ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ ಕುಂಬ್ಳೆ ನೇಮಕ: ಸಂಭಾವನೆ ಎಷ್ಟು ಗೊತ್ತೆ..?!

ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗುತ್ದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಮಂಗಳವಾರ ತಿಳಿಸಿದ್ದಾರೆ. ಅರಣ್ಯ ಸಚಿವರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರಮಾಧ್ಯಮದವರೊಂದಿಗೆ ಮಾತನಾಡಿದ ಖಂಡ್ರೆ, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ … Continued

ಕನ್ನಡ ಭಾಷೆ ಜನಿಸಿದ್ದು ತಮಿಳಿನಿಂದ : ವಿವಾದ ಸೃಷ್ಟಿಸಿದ ನಟ ಕಮಲ ಹಾಸನ್‌ ಹೇಳಿಕೆ

ತಮಿಳು ಮೆಗಾಸ್ಟಾರ್ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಬಿಡುಗಡೆಯಾಗುವ ವಾರಗಳ ಮೊದಲು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ನಿಮ್ಮ ಭಾಷೆ (ಕನ್ನಡ) ತಮಿಳಿನಿಂದ ಜನಿಸಿದೆ” ಎಂಬ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ನಟ ತಮ್ಮ ಭಾಷಣವನ್ನು “ಉಯಿರೆ ಉರವೆ ತಮಿಳೆ” ಎಂಬ ವಾಕ್ಯದೊಂದಿಗೆ ಪ್ರಾರಂಭಿಸಿದರು, ಇದರರ್ಥ “ನನ್ನ ಜೀವನ ಮತ್ತು ನನ್ನ ಕುಟುಂಬ ತಮಿಳು … Continued

ಬಂಟ್ವಾಳದಲ್ಲಿ ಯುವಕನ ಬರ್ಬರ ಹತ್ಯೆ ; ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು : ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಹೀಂ ಎಂಬ ವ್ಯಕ್ತಿಯ ಹತ್ಯೆಯ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಕೆಲವು ದಿನಗಳ ಹಿಂದೆ ನಡೆದಿತ್ತು. ಈಗ … Continued

ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ : ಜೂನ್ ನಿಂದ ಸೆಪ್ಟೆಂಬರ್ ಅವಧಿಗೆ ಹವಾಮಾನ ಇಲಾಖೆ ತನ್ನ ಮಾನ್ಸೂನ್ ಮುನ್ಸೂಚನೆಯನ್ನು ಸ್ವಲ್ಪ ಪರಿಷ್ಕರಿಸಿದೆ, ದೀರ್ಘಾವಧಿಯ ಸರಾಸರಿಯ 106 ಪ್ರತಿಶತದಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದ್ದು, ಇದು ಹಿಂದಿನ ಅಂದಾಜಿನ 105 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಈ ಮುನ್ಸೂಚನೆಯಲ್ಲಿ ಪ್ಲಸ್ ಅಥವಾ ಮೈನಸ್ ಶೇಕಡಾ 4 ರಷ್ಟು ಸಂಭವನೀಯ ವ್ಯತ್ಯಾಸವಾಗಬಹುದು ಎಂದು ಹೇಳಿದೆ. … Continued

ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ 7 ಮಂದಿ ; ಕಾರಣ..?

ಪಂಚಕುಲ: ಹರಿಯಾಣದ ಪಂಚಕುಲದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಒಂದೇ ಕುಟುಂಬದ ಆರು ಸದಸ್ಯರು ಸಾವಿಗೀಡಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. “ಪ್ರಾಥಮಿಕವಾಗಿ ನೋಡಿದರೆ ಇದು ಆತ್ಮಹತ್ಯೆಯ ವಿಷಯವೆಂದು ತೋರುತ್ತದೆ. ಆದಾಗ್ಯೂ, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪಂಚಕುಲ ಉಪ ಪೊಲೀಸ್ ಆಯುಕ್ತ ಹಿಮಾದ್ರಿ ಕೌಶಿಕ ಅವರು ಹೇಳಿದ್ದಾರೆ. ಪಂಚಕುಲದ ಸೆಕ್ಟರ್ … Continued

ಬಿಜೆಪಿಯಿಂದ ಶಾಸಕರಾದ ಶಿವರಾಮ ಹೆಬ್ಬಾರ, ಎಸ್‌.ಟಿ. ಸೋಮಶೇಖರ ಉಚ್ಚಾಟನೆ

ಬೆಂಗಳೂರು: ಶಾಸಕರಾದ ಶಿವರಾಮ ಹೆಬ್ಬಾರ (Shivaram Hebbar) ಹಾಗೂ ಎಸ್.ಟಿ. ಸೋಮಶೇಖರ (ST Somashekhar) ಅವರನ್ನು ಬಿಜೆಪಿ (BJP)ಯಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು 6 ವರ್ಷಗಳ ಕಾಲ ಬಿಜೆಪಿ ಹೈಕಮಾಂಡ್‌ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಬಸವನಗೌಡ ಪಾಟೀಲ ಯತ್ನಾಳ್‌ ಅವರ ಉಚ್ಚಾಟನೆ ಮಾಡಿದ ಕೆಲವು ದಿನಗಳ ನಂತರ ಈ … Continued

