ಕುಮಟಾ ಪಾಲಿಟೆಕ್ನಿಕ್‌ ಕಾಲೇಜ್‌ ಹಿಂಭಾಗದಲ್ಲಿ ಬಾಂಬ್‌ ಮಾದರಿ ವಸ್ತು ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸಂಜೆಯ ವಾಯು ವಿಹಾರಕ್ಕೆ ಬಂದಿರುವ ಕೆಲವು ಜನರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ನೋಡಲು ಬಾಂಬಿಗೆ ಇರುವ ಮಾದರಿಯಲ್ಲಿ … Continued

ಕುಮಟಾ :ಕುಡಿತದ ಅಮಲಿನಲ್ಲಿ ಕತ್ತಿಯಿಂದ ತಂದೆಯನ್ನೇ ಕಡಿದು ಸಾಯಿಸಿದ ಮಗ

ಕುಮಟಾ : ಕುಡಿದ ಅಮಲಿನಲ್ಲಿ ಮಗನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸಂತೆಗುಳಿಯ ಕುಳ್ವೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 31 ವರ್ಷದ ಶ್ರೀಕಾಂತ ರಾಮಚಂದ್ರ ಗೌಡನೇ ಕೊಲೆ ಮಾಡಿದ ಆರೋಪಿ, ಮೃತ ತಂದೆಯನ್ನು ರಾಮಚಂದ್ರ ಕುಪ್ಪು ಗೌಡ (55 ವರ್ಷ) ಎಂದು ಗುರುತಿಸಲಾಗಿದೆ. … Continued

ಗೋಕರ್ಣ: ಈಜಲು ಸಮುದ್ರಕ್ಕೆ ಇಳಿದ ಬೆಂಗಳೂರಿನ ಯುವಕ ನಾಪತ್ತೆ

ಕುಮಟಾ: ಸಮುದ್ರದಲ್ಲಿ ಈಜಲು ಹೋಗಿದ್ದ ಪ್ರವಾಸಿಗನೊಬ್ಬ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ಬೆಂಗಳೂರು ಮೂಲದ ರವಿ ನಂದನ್ (23) ಎಂದು ಗುರುತಿಸಲಾಗಿದೆ. ಆತನ ಪತ್ತೆಗಾಗಿ ಹುಡುಕಾಟ ನಡೆದಿದೆ. ಭಾನುವಾರ ಬೆಂಗಳೂರಿನಿಂದ ಐದು ಜನ ಯುವಕರು ಪ್ರವಾಸಕ್ಕೆಂದು ಗೋಕರ್ಣಕ್ಕೆ … Continued

ಬಾಡ :ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಕುಮಟಾ : ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನವಾಯಿತು. ವಿಜಯ ದಶಮಿ ದಿನವಾದ ಶುಕ್ರವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳ ಮೂಲಕ ನವರಾತ್ರಿ ಉತ್ಸವ ವೈಭವಯುತವಾಗಿ ನಡೆಯಿತು. ಮುಂಜಾನೆ ಪಲ್ಲಕಿ ಉತ್ಸವ ನಡೆಯಿತು. ಶ್ರೀ ಕಾಂಚಿಕಾ ಪರಮೇಶ್ವರಿ ಪಲ್ಲಕಿ ಮೂಲಕ ಭತ್ತದ ಗದ್ದೆಗೆ ಸಾಗಿ … Continued

ಕುಮಟಾ; ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ವಚ್ಛತೆ -ಕರ್ತವ್ಯ ಮಾಸಾಚರಣೆಗೆ ಚಾಲನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಚ್ಛತಾ ಮಾಸಾಚರಣೆಗೆ ಪ್ರಾಚಾರ್ಯ ಡಾ. ಎಸ್.ವಿ.ಶೇಣ್ವಿ ಚಾಲನೆ ಶನಿವಾರ ನೀಡಿದರು ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. .ಮಹಾತ್ಮ ಗಾಂಧೀಜಿ ಮತ್ತು ಲಾಲಬಹುದ್ದೂರ ಶಾಸ್ತ್ರಿಗಳ ಜನ್ಮ ದಿನಾಚರಣೆ ನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಸ್ವಚ್ಚತೆ ಮತ್ತು ಕರ್ತವ್ಯ ಮಾಸಾಚರಣೆಯನ್ನು ವೈಶಿಷ್ಟ್ಯವಾಗಿ ಆಚರಿಸಲು ನಿರ್ದರಿಸಿದ್ದೇವೆ. ಸ್ವತಂತ್ರ ಭಾರತದ ೭೬ ನೇ … Continued

ಶಿರಸಿ-ಕುಮಟಾದಲ್ಲಿ ಇಎಸ್‌ಐ ಡಿಸ್ಪೆನ್ಸರಿ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಹಾಗೂ ಕುಮಟಾದಲ್ಲಿ ಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪತ್ರ ಬರೆದಿದ್ದು, ಶಿರಸಿ ಹಾಗೂ ಕುಮಟಾದಲ್ಲಿಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ … Continued

