ವೀಡಿಯೊ…| ಶಬ್ದದ ವೇಗಕ್ಕಿಂತ ವೇಗವಾಗಿ ಹಾರಾಟ ಮಾಡುವ ʼ ಶಬ್ದ ರಹಿತ ಸೂಪರ್‌ಸಾನಿಕ್‌ ವಿಮಾನʼ ಅನಾವರಣಗೊಳಿಸಿದ ನಾಸಾ

ನಾಸಾ (NASA) ಮತ್ತು ಅಮೆರಿಕ ರಕ್ಷಣಾ ಕಂಪನಿ ಲಾಕ್ಹೀಡ್ ಮಾರ್ಟಿನ್ ಆರು ವರ್ಷಗಳ ಸಂಶೋಧನೆಯ ನಂತರ X-59 ಸೂಪರ್‌ಸಾನಿಕ್‌ ವಿಮಾನವನ್ನು ಅನಾವರಣಗೊಳಿಸಿದೆ. ಹಗೂ ಇದನ್ನು ಪ್ರಯಾಣಿಕರ ವಿಮಾನವಾಗಿಸುವ ನಿಟ್ಟಿನಲ್ಲಿ ತನ್ನ ಕೆಲಸ ಮುಂದುವರಿಸಿದೆ. ‘ಶಬ್ದ ರಹಿತ’ ಸೂಪರ್‌ಸಾನಿಕ್ ವಿಮಾನವು ಹಿಂದಿನ ಸೂಪರ್‌ಸಾನಿಕ್ ವಿಮಾನಗಳ ಅಪ್‌ಗ್ರೇಡ್ ಆಗಿದೆ. X-59 ಶಬ್ದಕ್ಕಿಂತ 1.4 ಪಟ್ಟು ವೇಗದಲ್ಲಿ ಅಥವಾ ಸುಮಾರು … Continued

ಆಂಧ್ರ ಕಾಂಗ್ರೆಸ್ ಅಧ್ಯಕ್ಷರಾಗಿ ವೈ.ಎಸ್. ಶರ್ಮಿಳಾ ನೇಮಕ

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರನ್ನು ಮಂಗಳವಾರ ಆಂಧ್ರಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿ ಜನವರಿ 4 ರಂದು ಕಾಂಗ್ರೆಸ್‌ಗೆ ಸೇರಿದ್ದರು. ಆಂಧ್ರಪ್ರದೇಶದ ಅಧ್ಯಕ್ಷ ಸ್ಥಾನಕ್ಕೆ ಗಿಡುಗು ರುದ್ರರಾಜು ರಾಜೀನಾಮೆ ನೀಡಿದ ಒಂದು … Continued

ಕೃಷ್ಣ ಜನ್ಮಭೂಮಿ ವಿವಾದ: ಸದ್ಯಕ್ಕೆ ಮಥುರಾ ಶಾಹಿ ಈದ್ಗಾ ಸಮೀಕ್ಷೆ ಇಲ್ಲ ; ಕೋರ್ಟ್‌ ಕಮಿಷನರ್‌ ನೇಮಕ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಸಂಕೀರ್ಣದ ಸಮೀಕ್ಷೆ ನಡೆಸಲು ಅಡ್ವೊಕೇಟ್ ಕಮಿಷನ್ ನೇಮಕಕ್ಕೆ ಅನುಮತಿ ನೀಡಿದ ಅಲಹಾಬಾದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ. ಹೈಕೋರ್ಟ್‌ ಪ್ರಕರಣದ ವಿಚಾರಣೆ ಮುಂದುವರೆಸಬಹುದಾದರೂ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವವರೆಗೆ ಕೋರ್ಟ್‌ ಕಮಿಶನ್ ನೇಮಕ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ … Continued

ಕಾಂಗ್ರೆಸ್ಸಿನವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಮಾತ್ರ ಯಾಕೆ..? ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ: ಅನಂತಕುಮಾರ ಹೆಗಡೆ

ಶಿರಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆಯವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದು ಸರಿ ಎಂದಾದರೆ ನಾನು ಏಕವಚನದಲ್ಲಿ ಮಾತನಾಡಿದ್ದು ಹೇಗೆ ತಪ್ಪಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದ್ದಾರೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಮಾತ್ರ ಯಾಕೆ ಎಂದು ಕೇಳಿದ್ದಾರೆ.ಸಂಸ್ಕೃತಿ ಹಾಗೂ ಸಭ್ಯತೆ ಬಗ್ಗೆ ಪಾಠ … Continued

‘ಪೂಜಿಸಲೆಂದೇ ಹೂಗಳ ತಂದೆ….’ ಕನ್ನಡದ ಹಾಡಿಗೆ ಮೆಚ್ಚಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ‘ಪೂಜಿಸಲೆಂದೇ ಹೂಗಳ ತಂದೆ’ ಎಂಬ ಕನ್ನಡದ ಜನಪ್ರಿಯ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಶಿವಶ್ರೀ ಸ್ಕಂದ ಪ್ರಸಾದ ಎಂಬ ಯುವ ಗಾಯಕಿ ಹಾಡಿರುವ ಹಾಡಿನ ಯೂಟ್ಯೂಬ್ ಲಿಂಕ್ ಪೋಸ್ಟ್ ಅನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ ಅವರ ಈ ಗಾಯನವು ಪ್ರಭು ಶ್ರೀ ರಾಮನ … Continued

