ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued

ಸನ್ ಟಿವಿ ಕುಟುಂಬ ಕಲಹ: ಸಹೋದರ ಕಲಾನಿಧಿ ಮಾರನ್‌ ಗೆ ಲೀಗಲ್‌ ನೋಟಿಸ್ ಕಳುಹಿಸಿದ ಡಿಎಂಕೆ ಸಂಸದ ದಯಾನಿಧಿ ಮಾರನ್

ಚೆನ್ನೈ: ಪ್ರಭಾವಿ ಸನ್ ಗ್ರೂಪ್ ಕುಟುಂಬದೊಳಗೆ ಗಂಭೀರ ವಿವಾದ ಭುಗಿಲೆದ್ದಿದ್ದು, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ತಮ್ಮ ಹಿರಿಯ ಸಹೋದರ ಮತ್ತು ಸನ್ ಟಿವಿ ನೆಟ್‌ವರ್ಕ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಅವರಿಗೆ ಷೇರು ಹಂಚಿಕೆ, ಹಣಕಾಸು ವ್ಯವಹಾರಗಳು ಮತ್ತು ನಿಯಂತ್ರಕ ದಾಖಲಾತಿಗಳಿಗೆ ಸಂಬಂಧಿಸಿದ ವಂಚನೆಯ ಕೃತ್ಯಗಳನ್ನು ಆರೋಪಿಸಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಕಾನೂನು ನೋಟಿಸ್ … Continued

ವೀಡಿಯೊ..| ಎರಡು ತಲೆ, 3 ಕಣ್ಣುಗಳಿರುವ ಆಕಳ ಕರು ಜನನ ; ಜನರಿಂದ ಪೂಜೆ

ಬಾಗ್ಪತ್ : ಉತ್ತರ ಪ್ರದೇಶದ ಭಾಗ್ಪತ್‌ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳಿರುವ ಕರುವೊಂದು ಜನಿಸಿದ ಅಪರೂಪದ ವಿದ್ಯಮಾನ ವರದಿಯಾಗಿದೆ. ಈ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಪ್ರಸ್ತುತ ಅದು ಆರೋಗ್ಯವಾಗಿದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಬಾಗ್‌ಪತ್ ಸುತ್ತಮುತ್ತಲಿನ ಜನರು ಮತ್ತು ಸ್ಥಳೀಯರು ಆಗಮಿಸುತ್ತಿದ್ದಾರೆ. ಜೂನ್ 18ರಂದು ಕರು ಜನಿಸಿದೆ ಎಂದು ಹಸುವಿನ … Continued

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ : ಸಂಪುಟ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರ ಗುತ್ತಿಗೆ ಬೆನ್ನಲ್ಲೇ ಈಗ ಅಲ್ಪಸಂಖ್ಯಾತರಿಗೆ ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದ್ದು, ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಗುರುವಾರ (ಜೂನ್‌ ೧೯) ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಸಚಿವ … Continued

ವೀಡಿಯೊಗಳು…| 1000 ಹಾಸಿಗೆಗಳ ಇಸ್ರೇಲ್ ಆಸ್ಪತ್ರೆಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ ; ಸುರಕ್ಷಿತ ಸ್ಥಳಕ್ಕೆ ಓಡಿದ ರೋಗಿಗಳು

ಗುರುವಾರ ಇರಾನ್ ನಡೆಸಿದ ಕ್ಷಿಪಣಿ ದಾಳಿಯು ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಗೆ ಅಪ್ಪಳಿಸಿದೆ. ಕ್ಷಿಪಣಿ ದಾಳಿ ನಡೆದ ನಂತರ ದಟ್ಟವಾದ ಹೊಗೆ ಹೊರಹೊಮ್ಮಿದೆ. ದಕ್ಷಿಣ ಇಸ್ರೇಲ್ ನಗರವಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆಗೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿಸಿದೆ. ಇರಾನಿನ ಕ್ಷಿಪಣಿ ದಾಳಿಯ ಪರಿಣಾಮವಾಗಿ ಇಸ್ರೇಲ್‌ನಾದ್ಯಂತ ಕನಿಷ್ಠ 47 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಧೂಳು … Continued

ವೀಡಿಯೊ..| ಜಾಗ್ರೆಬ್‌ : ಭಾರತೀಯ ಉಡುಗೆ ತೊಟ್ಟು ಗಾಯತ್ರಿ ಮಂತ್ರ-ಸಂಸ್ಕೃತ ಶ್ಲೋಕದ ಮೂಲಕ ಮೋದಿಗೆ ಸ್ವಾಗತಕೋರಿದ ಕ್ರೊಯೇಷಿಯನ್ನರು…!

