ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ಪಿ.ಎಸ್. ದಿನೇಶಕುಮಾರ ಹೆಸರು ಕೊಲಿಜಿಯಂನಿಂದ ಶಿಫಾರಸ್ಸು

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಂಚ್ರ ವರಾಳೆ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿದ ಬೆನ್ನಲ್ಲೇ, ಅವರ ಪದೋನ್ನತಿಯಿಂದ ತೆರವಾಗುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ಪಿ.ಎಸ್‌. ದಿನೇಶ ಕುಮಾರ ಅವರ ಹೆಸರನ್ನು ಕೊಲಿಜಿಯಂ ಶುಕ್ರವಾರ ಶಿಫಾರಸ್ಸು ಮಾಡಿದೆ. ನ್ಯಾಯಮೂರ್ತಿ ದಿನೇಶಕುಮಾರ ಅವರು 2015ರಿಂದ … Continued

ಸಾವಿರಾರು ವರ್ಷ ಕಳೆದ್ರೂ ವಿವಾದ ಆಗದಂತೆ ರಾಮಮಂದಿರದ ಕೆಳಗೆ 2 ಸಾವಿರ ಅಡಿ ಆಳದಲ್ಲಿ ‘ಟೈಮ್ ಕ್ಯಾಪ್ಸುಲ್’ ಇಡ್ತಾರೆ..; ಏನಿದರ ವಿಶೇಷತೆ?

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ‘ರಾಮಮಂದಿರ’ ಅಡಿಯಲ್ಲಿ 2,000 ಅಡಿಗಳಷ್ಟು ಆಳದಲ್ಲಿ ‘ಟೈಮ್ ಕ್ಯಾಪ್ಸುಲ್’ ಅನ್ನು ಇರಿಸುತ್ತದೆ. ಈ ಟೈಮ್ ಕ್ಯಾಪ್ಸುಲ್ ರಾಮ ಜನ್ಮಭೂಮಿಯ ವಿವರವಾದ ಇತಿಹಾಸವನ್ನು ಹೊಂದಿರುತ್ತದೆ. ಟ್ರಸ್ಟ್‌ನ ಸದಸ್ಯರ ಪ್ರಕಾರ, ಭವಿಷ್ಯದಲ್ಲಿ ಇನ್ನೆಂದೂ ಈ ಪ್ರದೇಶದಲ್ಲಿ ಮಂದಿರದ ಬಗ್ಗೆ ಇಂತಹ ವಿವಾದವಾಗದಂತೆ ತೀರ್ಥ ಕ್ಷೇತ್ರ ಟ್ರಸ್ಟ್ ‘ಯೋಜನೆ’ ರೂಪಿಸಿದೆ. ಭವಿಷ್ಯದ … Continued

ವೀಡಿಯೊ…| ಮುಖ್ಯಮಂತ್ರಿ ಜೀ, ಐಸಾ ಹೋತಾ ರೆಹತಾ ಹೈ…’: ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರತ್ತ ನೋಡಿ ಪ್ರಧಾನಿ ಮೋದಿ ಹೀಗಂದಿದ್ಯಾಕೆ..?

ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬೋಯಿಂಗ್‌ನ ಹೊಸ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರತ್ತ ನೋಡಿಕೊಂಡು “ಮುಖ್ಯಮಂತ್ರಿ ಜಿ ಐಸಾ ಹೋತಾ ರೆಹತಾ ಹೈ (ಮುಖ್ಯಮಂತ್ರಿಯವರೇ, ಇದು ನಡೆಯುತ್ತಲೇ ಇರುತ್ತದೆ) ಎಂದು  ಚಟಾಕಿ … Continued

ಇದು ಕಾಂಗ್ರೆಸ್ ಸರ್ಕಾರವೋ? ಆರ್ ಎಸ್ ಎಸ್ ಸರ್ಕಾರವೋ ? :ಸಿಸಿಬಿ ವಿಚಾರಣೆ ಬೆನ್ನಲ್ಲೇ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧವೇ ಹರಿಹಾಯ್ದ ಬಿ.ಕೆ. ಹರಿಪ್ರಸಾದ

ಬೆಂಗಳೂರು: ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನ ಪರಿಷತ್‌ ಬಿಕೆ ಹರಿಪ್ರಸಾದ (BK Hari Prasad) ಅವರನ್ನು ಶುಕ್ರವಾರ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ನಡೆಯಿಂದ ಅವರು ತಮ್ಮದ ಪಕ್ಷದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದೇನು ಕಾಂಗ್ರೆಸ್ ಸರ್ಕಾರವೋ?, ಬೇರೆ ಸರ್ಕಾರವೋ ಎಂದು … Continued

