೆ

ಜೆರುಸಲೇಮ್ : ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ತಮ್ಮ ದೇಶವು “ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಅದನ್ನು ಮುಗಿಸುತ್ತದೆ” ಎಂದು ಹೇಳಿದ್ದಾರೆ. “ನಮಗೆ ಈ ಯುದ್ಧ ಬೇಕಾಗಿಲ್ಲ. ಆದರೆ ಯುದ್ಧದ ಅನಿವಾರ್ಯತೆಯನ್ನು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು. ಇಸ್ರೇಲ್ … Continued

ಕ್ಲಾಡಿಯಾ ಗೋಲ್ಡಿನ್ ಗೆ 2023ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಪ್ರಮುಖ ಕಾರ್ಮಿಕ ಅರ್ಥಶಾಸ್ತ್ರಜ್ಞರಾದ ಪ್ರೊಫೆಸರ್ ಕ್ಲೌಡಿಯಾ ಗೋಲ್ಡಿನ್ ಅವರಿಗೆ 2023 ರ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಘೋಷಿಸಿತು. ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಷ್ ಬಹುಮಾನವನ್ನು ಹೊಂದಿದೆ. “ಮಹಿಳಾ ಕಾರ್ಮಿಕ ಮಾರುಕಟ್ಟೆಯ ಫಲಿತಾಂಶಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ” ಅವರಿಗೆ ಬಹುಮಾನವನ್ನು ನೀಡಲಾಗಿದೆ. 1946 ರಲ್ಲಿ ನ್ಯೂಯಾರ್ಕ್‌ನಲ್ಲಿ ಜನಿಸಿದ ಕ್ಲೌಡಿಯಾ ಗೋಲ್ಡಿನ್, ಗೋಲ್ಡಿನ್ … Continued

ಇಸ್ರೇಲ್‌-ಹಮಾಸ್‌ ಸಂಘರ್ಷ ಉಲ್ಬಣ: 1000ಕ್ಕೂ ಹೆಚ್ಚು ಜನರು ಸಾವು; ಗಾಜಾ ತೊರೆಯಿರಿ ಎಂದು ಪ್ಯಾಲೆಸ್ತೀನಿಗಳಿಗೆ ಇಸ್ರೇಲ್‌ ಸೂಚನೆ

ಇಸ್ರೇಲ್ ಮೇಲೆ ಉಗ್ರರು ಹಠಾತ್ ದಾಳಿ ನಡೆಸಿದ 24 ಗಂಟೆಗಳ ನಂತರ ಇಸ್ರೇಲ್ ಮಿಲಿಟರಿ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವಿನ ರಕ್ತಸಿಕ್ತ ಗುಂಡಿನ ಚಕಮಕಿ ದಕ್ಷಿಣ ಇಸ್ರೇಲ್‌ನ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಉತ್ತರ ಇಸ್ರೇಲ್ ಮೇಲೆ ಲೆಬನಾನ್‌ನಿಂದ ಮಾರ್ಟರ್ ಶೆಲ್ ದಾಳಿ ನಡೆಸಲಾಯಿತು. ಲೆಬನಾನಿನ ಇಸ್ಲಾಮಿಸ್ಟ್ ಗುಂಪು ಹೆಜ್ಬೊಲ್ಲಾಹ್ ಭಾನುವಾರ ಇಸ್ರೇಲಿ ಪೋಸ್ಟ್‌ಗಳನ್ನು … Continued

ವೀಡಿಯೊ….: ಕಾಡೆಮ್ಮೆ Vs ಸಿಂಹಗಳ ಭೀಕರ ಕಾಳಗದಲ್ಲಿ ಗೆದ್ದವರು ಯಾರು | ವೀಕ್ಷಿಸಿ

ಕಾಡೆಮ್ಮೆಯೊಂದು ತನ್ನ ಮೇಲೆ ದಾಳಿ ಮಾಡಿದ ಎರಡು ಸಿಂಹಗಳ ಜೊತೆ ಹೋರಾಡುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕಾಡೆಮ್ಮೆ ತನ್ನ ಮುಖ ಹಾಗೂ ಕಾಲನ್ನು ಬಲವಾಗಿ ಹಿಡಿದುಕೊಂಡು ಅದನ್ನು ಕೆಳಕ್ಕೆ ಕಡಹಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಬರುತ್ತದೆ. ಆದರೆ ಕಾಡೆಮ್ಮೆಯೂ ಸಿಂಹಗಳನ್ನು ಹೊಡೆದು ಹೊಡೆದುರುಳಿಸಲು ಯತ್ನಿಸುತ್ತಿರುವುದು ಕಂಡುಬರುತ್ತದೆ. ನೈಸರ್ಗಿಕ ಆವಾಸಸ್ಥಾನದಲ್ಲಿ ಅಭಯಾರಣ್ಯದಲ್ಲಿ ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಈ … Continued