ಜಾಗ್ರೆಬ್‌: ಕೆನಡಾದ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಕ್ರೊಯೇಷಿಯಾದ ಜಾಗ್ರೆಬ್‌ಗೆ ಭೇಟಿ ನೀಡಿದ್ದಾರೆ. nIwiಬೆಳಸಿದ್ದಾರೆ. ಪ್ರಧಾನಿ ಮೋದಿಗೆ ಅಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರು ಹೊಟೇಲಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರನ್ನು ವಂದೇ ಮಾತರಂ ” ಮತ್ತು ” … Continued

ವೀಡಿಯೊ | ಪರೀಕ್ಷೆ ಸಮಯದಲ್ಲಿ ಸ್ಫೋಟಗೊಂಡು ಬೆಂಕಿ ಉಂಡೆಯಾದ ಸ್ಪೇಸ್‌ ಎಕ್ಸ್ ನ ಸ್ಟಾರ್‌ ಶಿಪ್ ಬಾಹ್ಯಾಕಾಶ ನೌಕೆ-ವೀಕ್ಷಿಸಿ

ಗುರುವಾರ ಟೆಕ್ಸಾಸ್‌ನ ಮ್ಯಾಸ್ಸೆಯಲ್ಲಿರುವ ಎಲೋನ್ ಮಸ್ಕ್‌ ಅವರರ ಸ್ಪೇಸ್‌ಎಕ್ಸ್ ಪರೀಕ್ಷಾ ಸ್ಥಳದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೀಗಾಗಿ ಕಂಪನಿಯ ಮುಂದಿನ ಸ್ಟಾರ್‌ಶಿಪ್ ಉಡಾವಣೆಗೆ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ ಪ್ರಕಾರ, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಸ್ಥಿರ ಅಗ್ನಿ ಪರೀಕ್ಷೆಯ ಸಮಯದಲ್ಲಿ ಬೃಹತ್‌ ಸ್ಫೋಟದಲ್ಲಿ ಕೊನೆಗೊಂಡಿದೆ. ಬಾಹ್ಯಾಕಾಶ ನೌಕೆಯು ಸ್ಥಿರವಾಗಿದ್ದಾಗ … Continued

ಇರಾನ್ ಮೇಲಿನ ದಾಳಿ ಯೋಜನೆಗೆ ಖಾಸಗಿಯಾಗಿ ಅನುಮೋದಿಸಿದ ಟ್ರಂಪ್ ; ಅಂತಿಮ ಆದೇಶಕ್ಕೆ ತಡೆ : ವರದಿ

ವಾಷಿಂಗ್ಟನ್‌ : ಇರಾನ್ ಮೇಲಿನ ದಾಳಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದಾರೆ, ಆದರೆ ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುತ್ತದೆಯೇ ಎಂದು ನೋಡಲು ಅಂತಿಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇರಾನ್ ತನ್ನ … Continued

ಟೋಲ್ ಶುಲ್ಕ | ಖಾಸಗಿ ವಾಹನಗಳಿಗೆ ₹3000ಕ್ಕೆ ಫಾಸ್ಟ್‌ ಟ್ಯಾಗ್ ವಾರ್ಷಿಕ ಪಾಸ್‌ ಪ್ರಕಟಿಸಿದ ಕೇಂದ್ರ ಸರ್ಕಾರ ; ಆಗಸ್ಟ್‌ 15ರಿಂದ ಜಾರಿ

ನವದೆಹಲಿ: ಟೋಲ್ ಶುಲ್ಕ ಪಾವತಿಸುವುದನ್ನು ಸರಳಗೊಳಿಸುವ ಮತ್ತು ರಸ್ತೆ ಪ್ರಯಾಣವನ್ನು ಸುಧಾರಿಸುವ ಉದ್ದೇಶದ ಒಂದು ಮಹತ್ವದ ಕ್ರಮದಲ್ಲಿ, ಕೇಂದ್ರ ಸರ್ಕಾರವು 3,000 ರೂ.ಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆಯನ್ನು ಆಗಸ್ಟ್‌ 15ರಿಂದ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಬುಧವಾರ ಪ್ರಕಟಿಸಿದ್ದಾರೆ. ಈ ಹೊಸ … Continued

ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, … Continued