ವೀಡಿಯೊ | ಬೆಂಗಳೂರು : ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ; 4 ಕಾರುಗಳು, 5 ದ್ವಿಚಕ್ರ ವಾಹನಗಳಿಗೆ ಡಿಕ್ಕಿ…

ಬೆಂಗಳೂರು: ಬೆಂಗಳೂರಿನ ಫ್ಲೈಓವರ್ ಮೇಲೆ ನಿಯಂತ್ರಣ ತಪ್ಪಿದ ಸರ್ಕಾರಿ ಸ್ವಾಮ್ಯದ ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆಯ ಬಸ್ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಗಾಯಗೊಂಡಿದ್ದಾರೆ. ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದೆ. ವಾಹನದ ನಿಯಂತ್ರಣವನ್ನು ಕಳೆದುಕೊಂಡ ನಂತರ ಚಾಲಕನು ಮುಂದೆ ಚಲಿಸುತ್ತಿದ್ದ ಅನೇಕ ಬೈಕ್‌ಗಳು ಮತ್ತು ಕಾರುಗಳಿಗೆ ಬಸ್‌ ಡಿಕ್ಕಿ ಹೊಡೆದಿರುವುದನ್ನು … Continued

ವೀಡಿಯೊ..| ಪಾತ್ರೆಯಂತೆ ಸೋಪ್‌ ಹಚ್ಚಿ ಪಿಸ್ತೂಲ್ ಗಳನ್ನು ತೊಳೆಯುತ್ತಿರುವ ಮಹಿಳೆ ವೀಡಿಯೊ ವೈರಲ್ ಆದ ಬೆನ್ನಿಗೇ ಅಕ್ರಮ ಫ್ಯಾಕ್ಟರಿ ಪತ್ತೆ ಮಾಡಿದ ಪೊಲೀಸರು !

ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ಸೋಪ್‌ ಹಚ್ಚಿ ನೀರಿನಲ್ಲಿ ತೊಳೆಯುತ್ತಿರುವ ಈ ವೀಡಿಯೊದಿಂದಾಗಿ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪೊಲೀಸರು ಈ ವೀಡಿಯೊ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನೆಯೊಂದನ್ನು ಪತ್ತೆ ಮಾಡಿದ್ದು, ಅದಕ್ಕೆ ಬೀಗ ಹಾಕಿದ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ. ವೈರಲ್ … Continued

ವೀಡಿಯೊ..| ಗಿರಗಿಟ್ಟಿ ಹೊಡೆಯುತ್ತ ನೆಲಕ್ಕೆ ಅಪ್ಪಳಿಸಿದ ವಿಮಾನ ; ಎಲ್ಲ 62 ಮಂದಿ ಸಾವು

62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನವು ಶುಕ್ರವಾರ ಬ್ರೆಜಿಲ್‌ನ ಸಾವೊ ಪಾಲೊ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಅಪಘಾತದ ಸ್ಥಳದ ಬಳಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಎಟಿಆರ್ ನಿರ್ಮಿತ ವಿಮಾನವು ನಿಯಂತ್ರಣ ತಪ್ಪಿ ಗಿರಕಿ ಹೊಡೆಯುತ್ತಿರುವುದನ್ನು ತೋರಿಸಿದೆ, ಅದು ಮನೆಗಳ ಸಮೀಪವಿರುವ ಮರಗಳ ಸಮೂಹದ ಹಿಂದೆ … Continued

ವೀಡಿಯೊ..| ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ; ಶಾಕ್‌ ಆದ ಕ್ರಿಕೆಟ್‌ ಪ್ರೇಮಿಗಳು

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರು ನಡೆದುಕೊಂಡು ಹೋಗಲಾರದ ಸ್ಥಿತಿಯಲ್ಲಿದ್ದಾರೆಯೇ…? ಅವರು ನಡೆದುಕೊಂಡು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದವರ ಸಹಾಯ ಕೇಳಿದ ವೀಡಿಯೊವೊಂದು ವೈರಲ್‌ ಆಗಿದೆ. ಭಾರತದ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಭಾನ್ವಿತ ಎಡಗೈ ಆಟಗಾರರಲ್ಲಿ ಒಬ್ಬರಾಗಿದ್ದ ವಿನೋದ ಕಾಂಬ್ಳಿ ಅವರಿಗೆ ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದೆ ಬೈಕ್‌ನ ಆಸರೆ … Continued

