24 ಗಂಟೆಗಳಲ್ಲಿ ಭಾರತದ ಸರಕುಗಳ ಮೇಲೆ ಮತ್ತೆ ಸುಂಕ ಹೆಚ್ಚಳದ ಬೆದರಿಕೆ ಹಾಕಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ನವದೆಹಲಿ : ಭಾರತವು ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರತೀಯ ಆಮದುಗಳ ಮೇಲೆ ವಿಧಿಸಲಾಗುವ ಸುಂಕವನ್ನು “ಬಹಳ ಗಣನೀಯವಾಗಿ” ಹೆಚ್ಚಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಬೆದರಿಕೆ ಹಾಕಿದ್ದಾರೆ. “ಭಾರತವು ಉತ್ತಮ ವ್ಯಾಪಾರ ಪಾಲುದಾರನಲ್ಲ, ಏಕೆಂದರೆ ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ, ಆದರೆ ನಾವು ಅವರೊಂದಿಗೆ … Continued

ಪ್ರವಾಹದ ಭೀಕರತೆ ವೀಡಿಯೊ..| ಮೇಘಸ್ಫೋಟಕ್ಕೆ ಗಂಗೋತ್ರಿ ಬಳಿ ಮನೆಗಳನ್ನೇ ಆಪೋಶನ ಮಾಡಿದ ಕೆರಳಿದ ನೀರು…! 5 ಸಾವು, ಅನೇಕ ಜನ ಕಾಣೆ

ಮಂಗಳವಾರ ಮಧ್ಯಾಹ್ನ ಉತ್ತರಾಖಂಡದ ಒಂದು ಹಳ್ಳಿಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿ ದಿಢೀರ್ ಪ್ರವಾಹ ಉಂಟಾಗಿ ಮನೆಗಳು ಸೇರಿದಂತೆ ಎಲ್ಲವೂ ನೆಲಸಮವಾಗಿದೆ ಎಂದು ವರದಿಯಾಗಿದೆ. ಪ್ರವಾಹದ ಭಯಾನಕತೆಯನ್ನು ಸೆರೆಹಿಡಿದ ಆತಂಕಕಾರಿ ವೀಡಿಯೊ ಹೊರಹೊಮ್ಮಿದೆ. ದಿಢೀರ್ ಪ್ರವಾಹವು ಜನರು ಸುರಕ್ಷಿತ ಸ್ಥಳಕ್ಕೆ ಓಡಿಹೋಗುತ್ತಿರುವ   ದೃಶ್ಯಗಳು ತೋರಿಸಿವೆ, ರಸ್ತೆಯಲ್ಲಿದ್ದ ಮನೆಗಳು ಸೇರಿದಂತೆ ಎಲ್ಲವನ್ನೂ ಕೊಚ್ಚಿ ಹೋಗಿವೆ. ಉತ್ತರಾಖಂಡದ ಗಂಗೋತ್ರಿಗೆ ಹೋಗುವ … Continued

ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ಮುಷ್ಕರ ಮುಂದೂಡಿಕೆ; ರಸ್ತೆಗೆ ಇಳಿದ ಬಸ್‌ ಗಳು

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ಸಾರಿಗೆ ನಿಗಮಗಳ ನೌಕರರ ಸಂಘಗಳ ಒಕ್ಕೂಟವು ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಿದೆ. ಇಂದಿನಿಂದ (ಆಗಸ್ಟ್‌ ೫ರಿಂದ) ಕರೆಕೊಟ್ಟಿದ್ದ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ. ತಕ್ಷಣದಿಂದ ಬಸ್‌ಗಳ ಸಂಚಾರ ಆರಂಭಿಸಲು ಸಂಘಟನೆಗಳ ಮುಖಂಡರು ಸೂಚನೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿದ್ದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ … Continued

ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದವರು ಹೇಗೆ ಬಹಿರಂಗವಾಯ್ತು..? ಹತ ಭಯೋತ್ಪಾದಕರ ಬಳಿ ಸಿಕ್ಕ ಯಾವ ದಾಖಲೆಗಳು ಇದನ್ನು ಪುಷ್ಟೀಕರಿಸಿವೆ..?

ನವದೆಹಲಿ: ಜುಲೈ 28 ರಂದು ನಡೆದ ಆಪರೇಷನ್ ಮಹಾದೇವ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಎಂದು ಭದ್ರತಾ ಸಂಸ್ಥೆಗಳು ದೃಢಪಡಿಸಿವೆ. ಬಯೋಮೆಟ್ರಿಕ್ ಪುರಾವೆಗಳು ಮತ್ತು ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆಗಳನ್ನು ಉಲ್ಲೇಖಿಸಿ, ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಭಯೋತ್ಪಾದಕ ಸಂಘಟನೆಯ ಹಿರಿಯ ಸದಸ್ಯರೆಂದು ಗುರುತಿಸಲ್ಪಟ್ಟ ಹತ್ಯೆಗೀಡಾದ ವ್ಯಕ್ತಿಗಳನ್ನು ಶ್ರೀನಗರದ ಹೊರವಲಯದಲ್ಲಿರುವ ‘ಆಪರೇಷನ್ ಮಹಾದೇವ’ ಸಮಯದಲ್ಲಿ ಕೊಲ್ಲಲಾಯಿತು. … Continued

