ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

ಅಸಾಮಾನ್ಯ ಘಟನೆಯೊಂದರಲ್ಲಿ, ಚೀನಾ ತನ್ನ ಮೊದಲ 3v3 ಆರ್ಟಿಫಿಶಿಯಲ್‌ (AI) ರೋಬೋಟ್ ಫುಟ್ಬಾಲ್‌ ಪಂದ್ಯವನ್ನು ಆಯೋಜಿಸಿದೆ. ಇದರಲ್ಲಿ ನಾಲ್ಕು ತಂಡಗಳ ಹುಮನಾಯ್ಡ್ ರೋಬೋಟ್‌ಗಳು ಬೀಜಿಂಗ್‌ನಲ್ಲಿ ಪರಸ್ಪರ ಸೆಣಸಾಡಿವೆ. ಪಂದ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದು ರೋಬೋ (ROBO) ಲೀಗ್ ರೋಬೋಟ್ ಫುಟ್ಬಾಲ್‌ ಪಂದ್ಯಾವಳಿಯ ದೃಶ್ಯಗಳನ್ನು ತೋರಿಸುತ್ತದೆ. ವರದಿಗಳ ಪ್ರಕಾರ, ಮುಂಬರುವ 2025 ರ … Continued

ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಹೆಸರು ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಬೆಂಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೇಶದ ಪ್ರಧಾನಿಯಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. … Continued

ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರ ; ಬಿಜೆಪಿ ವಿರುದ್ಧ ವಸಂತ ಲದವಾ ವಾಗ್ದಾಳಿ

ಹುಬ್ಬಳ್ಳಿ : ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಅಲ್ಲ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೧೧ರಲ್ಲಿ ಭಾರತದ ಸಾಮಾಜಿಕ, ಆರ್ಥಿಕ ಜಾತಿ ಗಣತಿ ನಡೆಸಲಾಗಿದೆ. ೨೦೧೦ರಲ್ಲಿ ಸಂಸತ್ತಿನ ಉಭಯ … Continued

ಐಪಿಎಸ್ ಅಧಿಕಾರಿ ಅಮಾನತು ರದ್ದು: ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಮೇಲ್ಮನವಿ

ಬೆಂಗಳೂರು : ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಐಪಿಎಸ್‌ ಅಧಿಕಾರಿ ವಿಕಾಸಕುಮಾರ ವಿಕಾಸ ಅವರನ್ನು ಅಮಾನತು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯು (ಸಿಎಟಿ)ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ. ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ … Continued

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಪಟ್ಟಣದ ಹೆಸರು ಬದಲಾವಣೆಗೆ ಸಚಿವ ಸಂಪುಟ ಅನುಮೋದನೆ

ಚಿಕ್ಕಬಳ್ಳಾಪುರ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಯ ನಂತರ ಮತ್ತೊಂದು ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇಂದು, ಬುಧವಾರ (ಜುಲೈ ೨) ನಂದಿ ಗಿರಿಧಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ … Continued

ಕ್ಯಾಂಪಸ್‌ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವೀಡಿಯೊ ಚಿತ್ರೀಕರಣ ; ಇನ್ಫೋಸಿಸ್‌ ಉದ್ಯೋಗಿಯ ಬಂಧನ

ಬೆಂಗಳೂರು :  ಕ್ಯಾಂಪಸ್‌ನ ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಆರೋಪದ ಮೇಲೆ ಟೆಕ್ ಕಂಪನಿ ಇನ್ಫೋಸಿಸ್‌ನ ಉದ್ಯೋಗಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಸ್ವಪ್ನಿಲ್ ನಾಗೇಶ ಮಾಲಿ (28) ಎಂದು ಗುರುತಿಸಲಾಗಿದೆ, ಈತ ಆಂಧ್ರಪ್ರದೇಶದವರಾಗಿದ್ದು, ಇನ್ಫೋಸಿಸ್‌ನ ಹೆಲಿಕ್ಸ್ ಘಟಕದಲ್ಲಿ ಹಿರಿಯ ಅಸೋಸಿಯೇಟ್ ಸಲಹೆಗಾರನಾಗಿದ್ದಾನೆ ಎನ್ನಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಜೂನ್ 30 ರಂದು … Continued

ಚರಂಡಿಯಲ್ಲಿ ಬಿದ್ದಿದ್ದ ನಾಯಿಮರಿ ರಕ್ಷಿಸುವಾಗ ಕಚ್ಚಿ ಗಾಯ ; ನಿರ್ಲಕ್ಷ್ಯ ಮಾಡಿದ್ದಕ್ಕೆ ಖ್ಯಾತ ಕಬಡ್ಡಿ ಆಟಗಾರ ರೇಬೀಸ್ ನಿಂದ ಸಾವು…!

