ಈ ಹಳ್ಳಿಗಳಲ್ಲಿವೆ ʼಕಳ್ಳತನʼ ಕಲಿಸುವ ʼಶಾಲೆʼ ಗಳು ; ₹2 ಲಕ್ಷ ಪಾವತಿಸಿದ್ರೆ ಈ ʼಶಾಲೆʼಗಳಲ್ಲಿ ಪಿಕ್‌ ಪಾಕೆಟ್‌, ದರೋಡೆಯಲ್ಲಿ ʼಪದವಿʼ…!!

ಭೋಪಾಲ್: ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಅತ್ಯುತ್ತಮ ಶಾಲೆಗೆ ಸೇರಿಸಿ ಓದಿಸುತ್ತಾರೆ. ಆದರೆ ಮಧ್ಯಪ್ರದೇಶದ ಈ ಹಳ್ಳಿಗಳಲ್ಲಿ ಮಾತ್ರ ಕೆಲ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಳ್ಳತನ ಮಾಡಲು ಬೇಕಾದ ತರಬೇತಿ ಪಡೆಯಲು ಭಾರಿ ಶುಲ್ಕ ನೀಡಿ ಸೇರಿಸುತ್ತಾರಂತೆ…! ಮಧ್ಯಪ್ರದೇಶದ ಮೂರು ಹಳ್ಳಿಗಳಾದ ಕಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿ … Continued

ವೀಡಿಯೊ…| ವೈದ್ಯರು ಪರೀಕ್ಷಿಸುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು

ಇಂದೋರ್ : 31 ವರ್ಷದ ಆಟೋ ಚಾಲಕರೊಬ್ಬರು ವೈದ್ಯರು ತಪಾಸಣೆ ನಡೆಸುತ್ತಿದ್ದ ವೇಳೆಯೇ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಇಂದೋರ್‌ನ ಶಿವಾಜಿ ನಗರದ ನಿವಾಸಿ ಸೋನು ಮಟ್ಕರ್ ಎಂದು ಗುರುತಿಸಲಾಗಿದೆ. ತಡರಾತ್ರಿ ಎದೆನೋವು ಕಾಣಿಸಿಕೊಂಡ ನಂತರ ಮಟ್ಕರ್ ಅವರೇ ಸಮೀಪದ ಕ್ಲಿನಿಕ್‌ಗೆ ತೆರಳಿದ್ದರು. ವೈದ್ಯರು ಅವರನ್ನು ಪರೀಕ್ಷಿಸುತ್ತಿದ್ದಾಗ ಏಕಾಏಕಿ ಕುಸಿದು … Continued

ವೀಡಿಯೊ..| ಪಾತ್ರೆಯಂತೆ ಸೋಪ್‌ ಹಚ್ಚಿ ಪಿಸ್ತೂಲ್ ಗಳನ್ನು ತೊಳೆಯುತ್ತಿರುವ ಮಹಿಳೆ ವೀಡಿಯೊ ವೈರಲ್ ಆದ ಬೆನ್ನಿಗೇ ಅಕ್ರಮ ಫ್ಯಾಕ್ಟರಿ ಪತ್ತೆ ಮಾಡಿದ ಪೊಲೀಸರು !

ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ಸೋಪ್‌ ಹಚ್ಚಿ ನೀರಿನಲ್ಲಿ ತೊಳೆಯುತ್ತಿರುವ ಈ ವೀಡಿಯೊದಿಂದಾಗಿ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪೊಲೀಸರು ಈ ವೀಡಿಯೊ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನೆಯೊಂದನ್ನು ಪತ್ತೆ ಮಾಡಿದ್ದು, ಅದಕ್ಕೆ ಬೀಗ ಹಾಕಿದ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ. ವೈರಲ್ … Continued

ಭಾರತೀಯ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಒಂದೇ ಬಾರಿಗೆ ಸೇನೆ-ನೌಕಾಪಡೆ ಮುಖ್ಯಸ್ಥರಾದ ಕ್ಲಾಸ್ ಮೇಟ್ಸ್…!

ನವದೆಹಲಿ : ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತರಗತಿಯಲ್ಲಿ ಓದಿದ್ದ ಇಬ್ಬರು ಭಾರತೀಯ ಭೂ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಹಾಗೂ ನೌಕಾಪಡೆ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ತ್ರಿಪಾಠಿ ನೇಮಕಗೊಂಡಿರುವುದು ವಿಶೇಷವಾಗಿದೆ. ಇವರಿಬ್ಬರೂ 70ರ ದಶಕದಲ್ಲಿ ಮಧ್ಯಪ್ರದೇಶದ ರೇವಾ ಸೈನಿಕ … Continued

ದೇಗುಲದ ಆವರಣದ ಒಳಗೆ ಗೋವಿನ ರುಂಡ ಎಸೆದ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ರತ್ಲಾಮ್: ಮಧ್ಯಪ್ರದೇಶದ ಜಯೋರಾ ಪಟ್ಟಣದ ದೇವಸ್ಥಾನದ ಆವರಣದಲ್ಲಿ ಕತ್ತರಿಸಿದ ಹಸುವಿನ ತಲೆಯನ್ನು ಎಸೆದ ಆರೋಪದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಜಾರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಶುಕ್ರವಾರ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಗೋವಿನ ರುಂಡದ ಭಾಗಗಳನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು … Continued

