ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ : ಪೊಲೀಸರ ಮುಂದೆ ʼಮಾಸ್ಟರ್ ಮೈಂಡ್ʼ ಶರಣಾಗತಿ

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಆರನೇ ಆರೋಪಿ ಗುರುವಾರ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಆರೋಪಿ ಲಲಿತ್ ಝಾ ಸ್ವತಃ ದೆಹಲಿಯ ಕರ್ತವ್ಯ ಮಾರ್ಗವನ್ನು ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ವೇಳೆ ಮಹೇಶ ಎಂಬ ವ್ಯಕ್ತಿ ಈತನ ಜೊತೆಗಿದ್ದ ಎನ್ನಲಾಗಿದೆ. … Continued

ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿ

ನವದೆಹಲಿ : ಭಾರೀ ಭದ್ರತಾ ಲೋಪದ ನಂತರ ಬುಧವಾರ ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಲೋಕಸಭೆಯೊಳಗೆ ನುಗ್ಗಿ ಸಿಕ್ಕಿಬಿದ್ದಿರುವ ಸಾಗರ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ವಿವರವಾಗಿ ಪ್ರಶ್ನಿಸಬೇಕಾಗಿದೆ ಎಂದು ದೆಹಲಿ ಪೊಲೀಸರು … Continued

ಸಂಸತ್ ಭದ್ರತಾ ಲೋಪ: ಇ-ರಿಕ್ಷಾ ಚಾಲಕನಿಂದ ಇಂಜಿನಿಯರ್ ವರೆಗೆ ಆರು ಆರೋಪಿಗಳು ಯಾರು…?

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಅಭೂತಪೂರ್ವ ಭದ್ರತಾ ಉಲ್ಲಂಘನೆಯ ಆರೋಪಿಗಳು ವಿವಿಧ ಶೈಕ್ಷಣಿಕ ಹಿನ್ನೆಲೆಗಳು, ಸಮಾಜದ ವಿವಿಧ ಸ್ತರಗಳಿಂದ ಬಂದವರು ಮತ್ತು ದೇಶದ ವಿವಿಧ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಮೇಲ್ನೋಟಕ್ಕೆ ಆರೋಪಿಗಳಾದ ಸಾಗರ ಶರ್ಮಾ, ನೀಲಂ ಆಜಾದ್, ಮನೋರಂಜನ ಡಿ, ಅಮೋಲ್ ಶಿಂಧೆ, ವಿಕ್ಕಿ ಶರ್ಮಾ ಮತ್ತು ಲಲಿತ್ ಝಾ ನಡುವೆ ಯಾವುದೇ ಸಾಮಾನ್ಯ ಉದ್ದೇಶಗಳಿಲ್ಲ ಎಂದು … Continued

ಲೋಕಸಭೆ-ರಾಜ್ಯಸಭೆ ಸದನದ ಕಲಾಪಕ್ಕೆ ಅಡ್ಡಿ : ವಿಪಕ್ಷಗಳ 15 ಸಂಸದರ ಅಮಾನತು

ನವದೆಹಲಿ : ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆಗಾಗಿ ಒಬ್ಬ ರಾಜ್ಯಸಭೆ ಮತ್ತು 14 ಲೋಕಸಭೆ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ (ಡಿಸೆಂಬರ್ 14) ಹೈ ಡ್ರಾಮಾ ನಡೆಯಿತು. ಲೋಕಸಭೆಯಲ್ಲಿ ಭದ್ರತಾ ಲೋಪದ ನಂತರ ಒಂದು ದಿನದ ನಂತರ – ಉಭಯ ಸದನಗಳಲ್ಲಿ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪತ್ತಾಯಿಸಿ ವಿಪಕ್ಷಗಳ ಸದಸ್ಯರು … Continued

ಮಥುರಾ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾ ಸಂಕೀರ್ಣದ ಸರ್ವೆ ನಡೆಸಲು ಅಲಹಾಬಾದ್ ಹೈಕೋರ್ಟ್ ಅನುಮತಿ

ಪ್ರಯಾಗರಾಜ್‌ : ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ಅಲಹಾಬಾದ್ ಹೈಕೋರ್ಟ್ ಗುರುವಾರ ಮಥುರಾದ ಶಾಹಿ ಈದ್ಗಾ ಸಂಕೀರ್ಣದ ಸರ್ವೆ ನಡೆಸಲು ಅನುಮೋದನೆ ನೀಡಿದೆ. ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಅಲಹಾಬಾದ್ ಹೈಕೋರ್ಟ್ ವಿವಾದಿತ ಶಾಹಿ ಈದ್ಗಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ … Continued

ಸಂಸತ್‌ ಭದ್ರತೆ ಉಲ್ಲಂಘನೆ ಪ್ರಕರಣ: ಘಟನೆ ಹಿಂದೆ 18 ತಿಂಗಳ ಯೋಜನೆ, ʼಭಗತ್ ಸಿಂಗ್ ಫ್ಯಾನ್ ಕ್ಲಬ್ʼ ಎಂಬ ಸಾಮಾನ್ಯ ಸಂಪರ್ಕ