ಕುಮಟಾ : ಹೊಲನಗದ್ದೆ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆ..!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಸುಮಾರು 3 ಮೀಟರುಗಳಷ್ಟು ಉದ್ದವಿರುವ ಡಾಲ್ಫಿನ್ ಯಾವಕಾರಣದಿಂದ ಮೃತಪಟ್ಟಿದೆ ಎನ್ನುವುದು ತಿಳಿದು ಬಂದಿಲ್ಲ. ಇದು ಗಂಡು ಡಾಲ್ಪಿನ್ ಆಗಿದ್ದು ಕಳೇಬರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತು ಕಂಡು ಬರುತ್ತಿಲ್ಲ. ಮೀನುಗಾರರು ಇದನ್ನು ಹಂದಿ … Continued

ಕುಮಟಾ: ಕಾರು ಪಲ್ಟಿಯಾಗಿ ಮಹಿಳೆ ಸಾವು, ಮೂವರಿಗೆ ಗಾಯ

ಕುಮಟಾ :ರಾಷ್ಟ್ರೀಯ ಹೆದ್ದಾರಿ  66ರಲ್ಲಿ ಮೋಟಾರ್ ಕಾರ ಪಲ್ಟಿ ಯಾಗಿ ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ. ಸೋಮವಾರ ಮಧ್ಯಾಹ್ನ   ವಿಪರೀತ ಸುರಿಯುತ್ತಿರುವ ಮಳೆಯಿಂದ ಕಾರ ಸ್ಕಿಡ್ಡ್ ಆಗಿದೆ ಎನ್ನಲಾಗಿದೆ. ಕಾರು ಮೂರು ಪಲ್ಟಿಯಾಗಿದ್ದರಿಂದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಕಾರಿನಲ್ಲಿ ಇದ್ದ ಮಹಿಳೆ ರಮಾ ಭಟ್ಟ ಎಂಬವರು ಮೃತಪಟ್ಟಿದ್ದು … Continued

ಕುಮಟಾ: ಭತ್ತಕ್ಕೆ ಬೆಂಕಿರೋಗ-ಮಾಹಿತಿಯ ಕೊರತೆ, ಸಂಕಷ್ಟದಲ್ಲಿ ಭತ್ತದ ರೈತ

ಕುಮಟಾ;ಭತ್ತ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಫಸಲು ಬರುವ ಸಂದರ್ಭಲ್ಲಿ ಭತ್ತಕ್ಕೆ ಬೆಂಕಿ ರೋಗ ಮತ್ತು ಕಾಡು ಪ್ರಾಣಿಗಳ ಉಪಟಳ ಹಾಗೂ ಕೃಷಿ ಅಧಿಕಾರಿಗಳಿಂದ ಸರಿಯಾಗಿ ಸಿಗದ ಮಾಹಿತಿಯಿಂದ ಭತ್ತ ಬೆಳೆಯುವದೇ ನಿಷ್ಟ್ರಯೋಜಕ ಎನ್ನುವುದು ರೈತರು ಹೇಳುವ ಮಾತು. ಕೃಷಿ ಇಲಾಖೆಯಿಂದ ಪ್ರತಿವರ್ಷ ಬಿತ್ತನೆ ಬೀಜ ತಂದಿದ್ದೆವು ೪ ತಿಂಗಳಿಗೆ ಉತ್ಪಾದನೆ ಬರುತ್ತದೆ ಎಂದಿದ್ದರು ಆದರೆ … Continued

ಕುಮಟಾದ ಎರಡು ಸಿಇಟಿ ಕೇಂದ್ರಗಳಲ್ಲಿ ಮೊದಲನೇ ದಿನ ಸುಗಮವಾಗಿ ನಡೆದ ಪರೀಕ್ಷೆ

ಕುಮಟಾ; ತಾಲೂಕಿನಲ್ಲಿ ಎರಡು ಸಿಇಟಿ ಪರಿಕ್ಷಾ ಕೇಂದ್ರಗಳಿದ್ದು ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೬೪ ವಿದ್ಯಾರ್ಥಿಗಳು ಪರೀಕ್ಷೆಬರೆಯಲು ಅನುಮತಿ ಪಡೆದಿದ್ದಾರೆ. ಮುಂಜಾನೆ ಅವಧಿಯ ಜೀವಶಾಸ್ತ್ರ ಪರಿಕ್ಷೆಯಲ್ಲಿ ೬೯ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು ೧೯೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ಗಣಿತ ಪರೀಕ್ಷೆಯಲ್ಲಿ ಕೇವಲ ೬ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಬೆಣ್ಣೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೭೬ ಪರೀಕ್ಷಾರ್ಥಿಗಳಿದ್ದು … Continued