ಕುಡಿದ ಅಮಲಿನಲ್ಲಿ ಮನೆಗೆ ಬೆಂಕಿ: 6 ಜನರು ಸಜೀವ ದಹನ

ಕೊಡಗು : ಊಹಿಸಲೂ ಸಾಧ್ಯವಾಗದ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಪಾನಮತ್ತ ವ್ಯಕ್ತಿಯೊಬ್ಬ ಅಮಲಿನಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಮನೆಯಲ್ಲಿದ್ದಂತ ಒಂದೇ ಕುಟುಂಬದ 6 ಜನರು ಸಜೀವವಾಗಿ ದಹನವಾದ ಘಟನೆ ಕೊಡಗಿನ ಕಾನೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕಾನೂರು ಗ್ರಾಮದಲ್ಲಿ ಎರವರ ಬೋಜ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ಎರವರ ಮಂಜ ಎಂಬವರ … Continued

ಭಾರತದಲ್ಲಿ 90 ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣ, ಸಾವಿನ ಪ್ರಮಾಣದಲ್ಲೂ ಏರಿಕೆ…!!

ನವ ದೆಹಲಿ: ಭಾರತದಲ್ಲಿ ಶುಕ್ರವಾರ ಹೊಸದಾಗಿ 89,129 ಕೊರೊನಾ ಪ್ರಕರಣಗಳು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 714 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 6.58 ಲಕ್ಷಕ್ಕೆ ಏರಿವೆ, ಕನಿಷ್ಠ 1,15,69,241 ಜನರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ. ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಈ ಹಿಂದೆ ಲೆಕ್ಕವಿಲ್ಲದ ಸಾವುಗಳು ಸೇರ್ಪಡೆಯಾಗಿವೆ. … Continued

ಕೋವಿಡ್ ಎರಡನೇ ಅಲೆ ಏಪ್ರಿಲ್ ಮಧ್ಯದಲ್ಲಿ ಗರಿಷ್ಠ, ಮೇ ತಿಂಗಳಲ್ಲಿ ನಾಟಕೀಯ ಕುಸಿತ: ವಿಜ್ಞಾನಿಗಳ ಊಹೆ

ಗಣಿತದ ಮಾದರಿ ಬಳಸಿಕೊಂಡು ವಿಜ್ಞಾನಿಗಳು ದೇಶಾದ್ಯಂತ ಹರಡುತ್ತಿರುವ ಕೊವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಏಪ್ರಿಲ್ ಮಧ್ಯದ ವೇಳೆಗೆ ಗರಿಷ್ಠವಾಗಬಹುದು ಎಂದು ಅಂದಾಜಿಸಿದ್ದಾರೆ. ಇದರ ನಂತರ ಮೇ ಅಂತ್ಯದ ವೇಳೆಗೆ ಸೋಂಕುಗಳು ಕುಸಿತ ಕಾಣಬಹುದು ಎಂದು ಹೇಳಿದ್ದಾರೆ. ಭಾರತದಾದ್ಯಂತ ಕೊವಿಡ್‌-19 ಸೋಂಕುಗಳ ಮೊದಲ ಅಲೆಯ ಸಮಯದಲ್ಲಿ, ಸೂತ್ರ ಎಂಬ ಗಣಿತದ ವಿಧಾನ ಬಳಸಿ ಆಗಸ್ಟ್‌ನಲ್ಲಿ ಸೋಂಕಿನ … Continued

ಮಹಾರಾಷ್ಟ್ರದಲ್ಲಿ 48 ಸಾವಿರದ ಸಮೀಪ ಬಂದ ದೈನಂದಿನ ಕೊರೊನಾ ಪ್ರಕರಣ..!

ಮುಂಬೈ; ಮಹಾರಾಷ್ಟ್ರವು ಶುಕ್ರವಾರ 47827 ಹೊಸ ಕೊವಿಡ್‌ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಗರಿಷ್ಠ ದೈನಂದಿನ ಪ್ರಕರಣವಾಗಿದೆ..! ಹೊಸ ಅಂಕಿ ಅಂಶವು ರಾಜ್ಯದ ಸಕಾರಾತ್ಮಕ ಪ್ರಕರಣಗಳನ್ನು 2904076 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ. ರಾಜ್ಯದಲ್ಲಿ ಶನಿವಾರ 202 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ … Continued

ಹೊಸ ಕೊವಿಡ್‌ ಮಾರ್ಗಸೂಚಿ ಪ್ರಕಟ: ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್, 6 ರಿಂದ 9 ತರಗತಿ ಬಂದ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದೆ. ಏಪ್ರಿಲ್ 20ರ ವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಕೆಲ ಜಿಲ್ಲೆಗಳಲ್ಲಿ ಸಿನಿಮಾ ಹಾಲ್​ಗಳಲ್ಲಿ ಶೇ.50ರಷ್ಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ, 8 ಜಿಲ್ಲೆಗಳಲ್ಲಿ ಬಾರ್, ಪಬ್​, ಕ್ಲಬ್, ರೆಸ್ಟೋರೆಂಟ್​ಗಳನ್ನು ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು … Continued

