65 ವರ್ಷದ ಒಡಿಶಾ ಮಾಜಿ ಸಂಸದರನ್ನು ಜರ್ಮನಿಯಲ್ಲಿ ವಿವಾಹವಾದ 50 ವರ್ಷದ ಟಿಎಂಸಿ ಸಂಸದೆ : ವರದಿ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ವಿದೇಶದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ ಎಂದು ಬಹು ಮಾಧ್ಯಮ ವರದಿಗಳು ತಿಳಿಸಿವೆ. ಫೋಟೋವೊಂದು 50 ವರ್ಷದ ಮೊಯಿತ್ರಾ ಮತ್ತು 65 ವರ್ಷದ ಮಿಶ್ರಾ ಕೈಕೈ ಹಿಡಿದುಕೊಂಡು ನಗುತ್ತಿರುವುದನ್ನು ತೋರಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇಬ್ಬರು ರಾಜಕಾರಣಿಗಳಿಂದ ವಿವಾಹದ … Continued

ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ಎಲಾನ್‌ ಮಸ್ಕ್‌ ತಂದೆ ; ಭಾರತ ಅದ್ಭುತ ಎಂದು ಬಣ್ಣನೆ

ಅಯೋಧ್ಯೆ: ವಿಶ್ವದ ಅತಿ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆ ಅನುಭವವನ್ನು “ಅದ್ಭುತ” ಮತ್ತು ಅವರು ಮಾಡಿದ “ಅತ್ಯುತ್ತಮ ಕೆಲಸಗಳಲ್ಲಿ” ಒಂದು ಎಂದು ಬಣ್ಣಿಸಿದ್ದಾರೆ. ಅವರು ಹತ್ತಿರದ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. “ಇದು … Continued

ವೀಡಿಯೊ..| ಬೆಂಗಳೂರು ಕಾಲ್ತುಳಿತ ; ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಡಿಕೆ ಶಿವಕುಮಾರ

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿದಲ್ಲಿ 11 ಜನರು ಸಾವಿಗೀಡಾದ ದುರಂತದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಣ್ಣೀರಿಟ್ಟಿದ್ದಾರೆ. ಶಿವಕುಮಾರ ಅವರು ತಾವು ಕಂಡ ಹೃದಯ ವಿದ್ರಾವಕ ದೃಶ್ಯಗಳನ್ನು ವಿವರಿಸಿದ್ದಾರೆ. ʼಕಾಲ್ತುಳಿತದಲ್ಲಿ (Bengaluru Stampede) “ನಾನು ಮಕ್ಕಳ ಬಗ್ಗೆ ಚಿಂತಿತನಾಗಿದ್ದೇನೆ, ಅವರು 15 ವರ್ಷ ವಯಸ್ಸಿನವರು ಎಂದು ನಾನು ನೋಡಿದೆ. … Continued

ಬೆಳಗಾವಿ | ಅಪರೂಪದ ಘಟನೆ ; ಮಗನನ್ನು ಕಚ್ಚಿ ಸಾಯಿಸಿದ ಹಾವನ್ನು ಕೊಲ್ಲದೆ ರಕ್ಷಿಸಿ ಕಾಡಿಗೆ ಬಿಟ್ಟು ಬಂದ ಕುಟುಂಬ…!

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ಅಥಣಿ ತಾಲೂಕಿನ ತೆಲಸಂಗ ಸಮೀಪದ ಕಕಮರಿ ಗ್ರಾಮದಲ್ಲಿ ಹಾವು ಕಚ್ಚಿ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬ ಆ ಮಗನ ಸಾವಿಗೆ ಕಾರಣವಾದ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಒಯ್ದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದ ವಿದ್ಯಮಾನ ವರದಿಯಾಗಿದೆ. ಮೇ 31ರಂದು ಅಮಿತ ಗುರುಲಿಂಗ ಸಿಂಧೂರ (10) … Continued

ಜಪಾನಿನ ಬಾಬಾ ವಂಗಾ ಜುಲೈ ತಿಂಗಳ ಭವಿಷ್ಯವಾಣಿ ನಂತ್ರ ಪ್ರವಾಸಿಗರಿಂದ ಸಾಮೂಹಿಕವಾಗಿ ಪ್ರಯಾಣದ ಬುಕ್ಕಿಂಗ್‌ ರದ್ದು..! ಯಾಕೆ ಗೊತ್ತೆ..?

