ಕೋವಿಡ್ -19 ಭಾರತದ ಮಧ್ಯಮ ವರ್ಗಕ್ಕೆ ಹೆಚ್ಚು ಕಾಡಿದೆ, ಚೀನಾಕ್ಕಿಂತಲೂ ಹೆಚ್ಚು ಬಡತನಕ್ಕೆ ಕಾರಣವಾಗಿದೆ: ಅಧ್ಯಯನದಲ್ಲಿ ಬೆಳಕಿಗೆ

ಕೋವಿಡ್ -19 ವೈರಸ್‌ನಿಂದ ಉಂಟಾದ ಆರ್ಥಿಕ ಕುಸಿತದಿಂದಾಗಿ ಭಾರತವು ತನ್ನ ಮಧ್ಯಮ ವರ್ಗದ ಅತಿದೊಡ್ಡ ಕುಸಿತ ಕಂಡಿದ್ದು, ನೆರೆಯ ಚೀನಾಕ್ಕಿಂತ ಹೆಚ್ಚು ಬಡತನದ ತೀವ್ರತೆ ಅನುಭವಿಸಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ಇನ್ಸ್ಟಿಟ್ಯೂಟಿನ ಹೊಸ ಅಧ್ಯಯನವೊಂದು ಹೇಳಿದೆ. ಕೊವಿಡ್‌ -19 ಸಾಂಕ್ರಾಮಿಕದಿಂದ ಸುಮಾರು 32 ಮಿಲಿಯನ್ ಭಾರತೀಯರು ಮಧ್ಯಮ ವರ್ಗದಿಂದ ಹೊರಬಿದ್ದಿದ್ದು, 75 ಮಿಲಿಯನ್ ಜನ … Continued

ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ

ಭಾರತದ ಸೇರಿದಂತೆ ವಿಶ್ವದೆಲ್ಲೆಡೆ ವಾಟ್ಸಾಫ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಡೌನ್ ಡಿಟೆಕ್ಟರ್ ವರದಿಯಂತೆ ಸಾವಿರಾರು ಮಂದಿ ವೆಬ್‌ ಹಾಗೂ ಮೊಬೈಲ್ ಅಪ್ಲಿಕೇಷನ್ ಎರಡರಲ್ಲೂ ಸಮರ್ಪಕವಾಗಿ ಸೇವೆ ಇಲ್ಲ ಎಂದು ದೂರಿದ್ದಾರೆ. ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ಫೇಸ್‌ಬುಕ್‌ ಕೂಡ ಲೋಡಿಂಗ್ ಸಮಸ್ಯೆ ಎದುರಿಸುತ್ತಿದೆ.ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 10.55ರಿಂದ ವಿಶ್ವದೆಲ್ಲೆಡೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ … Continued

ವಾಜೆ ಬಳಿ ಇದ್ದ ಐಷಾರಾಮಿ ಕಾರು ಶಿವಸೇನೆ ಮುಖಂಡನಿಗೆ ಸೇರಿದ್ದು..!

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿರುವ ಸಚಿನ್ ವಾಜೆ ಅವರಿಂದ ವಶಪಡಿಸಿಕೊಂಡಿರುವ ಎರಡು ಐಷಾರಾಮಿ ಕಾರುಗಳು ಶಿವಸೇನೆ ಮುಖಂಡರಿಗೆ ಸೇರಿದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ವಾಜೆ ಅವರಿಂದ ಮತ್ತೆರಡು ಐಷಾರಾಮಿ ಕಾರು ವಶಪಡಿಸಿಳ್ಳಲಾಗಿದ್ದು, ಅವರಿಂದ ಅಪಾರ ಬೆಲೆ ಬಾಳುವ … Continued

