ಈ ಹುಡುಗಿಯದ್ದು ವಿಶ್ವದ ಅತ್ಯಂತ ಸುಂದರ ಕೈಬರಹ…! ಈಕೆ ಯಾರು ಗೊತ್ತೆ..?

ಈ ಹುಡುಗಿ ತನ್ನ ಸುಂದರವಾದ ಕೈಬರಹದಿಂದ ಪ್ರಪಂಚದಾದ್ಯಂತ ಹೃದಯಗಳನ್ನು ಗೆದ್ದಿದ್ದಾಳೆ. ಇವಳ ಕೈಬರಹವನ್ನು “ವಿಶ್ವದ ಅತ್ಯಂತ ಸುಂದರವಾದ ಕೈಬರಹ” ಎಂದೂ ಕರೆಯಲಾಗಿದೆ. ಈಕೆಯೇ ನೇಪಾಳದ ಹುಡುಗಿ ಪ್ರಕೃತಿ ಮಲ್ಲಾ. 2017 ರಲ್ಲಿ ಆಕೆಯ ಕೈಬರಹವನ್ನು ಹೈಲೈಟ್ ಮಾಡುವ ಶಾಲೆಯ ಪ್ರಾಜೆಕ್ಟ್ ವೈರಲ್ ಆದ ನಂತರದಲ್ಲಿ ಈಕೆಯ ಕೈಬರಹ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಮೆಚ್ಚುಗೆ ಗಳಿಸಿತು. ಈಕೆ … Continued

ವೀಡಿಯೊ..| ಹೌತಿ ಬಂಡುಕೋರರ ಮೇಲೆ ಅಮೆರಿಕದ ಮಾರಣಾಂತಿಕ ವಾಯು ದಾಳಿಯ ವೀಡಿಯೊ ಹಂಚಿಕೊಂಡ ಅಧ್ಯಕ್ಷ ಟ್ರಂಪ್

ಹೌತಿ ಬಂಡುಕೋರರ ಮೇಲೆ ಅಮೆರಿಕ ವಾಯಪಡೆಯ ಮಾರಣಾಂತಿಕ ದಾಳಿಯ ವೀಡಿಯೊವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಅವರು ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಗುಂಪಿನ ಮೇಲೆ ದೊಡ್ಡ ಪ್ರಮಾಣದ ದಾಳಿಗೆ ಆದೇಶಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ಹಂಚಿಕೊಂಡಿದ್ದಾರೆ. ಟ್ರಂಪ್ ಹಂಚಿಕೊಂಡ ಕಪ್ಪು-ಬಿಳುಪು ವೀಡಿಯೊ ತುಣುಕಿನಲ್ಲಿ ಮಿಲಿಟರಿ ಡ್ರೋನ್‌ಗಳು ಅಥವಾ ಇತರ ವಿಮಾನಗಳಿಂದ ಚಿತ್ರೀಕರಿಸಲಾದ … Continued

ಡೀಸೆಲ್‌ ದರ ಏರಿಕೆ ; ಏ.15ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಬೆಂಗಳೂರು : ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಲಾರಿ ಮಾಲೀಕರು, ಏಪ್ರಿಲ್ 15 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಲಾರಿ ಮಾಲೀಕರು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಎಲ್ಲ ಬಗೆಯ … Continued

ವಕ್ಫ್ ತಿದ್ದುಪಡಿ ಮಸೂದೆ ಚರ್ಚೆ; ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಕೇರಳದ ಪ್ರಮುಖ ಮುಸ್ಲಿಂ ಸಂಘಟನೆಯ ಮುಖವಾಣಿ ವಾಗ್ದಾಳಿ

ತಿರುವನಂತಪುರಂ: ಪ್ರಭಾವಿ ಮುಸ್ಲಿಂ ಸಂಘಟನೆಯಾದ ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲೆಮಾದ ಮುಖವಾಣಿಯಾದ ಸುಪ್ರಭಾತಂ, ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿದೆ. ಏಪ್ರಿಲ್ 4 ರಂದು ಪ್ರಕಟವಾದ ಸಂಪಾದಕೀಯದಲ್ಲಿ, ಪತ್ರಿಕೆಯು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಯ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಅವರ … Continued

ಆಘಾತಕಾರಿ ವೀಡಿಯೊ..| : ಕ್ರಿಕೆಟ್ ಆಡುತ್ತಿದ್ದ 21 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಕುಸಿದುಬಿದ್ದು ಸಾವು

