ನಟಿ ಕೃಷಿ ತಾಪಂಡ ಬೆಂಗಳೂರು ನಿವಾಸದಲ್ಲಿ ಉದ್ಯಮಿ ಶವವಾಗಿ ಪತ್ತೆ

ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡ ಚಿತ್ರರಂಗದ ಖ್ಯಾತ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ ಎಂದು ಗುರುವಾರ ವರದಿಯಾಗಿದೆ. ಮೃತರನ್ನು ವೈಶಾಕ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಮಯದಲ್ಲಿ ನಟಿ ಕೃಷಿ ತಾಪಂಡ … Continued

ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (DK Shivakumar) ಅಧಿಕಾರ ಸ್ವೀಕರಿಸಿದ 3 ವಾರಗಳ ಬಳಿಕ ಇದೀಗ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರವಾಹ ನಿರ್ವಹಣೆಗಾಗಿ ಅವರು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ … Continued

ಎನ್‌ಸಿಇಆರ್‌ಟಿ ಮಹತ್ವದ ನಿರ್ಧಾರ; 9ನೇ ತರಗತಿ ಪಠ್ಯಪುಸ್ತಕದಲ್ಲಿ ‘ತುರ್ತು ಪರಿಸ್ಥಿತಿ’ ವಿಷಯ ಸೇರ್ಪಡೆ

ನವದೆಹಲಿ: ಭಾರತದಲ್ಲಿ ತುರ್ತು ಪರಿಸ್ಥಿತಿ (Emergency) ಹೇರಿಕೆಯಾಗಿ 50 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮೊದಲ ಬಾರಿಗೆ ಈ ವಿಷಯವನ್ನು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಳವಡಿಸಿದೆ. “ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್” (Understanding Society: India and Beyond) ಹೆಸರಿನ ಈ ಹೊಸ … Continued

ಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಪಾಸ್‌ಪೋರ್ಟ್ ಅನ್ನು ಪೌರತ್ವದ ದೃಢವಾದ ಸಾಕ್ಷ್ಯವೆಂದು ಪರಿಗಣಿಸುವ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲದ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಹತ್ವದ ಸ್ಪಷ್ಟನೆ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಅನ್ನು ಕೇವಲ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಬಳಸುವ ದಾಖಲೆಯಾಗಿ ಪರಿಗಣಿಸಬೇಕು; ಅದನ್ನು ಭಾರತೀಯ ಪೌರತ್ವದ ಅಂತಿಮ ಮತ್ತು ನಿರ್ಣಾಯಕ ದಾಖಲಯೆಂದು ಪರಿಗಣಿಸಬಾರದು ಎಂದು ಸಚಿವಾಲಯ ತಿಳಿಸಿದೆ. ಭಾರತದ … Continued

ಟ್ರಸ್ಟ್ ಹೆಸರಲ್ಲಿ ‘ಜಮೀನು ಲೂಟಿ’: ಖರ್ಗೆ ಕುಟುಂಬದ ವಿರುದ್ಧ ಬಿಜೆಪಿ ಗಂಭೀರ ಆರೋಪ

ಟ್ರಸ್ಟ್ ಹೆಸರಲ್ಲಿ ಖರ್ಗೆ ಕುಟುಂಬದಿಂದ ಕರ್ನಾಟಕದಲ್ಲಿ ‘ಭೂ ಕಬಳಿಕೆ’ : ಬಿಜೆಪಿ ಗಂಭೀರ ಆರೋಪ ನವದೆಹಲಿ : ಕಾಂಗೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ತಮ್ಮ “ಅಧಿಕಾರ ಮತ್ತು ಪ್ರಭಾವ”ವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬುಧವಾರ ಆರೋಪಿಸಿರುವ ಬಿಜೆಪಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ … Continued

ವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

ವೆನೆಜುಲಾದಲ್ಲಿ ಬುಧವಾರ ಸಂಜೆ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕಟ್ಟಡಗಳು ಕುಸಿಯಲಾರಂಭಿಸಿದವು, ವಿದ್ಯುತ್ ಸಂಪರ್ಕ ಕಡಿತಗೊಳ್ಳಲು ಶುರುವಾಯಿತು. ಏನಾಗುತ್ತಿದೆ ಎಂದು ಜನರು ಗ್ರಹಿಸಿ ಸುರಕ್ಷಿತ ಸ್ಥಳಗಳಿಗೆ ಓಡುವ ಮುನ್ನವೇ, ರಾಜಧಾನಿಯಲ್ಲಿ 7.5 ತೀವ್ರತೆಯ ಮತ್ತೊಂದು ಶಕ್ತಿಶಾಲಿ ಭೂಕಂಪ ಸಂಭವಿಸಿತು. ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಅವಳಿ ಭೂಕಂಪಗಳು ಕಾರಕಾಸ್‌ನಲ್ಲಿ ತೀವ್ರ ಆತಂಕ … Continued

ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಅಧಿಕೃತ ಆಹ್ವಾನ ನೀಡಿದ ಅಧ್ಯಕ್ಷ ಪೆಜೆಶ್ಕಿಯಾನ್

ತೆಹ್ರಾನ್/ನವದೆಹಲಿ: ಕಳೆದ ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ತೀವ್ರ ಸಂಘರ್ಷದ ಕಾರಣದಿಂದಾಗಿ, … Continued

ವಿಡಿಯೋ | ಮುಂಬೈ ಮಳೆ : ಮೇಯರ್ ಕಣ್ಣೆದುರೇ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ ; ಅಧಿಕಾರಿಗಳಿಗೆ ಸಸ್ಪೆಂಡ್‌ ವಾರ್ನಿಂಗ್‌ ನೀಡಿದ ತಾವ್ಡೆ

ಮುಂಬೈ: ಮುಂಬೈನ ದಾದರ್ ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬುಧವಾರ ಬೆಳಿಗ್ಗೆ ಮಳೆಯ ಪರಿಸ್ಥಿತಿಯ ಪರಿಶೀಲನೆಗೆ ನಗರ ಸಂಚಾರ ನಡೆಸಿದ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಣ್ಣೆದುರೇ ಪೌರಕಾರ್ಮಿಕನೊಬ್ಬ ತೆರೆದ ಮ್ಯಾನ್‌ಹೋಲ್‌ಗೆ (ಒಳಚರಂಡಿ) ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಮೇಯರ್, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳನ್ನು … Continued

ಅಬಕಾರಿ ಹೆಚ್ಚುವರಿ ಆಯುಕ್ತ-ಸಚಿವ ಸತೀಶ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇ.ಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ, ಬೆಂಗಳೂರು, ಮೈಸೂರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಗೋವಾ ಮತ್ತು ಬೆಂಗಳೂರಿನ ಇ.ಡಿ … Continued

ಶಿರಸಿ : ಮನೆಯಲ್ಲಿ ಮಲಗಿದ್ದಾಗ ಇಬ್ಬರು ಮಕ್ಕಳಿಗೆ ಕಚ್ಚಿದ ಹಾವು ; ಓರ್ವ ಸಾವು

ಶಿರಸಿ :  ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆತನ ಸಹೋದರಿಗೂ ಹಾವು ಕಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಇಂದು, ಬುಧವಾರ ಮುಂಜಾನೆ ನಡೆದಿದೆ ಎಂದು ಹೇಳಲಾಗಿದ್ದು, ಮೃತ … Continued