ಹಿರಿಯ ಸಹಕಾರಿ ಧುರೀಣ, ಎಲ್ಲರ ʼಶಾಂತಣ್ಣʼ ಟಿಎಸ್‌ಎಸ್‌ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇನ್ನಿಲ್ಲ

ಶಿರಸಿ: ʼಶಾಂತಣ್ಣʼ ಎಂದೇ ಆಪ್ತವಲಯದಲ್ಲಿ ಜನಪ್ರಿಯರಾಗಿದ್ದ ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ, ಸಹೃದಯಿ ಟಿಎಸ್‌ಎಸ್‌ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವಯೋ ಸಹಜ ಖಾಯಿಲೆಯಿಂದ ಬುಧವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರು ಶಿಕ್ಷಣ, ಸಹಕಾರ, … Continued

ಕುಮಟಾ: ವಿನಾಯಕ ರೆಕ್ಸಿನ್ ಹೌಸ್ ನೂತನ ಕಟ್ಟಡ ಉದ್ಘಾಟಿಸಿದ ರಾಘವೇಶ್ವರ ಶ್ರೀಗಳು-ಶುಭ ಹಾರೈಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ  ಕುಮಟಾದ ರೈಲ್ವೆ ನಿಲ್ದಾಣದ ಸಮೀಪದ ನೂತನ ಕಟ್ಟಡದಲ್ಲಿ ವಿನಾಯಕ ರೆಕ್ಸಿನ್ ಹೌಸ್ ನೂತನ ಮಳಿಗೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ನೂತನ ಕಟ್ಟಡ ಅನಾವರಣಗೊಳಿಸಿದರು. ಇದೇ ವೇಳೆ ಶ್ರೀಗಳ ಶ್ರೀಪಾದುಕಾ ಪೂಜೆ ಮತ್ತು ಭಿಕ್ಷಾಸೇವೆ ಸಹ ನಡೆಯಿತು. ವಿನಾಯಕ ಹೆಗಡೆ ಕಟ್ಟೆ ದಂಪತಿ … Continued

ಕುಮಟಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂಭ್ರಮ, ಕಡ್ಲೆ ಕಡಲತೀರದ ಮರಳಿನಲ್ಲಿ ಮೂಡಿದ ಶ್ರೀರಾಮ…

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಬ್ಬಿ ಸಮುದ್ರದ ಕಡ್ಲೆಯ ತೀರದ ಮರಳಿನಲ್ಲಿ ವಿನಾಯಕ ಆಚಾರಿ ಎಂಬವರು ಶ್ರೀರಾಮನನ್ನು ಅರಳಿಸಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22ರಂದು ಸೋಮವಾರ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಕಡ್ಲೆಯ ಜಟ್ಟಿ ಆಚಾರಿ ಕುಟುಂಬದ ವಿನಾಯಕ ಆಚಾರಿ ಸಮುದ್ರ ತೀರಕ್ಕೆ ಬಂದಾಗ ಮುಸ್ಸಂಜೆ ಹೊತ್ತಲ್ಲಿ … Continued

ಅಂಕೋಲಾ : ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇಬ್ಬರು ಪದ್ಮಶ್ರೀ ಪುರಸ್ಕೃತರಿಗೆ ಆಹ್ವಾನ

ಕಾರವಾರ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಇಬ್ಬರು ಪದ್ಮಶ್ರೀ ಪುರಸ್ಕೃತರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಅಂಕೋಲಾದ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ (Sukri Bommagowda) ಹಾಗೂ ತುಳಸಿ ಗೌಡ (Tulasi Gowda) ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ್ಯ ಪ್ರಚಾರಕರು ಆಹ್ವಾನ ಪತ್ರಿಕೆ … Continued

ಮಾರ್ಚ್ 19 ರಿಂದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆ

ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ‌ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ಭಾನುವಾರ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿದ ನಂತರ ಶರಣ ಆಚಾರ್ಯ ಅವರು ದಿನಾಂಕವನ್ನು ಪ್ರಕಟಿಸಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ … Continued

ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಈವರೆಗೆ ಆಹಾರ ಸಮಸ್ಯೆ ಆಗಲಿಲ್ಲ : ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಈವರೆಗೆ ಆಹಾರ ಸಮಸ್ಯೆ ಆಗಲಿಲ್ಲ. ವೇದಕ್ಕೂ ಯಜ್ಞಕ್ಕೂ, ಮಳೆಗೂ, ಆಹಾರಕ್ಕೂ ನಿಕಟ ಸಂಬಂಧವಿದೆ. ವೇದ ಮತ್ತು ಯಜ್ಞ ಸಮೃದ್ಧವಾಗಿ ಆಚರಣೆ ಆಗಿದ್ದರೆ ಆಹಾರದಲ್ಲಿಯೂ ಸಮೃದ್ಧಿಯಾಗುತ್ತದೆ. ಹಾಗೂ ಬದುಕಿನಲ್ಲಿ‌ ನೆಮ್ಮದಿ‌ ದೊರೆಯುತ್ತದೆ ಎಂದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ಸ್ವರ್ಣವಲ್ಲೀಯಲ್ಲಿ ಶ್ರೀರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ಮಹರ್ಷಿ ಸಾಂದೀಪನಿ … Continued

ನನಗೆ ನೀಡಿದ ʼಪಂ.ಷಡಕ್ಷರಿ ಪ್ರಶಸ್ತಿʼ ಹಾರ್ಮೋನಿಯಂಗೆ ಸಂದ ಸನ್ಮಾನ : ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಂ.ವಿಶ್ವನಾಥ ಕಾನ್ಹರೆ

ಕುಮಟಾ: ಪಂ. ಷಡಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಇದು ಹಾರ್ಮೋನಿಯಂಗೆ ಸಂದ ಸನ್ಮಾನ ಎಂದು ನಾನು ಭಾವಿಸುತ್ತೇನೆ. ಹಾರ್ಮೋನಿಯಂ ಅನ್ನು ಒಂದು ಸ್ವತಂತ್ರ ವಾದ್ಯ ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ನನಗೆ ಖುಷಿ ತಂದಿದೆ ಎಂದು ಖ್ಯಾತ ಹಾರ್ಮೊನಿಯಂ ವಾದಕ ಪಂ. ವಿಶ್ವನಾಥ ಕಾನ್ಹರೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ … Continued

ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ಗಣಪತಿ ಭಟ್‌ ಹಾಸಣಗಿಗೆ ಪ್ರತಿಷ್ಠಿತ ‌ʼತಾನಸೇನ್‌ ಸಮ್ಮಾನ್ʼ ಪುರಸ್ಕಾರ

ಹುಬ್ಬಳ್ಳಿ: ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ʼತಾನಸೇನ್‌ʼ ಸಮ್ಮಾನ ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್‌ ಹಾಸಣಗಿ ಆಯ್ಕೆಯಾಗಿದ್ದಾರೆ. ಇದೇ ಡಿಸೆಂಬರ್ 24ರಂದು ಗ್ವಾಲಿಯರ್‌ನಲ್ಲಿ ನಡೆಯಲಿರುವ ತಾನ್‌ಸೇನ್‌ ಸಂಗೀತ ಸಮಾರೋಹ ಕಾರ್ಯಕ್ರಮದಲ್ಲಿ ಅವರು ಪುರಸ್ಕಾರ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ನನಗೆ ಸಂತೋಷ ತಂದಿದೆ…. ಪಂಡಿತ ಗಣಪತಿ ಭಟ್‌ ಹಾಸಣಗಿ ಅವರು … Continued

ಕುಮಟಾ : ಬಾಳಿಗಾ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಬಗ್ಗೆ ಪ್ರಾತ್ಯಕ್ಷಿಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಕುರಿತು ಸೋಮವಾರ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಎಸ್. ಪಿ. ರಾಘವೇಂದ್ರ ಪಟಗಾರ ಮಾಹಿತಿ ನೀಡಿ, ಎಲ್ ಪಿ ಜಿ ಗ್ಯಾಸ್, ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ವಿದ್ಯುತ್ … Continued

ಶಿರಸಿ : ಬಂಡಲ ಬಳಿ ಬಸ್‌-ಕಾರು ಡಿಕ್ಕಿ, ಐವರು ಸಾವು

ಶಿರಸಿ: ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಮಟಾ-ಶಿರಸಿ ಹೆದ್ದಾರಿಯ ಬಂಡಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಮಂಗಳೂರು ತಾಲೂಕಿನ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಕಾರು ಚಾಲಕ ಚೆನ್ನೈ ಮೂಲದವರು ಎಂದು ಹೇಳಲಾಗಿದೆ. ಮೃತರನ್ನು … Continued