ಗಾಜಾದಲ್ಲಿ ʼಹಮಾಸ್‌ʼ ನ 500 ಕಿಮೀ ಉದ್ದದ ರಹಸ್ಯ ʼಸುರಂಗ ಜಾಲʼಗಳು… ಭೂ ದಾಳಿ ವೇಳೆ ಇಸ್ರೇಲ್‌ ಸೈನ್ಯದ ಮುಂದಿರುವ ಕಠಿಣ ಸವಾಲು…

ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಭೂ ದಾಳಿಗೆ ಇಸ್ರೇಲ್‌ ಸಜ್ಜಾಗುತ್ತಿರುವಾಗ, ಅವರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಗಾಜಾದ ಅಡಿಯಲ್ಲಿ ಹಮಾಸ್‌ ನಿರ್ಮಾಣ ಮಾಡಿರುವ ವ್ಯಾಪಕ ಸುರಂಗ ಜಾಲ. ಭೂ ಆಕ್ರಮಣದಲ್ಲಿ, ಇಸ್ರೇಲ್ ಅದರ ವೈರಿ ಪ್ರಬಲವಾಗಿರುವ ಭೂಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಬೇಕಾಗುತ್ತದೆ ಎಂದು ಹಲವಾರು ತಜ್ಞರು ಎಚ್ಚರಿಸಿದ್ದಾರೆ. ವ್ಯಾಪಕ ಸುರಂಗಗಳ ಜಾಲವನ್ನು ಹೊಂದಿರುವ ಗಾಜಾದ ಜನನಿಬಿಡ ಪ್ರದೇಶವು ಇಸ್ರೇಲ್‌ನ … Continued

ಸ್ಪೀಕರ್ ನಮ್ಮ ಆದೇಶ ಸೋಲಿಸಲು ಸಾಧ್ಯವಿಲ್ಲ : ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಶುಕ್ರವಾರ (ಅಕ್ಟೋಬರ್ 13) ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಅವರನ್ನು ಬೆಂಬಲಿಸುವ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವಾದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು. ಮಹಾರಾಷ್ಟ್ರದ ಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣವನ್ನು ತುರ್ತಾಗಿ ನಿರ್ಧರಿಸುವಂತೆ ಕೋರಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಶಾಸಕ … Continued

ಮತದಾನದ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳ ತಟಸ್ಥತೆಗೆ ಒತ್ತಾಯಿಸಿ ಫೇಸ್‌ಬುಕ್, ಗೂಗಲ್ ಸಿಇಒಗಳಿಗೆ ಪತ್ರ ಬರೆದ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ

ನವದೆಹಲಿ : ದೇಶದಲ್ಲಿ “ಕೋಮು ದ್ವೇಷಕ್ಕೆ” ಸಹಾಯ ಮಾಡುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪಾತ್ರದ ಕುರಿತು ವಿಪಕ್ಷಗಳ ಮೈತ್ರಿಕೂಟ- ಇಂಡಿಯಾ ಬಣವು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಸಾಮಾಜಿಕ ವೇದಿಕೆಗಳು ʼತಟಸ್ಥತೆʼ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಆಡಳಿತಾರೂಢ … Continued

ʼ ವಿಚ್ಛೇದಿತ ಮಹಿಳೆ ʼ ಕಳಂಕದೊಂದಿಗೆ ಸಾಯಲು ಬಯಸುವುದಿಲ್ಲ’: 82 ವರ್ಷದ ಪತ್ನಿ ಆಶಯವನ್ನು ಗೌರವಿಸಿ ವಿಚ್ಛೇದನದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ : ಕಳೆದ 27 ವರ್ಷಗಳಿಂದ ವೈವಾಹಿಕ ಭಿನ್ನಾಭಿಪ್ರಾಯದಿಂದ ಹೋರಾಡುತ್ತಿದ್ದ ಮತ್ತು ಪತ್ನಿಯ ಭಾವನೆಗಳಿಗೆ ಮಣಿದು ಕಳೆದ ವಿವಾಹವಾಗಿ 60 ವರ್ಷ ಕಳೆದಿದ್ದ ದಂಪತಿಗೆ (87 ವರ್ಷದ ಪತಿ ಮತ್ತು 82 ವರ್ಷದ ಪತ್ನಿ) ವಿಚ್ಛೇದನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೀವನದ ಕೊನೆಯ ಹಂತದಲ್ಲಿ ತನ್ನ ಗಂಡನನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ ಮತ್ತು “ವಿಚ್ಛೇದಿತ” … Continued

13352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಸರ್ಕಾರಕ್ಕೆ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ 13,352 ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಗ್ರೀನ್‌ ಸಿಗ್ನಲ್‌ ನೀಡಿದೆ. ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ 2022ರ ನವೆಂಬರ್‌ 18ರಂದು ಪ್ರಕಟಿಸಿದ್ದ 1:1 ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ … Continued

ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ : ಅತಿದೊಡ್ಡ ಅಂತರದಲ್ಲಿ ಸೋತ ಆಸ್ಟ್ರೇಲಿಯಾ