ಮಹಾರಾಷ್ಟ್ರದಲ್ಲಿ ದೈನಂದಿನ ಕೊರೊನಾ ಪ್ರಕರಣ 25,681

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ಬರೋಬ್ಬರಿ 25,681 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 24,22,021ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿನಿಂದ 70 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಮೊದಲ ಕೋವಿಡ್-19 ಪ್ರಕರಣ ವರದಿಯಾಗಿತ್ತು. … Continued

ಮತ್ತೆ ಜಿಗಿತ ಕಂಡ ಸೆನ್ಸೆಕ್ಸ್‌

ಶುಕ್ರವಾರ ವಹಿವಾಟಿನ ಆರಂಭದಲ್ಲಿ 500ಕ್ಕೂ ಹೆಚ್ಚು ಪಾಯಿಂಟ್ಸ್‌ ಕುಸಿದಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಶುಕ್ರವಾರ ಮುಕ್ತಾಯ ವೇಳೆಗೆ 600ಕ್ಕೂ ಅಧಿಕ ಪಾಯಿಂಟ್ಸ್ ಜಿಗಿತ ಕಂಡಿದೆ. ಎರಡು ದಿನಗಳಿಂದ ಕುಸಿತ ಕಂಡಿದ್ದ ಶೇರು ಮಾರುಕಟ್ಟೆಯಲ್ಲಿ ಶುಕ್ರವಾರದ ತೇಜಿ ಸಮಾದಾನ ತಂದಿದೆ. . ರಾಷ್ಟ್ರೀಯ ಷೇರುಪೇಟೆ ನಿಫ್ಟಿ 186 ಪಾಯಿಂಟ್ಸ್‌ನೆಗೆತ ಕಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.30ರಷ್ಟು … Continued

ದೂರದೃಷ್ಟಿ ಇಲ್ಲದ ಲಾಕ್‌ಡೌನ್‌ನಿಂದ ಜನರಿಗೆ ತೊಂದರೆ: ರಾಹುಲ್‌ ಟೀಕೆ

ದೂರದೃಷ್ಟಿ ಇಲ್ಲದೇ ಕಳೆದ ವರ್ಷ ಲಾಕ್‌ಡೌನ್‌ ಮಾಡಿದ್ದರಿಂದ ಈಗಲೂ ಲಕ್ಷಾಂತರ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅವರು ಟ್ವೀಟರ್‌ನಲ್ಲಿ, ಕೊರೊನಾ ಸೋಂಕು ಹರಡುವುನ್ನು ತಡೆಯಲು ಕೇಂದ್ರ ಸರಕಾರ ಕಳೆದ ವರ್ಷ ಮಾರ್ಚ್‌ ೨೪ರಂದು ಲಾಕ್‌ಡೌನ್‌ ಮಾಡಿತು. ಆದರೆ ಯೋಜನಾರಹಿತವಾಗಿ ಲಾಕ್‌ಡೌನ್‌ ಮಾಡಿದ್ದರಿಂದ ಬಡವರು ಹಾಗೂ ಕಾರ್ಮಿಕರು ತೊಂದರೆ ಅನುಭವಿಸಬೇಕಾಯಿತು. … Continued

ಉತ್ತರ ಪ್ರದೇಶ: ಹಿಟ್ಟಿಗೆ ಉಗುಳುತ್ತ ರೊಟ್ಟಿ ಮಾಡಿದ ಅಡುಗೆಯವನ ವಿರುದ್ಧ ಎನ್‌ಎಸ್‌ಎ ಕಾಯ್ದೆ ಜಾರಿ

ಲಕ್ನೋ: ಕಳೆದ ತಿಂಗಳು ಮೀರತ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ಹಿಟ್ಟಿಗೆ ಉಗುಳಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಅಡುಗೆಯ ನೌಶಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಜಾರಿಗೊಳಿಸಿದೆ. ಎನ್‌ಎಸ್‌ಎ ಪ್ರಕ್ರಿಯೆಯನ್ನು ಪೊಲೀಸರು ಗುರುವಾರ ಪೂರ್ಣಗೊಳಿಸಿದ್ದು, ಗುರುವಾರ ಪರಿಶೀಲನೆ ಮತ್ತು ಅನುಮೋದನೆಗಾಗಿ ಫೈಲ್ ಅನ್ನು ಡಿಎಂಗೆ ಕಳುಹಿಸಲಾಗಿದೆ ಎಂದು ನ್ಯೂ ಇಂಡಿಯನ್‌ … Continued

