ಎಟಿಎಂ ಹಣ ದರೋಡೆ ಪ್ರಕರಣ | ಆರೋಪಿಗಳ ಫೋಟೋ ಬಿಡುಗಡೆ ; ಸುಳಿವು ನೀಡಿದವರಿಗೆ ಭಾರಿ ಬಹುಮಾನ ಘೋಷಣೆ

ಬೀದರ: ಬೀದರಿನಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣದ ಪೆಟ್ಟಿಗೆಯನ್ನು ಹೊತ್ತೊಯ್ದ ಇಬ್ಬರು ದರೋಡೆಕೋರರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಹಣವನ್ನು ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಬೀದರ ನಗರದಲ್ಲಿ ಜನವರಿ 16ರಂದು ದುಷ್ಕರ್ಮಿಗಳು ಹಾಡುಹಗಲೇ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ 93 ಲಕ್ಷ ರೂ. ನಗದು … Continued

ಬೆಳಗಾವಿ : ಆಟೋ ಚಾಲಕನಿಂದ ಹಲ್ಲೆಗೊಳಗಾದ ಕೆಲವೇ ಕ್ಷಣಗಳಲ್ಲಿ ಗೋವಾದ ಮಾಜಿ ಶಾಸಕ ಸಾವು

ಬೆಳಗಾವಿ : ಬೆಳಗಾವಿಗೆ ಬಂದಿದ್ದ ಗೋವಾದ ಮಾಜಿ ಶಾಸಕರ ಲಾವೋ ಮಾಮಲೇದಾರ (69) ಜೊತೆಗೆ ಕ್ಷುಲ್ಲಕ ಕರಣಕ್ಕೆ ಜಗಳ ಆರಂಭಿಸಿದ ಆಟೋ ಚಾಲಕ ಅವರ ಮೇಲೆ ಹಲ್ಲೆ ಮಾಡಿದ್ದು, ನಂತರ ಮಾಜಿ ಶಾಸಕರು ಅಲ್ಲಿಂದ ಲಾಡ್ಜ್ ಒಳಗೆ ಬರುವಾಗ ಕುಸಿದು ಬಿದ್ದು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ. ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯ ಶ್ರೀನಿವಾಸ ವಸತಿ ಗೃಹ … Continued

‘ತುಂಬಿದ ಕೊಡ ತುಳಕಿತಲೇ ಪರಾಕ್..’ : ಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ

ವಿಜಯನಗರ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ ಹೊರಬಿದ್ದಿದ್ದು, ‘ತುಂಬಿದಕೊಡ ತುಳುಕೀತಲೇ ಪರಾಕ್’ ಎಂದು ಗೊರವಯ್ಯ ರಾಮಪ್ಪಜ್ಜ ಕಾರ್ಣಿಕ ನುಡಿದಿದ್ದಾರೆ. ರಾಜ್ಯದ ಭವಿಷ್ಯವಾಣಿ ಎಂದೇ ಪರಿಗಣಿಸುವ ಮೈಲಾರಲಿಂಗೇಶ್ವರ ಕಾರ್ಣಿಕ ಕೇಳಲು ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಅವರ ಸಮ್ಮುಖದಲ್ಲಿ … Continued

ಪಂಜಾಬಿನಲ್ಲಿ ಕುರುಬೂರು ಶಾಂತಕುಮಾರ ಕಾರು ಅಪಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ : ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರ ಕಾರು ಪಂಜಾಬಿನ ಪಟಿಯಾಲ ಬಳಿ ಅಪಘಾತವಾಗಿದ್ದು, ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಂತಕುಮಾರ ಹಾಗೂ ತಮಿಳುನಾಡಿನ ಮತ್ತೊಬ್ಬ ರೈತ ಮುಖಂಡರಿಗೆ ಗಅಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಕುರುಬೂರು ಶಾಂತಕುಮಾರ ಅವರನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ … Continued