ಬೆಂಗಳೂರಲ್ಲಿ ಆಘಾತಕಾರಿ ಘಟನೆ ; ಬೆಳಗಿನ ವಾಕಿಂಗ್‌ ಗೆ ಹೊರಟಿದ್ದ ಮಹಿಳೆ ತಬ್ಬಿಹಿಡಿದು ಕಿರುಕುಳ ನೀಡಿದ ದುಷ್ಕರ್ಮಿ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ಬೆಳಗಿನ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 2 ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯ ವೀಡಿಯೊ ವೈರಲ್‌ ಆಗಿದೆ. ವೀಡಿಯೊದಲ್ಲಿ ಮಹಿಳೆ ಮನೆಯೊಂದರ ಹೊರಗೆ ನಿಂತಿರುವುದನ್ನು ತೋರಿಸುತ್ತದೆ, ಆಗ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯ … Continued

ವೀಡಿಯೊ..| ದೆಹಲಿ ಮೆಟ್ರೊ ರೈಲಿನಲ್ಲಿ ದೇವೇಗೌಡ ಪ್ರಯಾಣ ; ಇಂದು ನನ್ನ ಇಚ್ಛೆ ಈಡೇರಿದೆ ಎಂದ ಮಾಜಿ ಪ್ರಧಾನಿ

ನವದೆಹಲಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಭಾನುವಾರ (ಆಗಸ್ಟ್‌ 4) ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದರು. 91 ವರ್ಷದ ದೇವೇ ಗೌಡ ಅವರ ಜೊತೆ ದೆಹಲಿ ಮೆಟ್ರೋದ ಹಲವು ಹಿರಿಯ ಅಧಿಕಾರಿಗಳು ಇದ್ದರು. ರೈಲಿನಲ್ಲಿದ್ದ ದೇವೇಗೌಡರು ಪ್ರಯಾಣಿಕರು ಮತ್ತು ಅಧಿಕಾರಿಗಳೊಂದಿಗೆ ಚಿಟ್-ಚಾಟ್ ಮಾಡಿದರು. ದೆಹಲಿಯ ನಾಯಕ ಲೋಕ ಕಲ್ಯಾಣ ಮಾರ್ಗದ ನಿಲ್ದಾಣದಲ್ಲಿ … Continued

ಪ್ರಕೃತಿ ವಿಸ್ಮಯ | ಕುಸಿದುಬಿದ್ದು ಶವದಂತಾಗಿದ್ದ ಸಂಗಾತಿಗೆ ‘ಸಿಪಿಆರ್’ ತರಹದ ಟೆಕ್ನಿಕ್‌ ಮೂಲಕ ಬದುಕಿಸಿದ ಗುಬ್ಬಚ್ಚಿ…!! ಮನಮಿಡಿಯುವ ವೀಡಿಯೊ ವೈರಲ್

ಎರಡು ಹಕ್ಕಿಗಳನ್ನು ಒಳಗೊಂಡ ಹೃದಯ ಸ್ಪರ್ಶಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಸಾಯುತ್ತಿರುವ ಹಕ್ಕಿಯ ಜೀವವನ್ನು ಉಳಿಸಲು ಮತ್ತೊಂದು ಹಕ್ಕಿಯು ಶ್ರಮಿಸುತ್ತಿರುವ ಅತ್ಯಂತ ಮನಮಿಡಿಯುವ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ. ಶವದಂತೆ ಕೆಳಗೆ ಬಿದ್ದಿದ್ದ ಇನ್ನೊಂದು ಹಕ್ಕಿಯನ್ನು ಯಶಸ್ವಿಯಾಗಿ ಉಸಿರಾಡುವಂತೆ ಮಾಡಲು ಮತ್ತೊಂದು ಹಕ್ಕಿ ಮಾನವರಿಗೆ ಮಾಡುವ ಕಾರ್ಡಿಯೋ ಪಲ್ಮನರಿ ರೀಸಸಿಟೈಟ್‌ (CPR)ವನ್ನು … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ವೀಡಿಯೊ..| ಅನಾರೋಗ್ಯ ಪೀಡಿತ ತನ್ನ ʼಕೇರ್‌ ಟೇಕರ್‌ʼ ನೋಡಲು ಆಸ್ಪತ್ರೆಗೆ ಬಂದ ಆನೆ : ಅದು ಮಂಡಿಯೂರಿ ತೋರಿದ ಪ್ರೀತಿ ಭಾವುಕರನ್ನಾಗಿಸದೇ ಇರದು

