ವೀಡಿಯೊ…| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ನವದೆಹಲಿ: ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನ ಸೀಟನ್ನು ಬಿಜೆಪಿ ಶಾಸಕನಿಗೆ ಬದಲಾಯಿಸಿಕೊಳ್ಳಲು ಒಪ್ಪದ ಕಾರಣಕ್ಕೆ ಆತನನ್ನು ಥಳಿಸಿದ ಘಟನೆ ಗುರುವಾರ (ಜೂನ್‌ 19) ನಡೆದಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಝಾನ್ಸಿಯ ಶಾಸಕ ರಾಜೀವ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ತಮ್ಮ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶಾಸಕರು … Continued

ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಬೆಳಗಾವಿ: ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗಷ್ಟೇ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರ ಆಡಿಯೋ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಈಗ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಮತ್ತೋರ್ವ ಶಾಸಕ ತಮ್ಮ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಆಡಳಿತ ವ್ಯವಸ್ಥೆ … Continued

ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ…!

ಗರಿಯಾಬಂದ್ : ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಸಂಖ್ಯೆ 3 ರಲ್ಲಿರುವ ಸರ್ಕಾರಿ ಪಡಿತರ ಅಂಗಡಿಯಲ್ಲಿ ಭಾನುವಾರ ಅವ್ಯವಸ್ಥೆ ಭುಗಿಲೆದ್ದಿತು, ದೀರ್ಘ ಸಮಯದ ವರೆಗೆ ಕಾಯುವಿಕೆ ಮತ್ತು ಹೆಚ್ಚುತ್ತಿರುವ ಹತಾಶೆ ಕೋಪಕ್ಕೆ ತಿರುಗಿತು. ತಮ್ಮ ಮಾಸಿಕ ಆಹಾರ ಪಡಿತರಕ್ಕಾಗಿ ಗಂಟೆಗಟ್ಟಲೆ ಕಾಯುತ್ತಿದ್ದ ಜನಸಮೂಹ ಅಂಗಡಿಯ ಮುಖ್ಯ ದ್ವಾರವನ್ನು ಒಡೆದು ಒಳಗೆ ನುಗ್ಗಿದ್ದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು. ಮೂರು … Continued

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ಬೆಂಗಳೂರು : ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಮೂರು ದಿನ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಜೂ 23ರಂದು ಭಾರೀ ಮಳೆಯಾಗಲಿದೆ. ಎರಡು ಜಿಲ್ಲೆಗಳಿಗೆ … Continued

ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ಅಮೆರಿಕವು ಇರಾನಿನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಬಿ -2 ಬಾಂಬರ್‌ಗಳು ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಗೆ ಹಿಂತಿರುಗುತ್ತಿರುವ ವೀಡಿಯೊವನ್ನು ಸೋಮವಾರ ಅಮೆರಿಕದ ಶ್ವೇತಭವನ ಹಂಚಿಕೊಂಡಿದೆ. ಒಂದು ನಿಮಿಷದ ದೃಶ್ಯಾವಳಿಯು ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಒಂದಾದ ಬಿ -2 ಬಾಂಬರ್ … Continued

ಅಮೆರಿಕದ ದಾಳಿ | ಹಾರ್ಮುಜ್ ಜಲಸಂಧಿ ತೈಲ ಕಾರಿಡಾರ್ ಮುಚ್ಚುವ ಬೆದರಿಕೆ ಹಾಕಿದ ಇರಾನ್‌ ; ಜಾಗತಿಕ ತೈಲ ದರದ ಮೇಲೆ ಪರಿಣಾಮ..?

ತೆಹ್ರಾನ್: ಅಮೆರಿಕ ತನ್ನ ಮೂರು ಪರಮಾಣು ಸೌಲಭ್ಯಗಳನ್ನು ಬಾಂಬ್ ದಾಳಿ ಮಾಡಿದ ನಂತರ ಇರಾನ್ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಯೋಚಿಸುತ್ತಿದೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ. ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಜಾಗತಿಕ ತೈಲ ಮಾರುಕಟ್ಟೆಗಳು … Continued

ವೀಡಿಯೊ..| 21 ಮಂದಿ ಪ್ರಯಾಣಿಸುತ್ತಿದ್ದ ಹಾಟ್ ಏರ್ ಬಲೂನ್ ಆಗಸದಲ್ಲೇ ಸ್ಫೋಟ ; 8 ಮಂದಿ ದಾರುಣ ಸಾವು: ಸ್ಫೋಟದ ದೃಶ್ಯ ಸೆರೆ

ಬ್ರೆಸಿಲಿಯಾ: ಬ್ರೆಜಿಲ್‌ನ ಪ್ರವಾಸಿ ತಾಣದಲ್ಲಿ ಭೀಕರ ದುರಂತ ಸಂಭವಿಸಿದ್ದು, ಹಾಟ್ ಏರ್ ಬಲೂನ್ ಆಕಾಶದಲ್ಲಿಯೇ ಸ್ಫೋಟಗೊಂಡಿದ್ದರಿಂದ 8 ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಬ್ರೆಜಿಲ್‌ನ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪ್ರೈಯಾ ಗ್ರ್ಯಾಂಡೇ ಎಂಬಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸುಮಾರು 21 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹಾಟ್ ಏರ್ ಬಲೂನ್ ಆಕಾಶದಲ್ಲಿಯೇ ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ … Continued

ಬುಡಕಟ್ಟು ಜನಾಂಗದವರ ಬಗ್ಗೆ ಹೇಳಿಕೆ : ನಟ ವಿಜಯ ದೇವರಕೊಂಡ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ : ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ನಟ ವಿಜಯ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸೈಬರಾಬಾದ್‌ನ ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ನೆನವತ್ ಅಶೋಕಕುಮಾಕ ನಾಯಕ್ … Continued

ಮಣಿಪಾಲ | ಹಣಕ್ಕಾಗಿ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ ಮಗ : ಮರಣೋತ್ತರ ಪರೀಕ್ಷೆಯಿಂದ ಪ್ರಕರಣ ಬೆಳಕಿಗೆ

ಉಡುಪಿ : ಮಗನೊಬ್ಬ ಹಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪದ್ಮಾಬಾಯಿ(45) ಎಂದು ಗುರುತಿಸಲಾದ ಮಹಿಳೆ ಕೊಲೆಯಾಗಿದ್ದು, ಮಗ ಈಶ ನಾಯಕ್‌ (26) ಕೊಲೆ ಆರೋಪಿಯಾಗಿದ್ದಾನೆ. ಜೂ.18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಂದು … Continued

ಇರಾನ್‌ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಂತರ ಇರಾನ್ ಅಧ್ಯಕ್ಷರ ಜೊತೆ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು, ಭಾನುವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ, ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇತ್ತೀಚೆಗೆ ಉಂಟಾಗಿರುವ ಉಲ್ಬಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಮೂರು ಸ್ಥಳಗಳಾದ ನಟಾಂಜ್, ಇಸ್ಫಹಾನ್ ಮತ್ತು ಪರ್ವತಗಳಿಂದ ಕೂಡಿದ ಫೋರ್ಡೊ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಇಂದು ಸಂಘರ್ಷಕ್ಕೆ ಪ್ರವೇಶಿಸಿದೆ. ಇರಾನ್‌ ತನ್ನ ಪರಮಾಣು … Continued