ವೀಡಿಯೊ…| ಶಿರಸಿ : ಆಹಾರವೆಂದು ಭಾವಿಸಿ ‘ನಾಡ ಬಾಂಬ್‌’ ತಿನ್ನಲು ಹೋದ ಆಕಳು ; ಸ್ಫೋಟಕ್ಕೆ ಛಿದ್ರಗೊಂಡ ಮುಖ…

ಶಿರಸಿ: ಅಕ್ರಮ ಚಟುವಟಿಕೆಗಳಿಗಾಗಿ ಇರಿಸಲಾಗಿದ್ದ ನಾಡ ಬಾಂಬ್‌ ಸಿಡಿದು ಹಸುವೊಂದು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ ಎಂದು ವರದಿಯಾಗಿದೆ. ಶಿರಸಿ ತಾಲೂಕಿನ ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಎಂಬವರಿಗೆ ಸೇರಿದ ಈ ಆಕಳು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಅಲ್ಲಿ ಇರಿಸಲಾಗಿದ್ದ ನಾಡ … Continued

ವೀಡಿಯೊ..| ಭಟ್ಕಳ : ಮುರುಡೇಶ್ವರ ನೇತ್ರಾಣಿ ಬಳಿ ಪರ್ಷಿಯನ್ ಬೋಟ್ ಮುಳುಗಡೆ ; 25 ಮೀನುಗಾರರ ರಕ್ಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿಪರ್ಷಿಯನ್ ಬೋಟ್‌ ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ 25 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಈ ಬೋಟ್‌ ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ಮುಳುಗುತ್ತಿದ್ದ ವೇಳೆ ತಕ್ಷಣವೇ ಕರಾವಳಿ ಕಾವಲುಪಡೆಯ ಕಂಟ್ರೋಲ್ ರೂಮ್‌ಗೆ ಕರೆ ಮಾಡಲಾಯಿತು.  … Continued

ಹೊನ್ನಾವರ | ಗೇರುಸೊಪ್ಪ ಅಣೆಕಟ್ಟಿನಿಂದ ಶರಾವತಿ ನದಿಗೆ ನೀರು ಬಿಡುಗಡೆ

ಕಾರವಾರ : ಕರ್ನಾಟಕದಾದ್ಯಂತ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಸಂಗ್ರಹ ಹೆಚ್ಚಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಡ್ಯಾಂನಿಂದ ಒಟ್ಟಾರೆ 75000 ಕ್ಯೂಸೆಕ್‌ … Continued

ಭಾರೀ ಮಳೆ ; ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಿನ ಶಾಲೆ-ಪಿಯು ಕಾಲೇಜುಗಳಿಗೆ ನಾಳೆ (ಆಗಸ್ಟ್ 28) ರಜೆ ಘೋಷಣೆ

ಕಾರವಾರ :ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ಜಿಲ್ಲೆಯ 10 ತಾಲೂಕುಗಳ ಪ್ರಾಥಮಿಕ, ಪ್ರೌಢ ಶಾಲೆಗಳು, ಅಂಗನವಾಡಿಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, … Continued

ಹೊನ್ನಾವರ | ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್‌ ಕದ್ದೊಯ್ದ ಕಳ್ಳರು

ಹೊನ್ನಾವರ: ಮಾರುತಿ ಓಮ್ನಿ ವಾಹನದ ನಾಲ್ಕೂ ಟೈರ್‌ಗಳನ್ನು ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಿರಸಿಯ ಕಸ್ತೂರಬಾ ನಗರದ ನಿವಾಸಿ ಸತೀಶ ಶೆಟ್ಟಿ ಎಂಬವರಿಗೆ ಸೇರಿದೆ. ಅವರು ಹೊನ್ನಾವರ ತಾಲೂಕಿನ ಬಾಳೆಗದ್ದೆ ಸಂಬಂಧಿಕರ ಮನೆಗೆ ಹೋದಾಗ ಈ ಘಟನೆ ನಡೆದಿದೆ. ರಾತ್ರಿ ಅವರು ರಸ್ತೆ … Continued