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಆಘಾತಕಾರಿ ಘಟನೆಯೊಂದು ಹೊರಬಿದ್ದಿದ್ದು, 21 ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬರು ಕ್ರಿಕೆಟ್‌ ಆಡುತ್ತಿರುವಾಗ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ, ಏಪ್ರಿಲ್ 4ರಂದು ಈ ಘಟನೆ ನಡೆದಿದ್ದು, ಆ ವಿದ್ಯಾರ್ಥಿಯನ್ನು ತೆಲಂಗಾಣದ ಖಮ್ಮಂ ಜಿಲ್ಲೆಯ ವಿನಯಕುಮಾರ ಎಂದು ಗುರುತಿಸಲಾಗಿದೆ. ಮೇಡ್ಚಲದ ಸಿಎಂಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ವಿನಯಕುಮಾರ ಇದ್ದಕ್ಕಿದ್ದಂತೆ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಲ್ಕೈದು ದಿನ ಮಳೆ ಮುನ್ಸೂಚನೆ

ಬೆಂಗಳೂರು : ಮುಂದಿನ ನಾಲ್ಕೈದು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಾಳಿ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ … Continued

ಜೇವರ್ಗಿ | ನಿಂತಿದ್ದ ಲಾರಿಗೆ ಗುದ್ದಿದ ಮಿನಿ ಬಸ್, ಐವರು ಸಾವು

ಕಲಬುರಗಿ : ನಿಂತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ ಹೊಡೆದು ಐವರು ಸಾವಿಗೀಡಾದ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಇಂದು ಶನಿವಾರ ಬೆಳಗಿನ ಜಾವ ನಡೆದಿದೆ ಎಂದು ವರದಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಿನಿ ಬಸ್‌ ಸಂಪೂರ್ಣ ನುಜ್ಜುಗುಜ್ಜಾಗಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರನ್ನು ಮೆಹಬೂಬ್ … Continued

ಪತ್ನಿ ಕೊಲೆ ಪ್ರಕರಣದಲ್ಲಿ 1.5 ವರ್ಷ ಜೈಲಲ್ಲಿದ್ದ ಪತಿ ; ಪತ್ನಿ ಕೋರ್ಟ್‌ ಮುಂದೆ ಹಾಜರು…!

 ಮೈಸೂರು : ಹೆಂಡತಿ ಕೊಲೆ ಆರೋಪದ ಮೇಲೆ  ಗಂಡ ಸುಮಾರು 1.5 ವರ್ಷ ಜೈಲಿನಲ್ಲಿದ್ದ ಪ್ರಕರಣಕ್ಕೆ ಥ್ರಿಲ್ಲರ್‌ ಸಿನೆಮಾದಲ್ಲಿ ನಡೆಯುವಂತೆ ಟ್ವಿಸ್ಟ್​ ಸಿಕ್ಕಿದೆ. ಕೊಲೆಯಾಗಿದ್ದಾಳೆ ಎಂದು ತಿಳಿದಿದ್ದ ಪತ್ನಿ ನ್ಯಾಯಾಲಯಕ್ಕೆ ಹಾಜರಾದ ನಂತರ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮೈಸೂರು ಸೆಷನ್ಸ್​ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಕೊಲೆಯಾಗಿದ್ದಾಳೆಂದು ನಂಬಲಾಗಿದ್ದ ಮಹಿಳೆ ಈಗ … Continued

ಸಾವರ್ಕರ್‌ ಕುರಿತ ಹೇಳಿಕೆ: ರಾಹುಲ್‌ ವಿರುದ್ಧದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಲಕ್ನೋ : ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 397 (ಕೆಳ ನ್ಯಾಯಾಲಯದ ದಾಖಲೆಗಳ ಪರಿಶೀಲನೆ) ಅಡಿಯಲ್ಲಿ ಸತ್ರ ನ್ಯಾಯಾಲಯದ ಕದತಟ್ಟಲು ರಾಹುಲ್‌ … Continued

ವೀಡಿಯೊ..| ಮೈಕ್ರೋಸಾಫ್ಟ್ 50ನೇ ವರ್ಷಕ್ಕೆ ಕಾಲಿಟ್ಟ ವೇಳೆ ಮೂವರು ಟೆಕ್‌ ದೈತ್ಯರನ್ನು ಮಾತಿನಲ್ಲೇ ಹುರಿದು ಹಾಕಿದ ಎಐ ಕಾಪಿಲಟ್ ; ವೀಕ್ಷಿಸಿ

ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ನ 50 ನೇ ವಾರ್ಷಿಕೋತ್ಸವವು ಕಂಪನಿಯ ಮೂರು ಸಿಇಒಗಳಾದ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಮತ್ತು ಹಾಲಿ ಸಿಇಒ ಸತ್ಯ ನಾದೆಲ್ಲಾ ಅವರನ್ನು ಆಸಕ್ತಿದಾಯಕ ವಿಷಯದೊಂದಿಗೆ ಮತ್ತೆ ಒಂದುಗೂಡಿಸಿದೆ. ಆದರೆ ಕಂಪನಿಯ ಎಐ (AI)ಬೋಟ್ – ಕಾಪಿಲಟ್, ಮೂವರು ಸಿಇಒ (CEO)ಗಳನ್ನು ಸಂದರ್ಶಿಸಿದೆ ಮತ್ತು ಹುರಿದು ಹಾಕಿದೆ. ಕಾಪಿಲಟ್ … Continued