ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಶಿವಸೇನೆಗೆ ಸೇರಿದ ಮಿಲಿಂದ್ ದಿಯೋರಾ

ಮುಂಬೈ: ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಭಾನುವಾರ ಸೇರ್ಪಡೆಯಾಗಿದ್ದಾರೆ. ಮಿಲಿಂದ್‌ ಅವರಿಗೆ ಕೇಸರಿ ಧ್ವಜವನ್ನು ನೀಡಿದ ಏಕನಾಥ ಶಿಂಧೆ ಅವರು ಶಿವಸೇನೆಗೆ ಸೇರ್ಪಡೆಗೊಂಡರು. ಪದಗ್ರಹಣ ಸಮಾರಂಭದಲ್ಲಿ, ದಿಯೋರಾ ಅವರಿಗೆ ಇದು ತುಂಬಾ ಭಾವನಾತ್ಮಕ ದಿನ ಎಂದು ಹೇಳಿದರು. … Continued

ಮಾರ್ಚ್ 19 ರಿಂದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆ

ಶಿರಸಿ: ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ‌ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್‌ 19 ರಿಂದ 27 ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದಲ್ಲಿ ಭಾನುವಾರ ನಡೆದ ಜಾತ್ರಾ ಮುಹೂರ್ತ ನಿಗದಿ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿದ ನಂತರ ಶರಣ ಆಚಾರ್ಯ ಅವರು ದಿನಾಂಕವನ್ನು ಪ್ರಕಟಿಸಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ … Continued

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪ್ರಕರಣ ದಾಖಲು

ಕಾರವಾರ: ಉತ್ತರ ಕನ್ನಡ ‌ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಪೊಲೀಸರು ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿದ್ದಾರೆ. ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂಸದ ಅನಂತಕುಮಾರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 505 ಹಾಗೂ 153 (ಶಾಂತಿ ಕದಡಲು ಪ್ರಚೋದನೆ) ಅಡಿಯಲ್ಲಿ ಪೊಲೀಸರು ಪ್ರಕರಣ … Continued

ಕಾಂಗ್ರೆಸ್‌ ತೊರೆಯುತ್ತಿರುವ ರಾಹುಲ್ ಗಾಂಧಿ ತಂಡದ ನಾಯಕರು : 2019ರಿಂದ ಕಾಂಗ್ರೆಸ್ ತೊರೆದ ಪ್ರಮುಖ ನಾಯಕರು ಇವರು…

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಭಾರತ ಜೋಡಿ ನ್ಯಾಯ ಯಾತ್ರೆಗೆ ಮುಂಚಿತವಾಗಿ ಇಂದು, ಭಾನುವಾರ ದೊಡ್ಡ ಆಘಾತವನ್ನು ಅನುಭವಿಸಿದೆ. ಪಕ್ಷದ ಮಹಾರಾಷ್ಟ್ರದ ವರ್ಚಸ್ವಿ ನಾಯಕ ಮಿಲಿಂದ್ ದಿಯೋರಾ ಅವರು ರಾಜೀನಾಮೆ ನೀಡಿದ್ದು, ಇದು ಪಕ್ಷದೊಂದಿಗಿನ ತಮ್ಮ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದೆ ಎಂದು … Continued

ಇಂದು ಭಾರತ ಜೋಡೋ ನ್ಯಾಯ ಯಾತ್ರೆಗೆ ಚಾಲನೆ : 67 ದಿನಗಳಲ್ಲಿ 15 ರಾಜ್ಯಗಳ 110 ಜಿಲ್ಲೆಗಳಲ್ಲಿ ಸಾಗಲಿದ್ದಾರೆ ರಾಹುಲ್‌ ಗಾಂಧಿ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನ ‘ಭಾರತ ಜೋಡೋ ನ್ಯಾಯ ಯಾತ್ರೆ’ ಭಾನುವಾರ (ಜನವರಿ ೧೪) ಆರಂಭವಾಗಲಿದೆ. 15 ರಾಜ್ಯಗಳು, 100 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ಮಣಿಪುರದ ತೌಬಲ್‌ನಲ್ಲಿ ಆರಂಭವಾಗಲಿದೆ. ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಚುನಾವಣೆ ಮೇಲೆ ದೃಷ್ಟಿ ಇಟ್ಟು ಈ ಪಾದಯಾತ್ರೆಯನ್ನು ಕಾಂಗ್ರೆಸ್‌ ಆಯೋಜಿಸಿದೆ ಎಂದು ಗ್ರಹಿಸಲಾಗುತ್ತಿದೆ. … Continued

