ಹುಬ್ಬಳ್ಳಿಯಲ್ಲಿ ತಡರಾತ್ರಿ ಯುವಕನ ಕೊಲೆ; ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

ಹುಬ್ಬಳ್ಳಿ; ಮಹಾನಗರದ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್ ಜಾಗದಲ್ಲಿ ಆಕಾಶ ವಾಲ್ಮೀಕಿ ಎಂಬ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder) ಮಾಡಲಾಗಿದೆ. ತಡರಾತ್ರಿ ನಡೆದ ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು (Police) ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ … Continued

‘ನರಭಕ್ಷಕ’ ಹುಲಿಯ ಶವಪತ್ತೆ ; ಅದರ ಹೊಟ್ಟೆಯೊಳಗಿತ್ತು ಮಹಿಳೆಯ ಕಿವಿಯೋಲೆ, ಕೂದಲು, ಬಟ್ಟೆ…!

ವಯನಾಡು: ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದು ಹಾಕಿದ್ದ ‘ನರಭಕ್ಷಕ’ ಹುಲಿ ಕೇರಳದ ವಯನಾಡು ಜಿಲ್ಲೆಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದೆ. ಸತ್ತ ಹುಲಿಯ ಹೊಟ್ಟೆಯೊಳಗೆ ಸತ್ತ ಮಹಿಳೆಯ ಉಡುಗೆ ಮತ್ತು ಒಂದು ಜೋಡಿ ಕಿವಿಯೋಲೆಗಳು ಸಿಕ್ಕಿವೆ. ಎರಡು ದಿನಗಳ ಹಿಂದೆ ರಾಧಾ ಎಂಬ ಆದಿವಾಸಿ ಮಹಿಳೆಯನ್ನು ಕೊಂದ ಹುಲಿ ಇದೇ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ. … Continued

ಬೆಳಗಾವಿ | ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

ಬೆಳಗಾವಿ : ಬೆಳಗಾವಿಯ ನಾಲ್ವರು ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಉದ್ಯಮಿಗಳಾದ  ದೊಡ್ಡಣ್ಣವರ, ಅಜಿತ ಪಾಟೀಲ, ಅಶೋಕ ಹುಂಬರವಾಡಿ ಅವರಿಗೆ ಸೇರಿರುವ ಕಚೇರಿಗಳು ಮತ್ತು ಮನೆಗಳ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಮತ್ತು ಗೋವಾದ ಅಧಿಕಾರಿಗಳು ಮಂಗಳವಾರ … Continued

ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಸೇರಿ 17 ಜನರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆ(IISc)ಯ ನಿರ್ದೇಶಕ ಬಲರಾಮ ಮತ್ತು ಇತರ 16 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. 71ನೇ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ (ಸಿಸಿಎಚ್) ನಿರ್ದೇಶನದ ಮೇರೆಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು … Continued

ಕೊನೆಗೌಡರಿಗೆ ಉಚಿತ ವಿಮೆ : 1 ವರ್ಷದ ಕಂತು ತುಂಬಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ನಿರ್ಧಾರ

ಶಿರಸಿ : ಅಡಕೆ ಕೊನೆ ಕೊಯ್ಯುವ ಕೊನೆಗೌಡರಿಗೆ ಇನ್ಸುರೆನ್ಸ್ ಗ್ರೂಪ್ ಅಕ್ಸಿಡೆಂಟ್ ಗಾರ್ಡ್‌ ಪಾಲಿಸಿಯ ಒಂದು ವರ್ಷದ ಕಂತನ್ನು ತುಂಬಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ನಿರ್ಧಾರಿಸಿದ್ದು, ಈ ಹಿನ್ನೆಲೆಯಲ್ಲಿ ಅದು ಶಿರಸಿಯ ಎಪಿಎಂಸಿ ಆವರಣದಲ್ಲಿರುವ ಟಿಆರ್‌ಸಿ ಸಭಾಂಗಣದಲ್ಲಿ ಜನವರಿ 29ರಂದು ಕಾರ್ಯಕ್ರಮ ಆಯೋಜಿಸಿದೆ. ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಜನವರಿ ೨೯ರ ಬುಧವಾರ … Continued

ಮುಡಾ ಪ್ರಕರಣ | ಸಿಎಂ ವಿರುದ್ಧ ಸಿಬಿಐ ತನಿಖೆ ಕೋರಿ ಅರ್ಜಿ; ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣಕ್ಕೆ (Muda Case) ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಾದ- ಪ್ರತಿವಾದ ಆಲಿಸಿ … Continued

ಪಿಂಕಿ ಈಸ್ ಕಿಲ್ಲಿಂಗ್ ಮೀ ; ಹೆಂಡತಿ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ

ಹುಬ್ಬಳ್ಳಿ : 40 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಕಿರುಕುಳದಿಂದ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೀಟರ್‌ ಗೊಲ್ಲಪಲ್ಲಿ ಎಂಬವರು ಪತ್ನಿ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶಗೆ ಸದ್ಯಕ್ಕೆ ರಿಲೀಫ್ ನೀಡಿದ ಹೈಕೋರ್ಟ್‌

ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ಗೆ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ 1ರಿಂದ ಎರಡು ದಿನ ಮಳೆಯ ಮುನ್ಸೂಚನೆ

ಬೆಂಗಳೂರು : ಹವಾಮಾನ ಇಲಾಖೆಯು ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕರ್ನಾಟಕದಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ 1ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡು … Continued

ಕುಮಟಾ | ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ನಿಂದ ಸಂಕಲ್ಪ ಯಾತ್ರೆ

ಕುಮಟಾ : ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ಕಂಪನಿ ವತಿಯಿಂದ ಜೀವ ವಿಮೆ ಬಗ್ಗೆ ಅರಿವು ಮೂಡಿಸುವ ಸಂಕಲ್ಪ ಯಾತ್ರೆ ಪಟ್ಟಣದಲ್ಲಿ ಶನಿವಾರ (ಜ.೨೫) ನಡೆಯಿತು. ಇಲ್ಲಿನ ಮಹಾಸತಿ ದೇವಸ್ಥಾನದಿಂದ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಪಾದಯಾತ್ರೆ ಚಂಡೆ-ವಾದ್ಯಗಳೊಂದಿಗೆ ನೆಲ್ಲಿಕೇರಿ ಮಾರ್ಗದ ಮೂಲಕ ರಥಬೀದಿ, ಸುಭಾಷ ರಸ್ತೆ, ಕೋರ್ಟ್‌ ರಸ್ತೆ ಮೂಲಕ ಸಾಗಿ ಟಾಟಾ … Continued