ಕೆಲವು ಪ್ರಾಣಿಗಳು ತುಂಬಾ ಸ್ನೇಹಪರವಾಗಿರುತ್ತವೆ. ಅವುಗಳಲ್ಲಿ ಆನೆಯೂ ಒಂದು. ಆನೆಗಳಿಗೆ ಸಂಬಂಧಿಸಿದ ಇಂತಹ ಹಲವು ವೀಡಿಯೋಗಳನ್ನು ನೀವು ಇಂಟರ್ನೆಟ್‌ನಲ್ಲಿ ನೋಡಿರಬೇಕು, ಅದರಲ್ಲಿ ಕೆಲವೊಮ್ಮೆ ಅವುಗಳ ತುಂಟಾಟ ಮತ್ತು ಕೆಲವೊಮ್ಮೆ ಅವುಗಳ ಮುದ್ದಾದ ನಡೆಗಳು ಮನ ಗೆಲ್ಲುತ್ತವೆ. ಆನೆಗಳಿಗೆ ಸಂಬಂಧಿಸಿದ ಇಂಥದ್ದೇ ವೀಡಿಯೊವೊದು ಜನರ ಗಮನ ಸೆಳೆಯುತ್ತಿದ್ದು, ದೊಡ್ಡ ಆನೆಯೊಂದು ಜೀವಮಾನವಿಡೀ ತನ್ನನ್ನು ನೋಡಿಕೊಳ್ಳುತ್ತಿದ್ದ ಈಗ ಸಾಯುವ … Continued

ವೀಡಿಯೊ | ನಾಗರಿಕ ಸಂಪರ್ಕವೇ ಇಲ್ಲದ, ಕಣ್ಣಿಗೇ ಕಾಣಿಸಿಕೊಳ್ಳದ ವಿಶ್ವದ ಅತಿದೊಡ್ಡ ಬುಡಕಟ್ಟು ಜನಾಂಗದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸ್ಥಳೀಯ ಹಕ್ಕುಗಳ ಲಾಭರಹಿತ ಸಂಸ್ಥೆ ಸರ್ವೈವಲ್ ಇಂಟರ್‌ನ್ಯಾಷನಲ್‌ ನಿಂದ ಪಡೆದ ಗಮನಾರ್ಹವಾದ ಅಪರೂಪದ ಚಿತ್ರಗಳು ಮತ್ತು ವೀಡಿಯೊಗಳು ಈವರೆಗೆ ನಾಗರಿಕ ಸಂಪರ್ಕಕ್ಕೇ ಬಾರದ ಸ್ಥಳೀಯ ಬುಡಕಟ್ಟು ಜನಾಂಗದ ದೈನಂದಿನ ದಿನಚರಿಯನ್ನು ತೋರಿಸುತ್ತವೆ, ಇದು ಮರ ಕಟಾವ್‌ ಮಾಡುವ ಪ್ರದೇಶಕ್ಕೆ “ಅಪಾಯಕಾರಿಯಾಗಿ ಹತ್ತಿರದಲ್ಲಿದೆ” ಎಂದು ವರದಿ ಹೇಳಿದೆ. ಪೆರುವಿನ ಮಾಶ್ಕೊ ಪಿರೊ ಬುಡಕಟ್ಟು 50 ಕ್ಕೂ ಹೆಚ್ಚು … Continued