ಅಂಕೋಲಾ : ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ, ಸ್ಥಳೀಯರಿಗೆ ಆತಂಕ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದು ಸುಮಾರು 7 ಅಡಿಗಳಷ್ಟು ಉದ್ದವಿರುವ ಬೃಹತ್ ಮೊಸಳೆ ಎನ್ನಲಾಗಿದೆ. ಮೊಸಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ಅವರು ಹೆಚ್ಚಾಗಿ ನದಿಯನ್ನು ಅವಲಂಬಿಸಿರುವುದರಿಂದ ಅವರಿಗೆ ಆತಂಕ ಎದುರಾಗಿದೆ. ನದಿ ತೀರದಲ್ಲಿ … Continued

ಭಟ್ಕಳ : ಚಾಕೊಲೇಟ್​​ ಎಂದು ಭಾವಿಸಿ ಪ್ಯಾಂಟ್ ಬಟನ್​ ನುಂಗಿದ ಹಸುಳೆ

ಕಾರವಾರ: ಎರಡು ತಿಂಗಳ ಮಗುವೊಂದು ಪ್ಯಾಂಟ್‌ ಬಟನ್‌ ನುಂಗಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಟ್ಕಳ ನಗರದ ರಂಗೀಕಟ್ಟೆ ಬಳಿ ವಾಸವಿರುವ ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಬಿಹಾರ ಮೂಲದ ಕಮಲ ಕಿಶೋರ ಅವರ ಪುತ್ರಿ ಎರಡು ತಿಂಗ ಅಮೃತ ಬಟನ್​ ನುಂಗಿದ್ದ … Continued

ಕುಮಟಾ: ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಹೊರಟ ಶಿಕ್ಷಕ ಅಪಘಾತದಲ್ಲಿ ಸಾವು

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಗುಡೆ ಅಂಗಡಿಯ ಪ್ರಾಥಮಿಕ ಶಾಲಾ ಶಿಕ್ಷಕ ಗೋಪಾಲ ಪಟಗಾರ (50) ಅಪಘಾತದಲ್ಲಿ ನಿಧನರಾಗಿದ್ದಾರೆ. ಆಗಸ್ಟ್‌ ೧೫ರಂದು ಮುಂಜಾನೆ 7 ಗಂಟೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಗುಡೆ ಅಂಗಡಿ ಶಾಲೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಘನಾಶನಿ ರಸ್ತೆಯ ಹಳಕಾರ ತಿರುವಿನ ಸಮೀಪ ಬೊಲೆರೊ ವಾಹನ ದ್ವಿಚಕ್ರ ವಾಹನಕ್ಕೆ … Continued

ಕುಮಟಾ: ಬೇಟೆಯಾಡಿದ ಮುಳ್ಳುಹಂದಿ ಬೈಕಿನಲ್ಲಿ ಸಾಗಾಟ, ಇಬ್ಬರ ಬಂಧನ

ಹೊನ್ನಾವರ: ಮುಳ್ಳುಹಂದಿ ಬೇಟೆಯಾಡಿ ಅದನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮುಳ್ಳು ಹಂದಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದೀವಳ್ಳಿಯ ಸಂಜಯ ದಿನ್ನಿ ನೊರೊನಾ (25) ಹಾಗೂ ಪ್ರಕಾಶ ಫ್ರಾನ್ಸಿಸ್ (39) ಎಂಬವರು ಬಂಧಿತ ಆರೋಪಿಗಳು. ಮುಳ್ಳುಹಂದಿ ಬೇಟೆಯಾಡಿ ಬೈಕಿನಲ್ಲಿ ಸಾಗಿಸುತ್ತಿರುವಾಗ ತಾಲೂಕಿನ ಕತಗಾಲ … Continued

ಸಿದ್ದಾಪುರ :ಖ್ಯಾತ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆಗೆ ʼಅನಂತಶ್ರೀʼ ಪ್ರಶಸ್ತಿ

ಸಿದ್ದಾಪುರ : ಪ್ರಸಿದ್ಧ ಯಕ್ಷಗಾನ ಗುರು, ಹೆಸರಾಂತ ಭಾಗವತರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೋಡಿನ ಕೆ.ಪಿ.ಹೆಗಡೆ ಅವರಿಗೆ ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ‌ ನೀಡಲಾಗುವ ‘ಅನಂತಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ವಿಷಯ ತಿಳಿಸಿದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಅವರು, ಕಳೆದ … Continued

ಕಾರವಾರ: ಜನರ ಜೊತೆ ಬೆರೆಯುತ್ತಿದ್ದ ಕಾಡು ಹಂದಿಗೆ ಆಹಾರದಲ್ಲಿ ಸ್ಫೋಟಕ ಇಟ್ಟು ಸಾಯಿಸಿದ ದುಷ್ಕರ್ಮಿಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಜನರೊಂದಿಗೆ ಸ್ನೇಹದಿಂದ ಇದ್ದು ಅವರು ಕೊಟ್ಟ ಆಹಾರ ತಿಂದು ಬದುಕಿದ್ದ ಕಾಡುಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಈ ಹಂದಿ ಊರಿನಲ್ಲಿ ಜನರು ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿ ಗಳಿಸಿತ್ತು. ಕಾಂತಾರ ಸಿನೆಮಾ … Continued

ಹೊನ್ನಾವರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮವೇದ ವಿದ್ವಾಂಸ ಶಿವರಾಮ ಭಟ್ಟ ಅಲೇಖ ಇನ್ನಿಲ್ಲ

ಹೊನ್ನಾವರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೇದ ವಿದ್ವಾಂಸರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ ಶಿವರಾಮ ಭಟ್ಟ ಅಲೇಖ (೮೮) ಸೋಮವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾಮವೇದದ ರಾಣಾಯನಿ ಶಾಖೆಯ ಕುರಿತು ವಿಶೇಷ ಅಧ್ಯಯನ ನಡೆಸಿದ್ದಕ್ಕಾಗಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ. ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. … Continued

ಬೆಂಕಿ ಅನಾಹುತ : ಏಳು ಗೋವುಗಳು ಸಜೀವ ದಹನ

ಮುಂಡಗೋಡ: ದನದ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಳೂರ ಓಣಿಯ ಮಂಜುನಾಥ ನಾಗೇಶ ಶೇಟ್ ಎಂಬವರ ಸೇರಿದ ದನಗಳು ಸಜೀವ ದಹನವಾಗಿವೆ. ಮನೆಯ ಪಕ್ಕದಲ್ಲೇ ದನದಕೊಟ್ಟಿಯಲ್ಲಿ … Continued

ಅಂಕೋಲಾ: ಹಿರಿಯ ಯಕ್ಷಗಾನ ಕಲಾವಿದ ವಿಠೋಬ ನಾಯಕ ನಿಧನ

ಅಂಕೋಲಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಠೋಬ ನಾಯಕ ವಂದಿಗೆ (88) ಅವರು ಗುರುವಾರ ನಿಧನರಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಮಾರು 50 ವರ್ಷಗಳಿಗೂ ಹೆಚ್ಚಿನ ಕಾಲ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದರು. ಅವರು ತಮ್ಮ ಗಂಭೀರ ಪಾತ್ರನಿರ್ವಹಣೆ, … Continued

ರಾಜ್ಯದಲ್ಲಿ ಮಹಾ ಮಳೆಗೆ 20 ಸಾವು : ಸಚಿವ ಕೃಷ್ಣ ಭೈರೇಗೌಡ

ಕುಮಟಾ : ರಾಜ್ಯದಲ್ಲಿ ಮಳೆಗೆ 20 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟ ಸಂಬಂಧ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ … Continued