ವೀಡಿಯೊ…| ಕಾರವಾರ : ಮುರಿದುಬಿದ್ದ ಕಾಳಿ ನದಿಗೆ ಸೇತುವೆಯ ಕಂಬ

ಕಾರವಾರ: ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಕೆಲಭಾಗ ಕುಸಿದುಬಿದ್ದಿದ್ದ ಕಾರವಾರದ ಕಾಳಿ ನದಿಯ ಹಳೆಯ ಕಾಳಿ ಸೇತುವೆ ಸೇತುವೆ ಕಂಬ ದಿಢೀರ್​ ಕುಸಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇತುವೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ರಾತ್ರಿಹೊತ್ತು ಕಂಬ​ ಮುರಿದು ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ತಡರಾತ್ರಿ … Continued

ಕರ್ನಾಟಕದ 9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರದ ನಿರ್ಧಾರ…?!

ಬೆಂಗಳೂರು: ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯ(University)ಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ ಎಂದು ತಿಳುದಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯ ಈ ಉಪಸಮಿತಿ ಸಭೆ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಗುರುವಾರ ಮೊದಲ ಸಭೆ ನಡೆಯಿತು. ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಉದ್ದೇಶಿತ … Continued

ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡಬಹುದು…! ಭವಿಷ್ಯ ನುಡಿದ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ಥ್ರೂನ್

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಅತಿಯಾದ ನಿಯಂತ್ರಣದ ವಿರುದ್ಧ ಗೂಗಲ್ ಎಕ್ಸ್‌ನ ಸಂಸ್ಥಾಪಕ ಸೆಬಾಸ್ಟಿಯನ್ ಥ್ರೂನ್ ಗುರುವಾರ ಜಗತ್ತಿನಾದ್ಯಂತ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ, ಇದು ನಾವೀನ್ಯತೆಯನ್ನು ನಿಗ್ರಹಿಸಬಹುದು ಎಂದು ಅವರು ಹೇಳಿದ್ದಾರೆ. ಗುರುವಾರ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ – ಇನ್ವೆಸ್ಟ್ ಕರ್ನಾಟಕ 2025 ರಲ್ಲಿ “ಪ್ರವರ್ತಕ ಎಐ (AI): ಕಲ್ಪನೆಯಿಂದ ನೈಜ-ಜಗತ್ತಿನ ಪ್ರಭಾವದವರೆಗೆ” ಎಂಬ ಶೀರ್ಷಿಕೆಯ ಅಧಿವೇಶನದಲ್ಲಿ … Continued

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ 90 ವರ್ಷ ; 9 ದಿನ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

ಹೊನ್ನಾವರ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ 90 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಫೆಬ್ರವರಿ 22ರಿಂದ ಮಾರ್ಚ್‌ 2ರವರೆಗೆ 9 ದಿನಗಳ ಕಾಲ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಕರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ. ಹೊನ್ನಾವರ … Continued

19 ಸಾಧಕರಿಗೆ 2024-25ನೇ ಸಾಲಿನ ವಿವಿಧ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ ; ವಿವೇಕ ರೈಗೆ ಪಂಪ ಪ್ರಶಸ್ತಿ, ಡಾ. ಗುಂಜಾಳಗೆ ಬಸವ ಪುರಸ್ಕಾರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು (Karnataka State Awards) ಪ್ರಕಟಿಸಲಾಗಿದೆ. ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ … Continued

ಐಪಿಎಲ್- 2025 | ಆರ್‌ಸಿಬಿ ತಂಡಕ್ಕೆ ನೂತನ ನಾಯಕನ ಘೋಷಣೆ

ಬೆಂಗಳೂರು: ಬಲಗೈ ಬ್ಯಾಟರ್ ರಜತ ಪಾಟೀದಾ‌ರ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡವು ಈ ನಿರ್ಧಾರ ಪ್ರಕಟಿಸಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಮತ್ತೆ ತಂಡದ ನಾಯಕತ್ವ ನೀಡಲಾಗುತ್ತದೆ ಎಂಬ … Continued