ವೀಡಿಯೊ…| ಮಾರಣಾಂತಿಕ ಗಾಜಾ ಬಾಂಬ್ ದಾಳಿ ನಂತರ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಮಾಸ್ ಕಚೇರಿಯಿದ್ದ ಪ್ಯಾಲೆಸ್ತೀನ್ ಟವರ್ ನೆಲಸಮ

ಇಸ್ರೇಲಿ ವೈಮಾನಿಕ ದಾಳಿಯು ಶನಿವಾರ ಹಮಾಸ್ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಿತು. ಹಮಾಸ್ ಭಯೋತ್ಪಾದಕರು ಮುಂಜಾನೆ ಹಠಾತ್ ದಾಳಿಯಲ್ಲಿ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿದರು. ಹಾಗೂ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳಿಗೆ ಡಜನ್ಗಟ್ಟಲೆ ಹೋರಾಟಗಾರರನ್ನು ನುಗ್ಗಿಸಿ ಹಲವಾರು ಜನರನ್ನು ಕೊಂದ ನಂತರ ಇಸ್ರೇಲ್‌ ಪ್ತೀಕಾರವಾಗಿ ವೈಮಾನಿಕ ದಾಳಿ ನಡೆಸಿತು. ಇಸ್ರೇಲಿ ವಾಯುಪಡೆಯು ಬಹುಮಡಿಗಳ ಎತ್ತರದ … Continued

ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯಲ್ಲಿ 100 ಜನರು ಸಾವು, 740ಕ್ಕೂ ಹೆಚ್ಚು ಜನರಿಗೆ ಗಾಯ : ಇಸ್ರೇಲ್‌ ಪ್ರತಿದಾಳಿ, ಗಾಜಾದಲ್ಲಿ 198 ಮಂದಿ ಸಾವು, 1,610 ಮಂದಿಗೆ ಗಾಯ

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವದಲ್ಲಿ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿತು. ಗಾಜಾ ಪ್ರದೇಶದಿಂದ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದರು. ಶನಿವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಕನಿಷ್ಠ 100 ಜನರು ಸಾವಿಗೀಡಾಗಿದ್ದಾರೆ ಮತ್ತು 740 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ … Continued

ಗಾಜಾದಿಂದ 5,000 ರಾಕೆಟ್‌ ಹಾರಿಸಿ ದಾಳಿ ಮಾಡಿದ ಹಮಾಸ್ : 22 ಇಸ್ರೇಲಿಗಳ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್ ಶನಿವಾರ ಪ್ಯಾಲೆಸ್ಟೈನ್‌ನ ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ. 22 ಇಸ್ರೇಲಿಗಳನ್ನು ಕೊಂದ ಹಾಗೂ 500 ಜನರನ್ನು ಗಾಯಗೊಳಿಸಿದ ಭೀಕರ ರಾಕೆಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅದು ಪ್ರತಿಜ್ಞೆ ಮಾಡಿದೆ. ಈ ಮಧ್ಯೆ ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರು ಇದು ತಮ್ಮ “ಮೊದಲ ದಾಳಿ ಎಂದು ಹೇಳಿದ್ದಾರೆ. ದಿಗ್ಬಂಧನಗೊಂಡಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ … Continued

ಏಷ್ಯಾದ ಈ ದೇಶಲ್ಲಿ ಮತ್ತೆ ಕೋವಿಡ್‌-19 ಸೋಂಕು ಉಲ್ಬಣ….ಪ್ರತಿದಿನ 2,000 ಪ್ರಕರಣ ದಾಖಲು…!

ಸಿಂಗಾಪುರ : ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಅವರು ಶುಕ್ರವಾರ ದೇಶವು ಮತ್ತೊಂದು ಕೋವಿಡ್‌-19 ಉಲ್ಬಣದ ಅಲೆಯನ್ನು ಅನುಭವಿಸುತ್ತಿದೆ ಎಂದು ಹೇಳಿದ್ದಾರೆ. ಅಂದಾಜು ದೈನಂದಿನ ಪ್ರಕರಣಗಳು ಮೂರು ವಾರಗಳ ಹಿಂದೆ ಸುಮಾರು 1,000 ಇದ್ದಿದ್ದು, ಕಳೆದ ಎರಡು ವಾರಗಳಲ್ಲಿ 2,000 ಕ್ಕೆ ಏರಿದೆ ಎಂದು ಒಂಗ್ ಹೇಳಿದ್ದಾರೆ. ಆದಾಗ್ಯೂ, ಸರ್ಕಾರ ಇದನ್ನು “ಸ್ಥಳೀಯ … Continued

ಅದ್ಭುತ..! : 4100 ಮೀಟರ್ ಎತ್ತರದಲ್ಲಿ ವಿಮಾನದಿಂದ ಸ್ಕೈ ಡೈವ್‌ ಮಾಡಿದ 104 ವರ್ಷದ ಮಹಿಳೆ | ವೀಡಿಯೊ

ಚಿಕಾಗೋದ 104 ವರ್ಷದ ಡೊರೊಥಿ ಹಾಫ್ನರ್ ಎಂಬ ಮಹಿಳೆ ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ. ಡೊರೊಥಿ ಹಾಫ್ನರ್ ಅವರು ವಿಮಾನದಿಂದ ಜಿಗಿದ ಮತ್ತು ಸ್ಕೈಡೈವ್ ಮಾಡಿದ ಅತ್ಯಂತ ಹಿರಿಯ ಅಥವಾ ವಯಸ್ಸಾದ ವ್ಯಕ್ತಿಯಾದರು. ಆದರೆ, ಗಿನ್ನಿಸ್ ದಾಖಲೆಗಳ ಪರಿಶೀಲನೆ ಇನ್ನೂ ಬಾಕಿ ಇದೆ. ಡೊರೊಥಿ ಹಾಫ್ನರ್ ವಾಕರ್ ಎತ್ತರದಲ್ಲಿ ವಿಮಾನದಿಂದ ನಂಬಿಕೆಯ ಜಿಗಿತವನ್ನು … Continued

ಜಿಂಬಾಬ್ವೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಸಾವು

ಜಿಂಬಾಬ್ವೆ: ಖಾಸಗಿ ವಿಮಾನವೊಂದು ತಾಂತ್ರಿಕ ದೋಷದಿಂದ ಪತನಗೊಂಡು ಭಾರತೀಯ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ (Harpal Randhawa) ಹಾಗೂ ಅವರ ಮಗ ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ನೈಋತ್ಯ ಜಿಂಬಾಬ್ವೆಯ ಜ್ವಾಮಹಂಡೆ ಪ್ರದೇಶದ ಬಳಿ ಈ ಘಟನೆ ನಡೆದಿದೆ. ರಿಯೊಜಿಮ್‌ (RioZim) ಕಂಪನಿಯ ಮಾಲೀಕರಾದ ರಾಂಧವಾ ಅವರು ಚಿನ್ನ, ಕಲ್ಲಿದ್ದಲು, … Continued

ಕೋವಿಡ್‌-19 ಲಸಿಕೆಯ ಸಂಶೋಧನೆಗಾಗಿ ಕ್ಯಾತಲಿನ್ ಕಾರಿಕೊ-ಡ್ರೂ ವೈಸ್‌ಮನ್ ಗೆ ಈ ವರ್ಷದ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಘೋಷಣೆ

ಸ್ಟಾಕ್‌ಹೋಮ್ : ಹಂಗೇರಿ ಮತ್ತು ಅಮೆರಿಕದ ವಿಜ್ಞಾನಿಗಳಾದ ಕ್ಯಾತಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್ ಅವರು ಎಮ್‌ಆರ್‌ಎನ್‌ಎ (mRNA) ಕೋವಿಡ್‌-19 (COVID-19) ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ಸಂಶೋಧನೆಗಳಿಗಾಗಿ 2023 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಜಂಟಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ನೀಡುವ ಸಂಸ್ಥೆ ಸೋಮವಾರ ತಿಳಿಸಿದೆ. ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು … Continued

ಇದು ವಿಶ್ವದ ಅತ್ಯಂತ ಭಾರವಾದ ಈರುಳ್ಳಿ : ಇದರ ತೂಕಕ್ಕೆ ಬೆರಗಾಗಲೇಬೇಕು…!

