ವೀಡಿಯೊ…| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆ ಭಾಗಿ ; ಉಗ್ರರ ಶವಗಳ ಮೇಲೆ ಪಾಕ್‌ ಧ್ವಜ…!

ಲಾಹೋರ್‌: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ(Operation Sindoor) ಹೆಸರಿನ ವಾಯು ದಾಳಿಯಲ್ಲಿ ಹತರಾದ ಹಲವಾರು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಬುಧವಾರ ಪಾಕಿಸ್ತಾನ ಸೇನಾ ಸಿಬ್ಬಂದಿ ಮತ್ತು ನಿಷೇಧಿತ ಹಫೀಜ್ ಸಯೀದ್ ಜಮಾತ್-ಉದ್-ದವಾ (JDU) ಸದಸ್ಯರು ಭಾಗವಹಿಸಿದ್ದರು. ಭಾರತದ ಸಶಸ್ತ್ರ ಪಡೆಗಳು … Continued

ಕೂದಲು ಹಿಡಿದು ಜಗ್ಗಾಡಿ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಗ್ರಂಥಪಾಲಕಿ ; ವೀಡಿಯೊ ವೈರಲ್

ಪ್ರಾಂಶುಪಾಲರು ಮತ್ತು ಗ್ರಂಥಪಾಲಕರ ನಡುವೆ ವಾಗ್ವಾದದ ನಂತರ ಇಬ್ಬರ ಮಧ್ಯೆ ಹೊಡೆದಾಟಕ್ಕೆ ಕಾರಣವಾದ ಘಟನೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಅವರ ಜಗಳದ ವೀಡಿಯೊ ವೈರಲ್‌ ಆದ ನಂತರ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಭೋಪಾಲ್‌ನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿರುವ ಏಕಲವ್ಯ ಆದರ್ಶ ಶಾಲೆಯಲ್ಲಿ ಈ … Continued

ವೀಡಿಯೊ..| ಭಯೋತ್ಪಾದಕರಿಗೆ ಆಹಾರ-ಆಶ್ರಯ ನೀಡಿದ್ದ ಆರೋಪಿ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಮುಳುಗಿ ಸಾವು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಾಗ ನದಿಗೆ ಹಾರಿದ ನಂತರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 23 ವರ್ಷದ ಇಮ್ತಿಯಾಜ್ ಅಹ್ಮದ್ ಮಗ್ರೆ ಎಂದು ಗುರುತಿಸಲಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್‌ಇಟಿಗಾಗಿ ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಿದ ನಂತರ, … Continued

ಪಹಲ್ಗಾಮ್ ದಾಳಿ | ಭಾರತದ ಜತೆ ಯುದ್ಧಕ್ಕೆ ಪಾಕ್‌ ಸೈನಿಕರ ಹಿಂಜರಿಕೆ ವರದಿಯ ಮಧ್ಯೆ ಪಿಒಕೆಯಲ್ಲಿ ಸ್ಥಳೀಯರಿಗೆ ಗನ್‌ ತರಬೇತಿ ವೀಡಿಯೊ ವೈರಲ್‌

ನವದೆಹಲಿ: 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಹದಗೆಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಭಾರತ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು, ಭಾರತದದಾಳಿಯ ಭೀತಿ ಎದುರಿಸುತ್ತಿರುವ ಪಾಕಿಸ್ತಾನವು ತನ್ನ ರಕ್ಷಣೆ ಬಲಪಡಿಸಲು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸ್ಥಳೀಯರಿಗೆ ಪಾಕಿಸ್ತಾನಿ ಸೇನೆ … Continued

ವೀಡಿಯೊ…| ಹೀನಾಯ ಸೋಲಿನ ನಂತರ ಕಣ್ಣೀರು ಹಾಕಿದ ಕೆನಡಾದ ಖಲಿಸ್ತಾನಿ ಪರ-ಎನ್‌ಡಿಪಿ ನಾಯಕ ಜಗ್ಮೀತ್‌ ಸಿಂಗ್..!

ಒಟ್ಟಾವಾ: ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಮತ್ತು ಕೆನಡಾದ ರಾಜಕೀಯದಲ್ಲಿ ಖಲಿಸ್ತಾನ್ ಪರ ವ್ಯಕ್ತಿ ಎಂದು ಪ್ರಸಿದ್ಧರಾಗಿರುವ ಜಗ್ಮೀತ್ ಸಿಂಗ್ , ಬರ್ನಾಬಿ ಸೆಂಟ್ರಲ್‌ನಲ್ಲಿ ತಾವು ಸೋತಿರುವುದನ್ನು ಒಪ್ಪಿಕೊಂಡರು ಮತ್ತು ಪಕ್ಷಕ್ಕೆ ಹೊಸ ನಾಯಕನನ್ನು ನೇಮಿಸಿದ ತಕ್ಷಣ ತಮ್ಮ ಪಕ್ಷದ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದರು. ಮಂಗಳವಾರ ರಾತ್ರಿ ಜಗ್ಮೀತ್ ಸಿಂಗ್ ಬರ್ನಾಬಿಯಲ್ಲಿರುವ ತಮ್ಮ … Continued