ನಿಮ್ಮ ಧೈರ್ಯ-ಸಂಕಲ್ಪಕ್ಕೆ ನಮ್ಮ ಸೆಲ್ಯೂಟ್‌…: ಎರಡೂ ತೋಳುಗಳಿಲ್ಲದ ಕ್ರಿಕೆಟಿಗನ ಆಟದ ಕೌಶಲ್ಯಕ್ಕೆ ಬೆರಗಾದ ಸಚಿನ್ ತೆಂಡೂಲ್ಕರ್, ಅದಾನಿ | ವೀಕ್ಷಿಸಿ

ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಎರಡು ತೋಳುಗಳಿಲ್ಲದ ಕ್ರಿಕೆಟಿಗ ಅಮೀರ್ ಅವರು ಕ್ರಿಕೆಟ್ ಆಡಲು ಅಪ್ರತಿಮ ಸಂಕಲ್ಪವನ್ನು ತೋರಿಸುವ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ (ANI) ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಪೂರ್ತಿದಾಯಕ ದೃಶ್ಯಗಳನ್ನು ಗಮನಿಸಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ … Continued

ಅಪರೂಪಕ್ಕೆ ಕಾಣಿಸಿಕೊಂಡ ಬಹಳ ʼಅಪರೂಪದ ಬಿಳಿ ತಿಮಿಂಗಿಲʼ | ವೀಕ್ಷಿಸಿ

ಗಮನಾರ್ಹವಾದ ಮುಖಾಮುಖಿಯಲ್ಲಿ ಥೈಲ್ಯಾಂಡಿನ ಫುಕೆಟ್ ಕರಾವಳಿಯ ಪ್ರವಾಸಿಗರು ಇತ್ತೀಚೆಗೆ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲವನ್ನು ನೋಡಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಈ ಅಸಾಧಾರಣ ಹಾಗೂ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲ ಕಾಣಿಸಿಕೊಂಡಿದೆ. ‘ಹ್ಯಾಪಿ ಅವರ್’ ಎಂಬ ಬೋಟ್‌ನಲ್ಲಿದ್ದ ಪ್ರಯಾಣಿಕರು ಮತ್ತೊಂದು ತಿಮಿಂಗಿಲದ ಜೊತೆಯಲ್ಲಿ ಈಜುತ್ತಿದ್ದ ಈ ಸಂಪೂರ್ಣ ಬಿಳಿ ಬಣ್ಣದ ತಿಮಿಂಗಿಲವನ್ನು ಅವರು ತಮ್ಮ … Continued

ಮಾಂಸ ಮಾರಾಟಕ್ಕಾಗಿ ವಿಷದ ಕಾಳು ತಿನ್ನಿಸಿ 8 ನವಿಲುಗಳ ಹತ್ಯೆ : ಒಬ್ಬನ ಬಂಧನ, ಇನ್ನಿಬ್ಬರಿಗಾಗಿ ಹುಡುಕಾಟ

ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳಲ್ಲಿ ಮಾಂಸಕ್ಕಾಗಿ ನವಿಲುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದ ತಂಡವನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದು ಒಬ್ಬನನ್ನು ಬಂಧಿಸಲಾಗಿದೆ ಹಾಗೂ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ನಿವಾಸಿ ಮಂಜುನಾಥ ಪವಾರ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದು ಇನ್ನಿಬ್ಬರ … Continued

ಕಾಂಗ್ರೆಸ್ಸಿಗೆ ಗುಡ್‌ ಬೈ ಹೇಳಿದ ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ : ಇಂದೇ ಸಿಎಂ ಏಕನಾಥ ಶಿಂಧೆ ಶಿವಸೇನೆ ಸೇರುವ ಸಾಧ್ಯತೆ

ನವದೆಹಲಿ: ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ನಿರೀಕ್ಷೆಯಿದೆ. ನಾನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಎಲ್ಲಾ ನಾಯಕರು, … Continued

ಭಾರತದ ಜತೆ ಗದ್ದಲದ ನಡುವೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ಹಿನ್ನಡೆ : ಭಾರತದ ಪರ ಒಲವಿರುವ ವಿಪಕ್ಷ ಅಭ್ಯರ್ಥಿಗೆ ಮೇಯರ್ ಚುನಾವಣೆಯಲ್ಲಿ ಜಯ..!

ಮಾಲೆ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರಿಗೆ ಹಿನ್ನಡೆಯಾಗಿದ್ದು, ಶನಿವಾರ ನಡೆದ ದೇಶದ ರಾಜಧಾನಿ ಮಾಲೆಯ ಮೇಯರ್ ಚುನಾವಣೆಯಲ್ಲಿ ಭಾರತದ ಪರ ಒಲವಿರುವ ವಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭರ್ಜರಿ ಜಯ ಸಾಧಿಸಿದೆ. ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಅಭ್ಯರ್ಥಿ ಆಡಂ ಅಜೀಮ್ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ, ಇತ್ತೀಚಿನವರೆಗೂ ಈಗ … Continued