ಪೊಲೀಸರು ಮೂವರನ್ನು ರಸ್ತೆಯಲ್ಲಿ ಕೂಡ್ರಿಸಿ ಲಾಠಿಯಿಂದ ಥಳಿಸುತ್ತಿರುವ ವೀಡಿಯೊ ವೈರಲ್ ; ಪೊಲೀಸ್‌ ಅಮಾನತು

ಆಂಧ್ರಪ್ರದೇಶದ (Andhra Pradesh) ಗುಂಟೂರು ಜಿಲ್ಲೆಯ ಐತಾನಗರದಲ್ಲಿ ಕಾನ್‌ಸ್ಟೆಬಲ್ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಪೊಲೀಸರು ಮೂವರಿಗೆ ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಪೊಲೀಸರು ಸಾರ್ವಜನಿಕವಾಗಿ ಆರೋಪಿಗಳಿಗೆ ಲಾಠಿಯಿಂದ ಹೊಡೆದು ಶಿಕ್ಷೆ ನೀಡಿರುವ ವೀಡಿಯೊ ವೈರಲ್‌ ಆದ ನಂತರ ಇದು ವಿವಾದಕ್ಕೆ ಕಾರಣವಾಗಿದ್ದು, ಅದಕ್ಕೆ … Continued

ಕನ್ನಡದ ಖ್ಯಾತ ಕಿರುತೆರೆ ನಟ ಶ್ರೀಧರ ನಾಯಕ ನಿಧನ

ಬೆಂಗಳೂರು: ಕನ್ನಡ ಕಿರುತೆರೆಯ (Kannada Serial) ಖ್ಯಾತ ನಟ ಶ್ರೀಧರ್ ನಾಯಕ (47) ಮೇ 26ರ ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತ ಶರೀರವನ್ನು ಇಡಲಾಗಿದೆ. ‘ವಧು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಶ್ರೀಧರ ಅವರು ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದರು. ಇನ್‌ಫೆಕ್ಷನ್‌ನಿಂದ ತೀವ್ರ … Continued

ವೀಡಿಯೊ…| ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಕಿಕ್-ಬಾಕ್ಸಿಂಗ್ ಪಂದ್ಯದಲ್ಲಿ ಸೆಣಸಾಡಿದ ಎರಡು ರೋಬೋಟ್‌ ಗಳು-ವೀಕ್ಷಿಸಿ…

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಕಿಕ್-ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮಾನವರೂಪಿ ರೋಬೋಟ್‌ಗಳ (humanoid robots) ಬಾಕ್ಸಿಂಗ್‌ ಸ್ಪರ್ಧೆಯ ವೀಡಿಯೊ ಈಗ ಗಮನ ಸೆಳೆಯುತ್ತಿದೆ. ಯುನಿಟ್ರೀ ರೊಬೊಟಿಕ್ಸ್ ಕಂಪನಿ ಅಭಿವೃದ್ಧಿಪಡಿಸಿದ ಈ ರೋಬೋಟ್‌ಗಳು ರೋಮಾಂಚಕ ಬಾಕ್ಸಿಂಗ್‌ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾದವು. ಚೀನಾ ಮೀಡಿಯಾ ಗ್ರೂಪ್ ವರ್ಲ್ಡ್ ರೋಬೋಟ್ ಸ್ಪರ್ಧೆಯ ಭಾಗವಾಗಿ, ರೋಬೋಟ್‌ಗಳು ಪ್ರದರ್ಶನ ಪಂದ್ಯಗಳು ಮತ್ತು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ತಮ್ಮ … Continued

ವೀಡಿಯೊ..| ಸ್ವಾಗತಿಸಲು ಬಂದ ಐಎಎಸ್‌ ಅಧಿಕಾರಿ ತಲೆ ಮೇಲೆ ಹೂ ಕುಂಡ ಇಟ್ಟು ವಿಚಿತ್ರವಾಗಿ ವರ್ತಿಸಿ ಮತ್ತೊಮ್ಮೆ ಸುದ್ದಿಯಾದ ಬಿಹಾರ ಸಿಎಂ..!

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ತಮ್ಮ ವಿಚಿತ್ರ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಾಟ್ನಾದ ಕೃಷಿ ಭವನದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ವೇದಿಕೆಯನ್ನು ತಲುಪಿದ ತಕ್ಷಣ, ಬಿಹಾರ ಸರ್ಕಾರದ ಕ್ಯಾಬಿನೆಟ್ ತಲೆ ಮೇಲೆ ಹೂ ಕುಂಡ ಇಟ್ಟಿರುವ ಘಟನೆಯ ವೀಡಿಯೊ ಈಗ ಸಾಕಷ್ಟು ಚರೆಗೆ ಗ್ರಾಸವಾಗಿದೆ. ಅವರು ವೇದಿಕೆಗೆ ಬರುತ್ತಿದ್ದಂತೆಯೇ ಹೆಚ್ಚುವರಿ … Continued