ವೀಡಿಯೊಗಳು… | ತನ್ನ ಮೇಲೆ ಭಯಾನಕ ರಾಕೆಟ್‌ ದಾಳಿ ನಡೆಸಿದ ಹಮಾಸ್ ಮೇಲೆ ಪ್ರತಿದಾಳಿ ನಡೆಸಿದ ವೀಡಿಯೊಗಳನ್ನು ಹಂಚಿಕೊಂಡ ಇಸ್ರೇಲ್

ನಿನ್ನೆ ತನ್ನ ನಗರಗಳ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ತೀವ್ರ ತೆರನಾದ ಪ್ರತ್ಯುತ್ತರ ನೀಡಿದೆ. ಇಸ್ರೇಲಿ ಪಡೆಗಳ ಪ್ರತಿದಾಳಿಯು ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳು ಹಾಗೂ ಅದರ ಕಚೇರಿಗಳನ್ನು ಗುರಿಯಾಗಿಸಿಕೊಂಡಿದೆ. ರಾಕೆಟ್ ದಾಳಿಗಳು ಮತ್ತು ಪ್ರತಿದಾಳಿಯು ಇಲ್ಲಿಯವರೆಗೆ 700 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ … Continued

ವೀಡಿಯೊಗಳು… | ಅಫ್ಘಾನಿಸ್ತಾನದಲ್ಲಿ ಭೂಕಂಪ : 2,000ಕ್ಕೂ ಹೆಚ್ಚು ಸಾವು, ಮನೆಗಳು ನೆಲಸಮ, ಸಹಾಯ ಕೇಳಿದ ತಾಲಿಬಾನ್

ಕಾಬೂಲ್‌ : ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಬೆಚ್ಚಿಬೀಳಿಸಿದ ಪ್ರಬಲ ಭೂಕಂಪದಿಂದ ಸತ್ತವರ ಸಂಖ್ಯೆ 2000 ಕ್ಕೆ ಏರಿದೆ ಎಂದು ತಾಲಿಬಾನ್ ವಕ್ತಾರರು ಭಾನುವಾರ ಹೇಳಿದ್ದಾರೆ. ಇದು ಎರಡು ದಶಕಗಳಲ್ಲಿ ದೇಶವನ್ನು ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಒಂದಾಗಿದೆ. ಶನಿವಾರ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಪ್ರಬಲವಾದ 6.3 ತೀವ್ರತೆಯ ಭೂಕಂಪದ ನಂತರ ಪ್ರಬಲವಾದ ನಂತರದ ಆಘಾತಗಳು ನೂರಾರು ಜನರನ್ನು ಕೊಂದಿವೆ … Continued

ತೀವ್ರಗೊಂಡ ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ : 500ಕ್ಕೂ ಹೆಚ್ಚು ಜನರು ಸಾವು, ಮನೆಗಳಿಂದ ನಿವಾಸಿಗಳ ಪಲಾಯನ

ಶನಿವಾರ ಬೆಳಗ್ಗೆ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಪ್ರಾರಂಭಿಸಿದ ಭೀಕರ ದಾಳಿಯ ನಂತರ ಪ್ರಾರಂಭವಾದ ಇತ್ತೀಚಿನ ಸಂಘರ್ಷದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡೂ ಕಡೆ ಸುಮಾರು 500 ಜನರು ಸಾವಿಗೀಡಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್‌ನಲ್ಲಿ ಹಮಾಸ್‌ ರಾಕೆಟ್‌ ದಾಳಿ ಹಾಗೂ ಗನ್‌ ದಾಳಿಯಿಂದ 300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಮತ್ತು ಪ್ರತೀಕಾರದ ಮಿಲಿಟರಿ … Continued