ಬಿಜೆಪಿ ಟಿಕೇಟ್‌ ನೀಡಿದ್ದಾದರೆ ಗೆಲುವಿನ ಸಿಕ್ಸರ್‌ ಸಿಡಿಸುವುದು ಖಚಿತ: ಮುತಾಲಿಕ್‌ ವಿಶ್ವಾಸ

ಬೆಳಗಾವಿ: ಹಿಂದುತ್ವಕ್ಕಾಗಿ ಕಳೆದ ೪೦ ವರ್ಷಗಳಿಂದ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡಬೇಕೆಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಬಿಜೆಪಿ ಟಿಕೆಟ್‌ ನೀಡಿದರೆ ಗೆಲುವು ಖಚಿತ ಎಂದು ಮುತಾಲಿಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. . ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಈಗ … Continued

ತಮಿಳುನಾಡು: ಮತಯಾಚನೆಗೆ ಬಂದ ಶಾಸಕನಿಗೆ ಕಳಪೆ ಅಕ್ಕಿ ಆರತಿ !

ಚೆನ್ನೈ: ವಿಧಾನಸಭಾ ಚುನಾವಣೆಗಾಗಿ ಮತಯಾಚನೆ ಮಾಡಲು ಬಂದ ಎಐಎಡಿಎಂಕೆ ಶಾಸಕನಿಗೆ ಗ್ರಾಮದ ಮಹಿಳೆಯರು ಪಡಿತರ ಕೇಂದ್ರಗಳಲ್ಲಿ ನೀಡುವ ಕಳಪೆ ಅಕ್ಕಿಯಿಂದ ಆರತಿ ಬೆಳಗಿದ ಘಟನೆ ಮಧುರೈ ಜಿಲ್ಲೆಯ ಶೋಲವಂದನ್‌ ವಿಧಾನಸಭಾ ಕ್ಷೇತ್ರದ ತಾಂಡಲೈ ಗ್ರಾಮದಲ್ಲಿ ನಡೆದಿದೆ. ಎಐಎಡಿಎಂಕೆ ಶಾಸಕ ಕೆ. ಮಾಣಿಕಂ ಮತಯಾಚನೆಗೆ ಬಂದ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಮಹಿಳೆಯರು ಸಾಲಾಗಿ ತಟ್ಟೆಗಳಲ್ಲಿ ಕಳಪೆ ದರ್ಜೆಯ … Continued

ಬಾಂಗ್ಲಾದೇಶ: ವ್ಯಕ್ತಿ ನಿಂದನೆ ಖಂಡಿಸಿ ೮೦ಕ್ಕೂ ಹೆಚ್ಚು ಹಿಂದೂಗಳ ಮನೆಗಳ ಮೇಲೆ ದಾಳಿ

ಹಿಂದೂ ಯುವಕನೊಬ್ಬ ಮುಸ್ಲಿಂ ಮುಖಂಡರೊಬ್ಬರನ್ನುಟೀಕಿಸಿದ್ದನ್ನು ಖಂಡಿಸಿ ಬಾಂಗ್ಲಾದೇಶದ ಸುನಮ್‌ಗಂಜ್‌ ಗ್ರಾಮದ ೮೦ಕ್ಕೂ ಹೆಚ್ಚು ಹಿಂದೂ ಬಾಂಧವರ ಮನೆಗಳ ಮೇಲೆ ಉಗ್ರಗಾಮಿ ಸಂಘಟನೆ ಹೆಫಜತ್‌-ಎ-ಇಸ್ಲಾಂ ಬೆಂಬಲಿಗರು ದಾಳಿ ನಡೆಸಿದ್ದಾರೆ. ಹಿಂದೂ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಮೌಲಾನಾ ಮುಫ್ತಿ ಮಾಮುನಲ್‌ ಹಕ್‌ ಅವರನ್ನು ಟೀಕಿಸಿದ್ದನ್ನು ಖಂಡಿಸಿ ದಾಳಿ ನಡೆಸಲಾಗಿದ್ದು, ಮನೆಗಳಲ್ಲಿನ ಸಾಮಗ್ರಿಗಳನ್ನು ಧ್ವಂಸ ಮಾಡಿದರೆ, ಇನ್ನು ಕೆಲವರು ಮನೆಗಳಲ್ಲಿನ ಸಾಮಗ್ರಿಗಳನ್ನು … Continued

