ಶಾಲಾ ತರಗತಿಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ದಾಳಿ: ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರ ಗುಂಡೇಟು

ಅನಂತಪುರ : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ  ಶಾಲೆಯ ತರಗತಿಯೊಳಗೆ ಇಬ್ಬರು 10ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಯಾಂತ್ರಿಕ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಹೆಮಂತಗೆ ಪೊಲೀಸರು ಆರು ಸುತ್ತು ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಅನಂತಪುರದ … Continued

ರಾಯಚೂರು : ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ರಾಯಚೂರು: ಉದ್ಯಮದಲ್ಲಿ ಸಂಭವಿಸಿದ ನಷ್ಟದಿಂದ ಕಂಗೆಟ್ಟಿದ್ದ ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾನೂ ರೈಲ್ವೆ ಹಳಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಘಟನೆ ರಾಯಚೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ರಾಯಚೂರಿನ ಜಲಾಲನಗರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ವಿಷ್ಣು (45) ಎಂಬಾತ ತನ್ನ ಪತ್ನಿ … Continued

ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಪ್ರಮುಖ ಆರೋಪಿ ಸೌರಭ ಚಂದ್ರಕರನನ್ನು ಭಾರತಕ್ಕೆ ಹಸ್ತಾಂತರಿಸಿದ ಒಮಾನ್‌

ನವದೆಹಲಿ: ದೇಶದ ಅತಿದೊಡ್ಡ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಜಾಲಗಳಲ್ಲಿ ಒಂದಾದ ಮಹಾದೇವ ಆ್ಯಪ್‌ ಪ್ರಕರಣದ ಪ್ರಮುಖ ಆರೋಪಿ ಹಾಗೂ ಅದರ ಪ್ರವರ್ತಕ ಸೌರಭ ಚಂದ್ರಕರ್‌ನನ್ನು ಒಮಾನ್‌ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ತಿಳಿಸಿದೆ. ಸೋಮವಾರ ಛತ್ತೀಸ್‌ಗಢದ ರಾಯಪುರದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಚಂದ್ರಕರ್‌ನನ್ನು ಹಾಜರುಪಡಿಸಲಾಗುವುದು ಎಂದು ಅದು ತಿಳಿಸಿದೆ. ಈ … Continued

ಸಿದ್ದರಾಮಯ್ಯ ನಕಲಿ ಸ್ಟಿಂಗ್‌ ವಿಡಿಯೊ ಪ್ರಕರಣ: ಸಿಸಿಬಿ ತನಿಖೆಯ ನಂಟು ಕುಮಾರಸ್ವಾಮಿ ದೆಹಲಿ ನಿವಾಸದತ್ತ ಬೊಟ್ಟು

ಬೆಂಗಳೂರು: ಕರ್ನಾಟಕದ ಮೂವರು ಮುಖ್ಯಮಂತ್ರಿಗಳನ್ನು ಸುತ್ತಿಕೊಂಡಿರುವ ಸ್ಟಿಂಗ್‌ ಆಪರೇಷನ್‌ ಆರೋಪಗಳ ತನಿಖೆ ಇದೀಗ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಿವಾಸದವರೆಗೆ ತಲುಪಿದೆ. ಕುಮಾರಸ್ವಾಮಿ ಅವರ ಆಪ್ತರೊಬ್ಬರ ಪಾತ್ರದ ಬಗ್ಗೆಯೇ ಈಗ ಪೊಲೀಸರಿಗೆ ಅನುಮಾನ ಮೂಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಳೆದ ವಾರ ದೆಹಲಿಯಲ್ಲಿ ರಿತೇಶ್‌ ಪಾಂಡೆ ಎಂಬಾತನನ್ನು ಬಂಧಿಸಿದ … Continued

ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಆಪ್‌ಗೆ ಆಘಾತ: ಇಬ್ಬರು ಹಾಲಿ ಶಾಸಕರ ರಾಜೀನಾಮೆ

ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಭಾರಿ ಹಿನ್ನಡೆಯಾಗಿದೆ. ಪಕ್ಷವು 2027ರ ವಿಧಾನಸಭೆ ಚುನಾವಣೆಗಾಗಿ 40 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಇಬ್ಬರು ಹಾಲಿ ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ … Continued

ಗೂಗಲ್‌ ಲೆನ್ಸ್‌ ಬಳಸಿ ಪರೀಕ್ಷೆ ಬರೆದ ಆರೋಪ; ಗ್ರಾಮ ಆಡಳಿತ ಅಧಿಕಾರಿ ನೇಮಕ ಪರೀಕ್ಷೆ ರ‍್ಯಾಂಕ್ ಅಭ್ಯರ್ಥಿ ಪೊಲೀಸ್‌ ವಶಕ್ಕೆ

ಹಾವೇರಿ: ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದಿದ್ದ ಅಭ್ಯರ್ಥಿಯೊಬ್ಬರು ಪರೀಕ್ಷಾ ಕೊಠಡಿಯೊಳಗೆ ಮೊಬೈಲ್‌ ಫೋನ್‌ ಬಳಸಿ, ಗೂಗಲ್‌ ಲೆನ್ಸ್‌ (Google Lens) ಮೂಲಕ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್‌ ಮಾಡಿ ಉತ್ತರ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ … Continued

ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಪ್ರವಾಸಿಗರು ಸಾವು, ಮತ್ತೊಬ್ಬ ನಾಪತ್ತೆ

ಕಾರವಾರ : ಸಮುದ್ರಕ್ಕಿಳಿದು ಮಸ್ತಿಯಲ್ಲಿ ತೊಡಗಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಇಬ್ಬರು ಪ್ರವಾಸಿಗರು ನೀರುಪಾಲಾಗಿದ್ದು, ಮತ್ತೊಬ್ಬ ಪ್ರವಾಸಿಗ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನಶಸಿ ಕಡಲತೀರದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಇಬ್ಬರು ಪ್ರವಾಸಿಗರು ಮುಳುಗಿ ಮೃತಪಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೃತರನ್ನು ಜಾರ್ಖಂಡ ಮೂಲದ ಶೋಭಾ ದಾಸ್ (23) ಹಾಗೂ … Continued

48 ವರ್ಷಗಳಿಂದ ಒಂದು ಹನಿ ನೀರನ್ನೂ ಕುಡಿದಿಲ್ಲ ವಿಶ್ವದ ಟಾಪ್‌-10 ಶ್ರೀಮಂತ ವಾರೆನ್ ಬಫೆಟ್‌ ! ಇವ್ರು ಕುಡಿಯುವುದೇನು ಗೊತ್ತಾ?

ವಿಶ್ವದ ಖ್ಯಾತ ಹೂಡಿಕೆದಾರ, ಬಿಲಿಯನೇರ್ ವಾರೆನ್ ಬಫೆಟ್ ಅವರು 1970ರಿಂದಲೂ ಈವರೆಗೆ ಒಂದೇ ಒಂದು ಲೋಟ ನೀರನ್ನೂ ಕುಡಿದಿಲ್ಲವಂತೆ! ನೀರಿನ ಬದಲು ಅವರಿಗೆ ಅಚ್ಚುಮೆಚ್ಚಿನ ಪಾನೀಯವೆಂದರೆ ‘ಚೆರ್ರಿ ಕೋಕ್’. ಬರೋಬ್ಬರಿ 48 ವರ್ಷಗಳಿಂದ ನೀರನ್ನು ಮುಟ್ಟಿಯೂ ನೋಡಿಲ್ಲ ಎಂದು ಸ್ವತಃ ಬಫೆಟ್ ಹೇಳಿದ್ದಾಗಿ ಖ್ಯಾತ ಬಿಲಿಯನೇರ್ ಮತ್ತು ಹೆಡ್ಜ್ ಫಂಡ್ ಮ್ಯಾನೇಜರ್ ಬಿಲ್ ಅಕ್ಮನ್ ಬಹಿರಂಗಪಡಿಸಿದ್ದಾರೆ. … Continued