ನವದೆಹಲಿ : ರಾಜ್ಯಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ ಸೋಲಂಕಿ ಉತ್ತರ ಪ್ರದೇಶದ ಬುಲಂದಶಹರದಲ್ಲಿ ರೇಬೀಸ್‌ನಿಂದ ಸಾವಿಗೀಡಾಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ, ಬ್ರಿಜೇಶ ಅವರು ಕಾಪಾಡಿದ್ದ ನಾಯಿಮರಿಯೊಂದು ಅವರನ್ನು ಕಚ್ಚಿತ್ತು. ಆದಾಗ್ಯೂ, ಅವರು ಅದನ್ನು ಸಣ್ಣ ಗಾಯವೆಂದು ನಿರ್ಲಕ್ಷ್ಯ ಮಾಡಿದ್ದರು ಮತ್ತು ರೇಬೀಸ್ ಇಂಜೆಕ್ಷನ್ ತೆಗೆದುಕೊಳ್ಳಲಿಲ್ಲ. ಅವರ ಸಾವಿಗೆ ಕೆಲವು ದಿನಗಳ ಮೊದಲು ಚಿತ್ರೀಕರಿಸಲಾದ ಬ್ರಿಜೇಶ … Continued

ಗುಂಡ್ಲುಪೇಟೆ | ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಶವಗಳು ಪತ್ತೆ, ವಿಷಪ್ರಾಶನದ ಶಂಕೆ

ಚಾಮರಾಜನಗರ: ಐದು ಹುಲಿಗಳಿಗೆ ವಿಷಪ್ರಾಶನ ಮಾಡಿದ ಆಘಾತಕಾರಿ ಘಟನೆಯ ಬೆನ್ನಲ್ಲೇ, ಚಾಮರಾಜನಗರ ಜಿಲ್ಲೆಯಲ್ಲಿ 20 ಮಂಗಗಳ ಶವಗಳು ಬುಧವಾರ ಪತ್ತೆಯಾಗಿವೆ…! ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯ ಉದ್ದಕ್ಕೂ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಮಂಗಗಳಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕೋತಿಗಳನ್ನು ಬೇರೆಡೆ … Continued

ಕರ್ನಾಟಕದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜುಲೈ 7ರ ವರೆಗೆ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಜುಲೈ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಜುಲೈ 2ರಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಉಳಿದ ಜಿಲ್ಲೆಗಳಲ್ಲಿ … Continued

ಐಐಟಿ-ಬಾಂಬೆಯಲ್ಲಿ 14 ದಿನ ವಾಸವಿದ್ದ ನಕಲಿ ‘ಪಿಎಚ್‌ಡಿ ವಿದ್ಯಾರ್ಥಿ’…! ಈತನ ಗುಟ್ಟು ರಟ್ಟು ಮಾಡಿದ ಸೋಫಾ ಮೇಲಿನ ನಿದ್ರೆ…!!

ಮುಂಬೈ: 22 ವರ್ಷದ ಯುವಕನೊಬ್ಬ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ-ಬಾಂಬೆ)ಗೆ ನುಸುಳಿ ಸುಮಾರು ಎರಡು ವಾರಗಳ ಕಾಲ ಅದರ ಹೈ ಸೆಕ್ಯುರಿಟಿ ಕ್ಯಾಂಪಸ್‌ನಲ್ಲಿ ಯಾರಿಗೂ ಗೊತ್ತಾಗದಂತೆ ವಾಸಿಸುತ್ತಿದ್ದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬಿಲಾಲ್ ಅಹ್ಮದ್ ತೇಲಿ ಎಂದು ಗುರುತಿಸಲ್ಪಟ್ಟ ಈ ಯುವಕ ಕಳೆದ ವಾರ ಸೋಫಾದ ಮೇಲೆ ಮಲಗಿದ್ದಾಗ ಗಮನಿಸಿದ ಐಐಟಿ-ಬಾಂಬೆ ಉದ್ಯೋಗಿಯೊಬ್ಬರು ಆತನ … Continued