ಮಹಾರಾಷ್ಟ್ರ: 26 ಸಾವಿರ ಸಮೀಪ ಬಂದ ಕೊರೊನಾ ಪ್ರಕರಣಗಳ ಸಂಖ್ಯೆ..!

ಮುಂಬೈ: ಮಹಾರಾಷ್ಟ್ರವು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಕಳೆದ 24 ತಾಸಿನಲ್ಲಿ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನದಲ್ಲಿ 25,833 ಸೋಂಕುಗಳು ವರದಿಯಾಗಿವೆ, ಬುಧವಾರ ರಾಜ್ಯವು 23,000ಕ್ಕೂ ಹೆಚ್ಚು ಹೊಸ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿತ್ತು. ಆದಾಗ್ಯೂ, ವೈರಸ್ ಸಂಬಂಧಿತ ಸಾವುನೋವುಗಳು ಇಳಿಮುಖವಾಗಿವೆ. ಗುರುವಾರ … Continued

ಸಾರ್ವಜನಿಕ ಆಸ್ತಿ ಖಾಸಗಿಗೆ ನೀಡುವುದೇ ಮೋದಿ ಸರ್ಕಾರದ ದೊಡ್ಡ ಸಾಧನೆ: ಶಿವಸೇನಾ ವ್ಯಂಗ್ಯ

ಮುಂಬೈ: ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ಖಾಸಗೀಯವರಿಗೆ ನೀಡುತ್ತಿರುವ ಕ್ರಮವನ್ನು ಖಂಡಿಸಿದ ಶಿವಸೇನಾ ಕೇಂದ್ರ ಸರಕಾರ ಇಬ್ಬಗೆ ನಿಲುವು ಹೊಂದಿದೆ ಎಂದು ಜರಿದಿದೆ. ರೈಲ್ವೆ ಖಾಸಗೀಕರಣ ಮಾಡುವುದಿಲ್ಲ ಎಂದು ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಹೇಳಿದರೆ, ಭಾರತೀಯ ಜೀವವಿಮಾ ಸಂಸ್ಥೆಯನ್ನು ಖಾಸಗೀಯವರಿಗೆ ನೀಡುವುದಿಲ್ಲ ಎಂದು … Continued

7 ರಾಷ್ಟ್ರೀಯ- 41 ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ ಬಹಿರಂಗ

ನವ ದೆಹಲಿ: ಚುನಾವಣಾ ಆಯೋಗಕ್ಕೆ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳು ಸಲ್ಲಿಸಿರುವ ಪ್ರಕಾರ ಈ ಪಕ್ಷಗಳು 7372.96 ಕೋಟಿ ರೂ. ಆಸ್ತಿ ಹೊಂದಿರುವುದು ಬಹಿರಂಗವಾಗಿದೆ. 7 ರಾಷ್ಟ್ರೀಯ ಪಕ್ಷಗಳು 5349.25 ಕೋಟಿ ರೂ. ಹಾಗೂ 41 ಪ್ರಾದೇಶಿಕ ಪಕ್ಷಗಳು 2023.71 ಕೋಟಿ ರೂ. ಆಸ್ತಿ ಹೊಂದಿವೆ ಎನ್ನಲಾಗಿದೆ. ಬಿಜೆಪಿ ಅತಿ ಹೆಚ್ಚು ಆಸ್ತಿ … Continued

ರಾಮಾಯಣ ಟೀವಿ ಸೀರಿಯಲ್‌ ಶ್ರೀ‌ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಬಿಜೆಪಿಗೆ ಸೇರ್ಪಡೆ

