ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲು

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಮುಖಂಡ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ದೆಹಲಿ ಪೊಲೀಸರು ಗುರುವಾರ (ಡಿ. 19) ಎಫ್‌ಐಆರ್‌ ದಾಖಲಿಸಿದ್ದಾರೆ. ಸಂಸತ್ತಿನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ನಾಯಕರು ಗಾಯಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು. ಸೆಕ್ಷನ್ 117 (ಸ್ವಯಂ ಪ್ರೇರಿತವಾಗಿ ತೀವ್ರ ಗಾಯ … Continued

ದೂರು-ಪ್ರತಿದೂರು: ಸಂಸತ್ತಿ ಹೊರಗೆ ‘ಹಲ್ಲೆ’ ವಿವಾದ ತೀವ್ರ ; ಪೊಲೀಸ್‌ ಠಾಣೆ ಕದ ತಟ್ಟಿದ ಬಿಜೆಪಿ, ಕಾಂಗ್ರೆಸ್…

ನವದೆಹಲಿ: ಸಂಸತ್ತಿನ ಹೊರಗೆ ಆಪಾದಿತ ಘರ್ಷಣೆಯ ನಂತರಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪರಸ್ಪರರ ಮೇಲೆ ಹಲ್ಲೆ ಮತ್ತು ದುರ್ನಡತೆಯ ಆರೋಪದ ಮೇಲೆ ಪೊಲೀಸ್ ದೂರುಗಳನ್ನು ದಾಖಲಿಸಿವೆ. ಮಂಗಳವಾರ ಸಂಸತ್ತಿನಲ್ಲಿ ಅಮಿತ್ ಶಾ ತಮ್ಮ ಭಾಷಣದಲ್ಲಿ ಡಾ.ಅಂಬೇಡ್ಕರ ಕುರಿತಾದ ಹೇಳಿಕೆಯು ಅವರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ವಿಪಕ್ಷಗಳ ಪ್ರತಿಭಟನೆ ಭುಗಿಲೆದ್ದಿತು. ಅವರ ಹೇಳಿಕೆಗಳು ಕಾಂಗ್ರೆಸ್ ಸೇರಿದಂತೆ … Continued

ಆಕ್ಷೇಪಾರ್ಹ ಪದ ಬಳಕೆ ಆರೋಪ: ಸಿ.ಟಿ. ರವಿ ಬಂಧನ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿ.ಟಿ.ರವಿ ಅವರು … Continued

ಅಮಿತ್ ಶಾ ಹೇಳಿಕೆಯಿಂದ ಕೋಲಾಹಲ | ಸಂಸತ್‌ ಬಳಿ ಬಿಜೆಪಿ-ಇಂಡಿಯಾ ಪ್ರತಿಭಟನೆ ; ಬಿಜೆಪಿ ಸಂಸದರಿಗೆ ಗಾಯ; ರಾಹುಲ್‌ ಗಾಂಧಿ ತಳ್ಳಿರುವ ಆರೋಪ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ರಾಜ್ಯಸಭೆಯಲ್ಲಿ ಮಾತನಾಡುವಾಗ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ (BR Ambedkar) ಅವರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿ ಎರಡು ದಿನಗಳಿಂದ ಪ್ರತಿಭಟನೆಗಳು ನಡೆಸುತ್ತಿವೆ. ಇಂದು, ಗುರುವಾರ (ಡಿ.19) ಕೂಡ ಸಂಸತ್ ಭವನದ ಎದುರು ಅಮಿತ್ ಶಾ … Continued

ಇವಿಎಂ ಹೇಗೆ ತಿರುಚಬಹುದು ಎಂಬುದನ್ನು ತೋರಿಸಿ : ಒಮರ್‌ ಅಬ್ದುಲ್ಲಾ ನಂತರ ಕಾಂಗ್ರೆಸ್‌ ನಿಲುವು ಪ್ರಶ್ನಿಸಿದ ಟಿಎಂಸಿ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ಕಾಂಗ್ರೆಸ್ ನೇತೃತ್ವದ ಆರೋಪವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕಸದ ಬುಟ್ಟಿಗೆ ಹಾಕಿರುವ ಬೆನ್ನಲ್ಲೇ ಮತ್ತೊಂದು ಪ್ರಮುಖ ವಿಪಕ್ಷವು ಇವಿಎಂ ಸುತ್ತಲಿನ ಕಾಂಗ್ರೆಸ್‌ ಪ್ರಶ್ನೆಗಳನ್ನು ತಳ್ಳಿಹಾಕಿದೆ. ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚುವ ಬಗ್ಗೆ ಯಾವುದೇ ಪುರಾವೆ ಇದ್ದರೆ ಅದನ್ನು ಚುನಾವಣಾ ಆಯೋಗಕ್ಕೆ ತೋರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ … Continued

