ಮುಂಬೈ: ಕೊವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ಏರಿದ ಸಾವಿನ ಸಂಖ್ಯೆ, 9 ಜನರ ಮರಣ

ಮುಂಬೈ: ಮುಂಬಯಿಯ ಭಂಡಪ್ ಪ್ರದೇಶದ ಖಾಸಗಿ ಕೊವಿಡ್‌ -19 ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅನಾಹುತದಲ್ಲಿ  ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಶಾಂತ್ ಕದಮ್ ಅವರ ಪ್ರಕಾರ, ಸುಮಾರು 22 ಅಗ್ನಿಶಾಮಕ ದಳಗಳು ಆಸ್ಪತ್ರೆಗೆ ತಲುಪಿ ಬೆಂಕಿ ನಂದಿಸುತ್ತಿವೆ. ಮಾಲ್‌ನ ಮೂರನೇ ಮಹಡಿಯಲ್ಲಿರುವ ಆಸ್ಪತ್ರೆಗೆ … Continued

ಮಹಾರಾಷ್ಟ್ರ: ಬುಧವಾರದ ದಾಖಲೆಯನ್ನೂ ಮೀರಿ ದಾಖಲೆ ಮಾಡಿದ ದೈನಂದಿನ ಕೊರೊನಾ ಪ್ರಕರಣ..!

ಮುಂಬೈ: ಮಹಾರಾಷ್ಟ್ರದಲ್ಲಿ ಗುರುವಾರ (ಮಾರ್ಚ್ 25) 35,952 ಹೊಸ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಇದು ರಾಜ್ಯದ ಅತಿ ಹೆಚ್ಚು ಏಕದಿನದ ಉಲ್ಬಣವಾಗಿದೆ. ಈ ಹಿಂದಿನ ಏಕೈಕ ಏಕದಿನ ಉಲ್ಬಣವು 31,855 ಪ್ರಕರಣಗಳಾಗಿದ್ದು, ಮಾರ್ಚ್ 24 ರ ಬುಧವಾರ ದಾಖಲಾಗಿತ್ತು. ದಿನದಲ್ಲಿ 111 ಕೊರೊನಾ ಸಾವುಗಳು ದಾಖಲಾಗಿದ್ದು, ಸಾವಿನ … Continued

ಕಂಗನಾಗೆ ರಣೌತ್‌ಗೆ ಜಾಮೀನು

ಮುಂಬೈ: ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯ ತನ್ನ ವಿರುದ್ಧ ಹೊರಡಿಸಿದ ಜಾಮೀನು ವಾರಂಟ್ ರದ್ದತಿಗಾಗಿ ನ್ಯಾಯಾಲಯಕ್ಕೆ ತೆರಳಿದ ನಂತರ ಮುಂಬೈನ ಅಂಧೇರಿ ನ್ಯಾಯಾಲಯವು ಬಾಲಿವುಡ್ ನಟಿ ಕಂಗನಾ ರಣೌತ್ ಅವರಿಗೆ ಜಾಮೀನು ನೀಡಿದೆ. 15,000 ಜಾಮೀನು ಮತ್ತು 20,000 ರೂ. ನಗದು ನೀಡಿದ ನಂತರ ಆಕೆಗೆ ಜಾಮೀನು ನೀಡಲಾಗಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. … Continued

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ದಿ. ಸುರೇಶ ಅಂಗಡಿ ಪತ್ನಿ ಬಿಜೆಪಿ ಅಭ್ಯರ್ಥಿ

ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಮತ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯು ದಿವಂಗತ ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ … Continued

ನಾನು ಸಂಘ ಪರಿವಾರವೆಂದು ಕರೆಯುವುದಿಲ್ಲ: ರಾಹುಲ್‌ ಗಾಂಧಿ

ನವದೆಹಲಿ: ಇನ್ನು ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಗುಂಪುಗಳನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಅವರು ಟ್ವೀಟರ್‌ನಲ್ಲಿ, ಒಂದು ಪರಿವಾರವೆಂದರೆ ಅದರಲ್ಲಿ ಮಹಿಳೆಯರಿರುತ್ತಾರೆ. ಗೌರವಾನ್ವಿತ ಹಿರಿಯರ ಜೊತೆ ಸಹಾನುಭೂತಿ ಹಾಗೂ ವಾತ್ಸಲ್ಯದ ವಾತಾವರಣ ಇರುತ್ತದೆ. ಆದರೆ ಅದು ಸಂಘದ ಸಂಘಟನೆಗಳಲ್ಲಿ ಇಂಥ ವಾತಾವರಣ ಕಾಣುವುದಿಲ್ಲ. ಇನ್ನು … Continued

ಕೊವಿಡ್‌ ಎರಡನೇ ಅಲೆ ಅವಧಿ 100 ದಿನಗಳ ವರೆಗೆ, ಏಪ್ರಿಲ್‌ನಲ್ಲಿ ಹೆಚ್ಚು ಉಲ್ಬಣ : ಎಸ್‌ಬಿಐ ಅಧ್ಯಯನ ವರದಿ

