ದೇವದುರ್ಗ : ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು ಇಬ್ಬರು ಸಾವು ; ಓರ್ವನ ಸ್ಥಿತಿ ಗಂಭೀರ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಲಾಗಿದೆ. ಮೃತರನ್ನು ರವಿ (35) ಮತ್ತು … Continued

‘ಮುತ್ತು ಮಾಸ್ಟರ್’ ಹೆಸರಿನಲ್ಲಿ 37 ವರ್ಷ ಪುರುಷನಂತೆ ಬದುಕಿದ ಮಹಿಳೆ : ಹೀಗೆ ಬದುಕುವ ನಿರ್ಧಾರದ ಹಿಂದಿನ ಕಾರಣವೇನು ?

ತಮಿಳುನಾಡಿನ ಒಂದು ಸಣ್ಣ ಹಳ್ಳಿಯಲ್ಲಿ ಹಲವು ವರ್ಷಗಳಿಂದ “ಮುತ್ತು ಮಾಸ್ಟರ್” ಎಂದು ಪರಿಚಿತರಾಗಿದ್ದ ವ್ಯಕ್ತಿಯ ಬದುಕಿನ ಹಿಂದಿನ ಅಚ್ಚರಿಯ ಸತ್ಯ ಇದೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಗ್ರಾಮಸ್ಥರು ಪುರುಷನೆಂದು ನಂಬಿದ್ದ ಮುತ್ತು ಮಾಸ್ಟರ್ ವಾಸ್ತವವಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆಯಾಗಿದ್ದು, ತಮ್ಮ ಪತಿಯ ಸಾವಿನ ಬಳಿಕ ಸುರಕ್ಷತೆ ಮತ್ತು ಮಗಳ ಭವಿಷ್ಯಕ್ಕಾಗಿ 37 ವರ್ಷಗಳ ಕಾಲ ಪುರುಷನ … Continued

ವಿಡಿಯೋ | ಇರಾನಿನ 10 ಸೇನಾ ನೆಲೆಗಳ ಮೇಲೆ ಅಮೆರಿಕದ ವೈಮಾನಿಕ ದಾಳಿ; ‘ಪ್ರತೀಕಾರ’ದ ಎಚ್ಚರಿಕೆ ನೀಡಿದ ಇರಾನ್‌

ವಾಷಿಂಗ್ಟನ್/ತೆಹ್ರಾನ್: ಕೆಲವೇ ದಿನಗಳ ಹಿಂದೆ ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಅಮೆರಿಕ ಸತತ ಎರಡನೇ ದಿನವೂ ಇರಾನ್‌ನ ಹಲವು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಭಾನುವಾರ ತಿಳಿಸಿದೆ. ಅಮೆರಿಕದ ವಾಯುಪಡೆ ಮತ್ತು ನೌಕಾಪಡೆಯ … Continued

ಮೊಹರಂ ಮೆರವಣಿಗೆ ವೇಳೆ ವಿಷದ ಮಾತ್ರೆ ಹಂಚುತ್ತಿದ್ದ ವ್ಯಕ್ತಿಯ ಬಂಧನ ; 15 ಸಾವಿರ ಮಂದಿ ಹತ್ಯೆಯ ಉದ್ದೇಶದ ಸಂಚು ಬಯಲು

ಮುಂಬೈ: ಶುಕ್ರವಾರ ನಡೆದ ಮೊಹರಂ (ಆಶೂರಾ) ಮೆರವಣಿಗೆಯ ವೇಳೆ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ಮುಂಬೈ ಪೊಲೀಸರು ಮತ್ತು ಮೂವರು ಮಹಿಳಾ ಸ್ವಯಂಸೇವಕರು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ. ಸಾರ್ವಜನಿಕರಿಗೆ ವಿಷಕಾರಿ ಕ್ಯಾಪ್ಸುಲ್‌ಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಫಯ್ಯಾಜ್ ಪ್ರೇಂಜಿ (Fayyaz Premji) ಎಂಬಾತನನ್ನು ಬೈಕುಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹಂಚಿದ್ದ ಕ್ಯಾಪ್ಸುಲ್‌ಗಳನ್ನು ಸೇವಿಸಿದ್ದ ಸುಮಾರು 11 … Continued

ಸೆಶೆಲ್ಸ್‌ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ವರ್ಷ ಬದುಕಿರುವ ಭೂಚರ ‘ಜೋನಾಥನ್’ನನ್ನು ಭೇಟಿಯಾದ ಪ್ರಧಾನಿ ಮೋದಿ