“ಒಂದೊಮ್ಮೆ ಪ್ರಣವ್ ಮುಖರ್ಜಿ ಪ್ರಧಾನಿಯಾಗಿದ್ದರೆ…”: ಕಾಂಗ್ರೆಸ್ 2014ರ ಹೀನಾಯ ಸೋಲಿನ ಬಗ್ಗೆ ಹಿರಿಯ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ : ಯುಪಿಎ-2 ಸರ್ಕಾರದ ಅವಧಿಯಲ್ಲಿ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಮತ್ತು ಡಾ. ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರೆ, 2014ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವೇ ಬೇರೆಯಾಗುತ್ತಿತ್ತು ಮತ್ತು ಕಾಂಗ್ರೆಸ್‌ ಅಷ್ಟು ಹೀನಾಯ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಮಣಿಶಂಕರ ಅಯ್ಯರ್ ಅವರು, … Continued

75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್…ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂವಿಧಾನ ರಚನೆಕಾರರು ಭಾರತದ ವಿವಿಧತೆಯಲ್ಲಿ ಏಕತೆಯ ಬಲವನ್ನು ಆಚರಿಸಿದರೆ, ಕೆಲವರು ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು ಎಂದು ಹೇಳಿದ್ದಾರೆ. “ಸಂವಿಧಾನವನ್ನು ಅಳವಡಿಸಿಕೊಳ್ಳುವ ಬದಲು, ಅವರು (ಕಾಂಗ್ರೆಸ್) ಅಪಶ್ರುತಿ ಮತ್ತು ನಕಾರಾತ್ಮಕತೆಯ ಬೀಜಗಳನ್ನು ಬಿತ್ತಿದ್ದಾರೆ” ಎಂದು ಸಂವಿಧಾನದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಲೋಕಸಭೆಯಲ್ಲಿ … Continued

2024ರಲ್ಲಿ ಗೂಗಲ್‌ ನಲ್ಲಿ ಭಾರತೀಯರು ಅತಿಹೆಚ್ಚು ಸರ್ಚ್‌ ಮಾಡಿದ ವಿಷಯಗಳೇನು ಗೊತ್ತೆ..? ಇಲ್ಲಿದೆ ಪಟ್ಟಿ

ನವದೆಹಲಿ: 2024 ರ ವರ್ಷ ಮುಗಿದು ೨೦೨೫ಕ್ಕೆ ಕಾಲಿಡುವ ಹಂತದಲ್ಲಿದ್ದೇವೆ. ಈ ವರ್ಷ ಜನರು ಯಾವ ಯಾವ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಲು ಇಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಗೂಗಲ್ (Google) ಸರ್ಚ್ ಇಂಜಿನ್ ವಾರ್ಷಿಕವಾಗಿ ತನ್ನ ವಿಶೇಷ “ಇಯರ್ ಇನ್ ಸರ್ಚ್” ವರದಿಯಲ್ಲಿ ವಿವಿಧ ಥೀಮ್‌ಗಳಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಮಾಡುತ್ತದೆ. ಬಿಡುಗಡೆಯಾದ 2024 ರ … Continued

ಇಂಡಿಯಾ ಬಣ ಮುನ್ನಡೆಸುವ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ಎಚ್ಚರಿಕೆಯ ಪ್ರತಿಕ್ರಿಯೆ ; ಸಮಾಜವಾದಿ ಪಕ್ಷ, ಎನ್‌ಸಿಪಿ ಬೆಂಬಲ

 ನವದೆಹಲಿ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಮುನ್ನಡೆಸುವ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳು ಒಕ್ಕೂಟದೊಳಗಿನ ಮಿತ್ರಪಕ್ಷಗಳಲ್ಲಿ ಪರ-ವಿರುದ್ಧ ಪ್ರತಿಕ್ರಿಯೆಗಳಿಂದಾಗಿ ಕೋಲಾಹಲಕ್ಕೆ ಕಾರಣವಾಗಿವೆ. ಶುಕ್ರವಾರ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಮಮತಾ ಬ್ಯಾನರ್ಜಿ, ʼಇಂಡಿಯಾʼ ಮೈತ್ರಿಕೂಟದ ನಾಯಕತ್ವ ಮತ್ತು ಸಮನ್ವಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ನಾನು ಇಂಡಿಯಾ ಮೈತ್ರಿಕೂಟವನ್ನು ರಚಿಸಿದ್ದೇನೆ, … Continued

ಮಹಾರಾಷ್ಟ್ರ ವಿಧಾನಸಭೆ ಪ್ರಮಾಣ ವಚನ ಸಮಾರಂಭಕ್ಕೆ ಗೈರಾದ ವಿಪಕ್ಷಗಳ ಶಾಸಕರು….

ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನೂತನ ಚುನಾಯಿತ ಶಾಸಕರು ಇಂದು, ಶನಿವಾರ(ಡಿಸೆಂಬರ್‌ 7) ನಡೆದ ಮಹಾರಾಷ್ಟ್ರ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಾಕ್‌ಔಟ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ದುರ್ಬಳಕೆಯಿಂದ ಆಡಳಿತಾರೂಢ ಮಹಾಯುತಿ ಒಕ್ಕೂಟದ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದಾರೆ. ಆದಾಗ್ಯೂ, ವಿಪಕ್ಷಗಳ … Continued