ಕುಮಟಾ : ಖ್ಯಾತ ವೈದ್ಯ ಡಾ.ಅನಿಲ ಹೆಗಡೆ ನಿಧನ ; ಕಣ್ಣುಗಳ ದಾನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯವರಾಗಿದ್ದ ಖ್ಯಾತ ವೈದ್ಯ ಡಾ.ಅನಿಲ ಹೆಗಡೆ (76) ಶನಿವಾರ ನಿಧನರಾಗಿದ್ದಾರೆ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರು ಪತ್ನಿ, ಭವಾನಿ, ಪುತ್ರರಾದ ಇಂಜಿಯರ್ ಆದ ವಿಜಯ  ಹಾಗೂ  ವೈದ್ಯರಾದ ಡಾ.ವಿಕ್ರಮ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅತ್ಯಂತ ಪ್ರತಿಭಾನ್ವಿತರಾಗಿದ್ದ ಡಾ. ಅನಿಲ ಹೆಗಡೆಯವರು … Continued

ಬಳ್ಳಾರಿ | ಬೆಳ್ಳಂಬೆಳಿಗ್ಗೆ ಜಿಲ್ಲಾ ಆಸ್ಪತ್ರೆ ಮಕ್ಕಳ ವೈದ್ಯರ ಕಿಡ್ನಾಪ್: 3 ಕೋಟಿ ರೂ. ಹಣದ ಬೇಡಿಕೆ

ಬಳ್ಳಾರಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ ಅವರನ್ನು ಅಪಹರಿಸಲಾಗಿದೆ ಎಂದುವರದಿಯಾಗಿದೆ. ನಗರದ ಸತ್ಯನಾರಾಯಣ ಪೇಟೆಯಲ್ಲಿನ ಶನೈಶ್ವರ ದೇವಸ್ಥಾನದ ಬಳಿ ಶನಿವಾರ ಮುಂಜಾನೆ ಅವರು ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿದ್ದು, ಅಪಹಾರಣಕಾರರು ಮೂರು ಕೋಟಿ ರೂ.ಗಳ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ವೈದ್ಯರ ಬಾಯಿಮುಚ್ಚಿ … Continued

ಆರ್‌ ಜಿ ಕರ್‌ ಕಾಲೇಜ್‌ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಸಂಜಯ ರಾಯಗೆ ಜೀವಾವಧಿ ಶಿಕ್ಷೆ

ಕೊಲ್ಕತ್ತಾ: ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಕೊಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಪ್ರಮುಖ ಆರೋಪಿ ಸಂಜಯ ರಾಯ್‌ಗೆ ಕೊಲ್ಕತ್ತಾದ ವಿಚಾರಣಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗೆ ಮರಣದಂಡನೆ ವಿಧಿಸಲು ಕೋರಿದ್ದ ಪ್ರಾಸಿಕ್ಯೂಷನ್‌ನ ಮನವಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ … Continued

ವೀಡಿಯೊ..| ವೈದ್ಯರಿಗೆ ಅನೇಕ ಬಾರಿ ಇರಿದ ನಂತರ ಚಾಕು ಎಸೆದು ಏನೂ ನಡೆದೇ ಇಲ್ಲ ಎಂಬಂತೆ ನಡೆದುಕೊಂಡು ಹೋದ ಆರೋಪಿ ; ಥಳಿಸಿದ ಸಿಬ್ಬಂದಿ

ಚೆನ್ನೈ: ಚೆನ್ನೈನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರಿಗೆ ವ್ಯಕ್ತಿಯೊಬ್ಬ ಅನೇಕ ಬಾರಿ ಚಾಕುವಿನಿಂದ ಇರಿದಿದ್ದು, ನಂತರ ಆತ ಯಾವುದೇ ಅಂಜಿಕೆಯಿಲ್ಲದೆ ಜನರ ಮುಂದೆಯೇ ಚಾಕುವನ್ನು ಎಸೆದು ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಜನರು ಎಚ್ಚರಿಸಿದ ನಂತರ ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ, ನಂತರ ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾರೆ. ವೈದ್ಯರಿಗೆ ಚಾಕುವಿನಿಂದ ಇರಿದು ಆರೋಪಿ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಹೊರಬಿದ್ದಿದ್ದು, ಆರೋಪಿಯನ್ನು … Continued

ವೀಡಿಯೊ…| ಚಿಕ್ಕಮಗಳೂರು : ಕರ್ತವ್ಯ ನಿರತ ವೈದ್ಯರ ಮೇಲೆ ಚಪ್ಪಲಿ ಎಸೆದ ಮಹಿಳೆ…!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದ್ದು,  ಭಾರೀ ಆಕ್ರೋಶ ವ್ಯಕ್ತವಾಗಿದೆ. ಕರ್ತವ್ಯದಲ್ಲಿದ್ದ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬಳು ಮೊದಲು ಚಪ್ಪಲಿ ಎಸೆದಿದ್ದಾಳೆ. ನಂತರ ಮಹಿಳೆಯೊಂದಿಗಿನ ಗುಂಪೊಂದು ವೈದ್ಯರನ್ನು ಕರ್ತವ್ಯ ನಿರ್ವಹಿಸಲು ತೊಂದರೆ ಪಡಿಸಿ ಅವರ ಅಂಗಿಯ ಕಾಲರ್‌ ಅನ್ನು ಹಿಡುದು ಎಳೆದಾಡಿದೆ ಎಂದು ವರದಿಯಾಗಿದೆ. ಈ ವೀಡಿಯೊ ವೈರಲ್‌ ಆಗಿದ್ದು, … Continued

