ಹೋಳಿ ಬಣ್ಣ ಹಚ್ಚುವುದನ್ನು ತಡೆದಿದ್ದಕ್ಕೆ ಯುವಕನನ್ನು ಹತ್ಯೆ ಮಾಡಿದರು…!

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹೋಳಿ ಹಬ್ಬಕ್ಕೆ ಮುನ್ನ ಮೂವರು ವ್ಯಕ್ತಿಗಳು ಬಣ್ಣ ಬಳಿಯುವುದನ್ನು ತಡೆಯಲು ಯತ್ನಿಸಿದ 25 ವರ್ಷದ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ರಾಲ್ವಾಸ್ ಗ್ರಾಮದಲ್ಲಿ ಅಶೋಕ, ಬಬ್ಲು ಮತ್ತು ಕಾಲುರಾಮ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಹಂಸರಾಜ ಎಂಬವರಿಗೆ ಬಣ್ಣ … Continued

ವೀಡಿಯೊ…| ಇದು ಕಾಶ್ಮೀರವಲ್ಲ, ರಾಜಸ್ಥಾನ…ಮರುಭೂಮಿಯಲ್ಲಿ ಎಲ್ಲೆಲ್ಲೂ ನೆಲಕ್ಕೆ ಹಿಮದ ಹಾಸು…!

ಜೈಪುರ: ಮರುಭೂಮಿ ಹಾಗೂ ಒಣಹವೆಗೆ ಹೆಸರುವಾಸಿಯಾಗಿರುವ ಹಾಗೂ ಬೇಸಿಗೆಯಲ್ಲಿ 50 ಡಿಗ್ರಿ ತಾಪಮಾನ ಇರುವ ರಾಜಸ್ಥಾನ ಕಳೆದ ಕೆಲ ದಿನಗಳಿಂದ ಕಾಶ್ಮೀರದಂತೆ ಕಾಣಲಾರಂಭಿಸಿದೆ. ರಾಜಸ್ಥಾನದಲ್ಲಿ ಭಾರಿ ಹವಾಮಾನ ಬದಲಾವಣೆ ಕಾಣಿಸಲಾರಂಭಿಸಿದೆ. ಬಿರು ಬಿಸಿಲಿಗೆ ಹೆಸರಾಗಿದ್ದ ರಾಜಸ್ಥಾನದ ಚುರು ಮತ್ತು ಸರ್ದರ್ಶಹರ್ ಸೇರಿದಂತೆ ಹಲವು ಪ್ರದೇಶಗಳು ಹಿಮದಿಂದ ಆವೃತವಾಗಿವೆ. ಮಳೆಯಿಂದಾಗಿ ವಿಪರೀತ ಆಲಿಕಲ್ಲುಗಳು ಬಿದ್ದಿದ್ದು ಆಲಿಕಲ್ಲುಗಳಿಂದ ಆವೃತವಾಗಿರುವ … Continued

ಲೋಕಸಭೆ ಚುನಾವಣೆ ಸ್ಪರ್ಧಾ ಕಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ..? ಮಗಳಿಗಾಗಿ ರಾಯ್ಬರೇಲಿ ಕ್ಷೇತ್ರ ಬಿಟ್ಕೊಟ್ಟು ರಾಜ್ಯಸಭೆಗೆ ಸ್ಪರ್ಧೆ ಮಾಡ್ತಾರಾ ಸೋನಿಯಾ ಗಾಂಧಿ..?!

ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಅವರು ರಾಯ್‌ಬರೇಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಬಿಹಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ನಾಮನಿರ್ದೇಶನಗೊಳ್ಳಬಹುದು. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಾಧ್ಯತೆಯಿರುವ ಇತರ ನಾಯಕರಲ್ಲಿ ಅಭಿಷೇಕ್ ಮನು ಸಿಂಘ್ವಿ ಮತ್ತು … Continued

“ಇದು ಕಾಂಗ್ರೆಸ್ ಸೋಲು, ಜನರ ಸೋಲಲ್ಲ”: 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಇತರ ಇಂಡಿಯಾ ಮೈತ್ರಿಕೂಟ ಸದಸ್ಯ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆಯು ಮೂರು ರಾಜ್ಯಗಳಲ್ಲಿ ವಿಭಿನ್ನ ಫಲಿತಾಂಶವನ್ನು ಕಾಣಬಹುದಿತ್ತು … Continued

ರಾಜಸ್ಥಾನ ರೈತರ ಭೇಟಿಗೆ ರಾಹುಲ್‌ ಪ್ರವಾಸ

ಜೈಪುರ: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರಾಜಸ್ಥಾನ ರೈತರಿಗೆ ಬೆಂಬಲ ನೀಡುವುದರೊಂದಿಗೆ ಕಾಂಗ್ರೆಸ್‌ ಪಕ್ಷದ ನೆಲೆಯನ್ನು ಬಲಪಡಿಸುವ ದಿಸೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಫೆ. 12 ರಂದು ಎರಡು ದಿನಗಳ ರಾಜಸ್ಥಾನ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೧೨ರಂದು ಹನುಮಾನಗಢ ಜಿಲ್ಲೆಗೆ ಆಗಮಿಸುವ ರಾಹುಲ್‌ ಗಾಂಧಿ ಪಿಲಿಬಂಗ ಮಂಡಿಯಲ್ಲಿ ನಡೆಯುವ ರೈತರ ಸಭೆಯಲ್ಲಿ ಪಾಲ್ಗೊಳ್ಳುವರು. … Continued