ಪ್ರಚೋದನಕಾರಿ ಹೇಳಿಕೆ : ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ ಐಆರ್‌

ಮಂಗಳೂರು : ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಹಿನ್ನಲೆಯಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಮಾರ್ಚ್ 9 ರಂದು ವಿಎಚ್‌ಪಿ ಆಯೋಜಿಸಿದ್ದ ಕೊರಗಜ್ಜನ‌ ಆದಿಕ್ಷೇತ್ರಕ್ಕೆ ನಮ್ಮ‌ನಡೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ, ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹಿಂದೂ ಯುವಕರಿಗೆ … Continued

ವೀಡಿಯೊ | ಬಲೂಚ್ ಬಂಡುಕೋರರಿಂದ ಪಾಕಿಸ್ತಾನ ಮಿಲಿಟರಿ ಬಸ್‌ ಸ್ಫೋಟಿಸಿದ ಮೊದಲ ದೃಶ್ಯ ಬಿಡುಗಡೆ ; 90 ಸೈನಿಕರು ಸತ್ತಿದ್ದಾರೆ ಎಂದ ಬಿಎಲ್‌ಎ

ಬಲೂಚ್ ಲಿಬರೇಶನ್ ಆರ್ಮಿ (BLA) ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 90 ಪಾಕಿಸ್ತಾನಿ ಸೈನ್ಯದ ಸಿಬ್ಬಂದಿಯನ್ನು ಕೊಂದಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳ ನಂತರ, ಅದರ ವಿಶೇಷ ಪಡೆಗಳ ಘಟಕವಾದ ಮಜೀದ್ ಬ್ರಿಗೇಡ್ ನಡೆಸಿದ ದಾಳಿಯ ಮೊದಲ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಬಿಎಲ್‌ಎ (BLA) ಬಿಡುಗಡೆ ಮಾಡಿದ ವೀಡಿಯೊ ಬಸ್‌ ಸ್ಫೋಟಗೊಂಡಿದ್ದನ್ನು ಸೆರೆಹಿಡಿದಿದೆ, ಅದರ ನಂತರ ಬಸ್‌ನಿಂದ … Continued

5 ವರ್ಷಗಳಲ್ಲಿ 400 ಕೋಟಿ ರೂ ತೆರಿಗೆ ಪಾವತಿ ; ದೇವಸ್ಥಾನ ಟ್ರಸ್ಟ್

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸುಮಾರು 400 ಕೋಟಿ ರೂಪಾಯಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದೆ, ಧಾರ್ಮಿಕ ಪ್ರವಾಸೋದ್ಯಮದಲ್ಲಿ ಏರಿಕೆಯಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್‌ ಭಾನುವಾರ ತಿಳಿಸಿದ್ದಾರೆ. ಈ ಮೊತ್ತವನ್ನು ಫೆಬ್ರವರಿ 5, 2020 ಮತ್ತು ಫೆಬ್ರವರಿ 5, 2025 ರ ನಡುವೆ ಪಾವತಿಸಲಾಗಿದೆ ಎಂದು ಟ್ರಸ್ಟ್ … Continued

ಸಾವಿನ ಬಗ್ಗೆ ನಿಮಗೆ ಭಯವಿದೆಯೇ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನೆಂದರೆ….

ನವದೆಹಲಿ: ಸಾವು ಅನಿವಾರ್ಯ ಮತ್ತು ಜೀವನವನ್ನು ಹೇಗೆ ನಡೆಸಬೇಕು ಎಂಬುದು ನಿಜವಾಗಿಯೂ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ಪಾಡ್‌ಕ್ಯಾಸ್ಟ್‌ ಸಂದರ್ಶನದಲ್ಲಿ ಹೇಳಿದ್ದಾರೆ. ಸಾವಿನ ಬಗ್ಗೆ ಚಿಂತಿತರಾಗುವ ಬದಲು ಜೀವನವನ್ನು ಅಪ್ಪಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ನಿಮಗೆ ಸಾವಿನ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಜೀವನವು … Continued

ಹೊಡೆದು ಸಾಯಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಪೊಲೀಸರನ್ನೂ ಹೊಡೆದು ಕೊಂದ ಗುಂಪು…!

