ಶಿರಸಿ : ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಪಥ ಸಂಚಿಕೆ ಬಿಡುಗಡೆ

ಶಿರಸಿ: ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ 1974 ರಿಂದ ನಡೆದು ಬಂದ ದಾರಿಯ ಸಮಗ್ರವಾದ ಮಾಹಿತಿ ಇರುವ ಸುವರ್ಣ ಪಥ ಸ್ಮರಣ ಸಂಚಿಕೆಯನ್ನು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಸ್ಕೊಡವೇಸ್ ಮುಖ್ಯ ಕಾರ್ಯನಿರ್ವಾಹಕರಾದ ಡಾ.ವೆಂಕಟೇಶ ನಾಯ್ಕ ಅವರು ಸುವರ್ಣ ಪಥ ಸ್ಮರಣ ಸಂಚಿಕೆಯನ್ನು … Continued

ನನ್ನ ಪುಸ್ತಕವು ಆರೋಗ್ಯದ ಎಲ್ಲ ಆಯಾಮಗಳ ಮೂಲಕ ದೀರ್ಘಕಾಲ ಉತ್ತಮವಾಗಿ ಬದುಕುವ ಬಗ್ಗೆ ಹೇಳುತ್ತದೆ ; ಡಾ.ರಾಮಚಂದ್ರ ಹೆಗಡೆ ಭಂಡೀಮನೆ

ವೈಯಕ್ತಿಕ ಅನುಭವ, ವೃತ್ತಿಜೀವನದ ಅನುಭವ ಮತ್ತು ನಾವು ನಿವೃತ್ತಿಯ ನಂತರದ ಬದುಕನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಸಮ್ಮಿಶ್ರಣದಿಂದ ಈ ಪುಸ್ತಕ ಬಂದಿದೆ. ಅನೇಕರು ನಿವೃತ್ತಿ ನಂತರ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕ್ಷೀಣಿಸುತ್ತಿರುವ ಆರೋಗ್ಯ, ಗೊಂದಲ, ಧ್ಯೇಯದ ಕೊರತೆ ಹಾಗೂ ನಿವೃತ್ತಿ ನಂತರ ಇನ್ನು ನಮ್ಮದೇನಿಲ್ಲ, ನಮ್ಮಿಂದ ಏನೂ ಸಾಧ್ಯವಿಲ್ಲ ಅಂದುಕೊಂಡು ತಮ್ಮ … Continued

ಕುಮಟಾ : ಇತಿಹಾಸ ತಜ್ಞ ಡಾ. ಎಲ್. ಜಿ. ಭಟ್ಟ ನಿಧನ

ಕುಮಟಾ : ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ಮತ್ತು ಶಿಕ್ಷಣ ತಜ್ಞರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಡಾ. ಎಲ್. ಜಿ. ಭಟ್ಟ (83) ಗುರುವಾರ ರಾತ್ರಿ ನಿಧನರಾಗಿದ್ದಾರೆ. ಕಾರ್ಕಳದ ಭುವನೇಂದ್ರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವರ್ಗಾವಣೆ ನಂತರ ಹೊನ್ನಾವರದ ಎಸ್. ಡಿ. ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ … Continued

ಸದ್ದಿಲ್ಲದೆ ಸಿದ್ಧವಾಯ್ತೆ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಯ ಸಾಧ್ಯತಾ ವರದಿ …!

ಶಿರಸಿ : ಪಶ್ಚಿಮ ಘಟ್ಟದ ಅತ್ಯಂತ ಸಂವೇದನಶೀಲ ಮತ್ತು ಜೀವವೈವಿಧ್ಯದಿಂದ ತುಂಬಿದ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ, ನದಿ ತಿರುವು ಯೋಜನೆ ಬಗ್ಗೆ  ಚರ್ಚೆಗಳು ಮುನ್ನೆಲೆಗೆ ಬಂದಿವೆ. ಇದರ ಬೆನ್ನಲ್ಲೇ ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ತಿರುಗಿಸುವ ಪ್ರಸ್ತಾಪಿತ ಯೋಜನೆಯ ಸಾಧ್ಯತಾ ವರದಿ ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು  ವೃಕ್ಷಲಕ್ಷ  ಆಂದೋಲನವು  … Continued