ವಾಟ್ಸಾಪ್ ಹೊಸ ಗೌಪ್ಯತಾ ನೀತಿ ಜಾರಿಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟಿಗೆ ಕೇಂದ್ರದ ಮನವಿ

ನವ ದೆಹಲಿ: ಹೊಸ ಗೌಪ್ಯತಾ ನೀತಿ ಜಾರಿಗೆ ತರದಂತೆ ವಾಟ್ಸ್ ಆಪ್ ತಡೆಯಲು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ ಪ್ರಮಾಣಪತ್ರದ ಮೂಲಕ ನೀಡಿರುವ ತನ್ನ ಹೇಳಿಕೆಯಲ್ಲಿ ವಾಟ್ಸ್ ಆಪ್ ನ ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿದೆ. ಭಾರತದ ಡಾಟಾ ಭದ್ರತೆ ಹಾಗೂ ಗೌಪ್ಯತಾ ಕಾನೂನುಗಳಿಗೆ … Continued

ಕೊರೊನಾ ಹೆಚ್ಚಳ: ದೆಹಲಿ ತಬ್ಲಿಘಿ ಜಮಾತ್ ಸಭೆ ಉಲ್ಲೇಖಿಸಿದ್ದ ಎಂಬಿಬಿಎಸ್ ಪುಸ್ತಕ ಹಿಂಪಡೆದ ಸರ್ಕಾರ

ಮುಂಬೈ: ದೇಶದಲ್ಲಿ ಕೊರೊನಾ ಸೋಂಕಿನ ಸ್ಫೋಟಕ್ಕೆ ಸಂಬಂಧಿಸಿದಂತೆ, ನವದೆಹಲಿಯಲ್ಲಿನ ತಬ್ಲಿಘಿ ಜಮಾತ್ ಸಭೆ ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ 2ನೇ ವರ್ಷಕ್ಕೆ ಸಂಬಂಧಿಸಿದ ಇದರ ಉಲ್ಲೇಖ ಇರುವ ಪುಸ್ತಕ ಹಿಂಪಡೆದಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಹೊರತರಲಾಗಿದ್ದ ಎಸ್ಸೆನ್ಶಿಯಲ್ಸ್ ಆಫ್ ಮೆಡಿಕಲ್ ಮೈಕ್ರೊಬಯಾಲಜಿ” ಪುಸ್ತಕದ ಮೂರನೇ ಆವೃತ್ತಿಯಲ್ಲಿ ತಬ್ಲಿಘಿ ಜಮಾತ್ ಸಭೆಯ ಉಲ್ಲೇಖ ಮಾಡಲಾಗಿತ್ತು. … Continued

ಮಹಿಷಿ ಪ್ರತಿಷ್ಠಾನ ಯೋಗ – ಪ್ರಕೃತಿ ಚಿಕಿತ್ಸೆ – ಸಂಶೋಧನಾ ಕೇಂದ್ರ

  ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ವ ಪೂರ್ಣವಾಗಿದೆ. ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಧಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿ. ಪ್ರಾಕೃತಿಕವಾಗಿಯೇ ನಿರೋಗಿಗಳನ್ನಾಗಿ ಮಾಡುವುದೇ ಈ ಚಿಕಿತ್ಸೆಯ ವಿಶೇಷತೆ. ಪ್ರಕೃತ್ಯಾಧೀನಮಾರೋಗ್ಯಂ ಎಂಬ … Continued