ಶಿರಸಿ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಶಿರಸಿ: ಹಳೆಯ ಪ್ರಕರಣವೊಂದರಲ್ಲಿ ಬೇಕಾಗಿದ್ದ ಕಳೆದ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ವಾಸವಾಗಿದ್ದು, ದಾಂಡೇಲಿಗೆ ಬರುವ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಅಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. 1990ರ ನವೆಂಬರ್ 29 ರಂದು ಶಿರಸಿಯ ಐದು ರಸ್ತೆಯ ಬಳಿ ದಿನಕರ ನಾರಾಯಣ … Continued

ಭಾರಿ ಮಳೆ ಮುನ್ಸೂಚನೆ; ಉತ್ತರ ಕನ್ನಡ ಜಿಲ್ಲೆ 6 ತಾಲೂಕುಗಳ ಶಾಲೆಗಳಿಗೆ ಬುಧವಾರ (ಆ.20) ರಜೆ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಬುಧವಾರ (ಆಗಸ್ಟ್ 20) ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ (IMD), ಬೆಂಗಳೂರು ಭಾರಿ ಮಳೆ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ ಮತ್ತು ಜೊಯಿಡಾ ತಾಲೂಕುಗಳ ಅಂಗನವಾಡಿಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿಪೂರ್ವ … Continued

ಸಿದ್ದಾಪುರ | ಮದ್ದಳೆ ವಾದಕ ಶಂಕರ ಭಾಗವತರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ; ʼಕೊಳಗಿ ಅನಂತಣ್ಣʼ ಕೃತಿ ಬಿಡುಗಡೆ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆ ವಿವಿಧ ಕಲೆಗಳಿಗೆ ಹೆಸರುವಾಸಿಯಾಗಿದೆ. ಈಗ ಭಾಗದ ಎಲ್ಲೆಡೆಗಳಲ್ಲಿ ಹಿಂದೂಸ್ತಾನೀ ಸಂಗೀತಗಾರರು ಸಿಗುತ್ತಾರೆ. ಆದರೆ ಯಕ್ಷಗಾನ ಕಲಾವಿದರ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿನ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಕ್ಷಗಾನ ಕಲೆಗೆ ಸಲ್ಲಿಸಬೇಕಾದ ಸೇವೆ, ಗೌರವವನ್ನು ಸಲ್ಲಿಸುವಲ್ಲಿ ವಿಫಲರಾದಂತಿದೆ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಹೇಳಿದರು. ಉತ್ತರ … Continued

ವೀಡಿಯೊ…| ಹೊನ್ನಾವರ : ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ನದಿಗೆ 15000 ಕ್ಯೂಸೆಕ್ ನೀರು ಬಿಡುಗಡೆ

ಕಾರವಾರ : ಶರಾವತಿಯ ಲಿಂಗನಮಕ್ಕಿ ಜಲಾಶಯದಿಂದ ಇಂದು ಮಂಗಳವಾರ (ಆಗಸ್ಟ್‌ 19) ನೀರನ್ನು ಹೊರಕ್ಕೆ ಬಿಡಲಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಒಟ್ಟು 15000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮೊದಲು ಮೂರು ಗೇಟಗಗಳನ್ನು ತೆಗೆದು ನೀರನ್ನು ಹೊರಕ್ಕೆ ಕಳುಹಿಸಲಾಗಿತ್ತು. ನಂತರ 11 ಗೇಟ್‌ಗಳನ್ನು ತೆರೆದು ಒಟ್ಟು 15000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ … Continued

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮುನ್ಸೂಚನೆ : ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಕಾರವಾರ : ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಆಗಸ್ಟ್‌ 20 ಬೆಳಗ್ಗೆ ವರೆಗೆ ರೆಡ್ ಅಲರ್ಟ್‌ ಘೋಷಿಸಲಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಗಣನೀಯವಾಗಿ ಏರುತ್ತಿದೆ. ಜಲಾಶಯದಿಂದ ಆಗಸ್ಟ್‌ 19 … Continued