ಗುರ್ನಸಿಯ ವ್ಯಕ್ತಿಯೊಬ್ಬರು ಇತ್ತೀಚೆಗೆ ವಿಶ್ವದಲ್ಲೇ ಅತಿ ದೊಡ್ಡ ಈರುಳ್ಳಿ ಬೆಳೆದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಈ ಈರುಳ್ಳಿ ಒಂದು ಅಥವಾ ಮೂರು ಕೆಜಿ ಭಾರವಲ್ಲ, ಆದರೆ ಬರೋಬ್ಬರಿ 8.97 ಕೆಜಿ ತೂಗುತ್ತದೆ. ಸೆಪ್ಟೆಂಬರ್ 15 ರಂದು ಉತ್ತರ ಯಾರ್ಕ್‌ಷೈರ್‌ನಲ್ಲಿ ನಡೆದ ಹ್ಯಾರೊಗೇಟ್ ಶರತ್ಕಾಲದ ಪುಷ್ಪ ಪ್ರದರ್ಶನದಲ್ಲಿ ಗರೆಥ್ ಗ್ರಿಫಿನ್ ಎಂಬವರು ಹೆಮ್ಮೆಯಿಂದ ತನ್ನ ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದು … Continued

ವೀಡಿಯೊ : ಟರ್ಕಿಶ್ ಸಂಸತ್ತಿನ ಬಳಿ “ಭಯೋತ್ಪಾದಕ ದಾಳಿ”; ಕಾರಿನಿಂದ ಹೊರಬಂದು ತನ್ನನ್ನು ಸ್ಪೋಟಿಸಿಕೊಂಡ ಭಯೋತ್ಪಾದಕ | ವೀಕ್ಷಿಸಿ

ಅಂಕಾರಾ : ಭಾನುವಾರ ರಾಜಧಾನಿ ಅಂಕಾರಾದಲ್ಲಿರುವ ಟರ್ಕಿಶ್ ಸಂಸತ್ತಿನ ಬಳಿ ನಡೆದ “ಭಯೋತ್ಪಾದಕ ದಾಳಿಯ” ಚಿತ್ರಗಳನ್ನು ಭದ್ರತಾ ಕ್ಯಾಮೆರಾದ ತುಣುಕಿನಲ್ಲಿ ತೋರಿಸಲಾಗಿದೆ. ಸ್ಫೋಟವು ಎಷ್ಟು ಪ್ರಬಲವಾಗಿದೆ ಎಂದರೆ ಘಟನೆಯ ಸ್ಥಳದಿಂದ ಹಲವಾರು ಕಿಲೋಮೀಟರ್‌ಗಳವರೆಗೆ ಅದು ಕೇಳಿಸಿದೆ. ವೀಡಿಯೊ ಪ್ರಕಾರ, ಇಬ್ಬರು ದಾಳಿಕೋರರು ಭಾನುವಾರ ಬೆಳಿಗ್ಗೆ 9:90 ರ ಸುಮಾರಿಗೆ ವಾಹನದಲ್ಲಿ ಬಂದರು ಮತ್ತು ಅವರು ವಾಹನದ … Continued

26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸಹಾಯಕ, ಮೋಸ್ಟ್ ವಾಂಟೆಡ್ ಉಗ್ರನಿಗೆ ಕರಾಚಿಯಲ್ಲಿ ಗುಂಡಿಕ್ಕಿ ಹತ್ಯೆ: ವರದಿ

ಕರಾಚಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ನಾಯಕರಲ್ಲಿ ಒಬ್ಬರಾದ ಮುಫ್ತಿ ಕೈಸರ್ ಫಾರೂಕ್ ಎಂಬಾತನನ್ನು ಕರಾಚಿಯಲ್ಲಿ “ಅಪರಿಚಿತ ವ್ಯಕ್ತಿಗಳು” ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಕೈಸರ್ ಫಾರೂಕ್ ಎಲ್‌ಇಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ನಿಕಟವರ್ತಿ … Continued