ಟೋಕಿಯೊ: “ನ್ಯೂ ಬಾಬಾ ವಂಗಾ” ಎಂದೂ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆ ರಿಯೊ ತತ್ಸುಕಿ, ಜುಲೈ 2025 ರಲ್ಲಿ ಜಪಾನ್‌ಗೆ ಭಾರಿ ಸುನಾಮಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಆತಂಕ ಮತ್ತು ಪ್ರಯಾಣ ರದ್ದತಿಗೆ ಕಾರಣವಾಗಿದೆ. ಅವರ ಮಂಗಾ, “ದಿ ಫ್ಯೂಚರ್ ಐ ಸಾ” ಭವಿಷ್ಯವಾಣಿಯು 2025ರ ಜುಲೈ 5ರಂದು ವಿನಾಶಕಾರಿ ವಿಪತ್ತನ್ನು ಮುನ್ಸೂಚಿಸುತ್ತದೆ. … Continued

2027ರ ಮಾರ್ಚ್ 1ರಿಂದ ಜನಗಣತಿ ಆರಂಭ ; ಜಾತಿ ಗಣತಿಯೂ ಸೇರ್ಪಡೆ

ನವದೆಹಲಿ: ಜಾತಿ ದತ್ತಾಂಶವನ್ನು ಒಳಗೊಂಡ ರಾಷ್ಟ್ರವ್ಯಾಪಿ ಜನಗಣತಿಯು 2027ರ ಮಾರ್ಚ್ 1ರಂದು ಪ್ರಾರಂಭವಾಗಲಿದೆ ಎಂದು ಗೃಹ ಸಚಿವಾಲಯ ಬುಧವಾರ ಪ್ರಕಟಿಸಿದೆ. ಜನಸಂಖ್ಯೆಯನ್ನು ಗಣತಿ ಮಾಡುವ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. “ಜನಸಂಖ್ಯಾ ಗಣತಿಯ ಉಲ್ಲೇಖ ದಿನಾಂಕ ಮಾರ್ಚ್ 2027 ರ ಮೊದಲ ದಿನದ 00:00 ಗಂಟೆಗಳು. ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ … Continued

ವೀಡಿಯೊ..| ಬಾಲ್ಯ ಸ್ನೇಹಿತೆ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಭಾರತ ತಂಡದ ಸ್ಪಿನ್‌ ಬೌಲರ್‌ ಕುಲದೀಪ ಯಾದವ್

ಲಕ್ನೋ: ಭಾರತದ ಎಡಗೈ ಸ್ಪಿನ್ನರ್ ಕುಲದೀಪ ಯಾದವ್ ಬುಧವಾರ (ಜೂನ್ 4) ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಂಶಿಕಾ ಕಾನ್ಪುರದವರಾಗಿದ್ದು, ಅವರು ಎಲ್‌ಐಸಿ (ಭಾರತೀಯ ಜೀವ ವಿಮಾ ನಿಗಮ)ಯಲ್ಲಿ ಕೆಲಸ ಮಾಡುತ್ತಾರೆ. ಭಾರತೀಯ ಕ್ರಿಕೆಟಿಗ ಕುಲದೀಪ ತಮ್ಮ ಬಾಲ್ಯದ ಸ್ನೇಹಿತೆಯೊಂದಿಗೆ ಕುಟುಂಬದವರು … Continued

ಕಾರವಾರ | ಕಾಡು ಪ್ರಾಣಿಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ 7 ಎಮ್ಮೆಗಳು ಸಾವು

ಕಾರವಾರ: ಕಾಡು ಪ್ರಾಣಿಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಕೃಷಿಕ ಮಹಿಳೆಯರ 7 ಜಾನುವಾರುಗಳು ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗದ್ದೆ ಕೆಲಸದ ಜೊತೆ ಎಮ್ಮೆಗಳನ್ನು ಸಾಕಿ ಪಾಲನೆ ಮಾಡುತ್ತಿರುವ ಕಿನ್ನರದ ಮಸೀದಿ ಹತ್ತಿರದ … Continued

ಬೆಂಗಳೂರು | ಆರ್‌ ಸಿಬಿ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ: 11 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಬೆಂಗಳೂರು : ಐಪಿಎಲ್ ಪ್ರಶಸ್ತಿ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬುಧವಾರ ಅಭಿನಂದಿಸುವ ಕಾರ್ಯಕ್ರಮದ ವೇಳೆ ಕನಿಷ್ಠ 11 ಜನರು ಕಾಲ್ತುಳಿತದಿಂದ ಸಾವಿಗೀಡಾಗಿದ್ದಾರೆ ಮತ್ತು ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ … Continued

ಬೆಂಗಳೂರು| ಆರ್‌ ಸಿಬಿ ಸಂಭ್ರಮಾಚರಣೆ ; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ ಹಲವರ ಸಾವು ; ಅನೇಕರು ಅಸ್ವಸ್ಥ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ  ಅದ್ಧೂರಿ ಆಚರಣೆಗೆ ಆಗಮಿಸಬೇಕಿದ್ದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕಾಲ್ತುಳಿತದಲ್ಲಿ 10 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುಸಿದು ಬಿದ್ದವರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ಯುತ್ತಿರುವ ನಾಟಕೀಯ ದೃಶ್ಯಗಳು … Continued