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಹತ್ಯೆ : ರಾತ್ರಿ ಡ್ಯೂಟಿಗೆ ಹೋಗುವ ಮೊದಲು ಕೊನೆಯದಾಗಿ ಆಕೆ ಡೈರಿಯಲ್ಲಿ ಏನು ಬರೆದಿದ್ದರು ಎಂದು ಹೇಳಿದ ತಂದೆ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಡ್ಯೂಟಿಯಲ್ಲಿದ್ದಾಗ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯ ವಿದ್ಯಾರ್ಥಿನಿ ತನ್ನ ವೈಯಕ್ತಿಕ ಡೈರಿಯಲ್ಲಿ ಕೊನೆಯದಾಗಿ ಏನು ಬರೆದಿದ್ದಾರೆ ಎಂಬುದನ್ನು ಆಕೆಯ ತಂದೆ ಬಹಿರಂಗಪಡಿಸಿದ್ದಾರೆ. ಭಯಾನಕ ಘಟನೆಯ ದಿನ ರಾತ್ರಿ ಪಾಳಿಗೆ ಹೊರಡುವ ಮೊದಲು ವೈಯಕ್ತಿಕ ಡೈರಿಯಲ್ಲಿ ತನ್ನ ಮಗಳು ತನ್ನ ಜೀವನದಲ್ಲಿ ತಾನು … Continued

ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರಿನ ಮತಗಟ್ಟೆಯಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಮಹಿಳೆಯೊಬ್ಬರ ಜೀವ ಉಳಿದಿದೆ. ಬೆಂಗಳೂರಿನಲ್ಲಿ ಮತದಾನ ಮಾಡಲು ಬಂದಾಗ ಹೃದಯಾಘಾತದಿಂದ ಕುಸಿದುಬಿದ್ದ ಮಹಿಳೆಗೆ ತ್ವರಿತಗತಿಯಲ್ಲಿ ವೈದ್ಯರು ಸ್ಪಂದಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಜೆ.ಪಿ.ನಗರ 8ನೇ ಹಂತದ ಜಂಬೂಸವಾರಿ ದಿನ್ನೆಯಲ್ಲಿ ಮತದಾನ ಮಾಡಲು ಮಹಿಳೆ ಆಗಮಿಸಿದ್ದರು. ವೈದ್ಯರು … Continued

ಚಿತ್ರದುರ್ಗ: ಆಪರೇಷನ್ ಥಿಯೇಟರ್​ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿದ್ದ ವೈದ್ಯ ಸೇವೆಯಿಂದ ವಜಾ

ಚಿತ್ರದುರ್ಗ: ಆಪರೇಷನ್ ಥಿಯೇಟರ್​ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ (Pre wedding Shoot) ಮಾಡಿಕೊಂಡಿದ್ದ ವೈದ್ಯನನ್ನು ಸೇವೆಯಿಂದ ವಜಾಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ವೈದ್ಯ ಡಾ.ಅಭಿಷೇಕ ಅವರು ಭರಮಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಪ್ರಿ ವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದು, ಈ ವೀಡಿಯೊ ವೈರಲ್ ಆಗಿತ್ತು. ಸುದ್ದಿ ವೈರಲ್‌ ಆದ ನಂತರ ಸರ್ಕಾರಿ ಆಸ್ಪತ್ರೆಯ ಆಪರೇಷನ್ … Continued

ಕುಶಾಲನಗರ: ನಿಂತಿದ್ದ ಕಾರಿನಲ್ಲಿ ವೈದ್ಯ ಶವವಾಗಿ ಪತ್ತೆ

ಮಡಿಕೇರಿ : ವೈದ್ಯರೊಬ್ಬರ ಶವ ಕುಶಾಲನಗರದ ಆನೆಕಾಡಿನ ಕಾರಿನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ವೈದ್ಯನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ (47) ಮೃತಪಟ್ಟ ವೈದ್ಯರು ಎಂದು ಗುರುತಿಸಲಾಗಿದೆ. ಇವರ ಹೆಸರು ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಭ್ರೂಣ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು … Continued

ಕ್ಲಿನಿಕ್ ಬಾಗಿಲು ತೆರೆಯಲು ತಡವಾಗಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಗುಂಪು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ವೈದ್ಯರು ಕ್ಲಿನಿಕ್‌ಗೆ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಜನರ ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ ವೈದ್ಯರನ್ನು ಗುಂಪೊಂದು ಚೆನ್ನಾಗಿ ಥಳಿಸಿದೆ. ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಮಾಲೆಗಾಂವ್ ನ ಸಂಗಾವಿಯಲ್ಲಿ ಆಯುರ್ವೇದ ವೈದ್ಯರು ತಡವಾಗಿ ಕ್ಲಿನಿಕ್ ಬಾಗಿಲು ತೆರೆದಿದ್ದಾರೆ. ಕ್ಲಿನಿಕ್ ಬಾಗಿಲನ್ನು ತಡವಾಗಿ ತೆರೆದಿದ್ದರಿಂದ ನಮ್ಮನ್ನು … Continued