ಕರ್ನಾಟಕದಲ್ಲಿ ಐದು ಸಾವಿರದ ಸಮೀಪ, ಬೆಂಗಳೂರಲ್ಲಿ ಮೂರೂವರೆ ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಆರ್ಭಟಿಸಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4,991 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ 6 ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 3,509 ಸೇರಿದಂತೆ ರಾಜ್ಯಾಧ್ಯಂತ 4,991 ಜನರಿಗೆ ಕೊರೋನಾ ಸೋಂಕು … Continued

ಏಪ್ರಿಲ್ 4ರ ವರೆಗೆ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಬಿಸಿ ಗಾಳಿ..ಚೆನ್ನೈಗೆ ಅತಿ ಹೆಚ್ಚು ತಾಪದ ಭೀತಿ..!

ಚೆನ್ನೈ: ಚೆನ್ನೈ ಮತ್ತು ಅದರ ನೆರೆಹೊರೆ ಸೇರಿದಂತೆ ತಮಿಳುನಾಡಿನ ಒಟ್ಟು 27 ಜಿಲ್ಲೆಗಳು ಬಿಸಿಗಾಳಿ(ಶಾಖದ ಅಲೆ)ಯಿಂದ ಬಾಧಿತವಾಗಿವೆ. ಹೀಗಾಗಿ ಇಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಶುಕ್ರವಾರ ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ಚೆನ್ನೈನ ಸರಾಸರಿ ತಾಪಮಾನ 34.5 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, … Continued

೨೦೨೪ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಮೋದಿ ವಿರುದ್ಧ ದೀದಿ ಸ್ಪರ್ಧೆ: ಟಿಎಂಸಿ

ಕೋಲ್ಕತ್ತ: ನಂದಿಗ್ರಾಮ ಕ್ಷೇತ್ರದಲ್ಲಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಗೆಲ್ಲುವುದು ಖಚಿತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೀದಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಟಿಎಂಸಿ ತಿಳಿಸಿದೆ. ನಂದಿಗ್ರಾಮದಲ್ಲಿ ಸೋಲುವ ಮಾತೇ ಇಲ್ಲ. ಬೇರೆ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಅವಶ್ಯಕತೆಯಿಲ್ಲ. ಮಮತಾ ಬ್ಯಾನರ್ಜಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸೆಣೆಸಲಿದ್ದು, ಮೋದಿಯವರು ಸುರಕ್ಷಿತ ಕ್ಷೇತ್ರ … Continued

ನನ್ನ ಸಿಎಂ ನಡುವೆ ವೈಯಕ್ತಿಕ ಏನೂ ಇಲ್ಲ, ನಾನು ಪಕ್ಷಕ್ಕೆ ಯಾವತ್ತೂ ಲಾಯಲ್‌, ರಾಜೀನಾಮೆ‌ ಪ್ರಶ್ನೆಯೇ ಇಲ್ಲ: ಈಶ್ವರಪ್ಪ

ಮೈಸೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅನುದಾನ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಸ್ತಕ್ಷೇಪ ವಿರೋಧಿಸಿ ರಾಜ್ಯಪಾಲರಿಗೆ ಹಾಗೂ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದ ಸಚಿವ ಈಶ್ವರಪ್ಪ ಈಗ ಮತ್ತೊಮ್ಮೆ ತಾವು ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಚಾಮುಂಡಿದೇವಿ ದರ್ಶನದ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆ ಗಮನಕ್ಕೆ ತರದೆ ನೇರವಾಗಿ ಕೆಲವು ಶಾಸಕರಿಗೆ ಅನುದಾನ … Continued

ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ..? ಕ್ಯಾಬಿನೆಟ್‌ ಸಚಿವರಿಗೆ ಅಧಿಕಾರ ಇಲ್ಲವೆಂದ್ರೆ ಹೇಗೆ?: ಈಶ್ವರಪ್ಪ ಪರ ಯತ್ನಾಳ್ ಬ್ಯಾಟ್‌ ‌

ವಿಜಯಪುರ: ಸಚಿವ ಈಶ್ವರಪ್ಪನವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪಕ್ಕೆ ಮಹತ್ವ ನೀಡಬೇಕು.ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಶ್ವರಪ್ಪ ಪರ ಬ್ಯಾಟ ಬೀಸಿದ್ದಾರೆ. ವಿಜಯಪುರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು. … Continued