ನವದೆಹಲಿ: ಬುಧವಾರ ಸಂಸತ್ತಿನಲ್ಲಿ ನಡೆದ ಭದ್ರತೆ ಉಲ್ಲಂಘಿಸಿ ಒಳನುಗ್ಗಿದ ಘಟನೆಯಲ್ಲಿ ಭಾಗಿಯಾಗಿದ್ದವರು ಕನಿಷ್ಠ 18 ತಿಂಗಳುಗಳಿಂದ ನಿಖರವಾದ ಯೋಜನೆ ರೂಪಿಸಿದ್ದರು ಮತ್ತು ಆರೋಪಿಗಳ ನಡುವೆ ಹಲವಾರು ಸಭೆಗಳು ನಡೆದಿದ್ದವು ಎಂದು ವರದಿಯೊಂದು ತಿಳಿಸಿದೆ. ಸಂಸತ್ತಿನಲ್ಲಿ ಬುಧವಾರ ಭದ್ರತಾ ಲೋಪದ ಘಟನೆಯಲ್ಲಿ ಭಾಗಿಯಾದವರು ವಿವಿಧ ರಾಜ್ಯಗಳಿಂದ ಬಂದವರು ಆದರೆ ಅವರೆಲ್ಲ ‘ಭಗತ್ ಸಿಂಗ್’ ಎಂಬ ಸಾಮಾಜಿಕ ಮಾಧ್ಯಮ … Continued

ಸಂಸತ್‌ ಭದ್ರತಾ ಲೋಪ ಪ್ರಕರಣ: ಎಂಟು ಸಿಬ್ಬಂದಿ ಅಮಾನತು ಮಾಡಿದ ಲೋಕಸಭೆ ಸಚಿವಾಲಯ

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ಸಂಭವಿಸಿದ ಭಾರಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ ಎಂಟು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ, ಇಬ್ಬರು ವ್ಯಕ್ತಿಗಳು ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಹಾರಿ ಹಳದಿ ಹೊಗೆಯ ಡಬ್ಬಿಗಳನ್ನು ಎಸೆದಿದ್ದರು. ಭದ್ರತಾ ಸಿಬ್ಬಂದಿಯ ಅಮಾನತು ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸಚಿವಾಲಯವು ತೆಗೆದುಕೊಂಡ ಮೊದಲ ಮಹತ್ವದ ಕ್ರಮವನ್ನು ಸೂಚಿಸುತ್ತದೆ. ಭದ್ರತೆಯಲ್ಲಿನ ಅಭೂತಪೂರ್ವ ಲೋಪವು … Continued

ಸಂಸತ್‌ನಲ್ಲಿ ಭದ್ರತಾ ಲೋಪ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪದ ನಡೆದಿದ್ದು, ಘಟನೆ ಸಂಬಂಧ ದೆಹಲಿ ಪೊಲೀಸ್ ವಿಶೇಷ ವಿಭಾಗ ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಘಟನೆಯಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಅವರೆಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ … Continued

ಮೊದಲ ದಿನವೇ ಮಹತ್ವದ ನಿರ್ಧಾರ : ಧಾರ್ಮಿಕ-ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸಿದ ಮಧ್ಯಪ್ರದೇಶದ ಸಿಎಂ

  ಭೋಪಾಲ್‌ : ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ ಯಾದವ್ ಅವರು ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಅನಿಯಂತ್ರಿತ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಿಯಮಿತ ಮತ್ತು ನಿಯಂತ್ರಿತ (ಅನುಮತಿಸಬಹುದಾದ ಡೆಸಿಬಲ್) ಬಳಕೆಗೆ ಯಾವುದೇ ನಿರ್ಬಂಧವಿಲ್ಲ. … Continued

”ಇದು ನಾನಲ್ಲ…”: ಡೀಪ್‌ಫೇಕ್ ಅಪಾಯದ ಬಗ್ಗೆ ಹೇಳಲು ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡ ಜೆರೋಧಾ ಕಂಪನಿಯ ನಿತಿನ್ ಕಾಮತ್ | ವೀಕ್ಷಿಸಿ

ಜೆರೋಧಾ ಕಂಪನಿ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಹಣಕಾಸು ಸೇವಾ ಉದ್ಯಮದಲ್ಲಿ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಹೆಚ್ಚುತ್ತಿರುವ ಬೆದರಿಕೆ ಮತ್ತು ಡೀಪ್‌ಫೇಕ್‌ಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಡಿಜಿಟಲೀಕರಣವು ಸಾಮಾನ್ಯವಾಗುತ್ತಿದ್ದಂತೆ ಗ್ರಾಹಕರ ಗುರುತನ್ನು ಪರಿಶೀಲಿಸಲು ಸಾಧ್ಯವಾಗದ ತೊಂದರೆಯ ಬಗ್ಗೆ ಅವರು ಮಾತನಾಡಿದ್ದಾರೆ. ”ಆದರೆ ಡೀಪ್‌ಫೇಕ್‌ಗಳು … Continued