ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಟ್ರಾಫಿಕ್ ನಿಯಮ ಪದೇ ಪದೇ ಉಲ್ಲಂಘಿಸಿ ಕಿರುಕುಳ ನೀಡಿದ ಗಂಡ….!

ಪತಿ ಪತ್ನಿಯರ ಜಗಳ ವಿಕೋಪಕ್ಕೆ ಹೋಗಿ ಪತ್ನಿ ನಂತರ ತನ್ನ ತವರು ಮನೆಗೆ ಹೋಗಿದ್ದಳು. ಜಗಳ ವಿಕೋಪಕ್ಕೆ ಹೋದ ನಂತರ ಅವರಿಬ್ಬರ ಸಂಬಂಧ ಹಳಸಿ ಅದು ವಿಚ್ಛೇದನದ ವರೆಗೆ ಬಂದು ನಿಂತಿತು. ವಿಚ್ಛೇದನ ಪ್ರಕರಣ ನ್ಯಾಯಾಲಯದ ಮುಂದೆ ಇದ್ದು, ಈ ವೇಳೆ ಪತಿ ಮಹಾಶಯ ತನ್ನ ಪತ್ನಿಗೆ ಕಿರುಕುಳ ನೀಡಲು ಅಸಾಮಾನ್ಯ ಮಾರ್ವನ್ನು ಅನುಸರಿಸಿದ್ದಾನೆ. ಪತ್ನಿಯ … Continued

ʼಹೈ ಹೀಲ್ಸ್‌ʼ ಚಪ್ಪಲಿ ಕೊಡಿಸಿಲ್ಲವೆಂದು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹೆಂಡತಿ…!

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಅಸಮಾಮಾನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ಎತ್ತರದ ಹಿಮ್ಮಡಿಯ (ಹೈ ಹೀಲ್ಸ್‌) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ…! ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನ ಹಂತಕ್ಕೆ ತಲುಪಿದ್ದು, ಇಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ … Continued

ಪಿಂಕಿ ಈಸ್ ಕಿಲ್ಲಿಂಗ್ ಮೀ ; ಹೆಂಡತಿ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಗಂಡ ಆತ್ಮಹತ್ಯೆ

ಹುಬ್ಬಳ್ಳಿ : 40 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಕಿರುಕುಳದಿಂದ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೀಟರ್‌ ಗೊಲ್ಲಪಲ್ಲಿ ಎಂಬವರು ಪತ್ನಿ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

3ನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ವ್ಯಕ್ತಿ…!

ಮುಂಬೈ: ಹೆಂಡತಿ ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಕುಂಡ್ಲಿಕ ಉತ್ತಮ ಕಾಳೆ (32) ಗುರುವಾರ ರಾತ್ರಿ ಇಲ್ಲಿಂದ 520 ಕಿಲೋಮೀಟರ್ ದೂರದಲ್ಲಿರುವ ಗಂಗಾಖೇಡ ನಾಕಾದಲ್ಲಿ ತನ್ನ … Continued

ಮತ್ತೊಬ್ಬಳನ್ನು ಮದುವೆಯಾಗಲು ಬದುಕಿರುವ ಪತ್ನಿಗೆ ಶ್ರಾದ್ಧ ಮಾಡಿ ಪಿಂಡಬಿಟ್ಟ ಗಂಡ…!

ಲಕ್ನೋ : ಉತ್ತರಪ್ರದೇಶದ ಕನೌಜ್‌ ನಲ್ಲಿ ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿ ಜೀವಂತವಾಗಿರುವಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಮೊದಲ ಪತ್ನಿಗೆ ಶ್ರಾದ್ಧ ಮಾಡುವ ಮೂಲಕ ನಂಬಿಸಿದ್ದಾನೆ. ಈಗ ಈತನ ಮೇಲೆ ದ್ವಿಪತ್ನಿತ್ವ ಮತ್ತು ವಂಚನೆ ಆರೋಪ ಹೊರಿಸಲಾಗಿದೆ. ಕನೌಜ್‌ನ ತಾಳಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿ ಸಾರಾಯಿ ನಿವಾಸಿ ಪವನ … Continued

ಪತಿಯ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ಉಪವಾಸ ಮಾಡಿದ ನಂತರ ವಿಷ ಹಾಕಿ ಗಂಡನನ್ನು ಕೊಂದ ಪತ್ನಿ…!

ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಕರ್ವಾ ಚೌತ್ ಉಪವಾಸವನ್ನು ಮುಗಿಸಿದ ಕೆಲವು ಗಂಟೆಗಳ ನಂತರ ಮಹಿಳೆಯೊಬ್ಬರು ತನ್ನ ಪತಿಗೆ ವಿಷ ನೀಡಿ ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶೈಲೇಶಕುಮಾರ (32) ಎಂಬವರು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಅವರ ಪತ್ನಿ ಸವಿತಾ ಅವರಿಗೆ ವಿಷ ನೀಡಿದ್ದಾಳೆ ಎಂದು ಕೌಶಂಬಿ ಜಿಲ್ಲೆಯ … Continued

ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿ, ಮೈ ಮೇಲೆ ಬರೆ ಎಳೆದ ಪೊಲೀಸಪ್ಪ ; ತಪ್ಪಿಸಿಕೊಂಡು ಬಂದ ಪತ್ನಿ ಹೇಳಿಕೆ

ಬೆಳಗಾವಿ : ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸನೊಬ್ಬ ತನ್ನ ಪತ್ನಿಯ ಮೇಲೆ ಸಂಶಯ ಪಟ್ಟು ಆಕೆಯನ್ನು ಶೆಡ್‌ನಲ್ಲಿ ಕೂಡಿಹಾಕಿ ಹಲ್ಲೆ ಮಾಡಿ ಮೈಮೇಲೆ ಬರೆ ಎಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈತ ಹೆಂಡತಿಯ ನಡತೆ ಬಗ್ಗೆ ಸಂಶಯ ಪಟ್ಟು ಎರಡು ತಿಂಗಳಿನಿಂದ ಶೆಡ್‌ನಲ್ಲಿ ಕೂಡಿಟ್ಟು … Continued

ಮೃತ ಪತ್ನಿಯ ಅಂತ್ಯಸಂಸ್ಕಾರ ಮುಗಿದು 4 ದಿನಗಳ ಬಳಿಕ 600 ಕಿಮೀ ದೂರದಲ್ಲಿ ಆಕೆ ಜೀವಂತವಾಗಿ ಪತ್ತೆ…!

ಗೋರಖಪುರ : ಪತ್ನಿ ಮೃತಪಟ್ಟಿದ್ದಾಳೆ ಎಂದು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದ ಪತಿಗೆ ನಾಲ್ಕು ದಿನಗಳ ನಂತರ ಪತ್ನಿ 600 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈಗ ಸತಿ ಪತಿ ಮತ್ತೆ ಒಂದಾಗಿರುವ ಅಸಾಮಾನ್ಯ ಘಟನೆ ಉತ್ತರ ‍ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಗೋರಖಪುರದ ಬನ್ಸ್‌ಗಾಂವ್‌ನ ನಿವಾಸಿ ರಾಮ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ … Continued

ಎಂಥಾ ಲೋಕವಯ್ಯ…! ಪತಿಯನ್ನು ಕೊಂದವರಿಗೆ ₹ 50 ಸಾವಿರ ಬಹುಮಾನ ನೀಡುವೆ : ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮಹಿಳೆ…!

ಲಕ್ನೋ: ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊ‌ಬ್ಬರು ತಮ್ಮ ವಾಟ್ಸ್‌ಆಪ್‌ ಖಾತೆಯಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ಬಹ್ ಜಿಲ್ಲೆಯ ದಂಪತಿ ನಡುವಿನ ಭಿನ್ನಾಭಿಪ್ರಾಯ ಎಷ್ಟು ತೀವ್ರವಾಗಿದೆಯೆಂದರೆ, ಪತಿ ಹತ್ಯೆಗೆ ಪತ್ನಿ ₹ 50,000 ಬಹುಮಾನ ಘೋಷಿಸಿದ್ದಾರೆ. ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಆಫರ್ ನೀಡಿದ್ದಾಳೆ…!! … Continued

ಕಾನೂನಿನ ದೃಷ್ಟಿಯಲ್ಲಿ ಸಿಂಧುತ್ವ ಹೊಂದಿರದ ಪತ್ನಿಗೆ ಪಿಂಚಣಿಯಲ್ಲಿ ಹಕ್ಕಿಲ್ಲ : ಕರ್ನಾಟಕ ಹೈಕೋರ್ಟ್‌

ಬೆಂಗಳೂರು : ಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ವಿವಾಹವಾಗಿದ್ದ ಸರ್ಕಾರಿ ಉದ್ಯೋಗಿಯಾಗಿದ್ದ ಪತಿಯ ಮರಣದ ಹಿನ್ನೆಲೆಯಲ್ಲಿ ಪಿಂಚಣಿ ಕೋರಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. ಕೌಟುಂಬಿಕ ಪಿಂಚಣಿಯನ್ನು ಪತ್ನಿಗೆ ಪಾವತಿಸಲಾಗುತ್ತದೆಯೇ ವಿನಃ ಕಾನೂನಿನ ದೃಷ್ಟಿಯಲ್ಲಿ ಸಿಂಧುತ್ವ ಹೊಂದಿರದ ಪತ್ನಿಗೆ ಅಲ್ಲ ಎಂದು ಹೈಕೋರ್ಟ್‌ ಅಲ್ಲ. ಮೊದಲನೇ ಪತ್ನಿ ಬದುಕಿದ್ದಾಗ 2ನೇ … Continued