ನಂಜನಗೂಡು : ಕಪಿಲ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜೆಗೆ ಬಳಿ ಕಪಿಲ ನದಿಯಲ್ಲಿ ಶುಕ್ರವಾರ ಸ್ನಾನಕ್ಕೆಂದು ಇಳಿದಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ತುಮಕೂರು ಮೂಲದ ಗವಿರಂಗ (19), ರಾಕೇಶ (19) ಹಾಗೂ ಅಪ್ಪು(16) ಎಂದು ಗುರುತಿಸಲಾಗಿದೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. … Continued

ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೂ ಮುನ್ನ ರಾಮ ಲಲ್ಲಾ ವಿಗ್ರಹದ ಮುಖದ ಫೋಟೋ ಬಿಡುಗಡೆ

ನವದೆಹಲಿ : ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದ್ದು, ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ರಾಮನ ವಿಗ್ರಹವನ್ನು ಸಮಾರಂಭಕ್ಕೆ ಕೆಲವು ದಿನಗಳ ಮುಂಚಿತವಾಗಿ ಶುಕ್ರವಾರ ಬಹಿರಂಗಪಡಿಸಲಾಗಿದೆ. ವಿಗ್ರಹವು ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದು, ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದು ನಿಂತಿರುವ ಭಂಗಿಯಲ್ಲಿದೆ.ಮೈಸೂರು ಮೂಲದ ಕಲಾವಿದ ಅರುಣ ಯೋಗಿರಾಜ … Continued

ಬೆಂಗಳೂರಲ್ಲಿ ಬೋಯಿಂಗ್ ತಂತ್ರಜ್ಞಾನ ಕ್ಯಾಂಪಸ್‌ ಉದ್ಘಾಟಸಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC) ಕ್ಯಾಂಪಸ್‌ (BIETC Campus) ಶುಕ್ರವಾರ ಲೋಕಾರ್ಪಣೆ ಮಾಡಿದರು. ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲಿ ಬೋಯಿಂಗ್‌ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 … Continued

ವೀಡಿಯೊ…| ರೈಲು ಪ್ರಯಾಣಿಕನಿಗೆ ಮನಸೋ ಇಚ್ಛೆ ಥಳಿಸಿದ ಟಿಟಿಇ : ವೀಡಿಯೊ ವೈರಲ್ ಆದ ನಂತ್ರ ಅಮಾನತು

ಬರೌನಿ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದ ಪ್ರಯಾಣಿಕರೊಬ್ಬರನ್ನು ನಿಂದಿಸಿದ ಮತ್ತು ನಂತರ ಪ್ರಯಾಣಕನಿಗೆ ಅನೇಕ ಸಲ ಹೊಡೆದ ನಂತರ ಭಾರತೀಯ ರೈಲ್ವೇ ಗುರುವಾರ ಪ್ರಯಾಣ ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಅಮಾನತುಗೊಳಿಸಿದೆ. ಟಿಟಿಇ ಪ್ರಯಾಣಿಕನಿಗೆ ಹೊಡೆದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ಕಾಣಿಸಿಕೊಂಡ ನಂತರ, ಟಿಟಿಇಯನ್ನು ಅಮಾನತುಗೊಳಿಸಲಾಯಿತು ಮತ್ತು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. … Continued

ವೀಡಿಯೊ…| ಹಾರಾಟದ ವೇಳೆ ಆಕಾಶದಲ್ಲಿ ಇಂಜಿನ್‌ ಗೆ ಬೆಂಕಿ ಹೊತ್ತಿಕೊಂಡ ನಂತರ ತುರ್ತು ಭೂಸ್ಪರ್ಶ ಮಾಡಿದ ವಿಮಾನ

ಇಂಜಿನ್‌ಗೆ ಬೆಂಕಿ ತಗುಲಿದ ನಂತರ US ಬೋಯಿಂಗ್ ಕಾರ್ಗೋ ವಿಮಾನದಿಂದ ಜ್ವಾಲೆಗಳು ಹೊರಬಂದವು ಅಟ್ಲಾಸ್ ಏರ್ ಕಾರ್ಗೋ ವಿಮಾನವು ಹಾರಾಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅಟ್ಲಾಸ್ ಏರ್ ಬೋಯಿಂಗ್ ಕಾರ್ಗೋ ವಿಮಾನವು ಹೊರಟ ಸ್ವಲ್ಪ ಸಮಯದ ನಂತರ … Continued

ಬಿಲ್ಕಿಸ್‌ ಬಾನು ಪ್ರಕರಣ: ಅಪರಾಧಿಗಳು ಜನವರಿ 21ರೊಳಗೆ ಶರಣಾಗಲು ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಶರಣಾಗಲು … Continued