ಬಿಜೆಪಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ಯಾರು. ? ಇಲ್ಲಿವೆ ಪ್ರಮುಖ ಹೆಸರುಗಳು…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ವು 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ದೆಹಲಿಯ ವಿದಾನಸಭೆಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಧಿಕಾರದ ʼಬರʼವನ್ನು ನೀಗಿಸಿದೆ. ಬಿಜೆಪಿಯು ಚುನಾವಣೆ ವೇಳೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. … Continued

ದೆಹಲಿ ವಿಧಾನಸಭೆ ಚುನಾವಣೆ: ಸೋತುಹೋದ ಎಎಪಿ ಘಟನಾಘಟಿ ನಾಯಕರು ಇವರು…

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ್ದು, ಒಟ್ಟು 70 ವಿದಾನಸಭಾ ಕ್ಷೇತ್ರಗಳಲ್ಲಿ 48ರಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಜಯಗಳಿಸಿದ್ದು ಎಎಪಿ ಈ ಬಾರಿ ಕೇವಲ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮುಗ್ಗರಿಸಿದೆ. ಅರವಿಂದ ಕೇಜ್ರಿವಾಲ್‌ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಸೋತುಹೋಗಿದ್ದಾರೆ. ಮನೀಶ ಸಿಸೋಡಿಯಾ ಮತ್ತು ಪ್ರಮುಖ ಸಚಿವ ಸೌರಭ … Continued

ದೆಹಲಿ ವಿಧಾನಸಭೆ ಚುನಾವಣೆ ; ಆಮ್‌ ಆದ್ಮಿ ಪಾರ್ಟಿಗೆ ಆಘಾತ ; ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಮಾಜಿ ಡಿಸಿಎಂ ಸಿಸೋಡಿಯಾಗೆ ಸೋಲು

 ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಅವರು ಸೋಲನುಭವಿಸಿದ್ದಾರೆ. ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಪ್ರವರ್ಧಮಾನಕ್ಕೆ ಏರಿದ ಅರವಿಂದ ಕೇಜ್ರಿವಾಲ್‌ ಅವರು ಮಾಜಿ ಮುಖ್ಯಮಂತ್ರಿಯ ಸಾಹಿಬ್‌ … Continued

ದೆಹಲಿ ಚುನಾವಣೆ ಫಲಿತಾಂಶ | ಆರಂಭಿಕ ಟ್ರೆಂಡ್‌ ; ಭರ್ಜರಿ ಗೆಲುವಿನತ್ತ ಬಿಜೆಪಿ ದಾಪುಗಾಲು

ನವದೆಹಲಿ : ದೆಹಲಿ ವಿದಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್‌ ಪ್ರಕಾರ ಬಿಜೆಪಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ. ಇದೇ ಟ್ರೆಂಡ್‌ ಮುಂದುವರಿದರೆ ಒಂದು ದಶಕದಿಂದ ಪ್ರಾಬಲ್ಯ ಹೊಂದಿದ್ದ ದೆಹಲಿಯ ರಾಜಕೀಯ ಭೂದೃಶ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ. ಮತ ಎಣಿಕೆ ನಡೆಯುತ್ತಿದ್ದು, 27 ವರ್ಷಗಳ ನಂತರ ಬಿಜೆಪಿ … Continued

‘ಆಪರೇಷನ್‌ ಕಮಲ’ ಆರೋಪಕ್ಕೆ ಪುರಾವೆ ಕೊಡಿ ; ಅರವಿಂದ ಕೇಜ್ರಿವಾಲಗೆ ಎಸಿಬಿ ನೋಟಿಸ್

ನವದೆಹಲಿ: ಬಿಜೆಪಿ ವಿರುದ್ಧ ಮಾಡಿದ ಆಮಿಷದ ಆರೋಪಕ್ಕೆ ಪುರಾವೆಗಳನ್ನು ನೀಡುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಿದೆ. ಕೇಜ್ರಿವಾಲ್ ಅವರ “ಆಪರೇಷನ್ ಕಮಲ” ಕ್ಕೆ ಸಂಬಂಧಿಸಿದ ಆರೋಪಗಳಿಗೆ ಸಂಬಂಧಿಸಿದೆ, ಇದರಲ್ಲಿ ಅವರು ಮತ್ತು ಇತರ ಎಎಪಿ ನಾಯಕರು ಬಿಜೆಪಿಯು ತಮ್ಮ ಪಕ್ಷದ … Continued

ತಮ್ಮ ಪಕ್ಷ ಸೇರುವಂತೆ ಎಎಪಿ ನಾಯಕರಿಗೆ 15 ಕೋಟಿ ರೂ. ಆಫರ್‌ ನೀಡಿದ ಬಿಜೆಪಿ ; ಕೇಜ್ರಿವಾಲ್‌ ಆರೋಪ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಬಿಜೆಪಿಯು ತನ್ನ ಪಕ್ಷದ ನಾಯಕರಿಗೆ ಹಣದ ಆಫರ್‌ ನೀಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ತನ್ನ 16 ಅಭ್ಯರ್ಥಿಗಳನ್ನು ಕರೆದು ಬಿಜೆಪಿಗೆ ಸೇರಲು ತಲಾ 15 ಕೋಟಿ ರೂ.ಗಳ ಆಫರ್‌ ನೀಡಿದೆ ಎಂದು ದೆಹಲಿ … Continued

ಚೋಲಿ ಕೆ ಪೀಚೆ.. ಸಿನೆಮಾ ಹಾಡಿಗೆ ಡ್ಯಾನ್ಸ್‌ ಮಾಡಿದ ಮದುಮಗ ; ಮದುವೆಯನ್ನೇ ರದ್ದುಗೊಳಿಸಿದ ಮದುಮಗಳ ಅಪ್ಪ…!

ನವದೆಹಲಿ: ದೆಹಲಿಯ ಮದುಮಗ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ ನಂತರ ಮದುವೆಯೇ ರದ್ದುಗೊಂಡ ವಿದ್ಯಮಾನ ನಡೆದಿದೆ. ಮದುಮಗ ಚೋಲಿ ಕೆ ಪೀಚೆ ಕ್ಯಾ ಹೈ ಎಂಮ ಹಾಡಿಗೆ ವರ ನೃತ್ಯ ಮಾಡಿದ್ದು ವಧುವಿನ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ…! ಮದುಮಗ ಮೆರವಣಿಗೆಯಲ್ಲಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ … Continued

ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಅರವಿಂದ ಕೇಜ್ರಿವಾಲ ಆಮ್‌ ಆದ್ಮಿ ಪಕ್ಷಕ್ಕೆ 7 ಶಾಸಕರು ರಾಜೀನಾಮೆ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಐದು ದಿನಗಳ ಮೊದಲು ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಶಾಸಕರಾದ ನರೇಶ ಯಾದವ್ (ಮೆಹ್ರೌಲಿ), ರೋಹಿತಕುಮಾರ (ತ್ರಿಲೋಕಪುರಿ), ರಾಜೇಶ ರಿಷಿ (ಜನಕಪುರಿ), ಮದನಲಾಲ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ … Continued

ಇಂದು ರಾತ್ರಿ 8 ಗಂಟೆಯೊಳಗೆ ʼಯಮುನಾ ವಿಷ ಮಿಶ್ರಣʼದ ಬಗ್ಗೆ ಪುರಾವೆ ನೀಡಿ: ಕೇಜ್ರಿವಾಲಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನೀರನ್ನು ವಿಷಪೂರಿತಗೊಳಿಸಿದೆ ಎಂಬ ಎಂದು ಗಂಭೀರ ಆರೋಪ ಮಾಡಿದ್ದು, ಈ ಆರೋಪಕ್ಕೆ ಪುರಾವೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಬಿಜೆಪಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯೊಳಗೆ ಸಾಕ್ಷ್ಯಾಧಾರಗಳನ್ನು ಪ್ರಸ್ತುಪಡಿಸುವಂತೆ ಸೂಚಿಸಿರುವ ಚುನಾವಣಾ ಆಯೋಗವು, ಇದು … Continued

ವೀಡಿಯೊ..| ಹಿಂದಿ ಸಿನೆಮಾದ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ವಾದ್ಯ ಸಮೇತ ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾದ ಅಧಿಕಾರಿಗಳ ನಿಯೋಗ…!

ನವದೆಹಲಿ: ಇಂದು (ಜನವರಿ 26) ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆದಿದೆ. ಈ ಬಾರಿ ಗಣರಾಜ್ಯೋತ್ಸವ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋ ಸುಬಿಯಂತೋ(Prabowo Subianto) ಆಗಮಿಸಿದ್ದಾರೆ. ಪ್ರಬೋ ಸುಬಿಯಂತೋ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, … Continued