ವಿಕ್ಟೋರಿಯಾ (ಸೆಶೆಲ್ಸ್) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಶೆಲ್ಸ್ ರಾಷ್ಟ್ರದ ರಾಜಧಾನಿ ವಿಕ್ಟೋರಿಯಾಗೆ ಆಗಮಿಸಿದ ಬಳಿಕ, ಶನಿವಾರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರ ಜೊತೆ ವಿಕ್ಟೋರಿಯಾದಲ್ಲಿರುವ ರಾಷ್ಟ್ರೀಯ ಬೋಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ದೊಡ್ಡ ಆಮೆಗಳ (ಜೈಂಟ್ ಟರ್ಟಾಯ್ಸ್) ಗೆ ಆಹಾರ ನೀಡುತ್ತಿರುವುದು ಗಮನ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 7 ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಮುಂಗಾರು ಮಳೆಯ ಕೊರತೆಯ ನಡುವೆ ಕರ್ನಾಟಕದಾದ್ಯಂತ ಮುಂದಿನ 7 ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತೀಚಿನ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಜೋರಾದ ಗಾಳಿಯೊಂದಿಗೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೂನ್ 30ರ ನಂತರ ರಾಜ್ಯದ ಹಲವೆಡೆ … Continued

ಮಡಿಕೇರಿ: ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು

ಮಡಿಕೇರಿ: ಎಂಟು ತಿಂಗಳ ಮಗುವೊಂದು ಎಲ್‌ಇಡಿ ಬಲ್ಬ್ ನುಂಗಿದ ಆತಂಕಕಾರಿ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದ್ದು, ವೈದ್ಯರ ಸೂಕ್ತ ಚಿಕಿತ್ಸೆಯಿಂದ ಮಗುವಿನ ಪ್ರಾಣ ಉಳಿದಿದೆ. ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿದೆ. ಏನೇ ಮಡಿದರೂ ಮಗು ಅಳುವನ್ನು ನಿಲ್ಲಿಸದ ಕಾರಣ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು … Continued

ವಿಶ್ವದಲ್ಲಿ 2ನೇ ಅತಿ ಹೆಚ್ಚು ವೇತನ ಪಡೆವ ಭಾರತೀಯ ಮೂಲದ ಸಿಇಒ ; ₹7,744 ಕೋಟಿ ಸಂಬಳದ ಈ ಶಂಖ್‌ ಮಿತ್ರ ಯಾರು?

ನ್ಯೂಯಾರ್ಕ್: ಅಮೆರಿಕ ಮೂಲದ ಆರೋಗ್ಯ ಕ್ಷೇತ್ರದ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ‘ವೆಲ್‌ಟವರ್ (Welltower)’‌ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಂಖ್ ಮಿತ್ರ ಅವರು 2025ರಲ್ಲಿ 821 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹7,744 ಕೋಟಿ) ಮೌಲ್ಯದ ಸಂಭಾವನೆ ಪ್ಯಾಕೇಜ್ ಪಡೆದು ವಿಶ್ವದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ಎಂಬ … Continued

ಸ್ಟಾಲಿನ್‌ಗೆ ಮತ್ತೊಂದು ರಾಜಕೀಯ ಹಿನ್ನಡೆ ; 9 ವರ್ಷಗಳ ಬಳಿಕ ಡಿಎಂಕೆ ಮೈತ್ರಿ ತೊರೆದ ಎಂಡಿಎಂಕೆ ಪಕ್ಷ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಪಕ್ಷವು ಡಿಎಂಕೆ ಜೊತೆಗಿನ ತನ್ನ ಒಂಬತ್ತು ವರ್ಷಗಳ ಮೈತ್ರಿಯನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.  ಈ ನಿರ್ಧಾರವನ್ನು ಶನಿವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಯಿತು. ಆದರೆ ಆಡಳಿತಾರೂಢ ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯ ಬಗ್ಗೆ ಪಕ್ಷ ಇವರೆಗೆ ಏನೂ ಹೇಳಿಲ್ಲ. ಸಭೆಯಲ್ಲಿ … Continued

ಚಲಿಸುತ್ತಿದ್ದ ಕಾರಿನಲ್ಲೇ ಯುವತಿಗೆ ಚಾಕುವಿನಿಂದ ಇರಿದ ಯುವಕ ; ಕ್ಷಣದಲ್ಲೇ ಸ್ಫೋಟಗೊಂಡ ಕಾರಿನಲ್ಲಿ ಆತ ಸಜೀವ ದಹನ

ಬೆಂಗಳೂರು/ತುಮಕೂರು: ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನಲ್ಲೇ ಭಗ್ನ ಪ್ರೇಮಿ ಎಂದು ಹೇಳಲಾದ ವ್ಯಕ್ತಿಯೊಬ್ಬ ಯುವತಿಗೆ ಚಾಕು ಇರಿದು, ನಂತರ  ಪೆಟ್ರೋಲ್ ಬಾಂಬ್ ಸಿಡಿಸಿ ಸ್ಫೋಟಿಸಿಕೊಂಡು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಹಾಗೂ ಗಾಯಗೊಂಡಿರುವ ಯುವತಿಯನ್ನು ರಮ್ಯಾ  (23) ಎಂದು ಗುರುತಿಸಲಾಗಿದ್ದು, ಸದ್ಯ … Continued