ವೀಡಿಯೊಗಳು…| ಎಸ್ಮಾ ಜಾರಿ, ವೇತನ ಕಡಿತ ಬೆದರಿಕೆಗೂ ಬಗ್ಗದ ಸಾರಿಗೆ ನೌಕರರು : ಮುಷ್ಕರ ಆರಂಭ

ಬೆಂಗಳೂರು: ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರವನ್ನು ಮಂಗಳವಾರ ಬೆಳಗ್ಗೆಯಿಂದ ಆರಂಭಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಪರಿಣಾಮ ರಾಜ್ಯಾದ್ಯಂತ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ ಬಸ್‌ ಸೇವೆ ವ್ಯತ್ಯಯವಾಗಿದ್ದು, ಹಲವಾರು ಪ್ರಯಾಣಿಕರು ಪರದಾಡುವಂತಾಗಿದೆ. ಮುಷ್ಕರವನ್ನು ಒಂದು ದಿನ ತಡೆ ಹಿಡಿಯುವಂತೆ ಹೈಕೋರ್ಟ್ … Continued

“ರಷ್ಯಾದ ಜೊತೆ ತಾವೇ ವ್ಯಾಪಾರ ನಡೆಸಿ ಬೇರೆಯವರಿಗೆ ಬೆದರಿಸುವುದು ಏಕೆ..? ಟ್ರಂಪ್‌ ಸುಂಕ ಬೆದರಿಕೆಗೆ ಭಾರತದ ತೀಕ್ಷ್ಣ ಪ್ರತ್ಯುತ್ತರ

ನವದೆಹಲಿ: ಉಕ್ರೇನ್ ಜೊತೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ವಿರುದ್ಧ ಸುಂಕವನ್ನು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಕೆಲವೇ ಗಂಟೆಗಳ ನಂತರ, ಭಾರತವು ಸೋಮವಾರ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ. ರಷ್ಯಾದಿಂದ ತೈಲ ಆಮದಿನ ಬಗ್ಗೆ ಅಮೆರಿಕ ಮತ್ತು … Continued

ಸಾರಿಗೆ ಸಿಬ್ಬಂದಿ ಮುಷ್ಕರ 1 ದಿನ ಮುಂದೂಡುವಂತೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು : ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರ(ಆಗಸ್ಟ್‌ ೫)ದಿಂದ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಹೈಕೋರ್ಟ್‌ ಒಂದು ದಿನದ ಮಟ್ಟಿಗೆ ಒಂದು ದಿನದ ಮಟ್ಟಿಗೆ ಮುಂದೂಡುವಂತೆ ನಿರ್ದೇಶನ ನೀಡಿದೆ.  ಸೋಮವಾರ ಮುಖ್ಯಮಂತ್ರಿ ಮತ್ತು ಸಾರಿಗೆ ಸಿಬ್ಬಂದಿ … Continued

‘ಚೀನಾ ಭಾರತದ 2 ಸಾವಿರ ಚದರ ಕಿಮೀ ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತು’: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: 2020 ರ ಗಾಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗಿನ ಘರ್ಷಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 4) ತಡೆ ನೀಡಿದೆ. ರಾಹುಲ್‌ ಗಾಂಧಿಗೆ ಮಧ್ಯಂತರ ತಡೆ ನೀಡಲಾಗಿದ್ದರೂ, ವಿಚಾರಣೆಯ ಸಮಯದಲ್ಲಿ, … Continued

ಜಾರ್ಖಂಡದ ಮಾಜಿ ಸಿಎಂ ಶಿಬು ಸೊರೇನ್ ನಿಧನ

ರಾಂಚಿ: ಜಾರ್ಖಂಡದ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಸಂಸ್ಥಾಪಕ ಸಿಬು ಸೊರೇನ್ ಸೋಮವಾರ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪುತ್ರ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಮಾಹಿತಿ ನೀಡಿದ್ದಾರೆ. 81 ವರ್ಷದ ಸಿಬು ಸೊರೇನ್ ನಿಧನವು ಬುಡಕಟ್ಟು ಚಳುವಳಿ ರಾಷ್ಟ್ರೀಯ ಪ್ರಾಮುಖ್ಯತೆಗೆ ಏರಿದ ರಾಜಕೀಯ ಯುಗದ ಅಂತ್ಯವನ್ನು ಸೂಚಿಸುತ್ತದೆ. ಶಿಬು ಸೊರೇನ್‌ ಮೂತ್ರಪಿಂಡ ಸಂಬಂಧಿತ … Continued