ಲಕ್ನೋ: ಗುರುವಾರ (ಅಕ್ಟೋಬರ್ 12) ಐಸಿಸಿ ವಿಶ್ವಕಪ್ 2023 ರ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 134 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಮೊದಲ ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಶತಕವು ತಂಡ 311/7 ಬೃಹತ್‌ ಮೊತ್ತ ತಲುಪಲು ಕಾರಣವಾಯಿತು. ವೇಗಿ ಕಗಿಸೊ ರಬಾಡ ಮಾಋಕ … Continued

ಹಮಾಸ್ ನಿಂದ ಹತ್ಯೆಗೀಡಾದ, ಸುಟ್ಟು ಹಾಕಿದ ಶಿಶುಗಳ ಫೋಟೋಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

ಟೆಲ್‌ ಅವೀವ್‌ : ಹಮಾಸ್ ಉಗ್ರರಿಂದ ಹತ್ಯೆಗೀಡಾದ ಮತ್ತು ಸುಟ್ಟ ಶಿಶುಗಳ ಭಯಾನಕ ಚಿತ್ರಗಳನ್ನು ಇಸ್ರೇಲ್ ಗುರುವಾರ ಬಿಡುಗಡೆ ಮಾಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಕೆಲವು ಚಿತ್ರಗಳನ್ನು ತೋರಿಸಿದ್ದಾರೆ. ಕೆಲವು ಚಿತ್ರಗಳು ಶಿಶುಗಳ ಕಪ್ಪು ಮತ್ತು ಸುಟ್ಟ ದೇಹಗಳನ್ನು ತೋರಿಸುತ್ತವೆ. ಶನಿವಾರ ಬೆಳಗ್ಗೆ … Continued

ಆಪರೇಷನ್​ ಅಜಯ​: ಇಸ್ರೇಲ್‌ನಿಂದ ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಂದೇ ತಾಯ್ನಾಡಿಗೆ

ನವದೆಹಲಿ : ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರದಿಂದಾಗಿ ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರಲು ಕೇಂದ್ರ ಸರ್ಕಾರವು ‘ಆಪರೇಷನ್‌ ಅಜಯ’‌ ಆರಂಭಿಸಿದೆ. ಈ ಕಾರ್ಯಾಚರಣೆಯ ಮೊದಲ ಭಾಗವಾಗಿ ಇಂದು ಗುರುವಾರ ರಾತ್ರಿಯೇ ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯದ ಅರಿಂದಮ್‌ ಭಾಗ್ಚಿ ತಿಳಿಸಿದ್ದಾರೆ. 230 ಭಾರತೀಯರು … Continued

‘ಅವರನ್ನು ಭೂಮಿ ಮೇಲಿಂದ ಅಳಿಸಿ ಹಾಕ್ತೇವೆ ‘: ಹಮಾಸ್ ‘ನಾಶ’ ಮಾಡುವ ಪ್ರತಿಜ್ಞೆ ಮಾಡಿದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಟೆಲ್‌ಅವೀವ್‌ : ಬುಧವಾರ ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಹಮಾಸ್ ಕ್ರೌರ್ಯ ಬಹಿರಂಗಗೊಂಡ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಉಗ್ರಗಾಮಿ ಗುಂಪಿನ ಪ್ರತಿಯೊಬ್ಬ ಸದಸ್ಯರನ್ನು “ಸತ್ತ ವ್ಯಕ್ತಿ” ಎಂದು ಕರೆದಿದ್ದಾರೆ ಮತ್ತು “ಹಮಾಸ್ ಹೆಸರನ್ನು ಭೂಮಿಯಿಂದ ಅಳಿಸಿಹಾಕುವುದಾಗಿ” ಪ್ರತಿಜ್ಞೆ ಮಾಡಿದ್ದಾರೆ. “ಹಮಾಸ್ ಐಸಿಸ್ ಆಗಲಿದೆ – ಪ್ರಪಂಚವು ಐಸಿಸ್ ಅನ್ನು ಪುಡಿಮಾಡಿ ಮತ್ತು … Continued

ಬಿಹಾರ ರೈಲು ಅಪಘಾತ: 4 ಸಾವು, 70 ಮಂದಿಗೆ ಗಾಯ

ನವದೆಹಲಿ: ಬಿಹಾರದ ಬಕ್ಸಾರ್‌ನಲ್ಲಿ ಬುಧವಾರ ಸಂಜೆ ದೆಹಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ರಘುನಾಥಪುರ ನಿಲ್ದಾಣದ ಬಳಿ ರೈಲಿನ ಆರು ಬೋಗಿಗಳು ಹಳಿತಪ್ಪಿದ ನಂತರ 70 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈಲು ಹಳಿತಪ್ಪಿ ಮೃತಪಟ್ಟ ಸಂಬಂಧಿಕರಿಗೆ ರೈಲ್ವೆ ಇಲಾಖೆ ಗುರುವಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ … Continued