ಫೆಬ್ರವರಿಯಿಂದ ದೈನಂದಿನ ಹೊಸ ಕೊವಿಡ್‌-19 ಪ್ರಕರಣಗಳಲ್ಲಿ ಭಾರತವು ತೀವ್ರತೆ ಎದುರಿಸುತ್ತಿದೆ, ಇದು ಎರಡನೇ ಅಲೆಯನ್ನುಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನಾ ವರದಿ ತಿಳಿಸಿದೆ. ಸಂಶೋಧನಾ ವರದಿಯ ಪ್ರಕಾರ, ಎರಡನೇ ಅಲೆಯು 100 ದಿನಗಳ ವರೆಗೆ ಇರುತ್ತದೆ. ಸ್ಥಳೀಯ ಲಾಕ್‌ಡೌನ್‌ಗಳು “ನಿಷ್ಪರಿಣಾಮಕಾರಿಯಾಗಿದೆ” ಮತ್ತು ಕೊವಿಡ್‌ ವಿರುದ್ಧದ ಯುದ್ಧವನ್ನು ಗೆಲ್ಲುವ ಏಕೈಕ ಮಾರ್ಗವೆಂದರೆ … Continued

ನಾಳೆ ಭಾರತ್‌ ಬಂದ್‌: ಹರ್ಯಾಣಾ, ಪಂಜಾಬ್‌, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚು ಪರಿಣಾಮ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿರೈತ ಸಂಘಗಳ ಒಕ್ಕೂಟವಾದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26, ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್‌ ನಡೆಯಲಿದೆ ಎಂದು ತಿಳಿಸಿದೆ. ಭಾರತ್ ಬಂಧವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬುಧವಾರ ದೇಶದ … Continued

ಸಚಿನ ವಾಝೆ ಎನ್‌ಐಎ ಕಸ್ಟಡಿ ಏಪ್ರಿಲ್ 3ರ ವರೆಗೆ ವಿಸ್ತರಣೆ

ಮುಂಬೈ: ದೇಶದ ಅಗ್ರಮಾನ್ಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮನೆಯ ಬಳಿ ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಝೆ ಅವರ ಎನ್‌ಐಎ ಕಸ್ಟಡಿಯನ್ನು ವಿಶೇಷ ನ್ಯಾಯಾಲಯವು ಏಪ್ರಿಲ್ 3ರ ವರೆಗೆ ವಿಸ್ತರಿಸಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಲಿಪಶುವಾಗಿ ಮಾಡಲಾಗಿದೆ ಎಂದು ಸಚಿನ್ ವಾಜೆ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ … Continued

ಎಎಪಿ ಶಾಸಕ ಸೋಮನಾಥ ಭಾರತಿ ಜೈಲು ಶಿಕ್ಷೆ ಅಮಾನತು ಮಾಡಿದ ದೆಹಲಿ ಹೈಕೋರ್ಟ್‌

ನವ ದೆಹಲಿ: ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 2 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆಪ್ ಶಾಸಕ ಸೋಮನಾಥ ಭಾರ್ತಿ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಏಮ್ಸ್ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಎಎಪಿ ಶಾಸಕ ಸೋಮನಾಥ ಭಾರ್ತಿ ಅವರ ಅಪರಾಧ ಮತ್ತು 2 ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ … Continued

ತಮಿಳುನಾಡು: ಈ ಅಭ್ಯರ್ಥಿ ಆರಿಸಿ ಬಂದ್ರೆ ಪ್ರತಿ ಮನೆಗೆ ಹೆಲಿಕಾಪ್ಟರ್..! ಮನೆಗೆಲಸ ಮಾಡಲು ರೋಬಟ್‌..!! ಚಂದ್ರನ ಮೇಲೆ ೧೦೦ ದಿನ ಪ್ರವಾಸ…!!!

ಚೆನ್ನೈ: ದಕ್ಷಿಣ ಮಧುರೈ ಕ್ಷೇತ್ರದವರಿಗೆ ವರ್ಷದ ಅಂತ್ಯದ ವೇಳೆಗೆ ಅವರ ಕುಟುಂಬ ಮಿನಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುವ ಅವಕಾಶವಿದೆ..! ಅವರ ಮನೆಯ ಕೊಳದಲ್ಲಿ ಈಜುವಾಗ ಐಫೋನ್‌ನಲ್ಲಿ ಅದೃಷ್ಟವಿಲ್ಲದ ಇತರ ಕ್ಷೇತ್ರಗಳ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಾಧ್ಯತೆಯೂ ಇದೆ..!! ಆದರೆ ಇದು ಸಾಧ್ಯವಾಗುವುದು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಮಧುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ … Continued