ಬೆಂಗಳೂರು : ಮನೆಯಲ್ಲಿ ಸಿಲಿಂಡರ್ ಸ್ಫೋಟ ; 8 ಮಂದಿಗೆ ಗಾಯ, ಐದು ಮನೆಗಳಿಗೆ ಹಾನಿ

ಬೆಂಗಳೂರು : ಬೆಂಗಳೂರಿನ ಯಲಹಂಕದ ಎಲ್‌ಬಿಎಸ್‌ನಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು 8 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರಿಗೆ 60% ರಷ್ಟು ಸುಟ್ಟಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡ ಅಫರ್ವಾಜ್, ಸಲ್ಮಾ, ಶಾಹಿದ್, ಫಸಿಯಾ, ಅಸ್ಮಾ ಎಂಬವರನ್ನು … Continued

ಅಮೆರಿಕದ ಅಧ್ಯಕ್ಷೀಯ ರೇಸ್ ನಿಂದ ಹಿಂದೆ ಸರಿದ ವಿವೇಕ ರಾಮಸ್ವಾಮಿ

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷ ಸ್ಥಾನದ (US Presidential Election 2024) ರೇಸ್‌ನಲ್ಲಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು ಮಂಗಳವಾರ ಸ್ಪರ್ಧೆಯಿಂದ ಹೊರಗೆ ಬಂದಿದ್ದಾರೆ. ಈಗ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಭಾರತೀಯ ಮೂಲದ ಅಮೆರಿಕನ್​ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್​ ವಲಯದ ಖ್ಯಾತ ಉದ್ಯಮಿ … Continued

ವೀಡಿಯೊ..| ಇರಾಕಿನಲ್ಲಿರುವ ಇಸ್ರೇಲಿ “ಪತ್ತೇದಾರಿ ಕೇಂದ್ರ”ದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ : ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚಳ

ದುಬೈ/ಬಾಗ್ದಾದ್: ಇರಾಕ್‌ನ ಅರೆ ಸ್ವಾಯತ್ತ ಪ್ರದೇಶವಾದ ಕುರ್ದಿಸ್ತಾನ್ ಪ್ರದೇಶದಲ್ಲಿ ಇಸ್ರೇಲ್‌ನ “ಪತ್ತೇದಾರಿ ಕೇಂದ್ರ”(spy headquarters)ದ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ʼರೆವಲ್ಯುಶ್ನರಿ ಗಾರ್ಡ್‌ʼಗಳು ಸೋಮವಾರ ತಡರಾತ್ರಿ ವರದಿ ಮಾಡಿವೆ ಎಂದು ಸರ್ಕಾರಿ ಮಾಧ್ಯಮ ಸೋಮವಾರ ತಡರಾತ್ರಿ ವರದಿ ಮಾಡಿದೆ. ಆದರೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಿರಿಯಾದಲ್ಲಿಯೂ ದಾಳಿ ಮಾಡಿದೆ ಎಂದು ಇರಾನ್‌ ಪಡೆ ಹೇಳಿದೆ. ಇರಾನ್‌ನ … Continued

ಭಾರತ-ಪ್ರಧಾನಿ ಮೋದಿಗೆ ಅವಹೇಳನ : ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ ನಟ ನಾಗಾರ್ಜುನ, ಲಕ್ಷದ್ವೀಪಕ್ಕೆ ಹೋಗ್ತೇನೆ ಎಂದ ತೆಲುಗು ಸೂಪರ್‌ ಸ್ಟಾರ್‌

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ನ ಮೂವರು ಮಂತ್ರಿಗಳು ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದವರ ಸಂಖ್ಯೆ ಏರುತ್ತಿದ್ದು, ಆ ಪಟ್ಟಿಗೆ ಈಗ ತೆಲುಗು ಮೆಗಾಸ್ಟಾರ್ ಅಕ್ಕಿನೇನಿ ನಾಗಾರ್ಜುನ ಸೇರ್ಪಡೆಯಾಗಿದ್ದಾರೆ. ಮಾಲ್ಡೀವ್ಸ್‌ಗೆ ತನ್ನ ಯೋಜಿತ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ನಾಗಾರ್ಜುನ ಬಹಿರಂಗಪಡಿಸಿದ್ದಾರೆ ಮತ್ತು ಈಗ ಲಕ್ಷದ್ವೀಪಕ್ಕೆ ಭೇಟಿ ನೀಡಲು ಬಯಸುತ್ತಿದ್ದಾರೆ. 2019 … Continued

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನ ಕಾರ್ಯಕ್ರಮ ಆಯೋಜನೆಗೆ ದೇಣಿಗೆ ಸ್ವೀಕರಿಸುತ್ತಿದ್ದ ವ್ಯಕ್ತಿಯ ಕೊಲೆ

ಉನ್ನಾವೊ (ಉತ್ತರ ಪ್ರದೇಶ) : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ರಂದು ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳೀಯ ದೇವಸ್ಥಾನಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾಗ 35 ವರ್ಷದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ದಾಳಿಕೋರರು ಬೇರೆ ಸಮುದಾಯದವರಾದ್ದರಿಂದ ಇದೊಂದು ಕೋಮು ಘಟನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ, ಆದರೆ ಪೊಲೀಸರು ವಿವಾದ … Continued