ಪಹಲ್ಗಾಮ್‌ ದಾಳಿಯ ಮತ್ತಷ್ಟು ವೀಡಿಯೊಗಳು..| ಭಯೋತ್ಪಾದಕ ದಾಳಿ ಬಗ್ಗೆ ಗೊತ್ತಿಲ್ಲದೆ ಸೆರೆಹಿಡಿದ ಜಿಪ್‌ಲೈನ್‌ನಲ್ಲಿದ್ದ ಪ್ರವಾಸಿಗ ; ಜೀವ ರಕ್ಷಣೆಗೆ ಓಡಿದ ಪ್ರವಾಸಿಗರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆದು ಸುಮಾರು ಒಂದು ವಾರ ಕಳೆದಿದೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಚಿತ್ರೀಕರಿಸಿದ ಹಲವಾರು ವೀಡಿಯೊಗಳು ಈಗ ಪರಿಶೀಲನೆಯಲ್ಲಿವೆ. ಬೈಸರನ್ ಹುಲ್ಲುಗಾವಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಜಿಪ್‌ಲೈನ್ ಸವಾರಿಯನ್ನು ರೆಕಾರ್ಡ್ ಮಾಡುತ್ತಿರುವುದನ್ನು ತೋರಿಸುವ ಹೊಸ ವೀಡಿಯೊ ಹೊರಬಿದ್ದಿದೆ, ಅದರಲ್ಲಿ ಕೆಲವು ಪ್ರವಾಸಿಗರು ನೆಲದ ಮೇಲೆ ಓಡುತ್ತಿರುವುದನ್ನು … Continued

ಪಹಲ್ಗಾಮ್ ಭಯೋತ್ಪಾದಕ ದಾಳಿ | ಹೊರಬಿದ್ದ ಮತ್ತೊಂದು ಆಘಾತಕಾರಿ ವೀಡಿಯೊ ; ಪ್ರವಾಸಿಗನ ಮೇಲೆ ಉಗ್ರನ ಅಟ್ಟಹಾಸ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಸ ವೀಡಿಯೊ ಹೊರಬಿದ್ದಿದೆ. ವೀಡಿಯೊದಲ್ಲಿ, ಭಯೋತ್ಪಾದಕನೊಬ್ಬ ಪ್ರವಾಸಿಗರ ಮೇಲೆ ಗುಂಡು ಹಾರಿಸುವುದನ್ನು ಕಾಣಬಹುದು. ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು. ದಾಳಿಯಲ್ಲಿ ಇತರ 17 ಜನರು ಗಾಯಗೊಂಡರು. ವೀಡಿಯೊದಲ್ಲಿ, ಬಿಳಿ ಬಟ್ಟೆ … Continued

ವೀಡಿಯೊ..| ಭಯೋತ್ಪಾದಕರಿಗೆ, ಹಿಂದಿದ್ದವರಿಗೆ ಭಾರತದ ಖಡಕ್‌ ವಾರ್ನಿಂಗ್‌ ಜಗತ್ತಿಗೆ ಗೊತ್ತಾಗಲೆಂದು ಇಂಗ್ಲಿಷಿಗೆ ಭಾಷಣ ಬದಲಾಯಿಸಿದ ಪ್ರಧಾನಿ ಮೋದಿ

ನವದೆಹಲಿ: ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ಬಲವಾದ ಸಂದೇಶವನ್ನು ಸಾರ್ವಜನಿಕ ವೇದಿಕೆಯಿಂದ ಇಡೀ ಜಗತ್ತಿಗೆ ರವಾನಿಸಲು ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಇಂಗ್ಲಿಷ್‌ಗೆ ಬದಲಾಯಿಸಿಕೊಂಡರು. “ಬಿಹಾರದ ಮಣ್ಣಿನಿಂದ, ನಾನು … Continued

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮನಕಲಕುವ ವೀಡಿಯೊ : ಉಗ್ರರು ಪ್ರವಾಸಿಗರ ಹತ್ತಿರ ಹೋಗಿ ಗುಂಡು ಹಾರಿಸಿದರು…

ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಕ್ಷಣವನ್ನು ತೋರಿಸುವ ಮನಕಲಕುವ ದೃಶ್ಯಗಳು ಹೊರಬಂದಿವೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹುಲ್ಲುಗಾವಲಿನಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದ 26 ಅಮಾಯಕ ಪ್ರವಾಸಿಗರನ್ನು ಕೊಂದರು. ಈಗ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಕ್ಷಣದ ವೀಡಿಯೊ ಹೊರಬಿದ್ದಿದೆ. ಈ ವೀಡಿಯೊದಲ್ಲಿ, ಗುಲ್ಮಾರ್ಗ್‌ನ … Continued

ವೀಡಿಯೊ…| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು…!

ಚಲನಚಿತ್ರಗಳಲ್ಲಿ ನೀವು ಮಾನವ vs ರೋಬೋಟ್ ಓಟವನ್ನು ನೋಡಿರಬಹುದು, ಆದರೆ ಚೀನಾ ಇದನ್ನು ವಾಸ್ತವದಲ್ಲಿ ಸಾಧ್ಯವಾಗಿಸುತ್ತಿದೆ. ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ನಡೆದ 21 ಕಿಲೋಮೀಟರ್ ಅರ್ಧ ಮ್ಯಾರಥಾನ್‌ ಓಟದಲ್ಲಿ ಇಪ್ಪತ್ತೊಂದು ಹುಮನಾಯ್ಡ್ ಯಂತ್ರಗಳು ಮಾನವ ಓಟಗಾರರೊಂದಿಗೆ ಸೇರಿಕೊಂಡವು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ತಂಡಗಳು ಈ ಓಟಕ್ಕೆ ಸೇರಿಕೊಂಡವು. ಈ ತಂಡಗಳಲ್ಲಿ ಹಲವು … Continued