ಭೋಪಾಲ: ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿದ್ದು, ಆತನನ್ನು ರಕ್ಷಿಸಲು ಹೋದ ಪೊಲೀಸ್ ಅಧಿಕಾರಿಯನ್ನು ಕೂಡ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್​ನಲ್ಲಿ ನಡೆದಿದೆ. ಪೊಲೀಸ್ ತಂಡದ ಮೇಲೆ ದಾಳಿ ಮಾಡುವ ಮೊದಲು ಆದಿವಾಸಿಗಳ ಗುಂಪೊಂದು ವ್ಯಕ್ತಿಯನ್ನು ಅಪಹರಿಸಿ ಕೊಂದಿದೆ. ಘಟನೆ ಶನಿವಾರ ನಡೆದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ರೇವಾ ರೇಂಜ್ ಡೆಪ್ಯುಟಿ … Continued

ಕರ್ನಾಟಕದ ಉತ್ತರ ಒಳನಾಡಿನಲ್ಲಿ 3 ದಿನ ಬಿಸಿಗಾಳಿ ಸಾಧ್ಯತೆ ; ದಕ್ಷಿಣ ಒಳನಾಡಿನ ಕೆಲಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ಮಾರ್ಚ್‌ 18ರಿಂದ 22ರ ವರೆಗೆ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪೈಕಿ ಮಾರ್ಚ್‌ 18 ಮತ್ತು 19ರಂದು ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ … Continued

ಚಿತ್ರದುರ್ಗ | ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರಿನ ವಿಚಾರಕ್ಕೆ ಜಗಳ ; ಮದುವೆಯೇ ರದ್ದಾಯ್ತು…!

ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಮದುವೆಯೇ ಮುರಿದು ಬಿದ್ದ ಘಟನೆ (Wedding Cancelled) ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ವರ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧುವಿನ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ … Continued

ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್‌ ಸಂವಾದಕ್ಕೆ ಮುನ್ನ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಯಾಕೆ ಗೊತ್ತಾ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ವ್ಯಾಪಕ ಸಂವಾದ ನಡೆಸಿದರು. “ಈ ಸಂವಾದದ ಗೌರವಾರ್ಥ” ಪಾಡ್‌ಕ್ಯಾಸ್ಟ್‌ಗೆ ಮೊದಲು 45 ಗಂಟೆಗಳ ಕಾಲ ಉಪವಾಸ ಮಾಡಿದ್ದೇನೆ ಎಂದು ಫ್ರಿಡ್‌ಮನ್ ಹೇಳಿದ್ದಾರೆ . “ನಾನು ಇದೀಗ ಉಪವಾಸ ಮಾಡುತ್ತಿದ್ದೇನೆ. ಇದು ಸುಮಾರು 45 ಗಂಟೆಗಳು ಸಂದರೆ ಸುಮಾರು ಎರಡು ದಿನಗಳು. ಆದ್ದರಿಂದ … Continued

ಸ್ನೇಹಿತ, ನಾಯಕನಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಯಾವ ಗುಣಗಳನ್ನು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರವೇನು ಗೊತ್ತೆ..?

ನವದೆಹಲಿ: ಆ ವ್ಯಕ್ತಿಗೆ ಧೈರ್ಯವಿದೆ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಅಮೇರಿಕಾ ಫಸ್ಟ್‌ ಎಂಬ ನಿಲುವು ತನಗೆ ಇಷ್ಟವಾದ ಕೆಲವು ಗುಣಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಬೀರಿದ ಕೆಲವಷ್ಟು ಗುಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಡ್‌ಕ್ಯಾಸ್ಟ್ ಹೋಸ್ಟ್ ಹಾಗೂ ಎಂಐಟಿ ಸಂಶೋಧಕ ಲೆಕ್ಸ್ ಫ್ರಿಡ್‌ಮ್ಯಾನ್‌ಗೆ ನೀಡಿದ … Continued

ಪಾಕಿಸ್ತಾನ ಭದ್ರತಾ ಪಡೆಗಳ ಬಸ್‌ ಮೇಲೆ ಬಲೂಚ್ ಬಂಡುಕೋರರ ಆತ್ಮಾಹುತಿ ದಾಳಿ ; 90 ಮಂದಿ ಸಾವು ಎಂದು ಹೇಳಿಕೊಂಡ ಬಿಎಲ್‌ಎ

ಇಸ್ಲಾಮಾಬಾದ್: ಭಾನುವಾರ (ಮಾರ್ಚ್ 16) ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40 ರ ಬಳಿ ಸೇನಾ ಅಧಿಕಾರಿಗಳ ತುಂಬಿದ ಬಸ್ಸಿಗೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆದ ನಂತರ ಕನಿಷ್ಠ 90 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದ್ದು, ಅದು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ತನ್ನ ‘ಫಿದಾಯೀನ್’ ಮಜೀದ್ … Continued