ವೀಡಿಯೊ..| ವಿವಾಹದ ವೇಳೆ ಮಾರಕಾಸ್ತ್ರ ಹಿಡಿದು ಬೆದರಿಸಿ ಯುವತಿಯ ಅಪಹರಣಕ್ಕೆ ಯತ್ನ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಭೋಪಾಲ್‌ : ಮಧ್ಯಪ್ರದೇಶದ ಅಶೋಕ ನಗರದಲ್ಲಿ ವಿವಾಹದ ವೇಳೆ ಕತ್ತಿ ಬೀಸುತ್ತ 22 ವರ್ಷದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅದರ ವೀಡಿಯೊ ವೈರಲ್‌ ಆಗಿದೆ. ಯುವತಿ ಅತ್ಯಾಚಾರ ಸಂತ್ರಸ್ತೆಯಾಗಿದ್ದು, ಅವಳ ಮದುವೆ ಮತ್ತೊಬ್ಬನ ಜೊತೆ ನಡೆಯುತ್ತಿದ್ದಾಗ ಅತ್ಯಾಚಾರ ಆರೋಪಿ … Continued

ಮದುವೆಯಾದ ಎರಡೇ ದಿನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ…! ಇದರ ಹಿಂದಿತ್ತು ನೋವಿನ ಕಹಾನಿ..

ಗುಜರಿ (ಧಾರ್) : ಆಘಾತ ಹಾಗೂ ವಿಸ್ಮಯಕಾರಿ ಸಂಗತಿಯೊಂದರಲ್ಲಿ, ಮಧ್ಯಪ್ರದೇಶದ ಧಮ್ನೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣ ಹಳ್ಳಿಯೊಂದರ ನವವಿವಾಹಿತ ಯುವತಿಯೊಬ್ಬರು ಮದುವೆಯಾದ ಎರಡು ದಿನಗಳಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಬಗ್ಗೆ ಅತ್ತೆಯಂದಿರು ಪ್ರಶ್ನಿಸಿದಾಗ, ಮದುವೆಯ ನೆಪದಲ್ಲಿ ಒಬ್ಬ ಆರೋಪಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. … Continued

ಮನೆಯ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ : ನಂತರ ತಾನೂ ಆತ್ಮಹತ್ಯೆ…

ಛಿಂದವಾರಾ :  ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಛಿಂದವಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಚಿಂದ್ವಾರಾ ಜಿಲ್ಲಾ ಕೇಂದ್ರದಿಂದ 145 ಕಿಮೀ ದೂರದಲ್ಲಿರುವ ಬೋಡಾಲ್ ಕಚ್ಚರ್ ಎಂಬ ಬುಡಕಟ್ಟು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಹತ್ಯೆ ನಡೆದಿದೆ. … Continued

‘ವಾಯ್ಸ್ ಚೇಂಜಿಂಗ್ ಆ್ಯಪ್’ ಬಳಸಿ ‘ಮಹಿಳಾ ಪ್ರೊಫೆಸರ್‌ʼ ಎಂದು ಪೋಸ್‌ ನೀಡಿ 7 ಹುಡುಗಿಯರ ಮೇಲೆ ಅತ್ಯಾಚಾರ…!

ಭೋಪಾಲ್: ಅವನು ಅನಕ್ಷರಸ್ಥ, ಆದರೆ ಘೋರ ಅಪರಾಧಗಳ ಸರಮಾಲೆಯನ್ನು ಮಾಡಲು ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಕಲಿತು ಹಲವಾರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕನಿಷ್ಠ ಏಳು ಬುಡಕಟ್ಟು ಹುಡುಗಿಯರ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆತ  ಕಾಲೇಜು ಪ್ರಾಧ್ಯಾಪಕಿಯಂತೆ ಪೋಸ್ ನೀಡಲು ಧ್ವನಿ … Continued

ವೀಡಿಯೊ..| ಟೋಲ್ ಪ್ಲಾಜಾ ಮೇಲೆ ಮುಸುಕುಧಾರಿಗಳಿಂದ ಗುಂಡಿನ ದಾಳಿ, ಸಿಬ್ಬಂದಿಗೆ ಥಳಿತ ; ಓಡಿಹೋದ ಇಬ್ಬರು ಸಿಬ್ಬಂದಿ ಬಾವಿಯಲ್ಲಿ ಬಿದ್ದು ಸಾವು

ಭೋಪಾಲ್: ಆಘಾತಕಾರಿ ಘಟನೆಯಲ್ಲಿ ಸುಮಾರು 10-12 ಜನ ಮುಸುಕುಧಾರಿ ಗೂಂಡಾಗಳು ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದ ದಾಟಿಯಾದಲ್ಲಿನ ಟೋಲ್ ಪ್ಲಾಜಾ ಮೇಲೆ ದಾಳಿ ನಡೆಸಿ ಟೋಲ್ ನೌಕರರಿಗೆ ಅಮಾನುಷವಾಗಿ ಥಳಿಸಿದ್ದಾರೆ. ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಮುಸುಕುಧಾರಿ ಬಂದೂಕುಧಾರಿಗಳ ದಾಳಿಯ ವೇಳೆ ತಮ್ಮನ್ನು ರಕ್ಷಿಸಿಕೊಳ್ಳಲು ಟೋಲ್ ಪ್ಲಾಜಾದ ಇಬ್ಬರು ಉದ್ಯೋಗಿಗಳು ಓಡುತ್ತಿದ್ದಾಗ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ … Continued