ಗೋಕರ್ಣದ ಬೆಟ್ಟದ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾದ ಮಹಿಳೆ-ಮಕ್ಕಳನ್ನ ವಾಪಸ್ ರಷ್ಯಾಕ್ಕೆ ಕಳುಹಿಸಲು ಹೈಕೋರ್ಟ್ ಗ್ರೀನ್‌ ಸಿಗ್ನಲ್

ಬೆಂಗಳೂರು: ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಿಗೆ ಅವರ ದೇಶ ರಷ್ಯಾಕ್ಕೆ ಮರಳಲು ಅನುಮತಿ ನೀಡಲು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ನೀನಾ ಕುಟಿನಾ ಅವರ ಮಾಜಿ ಪತಿ ಮತ್ತು ಮಕ್ಕಳ ತಂದೆ ಇಸ್ರೇಲಿ ಪ್ರಜೆ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ … Continued

ಶಿರಸಿ : ಕೆಡಿಸಿಸಿ ಬ್ಯಾಂಕ್‌ ಚುನಾವಣೆ ದಿನಾಂಕ ಘೋಷಣೆ

ಶಿರಸಿ: ರಾಜ್ಯದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಕೆಡಿಸಿಸಿ (KDCC) ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಗುರುವಾರ (ಸೆಪ್ಟೆಂಬರ್‌ 25) ಪ್ರಕಟಿಸಲಾಗಿದೆ. ಚುನಾವಣಾ ಅಧಿಕಾರಿ ಹಾಗೂ ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯರಾಣಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 25 ರಂದು ಮತದಾನ ನಡೆಯಲಿದೆ. ಚುನಾವಣೆ ಅಭ್ಯರ್ಥಿಗಳಿಗೆ ಅಕ್ಟೋಬರ್ 13 ರಿಂದ 17ರ … Continued

ಕುಮಟಾ | ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ; ಸುಪ್ರಿಯಾ ಗೌಡ ರಾಜ್ಯಮಟ್ಟಕ್ಕೆ ಆಯ್ಕೆ

ಕುಮಟಾ: ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ಉತ್ತರ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಯು ಅಂಕೋಲಾದ ಶಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು. ಕುಮಟಾದ ಡಾ. ಎ.ವಿ. ಬಾಳಿಗಾ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸುಪ್ರಿಯಾ ಗೌಡ 400 ಮೀ, 200 ಮೀ, ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 100 ಮೀಟರ್ … Continued

ಶಿರಸಿ : ಮನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

ಶಿರಸಿ : ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಮಲಗಿದ್ದ ಯುವತಿಯೊಬ್ಬಳು ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರ್ಕಿನಕೊಡ್ಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಶಿರಸಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ ರಂಜನಾ ದೇವಾಡಿಗ ( 21 )ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ನಾಗಪ್ಪ ಹಾಗೂ ನಾಗವೇಣಿ ದೇವಾಡಿಗ … Continued

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಶ್ರೀ ಗುತ್ತಿಕನ್ನಿಕಾ ನಗರದೇವಿ ದೇವಾಲಯದ ಸಭಾಭವನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕುರಿತು ನಡೆದ ಸಾರ್ವಜನಿಕ ಆಕ್ಷೇಪಣೆ ಸಭೆಯಲ್ಲಿ ಸಾರ್ವಜನಿಕರು ಯೋಜನೆಯ ವಿರುದ್ಧ ತಮ್ಮ ಬಲವಾದ ವಿರೋಧ ವ್ಯಕ್ತಪಡಿಸಿದರು. ಈ ಸಭೆ ಕೇವಲ ಒಂದು ಕಾಟಾಚಾರದ ಪ್ರಕ್ರಿಯೆ ಎಂಬಂತೆ ನಡೆಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. … Continued

ಅಂಕೋಲಾ | ಟ್ಯಾಂಕರ್‌-ಬಸ್‌ ಡಿಕ್ಕಿ ; ಇಬ್ಬರು ಸಾವು

ಅಂಕೋಲಾ : ಟ್ಯಾಂಕರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೇಗುಳಿ – ಯಲ್ಲಾಪುರ ಮಧ್ಯೆ ಬರುವ ಕಂಚಿನಬಾಗಿಲು ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು. ಬಸ್ಸಿಲ್ಲಿದ್ದ ಹತ್ತು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. … Continued