ನವ ದೆಹಲಿ:ಪ್ರಖ್ಯಾತ ರಾಮಾಯಣ ಧಾರಾವಾಹಿ ಶ್ರೀರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿ ಸೇರುತ್ತಿರುವುದು ಮಹತ್ವ ಪಡೆದಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಅವರು ಸೇಪಡೆಯಾಗಿದ್ದಾರೆ. 1987ರಿಂದ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ್‌ ಅವರ ಜನಪ್ರಿಯ ಧಾರಾವಾಹಿ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರವನ್ನು ಅರುಣ್‌ ಗೋವಿಲ್‌ ನಿರ್ವಹಿಸಿದ್ದ … Continued

ಪಶ್ಚಿಮ ಬಂಗಾಳ ಚುನಾವಣೆ: ಅಂತಿಮ ನಾಲ್ಕು ಹಂತದ 148 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಐದನೇ, ಆರನೇ, ಏಳನೇ ಮತ್ತು ಎಂಟನೇ ಹಂತಗಳಿಗೆ 148 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರಾಗಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಟಿಎಂಸಿಯ ಟಿಕೆಟ್‌ನಲ್ಲಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ … Continued

ಆಧಾರ್ ಜೊತೆ ʼವೋಟರ್‌ ಐಡಿʼ ಲಿಂಕ್: ಸರ್ಕಾರದ ಮುಂದೆ ಪ್ರಸ್ತಾವನೆ

ನವ ದೆಹಲಿ: ಆಧಾರ್ ಕಾರ್ಡ್ʼಗೆ ವೋಟರ್‌ ಐಡಿ ಜೋಡಣೆ ಮಾಡುವ ಪ್ರಸ್ತಾವನೆ ಸರ್ಕಾರದ ಪರಿಶೀಲಿನೆಯಲ್ಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಉತ್ತರಿಸಿದ ಅವರು, ಮತದಾರರ ಪಟ್ಟಿಯನ್ನ ಆಧಾರ್‌ನೊಂದಿಗೆ ಲಿಂಕ್ ಮಾಡಲು ಚುನಾವಣಾ ಆಯೋಗವು ಉದ್ದೇಶಿಸಿದ್ದು, ಇದರಿಂದ ಒಬ್ಬ ವ್ಯಕ್ತಿ ಬೇರೆ ಬೇರೆ ಸ್ಥಳಗಳ ನೋಂದಣಿ ಮಾಡುವುದನ್ನು ತಡೆಗಟ್ಟಬಹುದು. ಈ ಉದ್ದೇಶದಿಂದ … Continued

ಬ್ಯಾಂಕ್ ಗ್ರಾಹಕರೇ ಎಚ್ಚರ ವಹಿಸಿ…ನಿಮ್ಮ ತಪ್ಪಿಗೆ ಬ್ಯಾಂಕ್ ಹೊಣೆಯಲ್ಲ

ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ. ಗ್ರಾಕರ ತಪ್ಪಿನಿಂದ ಖಾತೆಯಲ್ಲಿರುವ ಹಣ ಖಾಲಿಯಾದರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿಯಾಗುವುದಿಲ್ಲ. ಗ್ರಾಹಕರಿಗೆ ಹಣ ವಾಪಸ್ ಸಿಗುವುದೂ ಇಲ್ಲ. ಗುಜರಾತಿನ ಅಮ್ರೆಲಿ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಡಿಆರ್‌ಸಿ ಮಹತ್ವದ ಆದೇಶ ನೀಡಿದ್ದು, ಖಾತೆಯಿಂದ ಹಣ ಖಾಲಿಯಾಗುವಲ್ಲಿ ಬ್ಯಾಂಕಿನಿಂದ ಯಾವುದೇ ತಪ್ಪು ಆಗಿದ್ದರೆ ಅದಕ್ಕೆ ಬ್ಯಾಂಕ್‌ ಹೊಣೆಗಾರನಾಗುವುದಿಲ್ಲ ಎಂದು … Continued